Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಕೋವಿಡ್-19 ಲಸಿಕೆ: ಲಸಿಕೆ ಹಾಕಿಸಿಕೊಂಡವರ ಸಂಪರ್ಕಕ್ಕೆ ಮಕ್ಕಳು ಬರುವುದು ಸುರಕ್ಷಿತನಾ?
ಮಕ್ಕಳ ವಿಚಾರದಲ್ಲಿ ಕೊರೋನಾ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಕೊರೋನಾದ ಮೊದಲನೆಯ ಅಲೆಗೆ ಹೋಲಿಸಿದರೆ ಎರಡನೆಯ ಅಲೆಯಿಂದ ಮಕ್ಕಳಿಗೆ ಹೆಚ್ಚು ಅಪಾಯವಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ತೀವ್ರವಾದ ರೋಗಲಕ್ಷಣಗಳನ್ನು ಮಕ್ಕಳು ಎದುರಿಸುತ್ತಿರುವುದು ಪೋಷಕರಿಗೆ ಆತಂಕ ಉಂಟು ಮಾಡಿದೆ.
ಮತ್ತೊಂದೆಡೆ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಯಾವುದೇ ಲಸಿಕೆ ಲಭ್ಯವಿಲ್ಲ, ಆದ್ದರಿಂದ ಸೋಂಕಿಗೆ ಒಳಗಾಗದಂತೆ ಅವರನ್ನು ರಕ್ಷಿಸುವುದು ಹೆಚ್ಚು ಸವಾಲಾಗಿದೆ. ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ಮಕ್ಕಳನ್ನು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಆದರೆ ಲಸಿಕೆ ಹಾಕಿಕೊಂಡ ಸಂಬಂಧಿಕರು ಮತ್ತು ಇತರ ಕುಟುಂಬ ಸದಸ್ಯರ ಸಂಪರ್ಕಕ್ಕೆ ಬರಲು ತಮ್ಮ ಮಕ್ಕಳಿಗೆ ಅವಕಾಶ ನೀಡಬೇಕೆ ಎಂಬ ಪ್ರಶ್ನೆ ಪೋಷಕರಲ್ಲಿದೆ. ಅದಕ್ಕೆ ಉತ್ತರ ಇಲ್ಲಿದೆ.

ಲಸಿಕೆ ಹಾಕಿಕೊಂಡ ಇತರ ಜನರನ್ನು ಭೇಟಿ ಮಾಡಲು ಮಕ್ಕಳಿಗೆ ಅವಕಾಶ ನೀಡಬಹುದೇ?
ಕೊರೋನಾ ಲಸಿಕೆ ಹಾಕೊಂಡಿದ್ದೇವೆ ಎಂದರೆ ವ್ಯಕ್ತಿಯು ವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ ಎಂದರ್ಥವೇ ಹೊರತು ಅವರು ವೈರಸ್ ಸೋಂಕಿಗೆ ಒಳಗಾಗುವುದೇ ಇಲ್ಲ ಅಥವಾ ಅವರ ಹತ್ತಿರ ವೈರಸ್ ಬರುವುದಿಲ್ಲ ಎಂದಲ್ಲ. ಲಸಿಕೆ ಪಡೆದ ನಂತರವೂ ವ್ಯಕ್ತಿಯು ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ವೈರಸ್ ಗೆ ತುತ್ತಾಗಿರಬಹುದು. ಇದಲ್ಲದೆ, ಯಾವುದೇ ಲಸಿಕೆ ವೈರಸ್ ವಿರುದ್ಧ ಸಂಪೂರ್ಣ ರಕ್ಷಣೆ ನೀಡುತ್ತದೆ ಎಂದು ಸಾಬೀತಾಗಿಲ್ಲ. ಪ್ರಸ್ತುತ ನೀಡಲಾಗುವ ಲಸಿಕೆಯ ಪರಿಣಾಮಕಾರಿತ್ವವು ಸುಮಾರು 80% ರಿಂದ 90% ರವರೆಗೆ ಇದೆ ಅಷ್ಟೇ.
ಎರಡನೆಯದಾಗಿ, ವೈರಸ್ ಎಲ್ಲಿಯಾದರೂ ಇರಬಹುದು. ಆಡುವಾಗ ಅಥವಾ ಇತರ ಚಟುವಟಿಕೆಯಲ್ಲಿ ತೊಡಗಿರುವಾಗ ಮಕ್ಕಳಿಗೆ ಸುಲಭವಾಗಿ ಅಂಟಿಕೊಳ್ಳಬಹುದು. ಆದ್ದರಿಂದ, ಸದ್ಯಕ್ಕೆ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು, ನಿಯಮಿತವಾಗಿ ಕೈ ತೊಳೆಯುವುದನ್ನು ಅಭ್ಯಾಸ ಮಾಡುವುದು, ಮಾಸ್ಕ್ ಧರಿಸುವುದು ಮತ್ತು ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸದ ಜನರಿಂದ ದೂರವಿರುವುದು ಉತ್ತಮ.

ನಿಮ್ಮ ಮಕ್ಕಳು ಎಷ್ಟು ಸಮಯ ಅಂತರವನ್ನು ಕಾಪಾಡಿಕೊಳ್ಳಬೇಕು?
ಇತರರಿಗೆ ಲಸಿಕೆ ಹಾಕಿದಾಗ ಮಕ್ಕಳು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಜನರಿಗೆ ನೀಡಲಾಗುವ ಲಸಿಕೆಗಳು ವೈರಸ್‌ನಿಂದ ಜೀವನಪೂರ್ತಿ ರಕ್ಷಣೆ ನೀಡುವುದೆಂದು ಖಚಿತವಿಲ್ಲ. ಕೊರೋನಾಕ್ಕೆ ಸರಿಯಾದ ಲಸಿಕೆ ಹಾಗೂ ವೈದ್ಯಕೀಯ ಚಿಕಿತ್ಸೆ ಇನ್ನೂ ಅಭಿವ್ಋದ್ಧಿಯ ಹಂತದಲ್ಲಿ ಇರುವುದರಿಂದ ಮಕ್ಕಳ ವಿಚಾರದಲ್ಲಿ ಯಾವುದೇ ಆತುರದ ನಿರ್ಧಾರ ಬೇಡ. ಆದ್ದರಿಂದ ಅಲ್ಲಿ ತನಕ ಕೊರೋನಾದ ಮಾರ್ಗಸೂಚಿಗಳನ್ನು ಅನುಸರಿಸುವುದು ಮುಖ್ಯ. ಲಸಿಕೆಯು ಲಸಿಕೆ ಪಡೆದುಕೊಂಡವರನ್ನಷ್ಟೇ ರಕ್ಷಿಸುತ್ತದೆ ಹೊರತು ಅವರ ಸುತ್ತ ಮುತ್ತಲಿನ ಜನರನ್ನಲ್ಲ.

ಲಸಿಕೆ ಹಾಕಿಕೊಂಡ ವ್ಯಕ್ತಿಯು ವೈರಸ್ ಹರಡಬಹುದು:
ಕೊರೋನಾ ವೈರಸ್ ಗಾಳಿ ಮತ್ತು ವಿವಿಧ ಮೇಲ್ಮೈಗಳಲ್ಲಿ ಹಲವಾರು ದಿನಗಳವರೆಗೆ ಬದುಕಬಲ್ಲದು. ಸೋಂಕಿತ ವ್ಯಕ್ತಿಯೊಂದಿಗೆ ಮಾತನಾಡುವಾಗ ಅಥವಾ ಕಲುಷಿತ ಜಾಗವನ್ನು ಸ್ಪರ್ಶಿಸುವ ಮೂಲಕ ಲಸಿಕೆ ಹಾಕಿಕೊಂಡ ವ್ಯಕ್ತಿಯು ವೈರಸ್‌ನೊಂದಿಗೆ ಸಂಪರ್ಕಕ್ಕೆ ಬಂದರೆ, ಅವರು ವೈರಸ್‌ನ್ನು ತಮ್ಮ ಮೂಗಿನ ಮೂಲಕ ಸಾಗಿಸಬಹುದು. ಲಸಿಕೆ ಹಾಕಿದರಿಂದ ಅವರು ಯಾವುದೇ ರೋಗಲಕ್ಷಣಗಳನ್ನು ಬೆಳೆಸಿಕೊಳ್ಳದಿರಬಹುದು ಆದರೆ ಅವರು ಇತರರಿಗೆ ರವಾನಿಸಬಹುದು.



Click it and Unblock the Notifications