Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಕೋವಿಡ್-19ನಿಂದ ಭಯಭೀತರಾದ ಮಕ್ಕಳಿಗೆ ಈ ರೀತಿ ಹೇಳಿ ಅರ್ಥ ಮಾಡಿಸಿ
ಕೊರೋನಾಕ್ಕೆ ಘಟಾನುಘಟಿ ಯುವಕರೇ ಹೆದರಿಕೊಳ್ಳುತ್ತಿರುವಾಗ ಮಕ್ಕಳು ಭಯ ಭೀತರಾಗುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ತಮ್ಮ ಸುತ್ತಮುತ್ತಲಾಗುತ್ತಿರುವ ವಿದ್ಯಮಾನಗಳನ್ನ ನೋಡುತ್ತಿರುವ ಮಕ್ಕಳು ತಮಗೇನಾದರೂ ಕೊರೋನಾ ತಗುಲಿದಲ್ಲಿ ಹೆಚ್ಚು ಭಯಗೊಳ್ಳುತ್ತಾರೆ. ಈ ಕುರಿತು ಅವರಲ್ಲಿ ಸಾವಿರಾರು ಪ್ರಶ್ನೆಗಳು ಮೂಡಬಹುದು. ಆ ಸಮಯದಲ್ಲಿ ಪೋಷಕರ ಪಾತ್ರ ಬಹಳ ದೊಡ್ಡದು. ಈ ಸಂದರ್ಭದಲ್ಲಿ ಪೋಷಕರು ಮಕ್ಕಳ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಕೊರೋನಾದ ಕುರಿತು ಮಕ್ಕಳ ಜೊತೆ ಹೇಗೆ ಮಾತನಾಡಬೇಕು ಎಂಬುದನ್ನು ಈ ಕೆಳಗೆ ವಿವರಿಸಲಾಗಿದೆ:

ಮಕ್ಕಳಲ್ಲಿ ಸುರಕ್ಷಿತ ಭಾವನೆ ಮೂಡಿಸಿ:
ನಿಮ್ಮ ಮಗುವಿಗೆ ಸುರಕ್ಷಿತ ಭಾವನೆ ಮೂಡಿಸಲು ಸಹಾಯ ಮಾಡುವತ್ತ ಗಮನಹರಿಸಿ. ಒಂದು ವೇಳೆ ಮಗು ಕೊರೋನಾದ ಬಗ್ಗೆ ಭಯ ವ್ಯಕ್ತ ಪಡಿಸಿದರೆ ಅವರಿಗೆ ಧೈರ್ಯ ತುಂಬಿ. ಸ್ಥಿತಿಯನ್ನು ನಿಧಾನವಾಗಿ ಅರ್ಥ ಮಾಡಿಸಿ. ನಿಮ್ಮ ಉತ್ತರದಿಂದ ಮಗುವಿಗೆ ನಾನು ಸುರಕ್ಷಿತ ನನಗೇನು ಆಗುವುದಿಲ್ಲ ಎಂಬ ಭಾವನೆ ಮೂಡಬೇಕು.

ಶಾಂತವಾಗಿ, ಧೈರ್ಯದಿಂದ ಮಾತನಾಡಿ:
ಮಗು ಕೇಳುವ ಪ್ರಶ್ನೆಗಳಿಗೆ ರೇಗಬೇಡಿ. ಅವರೇನಾದರೂ ಕೊರೋನಾದ ಬಗ್ಗೆ ಮಾತನಾಡಿದರೆ ಧ್ವನಿಯನ್ನು ಇಳಿಸಿ ಮಾತನಾಡಿ. ಅವರ ಪ್ರಶ್ನೆಗಳಿಗೆ ನಿಧಾನವಾಗಿ ಉತ್ತರ ನೀಡಿ. ಒಂದು ವೇಳೆ ಉತ್ತರ ತಿಳಿಯದಿದ್ದಲ್ಲಿ ಇಬ್ಬರೂ ಸೇರಿ ಅಧೀಕೃತ ಸೈಟ್ ನಿಂದ ಮಾಹಿತಿ ಪಡೆದುಕೊಳ್ಳುವ ಪ್ರಯತ್ನ ಮಾಡಿ.

ಮಕ್ಕಳಿಗೆ ಅವರ ಭಯವನ್ನು ಹಂಚಿಕೊಳ್ಳಲು ಬಿಡಿ:
"ನನಗೆ ಮುಂದೇನಾಗಬಹುದು? ನನಗೆ ಏನಾದರೂ ಆಗಬಹುದೇ?" ಎಂದು ಮಕ್ಕಳು ಚಿಂತೆ ಮಾಡುವುದು ಸಹಜ. ಮಕ್ಕಳು ವಯಸ್ಕರಂತೆ ಅಪಾಯಕ್ಕೆ ಒಳಗಾಗುವುದಿಲ್ಲ ಎಂದು ನಿಮ್ಮ ಮಗುವಿಗೆ ತಿಳಿಸಿ. ಇಂತಹ ಉತ್ತರಗಳಿಗಾಗಿ ಅವರು ಯಾವಾಗಲೂ ನಿಮ್ಮ ಬಳಿಗೆ ಬರಬಹುದು ಅಥವಾ ಅವರನ್ನು ಹೆದರಿಸುವ ವಿಷಯಗಳ ಬಗ್ಗೆ ಮಾತನಾಡಲು ನಿಮ್ಮ ಬಳಿ ಬರಬಹುದು. ಆಗ ಅವರಿಗೆ ಅರ್ಥವಾಗುವಂತೆ ಹೇಳುವುದು ನಿಮ್ಮ ಜವಾಬ್ದಾರಿ.

ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ತಿಳಿಸಿ:
ಜನರನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿಡಲು ನಡೆಯುತ್ತಿರುವ ಎಲ್ಲ ವಿಷಯಗಳ ಬಗ್ಗೆ ಮಾತನಾಡಿ. ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಮತ್ತು ವೈದ್ಯರು ಹೇಗೆ ಸಿದ್ಧರಾಗಿದ್ದಾರೆಂದು ತಿಳಿದರೆ ಅದು ಚಿಕ್ಕ ಮಕ್ಕಳಿಗೆ ಧೈರ್ಯ ತುಂಬಬಹುದು. COVID-19 ಲಸಿಕೆಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಹೇಗೆ ಶ್ರಮಿಸಿದ್ದಾರೆ ಎಂದು ಮಕ್ಕಳು ತಿಳಿದಿರಬೇಕು ಮತ್ತು ಲಕ್ಷಾಂತರ ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. COVID-19 ಹರಡುವುದನ್ನು ತಡೆಯಲು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ಮಾಸ್ಕ್ ಧರಿಸಬೇಕು. ಈ ಮಾತುಕತೆಗಳು ಮಕ್ಕಳು ತಮ್ಮ ಸಾಮಾನ್ಯ ದಿನಚರಿಯಲ್ಲಿ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತದೆ.

ಒತ್ತಡ ಸಾಮಾನ್ಯ ಎಂದು ಅರ್ಥಮಾಡಿಸಿ:
ಕೆಲವೊಮ್ಮೆ ಒತ್ತಡವನ್ನು ಅನುಭವಿಸುವುದು ಸಾಮಾನ್ಯ ಎಂದು ನಿಮ್ಮ ಮಕ್ಕಳಿಗೆ ತಿಳಿಸಿ. ಇದು ಎಲ್ಲರಿಗೂ ಎದುರಾಗಿರುವ ಪರಿಸ್ಥಿತಿ, ಭಯ ಬೇಡ, ಒಂದು ದಿನ ಇದೆಲ್ಲವೂ ಮುಗಿಯುತ್ತದೆ ಎಂಬ ಮಾತುಗಳನ್ನಾಡಿ ಅವರನ್ನು ಒತ್ತಡದಿಮದ ಹೊರಬರುವಂತೆ ಆಡಿ. ಜೀವನ ಸಹಜ ಸ್ಥಿತಿಗೆ ಮರಳುತ್ತದೆ ಎಂಬುದುನ್ನು ತಿಳಿಸಿ.

ಮಕ್ಕಳ ಆರೋಗ್ಯ ನಿಯಂತ್ರಣ ಹೇಳಿಕೊಡಿ:
ಮಕ್ಕಳಿಗೆ ಕೈಗಳನ್ನು ಚೆನ್ನಾಗಿ ತೊಳೆಯುವುದು, ಸಾಕಷ್ಟು ನಿದ್ರೆ ಮಾಡುವುದಕ್ಕೆ ಹೇಳಿ. ಇದರಿಂದ ನಿಮ್ಮ ಮಗುವಿಗೆ ಅವರ ಆರೋಗ್ಯ ನಿಯಂತ್ರಣದಲ್ಲಿದೆ ಎಂಬುದು ಅರಿವಾಗುತ್ತದೆ. ನಿಯಮಿತವಾಗಿ ಕೈ ತೊಳೆಯುವುದು ವೈರಸ್ಗಳು ಇತರರಿಗೆ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಮಕ್ಕಳಿಗೆ ವಿವರಿಸಿ. ಇದರಿಂದ ಅವರು ಇತರರಿಗೆ ಆದರ್ಶಪ್ರಾಯರಾಗಬಹುದು ಎಂಬುದನ್ನೂ ತಿಳಿಸಿ.



Click it and Unblock the Notifications
