Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಎದೆಹಾಲು ಉಣಿಸುವ ತಾಯಂದಿರೇ, ಈ ಆಹಾರಗಳ ಸೇವನೆ ಬೇಡ..
ನವಜಾತ ಶಿಶುಗಳನ್ನು ಆರೈಕೆ ಮಾಡುವುದು ಸುಲಭದ ಕೆಲಸವಲ್ಲ. ಅವರಲ್ಲಿನ ಸಣ್ಣ ಬದಲಾವಣೆ ಅಥವಾ ಪ್ರತಿಕ್ರಿಯೆಗಳನ್ನು ನೀವು ಗಮನಿಸಬೇಕು. ಏಕೆಂದರೆ ಆ ಬದಲಾವಣೆಗಳಿಗೆಲ್ಲಾ ನೀವು ನೀಡುವ ಎದೆಹಾಲು ಕೂಡ ಒಂದು ಕಾರಣವಾಗಿರುವುದು. ತಾಯಂದಿರು ನಿಡುವ ಎದೆಹಾಲು ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಹಾಲುಣಿಸುವ ತಾಯಿ ಏನು ತಿನ್ನುತ್ತಿದ್ದಾಳೆ ಎಂಬುದು ಮಗುವಿಗೆ ಬಹಳ ಮುಖ್ಯ.
ನೀವು ಕೆಲವು ಆಹಾರವನ್ನು ಸೇವಿಸಿದ ನಂತರ ಕೆಲವು ಮಕ್ಕಳು ಗ್ಯಾಸ್ ಅಥವಾ ಅಸಹಜವಾಗಿ ವರ್ತಿಸಿದರೆ ಅಂತಹ ಆಹಾರವನ್ನು ಸ್ವಲ್ಪ ಸಮಯದವರೆಗೆ ತಪ್ಪಿಸುವುದು ಉತ್ತಮ. ಆದ್ದರಿಂದ ಸ್ತನ್ಯಪಾನ ಮಾಡುವಾಗ ಏನು ತಿನ್ನಬಾರದು ಎಂಬ ಪಟ್ಟಿಯನ್ನು ಇಲ್ಲಿ ನೀಡಿದ್ದೇವೆ.
ಎದೆಹಾಲು ಉಣಿಸುವ ತಾಯಿ ದೂರವಿಡಬೇಕಾದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಕೋಸು:
ಹಿಂದಿನ ದಿನ ರಾತ್ರಿ ಊಟದಲ್ಲಿ ನೀವು ಕೋಸುಗಡ್ಡೆ ತಿಂದಿದ್ದರೆ, ಮರುದಿನ ನಿಮ್ಮ ಮಗುವಿಗೆ ಗ್ಯಾಸ್ ಸಮಸ್ಯೆಗಳಾಗುವುದು ಕಂಡುಬರುವುದು. ಇತರ ಗ್ಯಾಸ್ಸಿ ಆಹಾರಗಳಾದ ಈರುಳ್ಳಿ, ಎಲೆಕೋಸು, ಬ್ರೊಕೊಲಿ, ಹೂಕೋಸು ಮತ್ತು ಸೌತೆಕಾಯಿ ಮೊದಲಾದವುಗಳನ್ನು ಸ್ತನ್ಯಪಾನ ಮಾಡುವಾಗ ತಪ್ಪಿಸಬಹುದು.

ಪುದೀನಾ:
ಇದನ್ನು ಅತಿ ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡಾಗ ಅದು ಎದೆ ಹಾಲಿನ ಉತ್ಪಾದನೆಯನ್ನು ಕಡಿಮೆ ಮಾಡಬಹುದು. ತಾಯಂದಿರು ಹಾಲು ಉತ್ಪಾದನೆಯನ್ನು ನಿಲ್ಲಿಸಲು, ಹೆಚ್ಚಾಗಿ ಪುದೀನಾ ತಯಾರಿಸಿದ ಚಹಾವನ್ನು ಕುಡಿಯುತ್ತಾರೆ. ಆದರೆ ಎದೆಹಾಲು ಅವಶ್ಯವಿರುವ ಸಮಯದಲ್ಲಿ ಇದನ್ನು ಸೇವಿಸುವುದರಿಂದ ಎದೆಹಾಲು ಕಡಿಮೆಯಾಗಲು ಕಾರಣವಾಗಬಹುದು.

ಕಡಲೆಕಾಯಿ:
ನಿಮ್ಮ ಮಗುವಿಗೆ ಹಾಲುಣಿಸುವವರೆಗೆ, ಕಡಲೆಕಾಯಿಯನ್ನು ತಪ್ಪಿಸಿ, ವಿಶೇಷವಾಗಿ ನಿಮ್ಮ ಕುಟುಂಬವು ಕಡಲೆಕಾಯಿಗೆ ಅಲರ್ಜಿಯ ವೈದ್ಯಕೀಯ ಇತಿಹಾಸವನ್ನು ಹೊಂದಿದ್ದರೆ. ಕಡಲೆಕಾಯಿಯ ಅಲರ್ಜಿಯ ಪ್ರೋಟೀನ್ಗಳು ಎದೆ ಹಾಲಿನ ಮೂಲಕ ಮಗುವನ್ನು ತಲುಪಬಹುದು. ಇದರಿಂದ ಮಗು ಉಬ್ಬಸ ಅಥವಾ ದದ್ದುಗಳಿಂದ ಬಳಲಬಹುದು.

ಬೆಳ್ಳುಳ್ಳಿ:
ಬೆಳ್ಳುಳ್ಳಿಯ ವಾಸನೆಯು ಎದೆ ಹಾಲಿನ ವಾಸನೆಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಮಕ್ಕಳು ಅದನ್ನು ದ್ವೇಷಿಸುತ್ತಾರೆ ಮತ್ತು ಕೆಲವರು ಅದನ್ನು ಇಷ್ಟಪಡುತ್ತಾರೆ. ಆದ್ದರಿಂದ, ಮಗುವಿನ ಆರೈಕೆ ಮಾಡುವಾಗ ನಿಮ್ಮ ಮಗುವಿಗೆ ಅನಾನುಕೂಲವಾಗಿದ್ದರೆ ಅದನ್ನು ಸೇವಿಸಬೇಡಿ.

ಆಲ್ಕೋಹಾಲ್
ಎದೆ ಹಾಲಿನ ಮೂಲಕ, ಆಲ್ಕೋಹಾಲ್ ತಾಯಿಯಿಂದ ಮಗುವನ್ನು ಸೇರುವುದು. ಇದು ನರಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಕನಿಷ್ಠ ಎರಡು ವರ್ಷಗಳಾದರೂ ನೀವು ಆಲ್ಕೊಹಾಲ್ ಅನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು. ಸೇವಿಸಿದ ಹಾಲಿನಲ್ಲಿ ಅಲ್ಕೋಹಾಲ್ ಸಾಂದ್ರತೆಯನ್ನು ಕಡಿಮೆ ಮಾಡಲು ತಾಯಿ ಆಲ್ಕೊಹಾಲ್ ಸೇವನೆಯ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಸಮಯದ ನಂತರ ಮಗುವಿಗೆ ಹಾಲುಣಿಸಬಹುದು.

ಜೋಳ:
ಕೆಲವು ಮಕ್ಕಳು ಜೋಳದ ಅಲರ್ಜಿ ಹೊಂದಿರುವುದು ಸಾಮಾನ್ಯವಾಗಿದೆ. ಇದು ಶಿಶುಗಳಲ್ಲಿ ದದ್ದುಗಳು ಮತ್ತು ಅಸ್ವಸ್ಥತೆಯನ್ನು ಉಂಟುಮಾಡಬಹುದು. ನಿಮ್ಮ ಮಗುವಿನಲ್ಲಿ ಅಲರ್ಜಿಯ ಪ್ರತಿಕ್ರಿಯೆಗಳನ್ನು ಗಮನಿಸಿದರೆ ನಿಮ್ಮ ಆಹಾರದಿಂದ ಜೋಳವನ್ನು ತೆಗೆದುಹಾಕಿ.

ಚಾಕೊಲೇಟ್:
ಚಾಕೊಲೇಟ್ ನಲ್ಲಿ ಥಿಯೋಬ್ರೊಮೈನ್ ಸಮೃದ್ಧವಾಗಿದ್ದು, ಇದನ್ನು ಸೇವಿಸಿದಾಗ, ಕೆಫೀನ್ ನಂತೆಯೇ ಪರಿಣಾಮ ಬೀರುತ್ತದೆ. ನೀವು ಚಾಕೊಲೇಟ್ ತಿನ್ನುವುದು ಎದೆಹಾಲು ಉಣಿಸುವಾಗ ಅದರ ಪ್ರಮಾಣವನ್ನು ಕಡಿಮೆ ಮಾಡಬೇಕು. ಚಾಕೊಲೇಟ್ ಸೇವನೆಯಿಂದಾಗಿ ನಿಮ್ಮ ಮಗು ತುಂಬಾ ನಿದ್ದೆಯಿಲ್ಲದೇ ಒದ್ದಾಡುತ್ತಿದೆ ಎಂದು ನಿಮಗೆ ಅನಿಸಿದರೆ, ಅದರಿಂದ ದೂರವಿರುವುದು ಉತ್ತಮ. ನಿಮ್ಮ ಮಗುವಿನ ನಡವಳಿಕೆಯನ್ನು ಗಮನಿಸಿದ ನಂತರ ನೀವು ಎಷ್ಟು ಚಾಕೊಲೇಟ್ ತಿನ್ನಬಹುದು ಎಂದು ತಿಳಿಯಬಹುದು.

ಕಾಫಿ:
ಕಾಫಿಯಲ್ಲಿ ಸಾಕಷ್ಟು ಕೆಫೀನ್ ಇದ್ದು, ಎದೆಹಾಲಿನ ಮೂಲಕ ನಿಮ್ಮ ಮಗುವನ್ನು ಸೇರಬಹುದು. ಆದರೆ ಶಿಶುವಿಗೆ ಕೆಫೀನ್ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಅವರು ನಿದ್ರಾಹೀನತೆ, ಕಿರಿಕಿರಿ ಮತ್ತು ಅಳಲು ಕಾರಣವಾಗುತ್ತದೆ. ಕೆಫೀನ್ ಹೆಚ್ಚಿನ ಪ್ರಮಾಣದಲ್ಲಿರುವಾಗ, ಇದು ಹಾಲಿನಲ್ಲಿ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇದರಿಂದ ಮಗುವಿನಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುತ್ತದೆ. ಆದ್ದರಿಂದ ಉತ್ತಮ ಪರಿಹಾರವೆಂದರೆ ದಿನಕ್ಕೆ ಕೇವಲ 2-3 ಕಪ್ ಕಾಫಿ ಮಾತ್ರ ಸೇವಿಸಿ.

ಸಿಟ್ರಸ್ ಹಣ್ಣುಗಳು:
ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯಉತ್ತಮ ಮೂಲವಾಗಿದದೆ, ಆದರೆ ಇದರ ಆಮ್ಲೀಯ ಅಂಶಗಳಿಂದಾಗಿ ಮಗುವಿನ ಹೊಟ್ಟೆಯ ಮೇಲೆ ಪರಿಣಾಮ ಬೀರುವುದು. ಅವರ ಜಠರಗರುಳು ಇನ್ನು ಅಭಿವೃದ್ಧಿ ಹೊಂದುತ್ತಿರುವುದರಿಂದ, ಈ ಆಮ್ಲ ಘಟಕಗಳನ್ನು ಎದುರಿಸಲು ಅವರಿಗೆ ಸಾಧ್ಯವಾಗುವುದಿಲ್ಲ. ಹಾಗಂತ ಸಿಟ್ರಸ್ ಹಣ್ಣುಗಳನ್ನು ನಿಮ್ಮ ಆಹಾರದಿಂದ ಸಂಪೂರ್ಣವಾಗಿ ತೆಗೆದುಹಾಕಬೇಕಾಗಿಲ್ಲ. ಪ್ರತಿದಿನ ಒಂದು ಕಪ್ ದ್ರಾಕ್ಷಿ ಅಥವಾ ಕಿತ್ತಳೆಯನ್ನು ತಿನ್ನುವುದು ಉತ್ತಮ.



Click it and Unblock the Notifications