Latest Updates
-
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ?
ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತೆ?
ಕೊರೋನಾ ವೈರಸ್ ನಿಂದ ಮಕ್ಕಳು ಸುರಕ್ಷಿತ ಎಂದು ಭಾವಿಸಿದ್ದ ಪೋಷಕರು ಈಗಿರುವ ಎರಡನೇ ಅಲೆಯಿಂದ ಚಿಂತೆಗೀಡಾಗಿದ್ದಾರೆ. ಏಕೆಂದರೆ ಮಕ್ಕಳು ಹೆಚ್ಚೆಚ್ಚು ಸಾಂಕ್ರಾಮಿಕಕ್ಕೆ ತುತ್ತಾಗುತ್ತಿದ್ದಾರೆ. ಈ ನಡುವೆ ಮುಂಬರುವ ಮೂರನೇ ಅಲೆ ಮಕ್ಕಳಿಗೆ ಮತ್ತಷ್ಟು ಕಠಿಣವಾಗಿರಲಿದೆ ಎಂದು ತಜ್ಞರು ಹೇಳುತ್ತಿರುವ ಮಾತು ಪೋಷಕರ ನಿದ್ದೆಯನ್ನು ಕೆಡಿಸುತ್ತಿದೆ ಜೊತೆಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಹಾಗಾದ್ರೆ ಮೂರನೇ ಅಲೆ ಮಕ್ಕಳಿಗೆ ನಿಜವಾಗಿಯೂ ಪರಿಣಾಮ ಬೀರುಬಹುದೇ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೊರೋನಾ ವೈರಸ್ ನ ಮೂರನೇ ಅಲೆ ಮತ್ತು ಮಕ್ಕಳು:
ಎರಡನೇ ಅಲೆಯಲ್ಲಿ ಮಕ್ಕಳಲ್ಲಿ ಕಂಡುಬರುತ್ತಿರುವ ಕೊರೊನಾವೈರಸ್ ಸೋಂಕಿನ ಪ್ರಮಾಣ ಮತ್ತು ಅವರಿಗೆ ವ್ಯಾಕ್ಸಿನೇಷನ್ ಲಭ್ಯವಿಲ್ಲದಿದ್ದನ್ನು ನೋಡಿದರೆ, ಮುಂಬರುವ ಮೂರನೇ ಅಲೆಯಲ್ಲಿ ಮಕ್ಕಳು ಹೆಚ್ಚು ಸೋಂಕಿಗೆ ತುತ್ತಾಗಬಹುದು ಎಂದು ಊಹಿಸಲಾಗಿದೆ. ಇದು ಪೋಷಕರಲ್ಲಿ ಸಾಕಷ್ಟು ಭೀತಿ ಮತ್ತು ಗೊಂದಲಗಳಿಗೆ ಕಾರಣವಾಗಿದೆ. ಆದರೆ ಈ ಕುರಿತು ಯಾವುದೇ ಸಾಕ್ಷಿ ಪುರಾವೆಗಳು ಲಭ್ಯವಾಗಿಲ್ಲ ಎಂದು ಆರೋಗ್ಯ ಇಲಾಖೆಯ ಮುಖ್ಯಸ್ಥರು ಹೇಳಿದ್ದಾರೆ. ಜೊತೆಗೆ ಮಕ್ಕಳ ಮೇಲೆ ಯಾವುದೇ ಗಂಭೀರ ಪರಿಣಾಮ ಬೀರದ ಕಾರಣ ಪೋಷಕರು ಕೊರೋನಾ ಬಗ್ಗೆ ಹೆದರಬಾರದು ಎಂದು ದೇಶಗಳ ಪೀಡಿಯಾಟ್ರಿಕ್ಸ್ ಅಸೋಸಿಯೇಷನ್ ಸೂಚಿಸಿದೆ.
ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐಎಪಿ) , ಮಕ್ಕಳು ಸೋಂಕಿಗೆ ಹೆಚ್ಚು ಒಳಗಾಗುತ್ತಾರೆ ಎಂಬುದು ನಿಜ ಆದರೆ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಹೇಳಿದೆ.

ಮಕ್ಕಳು ಏಕೆ ಪ್ರಮುಖ ಗುರಿಯಾಗುವುದಿಲ್ಲ?:
ದತ್ತಾಂಶದ ಪ್ರಕಾರ, ಕೊರೋನಾದ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾದ ಶೇ 90 ಪ್ರತಿಶತದಷ್ಟು ಮಕ್ಕಳಲ್ಲಿ ಸಣ್ಣ ರೋಗಲಕ್ಷಣಗಳನ್ನು ಹೊಂದಿದ್ದರು ಜೊತೆಗೆ ಯಾವುದೇ ಲಕ್ಷಣರಹಿತವಾಗಿದ್ದರು. ಅಷ್ಟೇ ಅಲ್ಲದೇ ಕೊರೋನಾ ಬಂದಾಗಿನಿಂದಲೂ ಮಕ್ಕಳು ಆಸ್ಪತ್ರೆಗೆ ಸೇರಿರುವುದು ಕೇವಲ 3 ರಿಂದ 4 ಶೇ.ರಷ್ಟು ಮಾತ್ರ. ಅದೇ ರೀತಿ ಮೂರನೇ ಅಲೆಯಲ್ಲೂ ಮಕ್ಕಳಿಗೆ ಸೋಂಕು ಉಂಟಾಗಬಹುದು ಆದರೆ ಅದು ಮಧ್ಯಮ ಅಥವಾ ತೀವ್ರ ರೂಪದ ಅಪಾಯವನ್ನು ಉಂಟುಮಾಡುವುದಿಲ್ಲ. ಹಾಗಂತ ಮಕ್ಕಳು ಸೋಂಕಿನಿಂದ ಸುರಕ್ಷಿತ ಎಂದರ್ಥವಲ್ಲ. ಆದರೆ ಅವರಿಗೆ ಉಂಟಾಗುವ ಪರಿಣಾಮವು ಕಡಿಮೆ ಅಷ್ಟೇ.

ಮಕ್ಕಳಲ್ಲಿ ಕೊರೋನಾದ ಲಕ್ಷಣಗಳು:
ಕೊರೋನಾ ವೈರಸ್ ನ ಮೂರನೇ ಅಲೆಯ ಬಗ್ಗೆ ಚಿಂತಿಸಬೇಡಿ ಎಂದು ದೇಶದ ಉನ್ನತ ಮಕ್ಕಳ ತಜ್ಞರು ಪೋಷಕರಿಗೆ ಹೇಳಿದ್ದಾರೆ, ಆದರೆ ನಿಮ್ಮ ಚಿಕ್ಕ ಮಗುವನ್ನು ಸುರಕ್ಷಿತವಾಗಿಡಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಇಲ್ಲಿಯವರೆಗೆ ಹದಿಹರೆಯದವರು ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ವ್ಯಾಕ್ಸಿನೇಷನ್ ಲಭ್ಯವಿಲ್ಲ, ಅದಕ್ಕಾಗಿಯೇ ಅವರಿಗೆ ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಬೇಕು.
ವಯಸ್ಕರಂತೆ, ಮಕ್ಕಳಲ್ಲಿ ಕೊರೊನಾದ ಲಕ್ಷಣಗಳು ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶಕ್ಕೆ ಸೀಮಿತವಾಗಿಲ್ಲ. ಹೆಚ್ಚಿನ ಮಕ್ಕಳು ಹೆಚ್ಚಿನ ಜ್ವರ, ಶೀತ, ಉಸಿರಾಟದ ತೊಂದರೆ, ಕೆಮ್ಮು, ವಾಸನೆ ಇಲ್ಲದಿರುವುದು, ಗಂಟಲು ನೋವು, ಆಯಾಸ, ಸ್ನಾಯು ನೋವು, ಮತ್ತು ಮ್ಯೂಕೋಕ್ಯುಟೇನಿಯಸ್ ಉರಿಯೂತದ ಚಿಹ್ನೆಗಳಂತಹ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಕೆಲವು ಸಂದರ್ಭಗಳಲ್ಲಿ, ಮಕ್ಕಳು ಸೋಂಕಿನ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ.

ನಿಮ್ಮ ಮಗುವಿಗೆ ಪಾಸಿಟಿವ್ ಆದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:
ಕೊರೋನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ನಿಮ್ಮ ಮಗುವನ್ನು 14 ದಿನಗಳವರೆಗೆ ಐಸೋಲೇಷನ್ ಮಾಡಿ. ನಂತರ ಪರೀಕ್ಷೆ ಮಾಡಿಸಿ, ಆಮ್ಲಜನಕ ಮಟ್ಟವನ್ನು ಮೇಲ್ವಿಚಾರಣೆ ಮಾಡಿ. ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿಯ ಪ್ರಕಾರ, "ಜನ್ಮಜಾತ ಹೃದ್ರೋಗ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆಗಳು, ಬೊಜ್ಜು ಸೇರಿದಂತೆ ಕೆಲವು ಸಮಸ್ಯೆ ಹೊಂದಿರುವವರನ್ನು ಬಿಟ್ಟು, ಸೌಮ್ಯ ಅಥವಾ ಲಕ್ಷಣರಹಿತ ಸೋಂಕು ಹೊಂದಿರುವ ಮಕ್ಕಳಿಗೆ ಮನೆಯಲ್ಲಿ ಚಿಕಿತ್ಸೆ ನೀಡಬಹುದುʼʼ.
ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳು ಇಲ್ಲಿವೆ:
ಕುಟುಂಬದ ಇತರ ಸದಸ್ಯರು ಮತ್ತು ಸಾಕುಪ್ರಾಣಿಗಳಿಂದ ಅವುಗಳನ್ನು ಪ್ರತ್ಯೇಕಿಸಿ.
ಒಂದು ವೇಳೆ ಮಕ್ಕಳು ಸಪರೇಟ್ ಮಾಡಲು ಅವರಿನ್ನು ಚಿಕ್ಕದಾಗಿದ್ದರೆ, ಕುಟುಂಬದ ಇತರ ಸದಸ್ಯರು ಯಾವಾಗಲೂ ಮಾಸ್ಕ್ ಹಾಕುವುದನ್ನು ಮರೆಯಬೇಡಿ.
ಸಾಧ್ಯವಾದರೆ ನಿಮ್ಮ ಮಗುವಿಗೆ ಪ್ರತ್ಯೇಕ ಬಾತ್ರೂಮ್ ನೀಡಿ ಅಥವಾ ಪ್ರತಿ ಬಳಕೆಯ ನಂತರ ಬಾತ್ ರೂಮ್ ನ್ನು ಸ್ವಚ್ಛಗೊಳಿಸಿ.
ಪಾತ್ರೆಗಳು, ಆಹಾರ, ಹಾಸಿಗೆ, ಟವೆಲ್ ಮತ್ತು ಇತರ ವಸ್ತುಗಳನ್ನು ಹಂಚಿಕೊಳ್ಳಬೇಡಿ.
ಆರೋಗ್ಯಕರ ನೈರ್ಮಲ್ಯ ಅಭ್ಯಾಸವನ್ನು ಅನುಸರಿಸಲು ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೆ ಸಲಹೆ ನೀಡಿ.



Click it and Unblock the Notifications