Latest Updates
-
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ!
ಗರ್ಭಿಣಿಯಾದಾಗ ಬಿದ್ದ ಸ್ಟ್ರೆಚ್‌ಮಾರ್ಕ್ಸ್ ಕಲೆ ಹೋಗಲಾಡಿಸಲು ಮನೆಮದ್ದು
ಗರ್ಭಾವಸ್ಥೆಯಲ್ಲಿ ಉದರದಲ್ಲಿ ಮಗು ಬೆಳೆಯುತ್ತಿದ್ದಂತೆ ನಮ್ಮ ಚರ್ಮವು ಹಿಗ್ಗಿದಾಗ ಸ್ಟ್ರೆಚ್ ಮಾರ್ಕ್‌ಗಳಾಗುತ್ತೆ. ಸಾಮಾನ್ಯವಾಗಿ ತಾಯಂದಿರು ಇದು ಮಗುವು ಬಿಡಿಸಿದ ಮೊದಲ ಚಿತ್ರ ಎನ್ನುವ ಭಾವನೆಯನ್ನು ಹೊಂದಿರುತ್ತಾರೆ. ಹೌದು ಇದೂ ಒಂದು ತಾಯ್ತನದ ಕುರುಹು. ಹೆರಿಗೆಯಾದ ನಂತರ ಕೆಲವರಿಗೆ ಹೊಟ್ಟೆ, ಸೊಂಟದ ಮೇಲೆಲ್ಲಾ ಹೆಚ್ಚು ಸ್ಟ್ರೆಚ್ ಮಾರ್ಕ್‌ಗಳಿರುತ್ತೆ, ಕೆಲವರಿಗೆ ಅಷ್ಟಾಗಿ ಈ ಸ್ಟ್ರೆಚ್ ಮಾರ್ಕ್ ಎದ್ದು ಕಾಣುವುದಿಲ್ಲ. ಕೆಲವರ ಸ್ಟ್ರೆಚ್ ಮಾರ್ಕ್ ಗಾಢವಾಗಿದ್ದು, ಸೀರೆ ಉಟ್ಟಾಗಲೆಲ್ಲಾ ಎದ್ದು ಕಾಣುತ್ತೆ, ಇದನ್ನು ನಿವಾರಿಸಲು ಏನು ಮಾಡೋದು ಎನ್ನುವ ಚಿಂತೆ ನಿಮಗಿದ್ದಲ್ಲಿ ನಾವಿಲ್ಲಿ ವಿವರಿಸಿದ ಟಿಪ್ಸ್ ಟ್ರೈ ಮಾಡಿ ನೋಡಿ.

1. ಆಯಿಲ್ ಮಸಾಜ್
ಸ್ಟ್ರೆಚ್ ಮಾರ್ಕ್‌ಗಳಿರುವ ಜಾಗವನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಚರ್ಮವು ನಯವಾಗುವುದರ ಜೊತೆಗೆ ಸ್ಟ್ರೆಚ್ ಮಾರ್ಕ್‌ಗಳೂ ಕೂಡಾ ಕಡಿಮೆಯಾಗುತ್ತದೆ. ನೀವು ಮಸಾಜ್‌ಗೆ ಬಳಸಬಹುದಾದ ಎಣ್ಣೆಗಳ ವಿವರ ಇಲ್ಲಿದೆ
ಆಲಿವ್ ಆಯಿಲ್
ಆಲಿವ್ ಆಯಿಲ್ ನಿಮ್ಮ ಚರ್ಮವನ್ನು ತೇವಗೊಳಿಸುತ್ತದೆ.ಇದು ರಕ್ತಪರಿಚಲನೆ ಸುಧಾರಿಸವುದು ಹಾಗೂ ಸ್ಟ್ರೆಚ್‌ಮಾರ್ಕ್‌ಗಳನ್ನು ಹೋಗಲಾಡಿಸುತ್ತೆ. ನಿಮ್ಮ ಅಂಗೈಯಲ್ಲಿ ಎಣ್ಣೆಯನ್ನು ತೆಗೆದುಕೊಂಡು ಸ್ಟ್ರೆಚ್‌ಮಾರ್ಕ್ ಇರುವ ಜಾಗವನ್ನು ನಿಧಾನವಾಗಿ ಮಸಾಜ್ ಮಾಡಿ. ಮೂವತ್ತು ನಿಮಿಷಗಳ ಕಾಲ ಹಾಗೇ ಬಿಡಿ. ಇದರಿಂದ ಎಣ್ಣೆಯಲ್ಲಿರುವ ವಿಟಮಿನ್ ಎ, ಡಿ ಚರ್ಮಕ್ಕೆ ಹೀರಲ್ಪಡುತ್ತದೆ. ನಂತರ ಸ್ನಾನ ಮಾಡಿ. ಇದನ್ನು ನಿಯಮಿತವಾಗಿ ಮಾಡುತ್ತಿದ್ದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ.

2. ವಿಟಮಿನ್ ಇ ಆಯಿಲ್
ವಿಟಮಿನ್ ಇ ಆಯಿಲ್ ಸ್ಟ್ರೆಚ್‌ಮಾರ್ಕ್ ನಿವಾರಿಸುವ ಪರಿಣಾಮಕಾರಿ ಮದ್ದು. ವಿಟಮಿನ್ ಇ ಕ್ಯಾಪ್ಸೂಲ್‌ನಿಂದ ತೈಲವನ್ನು ತೆಗೆದು ಅದನ್ನು ನೀವು ಮಾಮೂಲಿಯಾಗಿ ಹಚ್ಚುವ ಮಾಯಿಶ್ಚರೈಸರ್‌ನೊಂದಿಗೆ ಮಿಶ್ರಣ ಮಾಡಿ, ಸ್ಟ್ರೆಚ್‌ಮಾರ್ಕ್ ಇರುವ ಜಾಗಕ್ಕರ ಹಚ್ಚಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ಸ್ಟ್ರೆಚ್‌ಮಾರ್ಕ್ ಇಲ್ಲದಂತೆ ಮಾಡಬಹುದು.

3. ಹರಳೆಣ್ಣೆ
ಸ್ಟ್ರೆಚ್‌ಮಾರ್ಕ್ ಇರುವ ಜಾಗಕ್ಕೆ ಹರಳೆಣ್ಣೆಯಿಂದ ನಿಧಾನವಾಗಿ ವೃತ್ತಾಕಾರವಾಗಿ ಮಸಾಜ್ ಮಾಡಿ. ನಂತರ ಪ್ಲಾಸ್ಟಿಕ್ ಶೀಟ್‌ನಿಂದ ಕವರ್ ಮಾಡಿ, ನಂತರ ಅದರ ಮೇಲೆ ಬಿಸಿ ನೀರಿನ ಪ್ಯಾಕ್ ಇಟ್ಟುಕೊಳ್ಳಿ ಅಥವಾ ಬಿಸಿ ನೀರಿನಲ್ಲಿ ಟವಲ್ ಅದ್ದಿ ಅದನ್ನೂ ಹೊಟ್ಟೆಯ ಸುತ್ತ ಕಟ್ಟಿಕೊಳ್ಳಬಹುದು. ಶಾಖವು ಚರ್ಮದ ರಂಧ್ರಗಳನ್ನು ತೆರೆಯುವ ಮೂಲಕ ತೈಲವನ್ನು ಹೀರಿಕೊಳ್ಳುತ್ತದೆ. ನಂತರ ಸ್ನಾನ ಮಾಡಿ. ಸುಮಾರು ಒಂದು ತಿಂಗಳವರೆಗೆ ಪ್ರತಿದಿನ ಈ ರೀತಿ ಮಾಡಿ.
ಈ ಎಣ್ಣೆಗಳನ್ನು ಹೊರತಪಡಿಸಿ ಎಳ್ಳೆಣ್ಣೆ, ತೆಂಗಿನೆಣ್ಣೆ, ಬಾದಾಮಿ, ಅವಕಾಡೋ, ಹರಳೆಣ್ಣೆ ಮತ್ತು ವಿಟಮಿನ್ ಇ ತೈಲವನ್ನು ಸಮಪ್ರಮಾಣದಲ್ಲಿ ಬೆರೆಸಿ ಚರ್ಮಕ್ಕೆ ಹಚ್ಚಿ ಮಸಾಜ್ ಮಾಡಬಹುದು.

4. ಎಸೆನ್ಶಿಯಲ್ ಆಯಿಲ್ ಮಸಾಜ್
ಬಾದಾಮಿ, ಎಳ್ಣೆಣ್ಣೆ ಅಥವಾ ತೆಂಗಿನೆಣ್ಣೆಗೆ ಗುಲಾಬಿ, ಜೆರೇನಿಯಂ, ಲ್ಯಾವೆಂಡರ್, ಮಿರ್ಹ್ ಅಥವಾ ಹೆಲಿಕ್ರಿಸಮ್ ಮುಂತಾದ ಎಸೆನ್ಸಿಯಲ್ ತೈಲಗಳ ಕೆಲವು ಹನಿಯನ್ನು ಬೆರೆಸಿ, ಈ ಮಿಶ್ರಣವನ್ನು ಸ್ಟ್ರೆಚ್ ಮಾರ್ಕ್ ಇರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಿ. ಇದು ಬೇಗನೆ ಸ್ಟ್ರೆಚ್ ಮಾರ್ಕ್ ನಿವಾರಿಸಲು ಸಹಾಯ ಮಾಡುತ್ತದೆ.

5. ಲೋಳೆಸರ
ಲೋಳೆಸರ ಅಂದರೆ ಅಲೋವೆರಾವು ಚಿಕಿತ್ಸಕ ಗುಣವನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ಸಿಗುವ ಜೆಲ್‌ಗಿಂತ ತಾಜಾ ಅಲೋವೆರಾ ಸಸ್ಯದಿಂದ ತೆಗೆದ ಲೋಳೆಯನ್ನು ಬಳಸಿ. ಇದನ್ನು ನೇರವಾಗಿ ಚರ್ಮದ ಮೇಲೆ ಉಜ್ಜಿ, ಹದಿನೈದು ನಿಮಷ ಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ನಿಯಮಿತವಾಗಿ ಮಾಡುತ್ತಾ ಬಂದಲ್ಲಿ ಸ್ಟ್ರೆಚ್‌ಮಾರ್ಕ್‌ನ ಕಲೆಗಳು ಮಾಯವಾಗುವುದು

6. ಜೇನುತುಪ್ಪ
ಜೇನುತುಪ್ಪದಲ್ಲಿರುವ ನಂಜುನಿರೋಧಕ ಗುಣವು ಸ್ಟ್ರೆಚ್‌ಮಾರ್ಕ್ ಕಡಿಮೆ ಮಾಡುತ್ತದೆ. ಸಣ್ಣ ಬಟ್ಟೆಯ ತುಂಡು ಅಥವಾ ಹತ್ತಿಯಲ್ಲಿ ಜೇನುತುಪ್ಪವನ್ನು ಅದ್ದಿ, ಸ್ಟ್ರೆಚ್‌ಮಾರ್ಕ್ ಇರುವ ಜಾಗದಲ್ಲಿ ಇರಿಸಿ, ಅದು ಒಣಗುವವರೆಗೆ ಹಾಗೆ ಬಿಡಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇನ್ನೊಂದು ವಿಧಾನವನ್ನು ಹೇಳುವುದಾದರೆ ಜೇನುತುಪ್ಪವನ್ನು ಉಪ್ಪು ಮತ್ತು ಗ್ಲಿಸರಿನ್‌ನೊಂದಿಗೆ ಬೆರೆಸಿ, ಈ ಮಿಶ್ರಣವನ್ನು ಸ್ಟ್ರೆಚ್‌ಮಾರ್ಕ್‌ಇರುವ ಜಾಗಕ್ಕೆ ಲೇಪಿಸಿ, ಒಣಗಿದ ನಂತರ ನೀರಿನಿಂದ ತೊಳೆಯಿರಿ.

7. ಮೊಟ್ಟೆಯ ಬಿಳಿ ಭಾಗ
ಮೊಟ್ಟೆಯ ಬಿಳಿಭಾಗ ಪ್ರೋಟೀನ್‌ಭರಿತವಾಗಿರುತ್ತದೆ. ಇದು ಚರ್ಮವನ್ನು ಪುನರ್‌ಯೌವನಗೊಳಿಸಲು ಸಹಾಯ ಮಾಡುತ್ತೆ, ಮತ್ತು ಚರ್ಮವು ಹೊಳೆಯುವಂತೆ ಮಾಡುತ್ತೆ. ಮೊದಲಿಗೆ ಸ್ಟ್ರೆಚ್‌ಮಾರ್ಕ್‌ಇರುವ ಜಾಗವನ್ನು ಸ್ವಚ್ಛಗೊಳಿಸಿ, ನಂತರ ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸ್ಟ್ರೆಚ್‌ಮಾರ್ಕ್ ಮೇಲೆ ಹಚ್ಚಿ. ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ. ನಂತರ ಚರ್ಮವನ್ನು ಮೃದುವಾಗಿಸಲು ಆಲಿವ್ ಆಯಿಲ್ ಹಚ್ಚಿ.

8. ಶಿಯಾ ಬಟರ್ ಅಥವಾ ಕೋಕೋ ಬಟರ್
ಶಿಯಾ ಬಟರ್ ಮತ್ತು ಕೊಕೋಬಟರ್ ಅನ್ನು ನಿಯಮಿತವಾಗಿ ಸ್ಟ್ರೆಚ್‌ಮಾರ್ಕ್ ಇರುವ ಜಾಗಕ್ಕೆ ಹಚ್ಚಿ, ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದು ಸ್ಟ್ರೆಚ್‌ಮಾರ್ಕ್ ನಿವಾರಿಸಿ ಚರ್ಮವು ಮೊದಲಿನಂತಾಗಲು ಸಹಾಯ ಮಾಡುತ್ತದೆ. ಅಲ್ಲದೇ ಚರ್ಮವು ಒಣಗದಂತೆ ತಡೆಯುತ್ತದೆ. ಇದು ಉತ್ತಮ ಮಾಯಿಶ್ಚರೈಸರ್ ಕೂಡಾ ಆಗಿದ್ದು ತ್ವಚೆಯ ಪೋಷಣೆಗೆ ಸಹಕಾರಿ.

9. ಸಕ್ಕರೆ
ಸಕ್ಕರೆಯಿಂದಾನೂ ಸ್ಟ್ರೆಚ್‌ಮಾರ್ಕ್ ಕಡಿಮೆ ಮಾಡಬಹುದು ಹೇಗೆಂದರೆ, ಒಂದು ಚಮಚ ಸಕ್ಕರೆಗೆ ಸ್ವಲ್ಪ ಬಾದಾಮಿ ಎಣ್ಣೆ ಮತ್ತು ಕೆಲವು ಹನಿ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿ, ಸ್ನಾನಕ್ಕೆ ಹೋಗುವ ಮೊದಲು ಇದನ್ನು ಸ್ಕ್ರಬ್‌ನಂತೆ ಬಳಸಿ. ಒಂದು ತಿಂಗಳ ಕಾಲ ಪ್ರತಿದಿನ ಇದನ್ನು ಮಾಡಿದರೆ ಸ್ಟ್ರೆಚ್‌ಮಾರ್ಕ್‌ನಿಂದ ಪರಿಹಾರ ಪಡೆಯುವಿರಿ.

10. ನಿಂಬೆ ರಸ
ನಿಂಬೆರಸದಲ್ಲಿರುವ ಆಮ್ಲೀಯ ಗುಣವು ಸ್ಟ್ರೆಚ್‌ಮಾರ್ಕ್ ನಿವಾರಿಸುವ ಕೆಲಸ ಮಾಡುತ್ತದೆ. ಹೇಗೆಂದ್ರೆ ಸ್ಟ್ರೆಚ್‌ಮಾರ್ಕ್ ಇರುವಲ್ಲಿ ತಾಜಾ ನಿಂಬೆ ರಸವನ್ನು ಉಜ್ಜಿ, ಹತ್ತು ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನವೂ ಹಚ್ಚಬಹುದು. ಇದಲ್ಲದೇ ನಿಂಬೆರಸ ಮತ್ತು ಸೌತೆಕಾಯಿ ರಸವನ್ನು ಸಮಯಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣವನ್ನು ಮಾಡೊ, ಸ್ಟ್ರೆಚ್‌ಮಾರ್ಕ್ ಮೇಲೆ ಹಚ್ಚಿ, ಒಣಗಿದ ನಂತರ ತೊಳೆಯಿರಿ.

11. ನೀರು
ಚರ್ಮದ ಆರೋಗ್ಯಕ್ಕಾಗಿ ನೀರು ಕುಡಿಯುವುದು ಅತೀಮುಖ್ಯ. ಸ್ಟ್ರೆಚ್‌ಮಾರ್ಕ್ ನಿವಾರಿಸಬೇಕೆಂದರೆ ಪ್ರತಿದಿನ ಕನಿಷ್ಠ 10 ರಿಂದ 12 ಗ್ಲಾಸ್ ನೀರನ್ನು ಕುಡಿಯಿರಿ. ಇದು ನಿಮ್ಮ ತ್ವಚೆಗೆ ತೇವಾಂಶವನ್ನು ನೀಡುತ್ತದೆ ಹಾಗೂ ಟಾಕ್ಸಿಕ್ ಅಂಶಗಳನ್ನು ನಿವಾರಿಸುತ್ತೆ. ನೀರಿನ ಸೇವನೆಯು ಚರ್ಮವನ್ನು ಮೃದುವಾಗಿರಿಸುತ್ತದೆ. ಚರ್ಮವು ಮರಳಿ ಮೊದಲಿನಂತಾಗಲು ದೇಹವನ್ನು ಹೈಡ್ರೇಟ್ ಆಗಿರಿಸಿಕೊಳ್ಳುವುದು ಮುಖ್ಯ. ಆದಷ್ಟು ಚಹಾ, ಕಾಫಿ, ಸೋಡಾ ಮುಂತಾದ ಡಿಹೈಡ್ರೇಷನ್ ಉಂಟುಮಾಡುವ ಪಾನೀಯಗಳನ್ನು ಸೇವಿಸಬೇಡಿ.

12. ಏಪ್ರಿಕಾಟ್
ಏಪ್ರಿಕಾಟ್‌ನ ಬೀಜವನ್ನು ತೆಗದು ಅದನ್ನು ನುಣ್ಣಗೆ ಮಿಕ್ಸಿಯಲ್ಲಿ ಪೇಸ್ಟ್ ಮಾಡಿ, ಸ್ಟ್ರೆಚ್‌ಮಾರ್ಕ್ ಮೇಲೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ, ಇದನ್ನು ನಿಯಮಿತವಾಗಿ ಹಚ್ಚುವುದರಿಂದಲೂ ಸ್ಟ್ರೆಚ್‌ಮಾರ್ಕ್ ಕಡಿಮೆಯಾಗುತ್ತೆ.

13. ಆಲೂಗಡ್ಡೆ ರಸ
ಆಲೂಗಡ್ಡೆಯಲ್ಲಿರುವ ಫೈಟೋಕೆಮಿಕಲ್, ಫಾಲಿಫಿನಾಲ್ ಮತ್ತು ಕ್ಯಾರೋಟಿನಾಯ್ಡ್ ಅಂಶವು ತ್ವಚೆಯನ್ನು ಸುಧಾರಿಸುತ್ತದೆ. ಆಲೂಗಡ್ಡೆಯನ್ನು ಎರಡು ಭಾಗಗಳಾಗಿ ಕತ್ತರಿಸಿ, ಅದನನ್ನು ಸ್ಟ್ರೆಚ್‌ಮಾರ್ಕ್ ಜಾಗದ ಮೇಲೆ ಉಜ್ಜಿ, ರಸವನ್ನು ಚರ್ಮ ಹೀರಿಕೊಳ್ಳಲು ಬಿಡಿ, ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.

14. ಅರಿಶಿನ ಮತ್ತು ಶ್ರೀಗಂಧ
ಹಿಂದಿನ ಕಾಲದಿಂದಲೂ ಅರಿಶಿನ ಮತ್ತು ಶ್ರೀಗಂಧವನ್ನು ಸೌಂದರ್ಯವೃದ್ಧಿಗಾಗಿ ಬಳಸುತ್ತಾ ಬರಲಾಗಿದೆ.ಯಾಕೆಂದರೆ ಇದರಲ್ಲಿರುವ ಗುಣವು ಚರ್ಮಕ್ಕೆ ಹೊಳಪು ನೀಡಿ, ಚರ್ಮದ ವಿನ್ಯಾಸವನ್ನು ಬದಲಿಸುವಂತಹ ಗುಣ ಹೊಂದಿದೆ. ಸ್ಟ್ರೆಚ್‌ಮಾರ್ಕ್ ನಿವಾರಿಸಲು ಶ್ರೀಗಂಧವನ್ನು ಮತ್ತು ಅರಿಶಿನವನ್ನು ತೇದು, ಈ ನಯವಾದ ಪೇಸ್ಟನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಸ್ಟ್ರೆಚ್‌ಮಾರ್ಕ್ ಮೇಲೆ ಹಚ್ಚಿ. ಸುಮಾರು 60ರಷ್ಟು ಒಣಗಿದ ನಂತರ ಸ್ಕ್ರಬ್ ಮಾಡಿ, ನಂತರ ನೀರಿನಿಂದ ತೊಳೆಯಿರಿ. ಸುಮಾರು ಆರು ತಿಂಗಳವರೆಗ ಪ್ರತಿದಿನ ಇದನ್ನು ಮಾಡಿದರೆ ಖಂಡಿತವಾಗಿಯೂ ಸ್ಟ್ರೆಚ್‌ಮಾರ್ಕ್ ಮಾಯವಾಗುವುದು.



Click it and Unblock the Notifications











