Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಮಕ್ಕಳು ಮಾಸ್ಕ್ ಧರಿಸಬೇಕೇ? ಈ ಕುರಿತು WHO ಏನು ಹೇಳುತ್ತೆ?
ಕೊರೋನಾದ ಪರಿಣಾಮ ಮಕ್ಕಳ ಮೇಲೂ ಅತಿಯಾಗಿದೆ. ಕೊರೋನಾದ ಕರಿ ನೆರಳಿನಿಂದ ಮಕ್ಕಳನ್ನು ಸುರಕ್ಷಿತವಾಗಿಡಲು ಪೋಷಕರು ಪರದಾಡುತ್ತಿದ್ದಾರೆ. ಮುಖದ ಮೇಲಿನ ಮಾಸ್ಕ್ ಕೊರೋನಾದಿಂದ ತಪ್ಪಿಸಿಕೊಳ್ಳಲು ಇರುವ ಒಂದೇ ಮಾರ್ಗ. ಆದರೆ ಮಕ್ಕಳು ಈ ಮಾಸ್ಕ್ ಧರಿಸಬೇಕೇ? ಧರಿಸಿದರೂ ಎಂತಹ ಮಾಸ್ಕ ಮಕ್ಕಳಿಗೆ ಸೂಕ್ತ ಎಂಬ ಗೊಂದಲ ಹೆತ್ತವರದ್ದು. ಅದಕ್ಕಾಗಿ ಈ ಲೇಖನದಲ್ಲಿ WHO ಈ ಕುರಿತು ಏನು ಹೇಳುತ್ತೆ ಎಂಬುದನ್ನು ಹೇಳಿದ್ದೇವೆ.
ಮಕ್ಕಳ ಮಾನಸಿಕ ಮನಸ್ಥಿತಿಯ ಅಂಶಗಳನ್ನು ಆಧರಿಸಿ, WHO ಮತ್ತು ಯುನಿಸೆಫ್ ಮಕ್ಕಳಿಗೆ ಮಾಸ್ಕ್ಕ ಕುರಿತು ಈ ಕೆಳಗಿನ ಸಲಹೆ ನೀಡುತ್ತವೆ:

5 ವರ್ಷಕ್ಕಿಂತ ಕೆಳಗಿರುವ ಮಕ್ಕಳು:
5 ವರ್ಷ ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸುವ ಅಗತ್ಯವಿಲ್ಲ. ಇದು ಮಗುವಿನ ಸುರಕ್ಷತೆ, ಆಸಕ್ತಿ ಮತ್ತು ಮಾಸ್ಕ್ ಬಳಸುವ ಕನಿಷ್ಠ ಸಾಮರ್ಥ್ಯವನ್ನು ಆಧರಿಸಿದೆ. ಏಕೆಂದರೆ ಮಕ್ಕಳಿಗೆ ಅದನ್ನು ನಿರ್ವಹಿಸುವುದು ಅಸಾಧ್ಯ. ಜೊತೆಗೆ ಉಸಿರುಗಟ್ಟಿದ ಅನುಭವವೂ ಆಗಬಹುದು.

6-11 ವರ್ಷ ವಯಸ್ಸಿನ ಮಕ್ಕಳು:
ಈ ವಯೋಮಾನದ ಮಕ್ಕಳು ಮಾಸ್ಕ್ ಬಳಸುವ ನಿರ್ಧಾರವು ಈ ಕೆಳಗಿನ ಅಂಶಗಳನ್ನು ಆಧರಿಸಿರಬೇಕು.
- ಮಗು ಇರುವ ಪ್ರದೇಶದಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆಯೇ? ಹಾಗಿದ್ದರೆ ಮಾತ್ರ ಮಾಸ್ಕ್ ಬಳಸಿ.
- ಮಕ್ಕಳು ಶಾಲೆ ಅಥವಾ ಇತರ ಸ್ಥಳಗಳಿಗೆ ಭೇಟಿ ನೀಡಿದಾಗ ಬಳಸಿ.
- ವಯಸ್ಸಾದವರು ಮತ್ತು ಗಂಭೀರ ಅನಾರೋಗ್ಯ ಸಮಸ್ಯೆ ಇರುವವರ ಜೊತೆ ಮಗು ಮಾತನಾಡುವಾಗ ಮಾಸ್ಕ್ ಬಳಸಿ.
- ಮುಖವಾಡಗಳನ್ನು ಹೇಗೆ ಧರಿಸುವುದು, ತೆಗೆಯುವುದು ಮತ್ತು ಸುರಕ್ಷಿತವಾಗಿ ಧರಿಸುವುದು ಎಂಬುದರ ಕುರಿತು ಮಗುವಿಗೆ ಸಾಕಷ್ಟು ವಯಸ್ಕರ ಮೇಲ್ವಿಚಾರಣೆಯಿದ್ದಾಗ ಬಳಸಿ.

12ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು:
ಡಬ್ಲ್ಯುಎಚ್ಒ ಮತ್ತು ಯುನಿಸೆಫ್ 12 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ವಯಸ್ಕರಂತೆಯೇ ಮಾಸ್ಕನ್ನು ಧರಿಸಬೇಕೆಂದು ಸಲಹೆ ನೀಡುತ್ತಾರೆ. ಸೋಂಕಿತ ವ್ಯಕ್ತಿಯಿಂದ ಅಥವಾ ಇತರರಿಂದ ಕನಿಷ್ಠ 1 ಮೀಟರ್ ದೂರದಲ್ಲಿ ಇರದಿದ್ದಾಗ ಮಾಸ್ಕ ಬಳಸಿ. ಅಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು.

ಮಕ್ಕಳು ಯಾವ ರೀತಿಯ ಮಾಸ್ಕ್ ಧರಿಸಬೇಕು?:
ಸಾಮಾನ್ಯವಾಗಿ ಉತ್ತಮ ಆರೋಗ್ಯ ಹೊಂದಿರುವ ಮಕ್ಕಳು ವೈದ್ಯಕೀಯೇತರ ಅಥವಾ ಫ್ಯಾಬ್ರಿಕ್ (ಬಟ್ಟೆಯ) ಮಾಸ್ಕ್ ಧರಿಸಬಹುದು. ಇದು ಮೂಲ ರಕ್ಷಣೆಯನ್ನು ಒದಗಿಸುತ್ತದೆ, ಅಂದರೆ ಸೋಂಕಿಗೆ ಒಳಗಾಗಿದ್ದರೆ ಮತ್ತು ಒಳಗಾಗಿರುವುದು ತಿಳಿದಿಲ್ಲದಿದ್ದರೆ ಅದು ಇತರರಿಗೆ ಹರಡದಂತೆ ಮಾಡುತ್ತದೆ.
ಸಿಸ್ಟಿಕ್ ಫೈಬ್ರೋಸಿಸ್, ಕ್ಯಾನ್ಸರ್ ಅಥವಾ ಇಮ್ಯುನೊಸಪ್ರೆಶನ್ನಂತಹ ಆರೋಗ್ಯ ಸಮಸ್ಯೆಯಿರುವ ಮಕ್ಕಳು ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ಮೆಡಕಲ್ ಮಾಸ್ಕನ್ನು ಧರಿಸಬೇಕು. ಇದು ವೈರಸ್ ಹರಡುವುದನ್ನು ನಿಯಂತ್ರಿಸುತ್ತದೆ ಮತ್ತು ರಕ್ಷಣೆ ನೀಡುತ್ತದೆ.



Click it and Unblock the Notifications
