Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಅಮೃತ ಸಮಾನ ಎದೆಹಾಲಿನಿಂದ ಮಗುವಿನ ಮೆದುಳು ಅಭಿವೃದ್ಧಿ
ಗರ್ಭಾವಸ್ಥೆಯಲ್ಲಿ ತಾಯಿ ಹೇಗೆ ತನ್ನ ಹೊಟ್ಟೆಯಲ್ಲಿರುವ ಕಂದಮ್ಮನನ್ನು ಕುರಿತು ಕನಸಿನ ಮನೆ ಕಟ್ಟಿರುತ್ತಾಳೋ ಅಂತೆಯೇ ಅದು ಜನಿಸಿದ ನಂತರ ಮಗುವಿನ ಆರೈಕೆಯಲ್ಲಿ ಮಹತ್ತರ ಗಮನವನ್ನು ನೀಡುತ್ತಾಳೆ.

ಹೊಟ್ಟೆಯಲ್ಲಿದ್ದಾಗ ಮಗುವಿನ ಚಲನ ವಲನಗಳನ್ನು ಆಸ್ವಾದಿಸುವುದು, ಅದಕ್ಕಾಗಿ ಬಟ್ಟೆಗಳನ್ನು ಆಟಿಕೆಗಳನ್ನು ತಂದಿಟ್ಟುಕೊಳ್ಳುವುದು ಅಬ್ಬಾ ಆಕೆಯ ಸಂಭ್ರಮವನ್ನು ವಿವರಿಸಲು ಸಾಧ್ಯವೇ ಆಗದು.
ಶಿಶು ಜನಿಸಿದ ನಂತರ ಬೇರೆಲ್ಲಾ ಆಹಾರಗಳನ್ನು ಸೇವಿಸುವುದಕ್ಕಿಂತ ಮುನ್ನ ಅದಕ್ಕೆ ಆವಶ್ಯಕವಾಗಿರುವುದು ತಾಯಿಯ ಎದೆಹಾಲಾಗಿದೆ. ಮಗುವಿನ ಸರ್ವತೋಮುಖ ಬೆಳವಣಿಗೆಗೆ ಈ ಹಾಲು ಸಹಾಯಕ.
ಅಂತೆಯೇ ಸ್ತನ್ಯಪಾನವನ್ನು ಅಮೃತಕ್ಕೆ ಹೋಲಿಸಲಾಗಿದೆ. ಈಗ ಈ ಹಾಲಿನಿಂದ ಕಂಡುಕೊಂಡಿರುವ ಇನ್ನೊಂದು ಅಂಶವೆಂದರೆ ಮಗುವಿನ ಮೆದುಳಿನ ಬೆಳವಣಿಗೆಯಾಗಿದೆ. ಎದೆಹಾಲಿನಲ್ಲಿರುವ ನೈಸರ್ಗಿಕ ಅಂಶಗಳು ಮೆದುಳಿನ ಅಭಿವೃದ್ಧಿಯನ್ನು ಮಾಡುತ್ತದೆ ಎಂಬುದಾಗಿ ಹೊಸ ಅಧ್ಯಯನವೊಂದು ತಿಳಿಸಿದೆ.
ತಮ್ಮ ನಿರ್ದಿಷ್ಟ ದಿನಾಂಕದ ಮುನ್ನ ಹುಟ್ಟುವ ಮಗುವು ತಮ್ಮ ಮೆದುಳಿನಲ್ಲಿ ವಿಕಸನವಾಗಿಲ್ಲದ ಪ್ರದೇಶಗಳನ್ನು ಹೊಂದಿದ್ದು ಇದರ ಬೆಳವಣಿಗೆಗೆ ಎದೆಹಾಲು ಸಹಾಯಕವಾಗಿದೆ. ಎಂಬುದಾಗಿ ಸಂಶೋಧಕರು ತಿಳಿಸಿದ್ದಾರೆ. ಕೆಲವು ಮಕ್ಕಳಲ್ಲಿ ಮೆದುಳಿನ ಬೆಳವಣಿಗೆಯನ್ನು ಪತ್ತೆಹಚ್ಚಲು ಅವರುಗಳು ಎಮ್ಆರ್ಐ ಸ್ಕ್ಯಾನ್ಗಳನ್ನು ನಡೆಸಿದ್ದಾರೆ.
ಎರಡು ಸಮೂಹಗಳಲ್ಲಿ ಅಧ್ಯಯನವನ್ನು ನಿಕಟವಾಗಿ ನಡೆಸಿದಾಗ, ಎದೆಹಾಲು ಸೇವಿಸಿದ ಮಗುವಿನ ಮೆದುಳು ಗಾತ್ರದಲ್ಲಿ ಹಿರಿದಾಗಿತ್ತು. ಮೆದುಳಿನ ಪರಿಮಾಣ ಅರಿವಿನ ಬೋಧನೆಗಳ ಮೇಲೆ ಪರಿಣಾಮವನ್ನು ಬೀರುತ್ತವೆ. ಈ ಸಂಶೋಧನೆ ಮಾತ್ರವಲ್ಲದೆ ತಾಯಿಯ ಎದೆಹಾಲು ಮಗುವಿಗೆ ಹಲವಾರು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತಿದೆ.
ಮಗುವು ಎದೆಹಾಲು ಸೇವೆನಯಿಂದ ಉಂಟಾಗುವ ಮಹತ್ತರ ಪ್ರಯೋಜವನ್ನು ಈ ಅಧ್ಯಯನವು ತಿಳಿಸಿದೆ. ಮಗುವಿನ ಮೆದುಳು ಅವುಗಳ ಜೀವನ ಸುಧಾರಣೆಗೆ ಅತೀ ಅಗತ್ಯವಾಗಿದ್ದು ಎದೆಹಾಲು ಸೇವನೆಯಿಂದ ಮಗುವಿನ ಸರ್ವತೋಮುಖ ಪ್ರಯೋಜನ ಲಭಿಸಲಿದೆ ಎಂಬುದಾಗಿ ಈ ಅಧ್ಯಯನದಿಂದ ತಿಳಿದು ಬಂದಿರುವ ಅಂಶವಾಗಿದೆ.



Click it and Unblock the Notifications



