Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಎದೆ ಹಾಲನ್ನು ಹೆಚ್ಚಿಸುವ ಪ್ರಮುಖ ಆಹಾರಗಳು
ಹೆಣ್ಣಿಗೆ ಗರ್ಭಿಣಿಯಾಗುವುದೆಂದರೆ ಅದು ಜೀವನದ ಅತೀ ಶ್ರೇಷ್ಠ ಕ್ಷಣ. ಅದರಲ್ಲೂ ಹೆರಿಗೆಯಾಗಿ ಮಗುವಿನ ಮುಖ ವೀಕ್ಷಿಸಿದರೆ ಆಗ ಆಕೆಗೆ ಸ್ವರ್ಗವೇ ಧರೆಗಿಳಿದಂತೆ. ಹೆಣ್ಣಿಗೆ ಗರ್ಭಧಾರಣೆಯೇ ಒಂದು ಅದ್ಭುತ ಅನುಭವ, ಅದರಲ್ಲೂ ಮಗುವಿಗೆ ಹಾಲುಣಿಸುವ ಸಮಯ ವಿಶೇಷವಾಗಿರುವಂತಹದ್ದು. ಎದೆ ಹಾಲು ಮಗುವಿನ ಸಿಗುವ ಅತೀ ಶ್ರೇಷ್ಠ ನೈಸರ್ಗಿಕ ಆಹಾರ. ಎದೆ ಹಾಲೆಂಬ ಅಮೃತದಲ್ಲಿದೆ ಅತ್ಯುನ್ನತ ಪೋಷಕಾಂಶಗಳು
ಇದು ಕೇವಲ ಮಗುವಿಗೆ ಆಹಾರ ಮಾತ್ರವಲ್ಲದೆ, ಹಲವಾರು ರೀತಿಯ ಅನಾರೋಗ್ಯದಿಂದ ಮಗುವನ್ನು ಕಾಪಾಡುತ್ತದೆ. ಯಾಕೆಂದರೆ ಎದೆ ಹಾಲು ರಕ್ತಕ್ಕೆ ವಿವಿಧ ರೀತಿಯ ರೋಗನಿರೋಧಕಗಳನ್ನು ಪೂರೈಸುತ್ತದೆ. ಬನ್ನಿ ಎದೆ ಹಾಲನ್ನು ಹೆಚ್ಚಿಸುವ ಆಹಾರಗಳು ಯಾವುದು ಎಂಬುದನ್ನು ನೋಡೋಣ...

ತುಳಸಿ ಎಲೆಗಳು
ತುಳಸಿ ಎಲೆಗಳಲ್ಲಿ ಅತ್ಯುತ್ತಮ ಪ್ರಮಾಣದ ವಿಟಮಿನ್ ಕೆ. ಇದೆ. ಈ ಪೋಷಕಾಂಶ ರಕ್ತಹೆಪ್ಪುಗಟ್ಟುವ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ತಾಯಿಹಾಲನ್ನು ಹೆಚ್ಚಿಸಲೂ ನೆರವಾಗುತ್ತದೆ. ಈಗ ತಾನೇ ಹೂಬಿಟ್ಟ ತುಳಸಿ ಗಿಡದ ಎಲೆಗಳು ತಾಯಿಹಾಲಿಗೆ ಅತ್ಯುತ್ತಮವಾಗಿವೆ. ಹೂಗಳ ಕೆಳಭಾಗದ ಸುಮಾರು ಹತ್ತು ಎಲೆಗಳನ್ನು ಚೆನ್ನಾಗಿ ಕೊಚ್ಚಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ. ಒಂದು ನಿಮಿಷ ಕುದಿದ ಬಳಿಕ ಉರಿಯನ್ನು ತುಂಬಾ ಚಿಕ್ಕದಾಗಿಸಿ ಐದು ನಿಮಿಷ ಬಿಡಿ. ಬಳಿಕ ಈ ನೀರನ್ನು ನೋಸಿ ಎರಡು ಹನಿ ಜೇನುತುಪ್ಪವನ್ನು ಸೇರಿಸಿ. ತಣಿದ ಬಳಿಕ ಈ ನೀರನ್ನು ದಿನಕ್ಕೆರಡು ಬಾರಿ ಕುಡಿಯಿರಿ. (ಒಂದು ಬಾರಿಗೆ ಅರ್ಧ ಕಪ್). ಮಗುವಿಗೆ ಆರು ತಿಂಗಳು ತುಂಬುವವರೆಗೂ ಈ ನೀರನ್ನು ಕುಡಿಯಬಹುದು.

ಬೆಳ್ಳುಳ್ಳಿ
ಜೀರ್ಣಶಕ್ತಿಯನ್ನು ಹೆಚ್ಚಿಸುವ ಬೆಳ್ಳುಳ್ಳಿಗೆ ತಾಯಿಹಾಲನ್ನು ಹೆಚ್ಚಿಸುವ ಶಕ್ತಿಯೂ ಇದೆ. ಮೂರು ಎಸಳು ಬೆಳ್ಳುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ಒಂದು ಲೋಟ ನೀರಿನಲ್ಲಿ ಕುದಿಸಿ. ಕುದಿಬಂದ ಬಳಿಕ ಜ್ವಾಲೆಯನ್ನು ಚಿಕ್ಕದಾಗಿಸಿ ಈ ನೀರು ಕಾಲುಭಾಗವಾಗುವವರೆಗೂ ಮುಂದುವರೆಸಿ. ಈಗ ಒಂದು ಕಪ್ ಹಸುವಿನ ಹಾಲನ್ನು ಹಾಕಿ ಮತ್ತೊಮ್ಮೆ ಕುದಿ ಬರಿಸಿ. ಕುದಿಬಂದ ಬಳಿಕ ಇಳಿಸಿ ಸೋಸಿ ಅರ್ಧ ಚಮಚ ಜೇನು ಸೇರಿಸಿ ಕಲಕಿ. ಈ ದ್ರವವನ್ನು ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಸುಮಾರು ಆರು ತಿಂಗಳವರೆಗೂ ಇದನ್ನು ಕುಡಿಯುವುದು ಶ್ರೇಯಸ್ಕರ.

ಗಡ್ಡೆಗಳು
ಬೀಟ್‌ರೂಟ್, ಕ್ಯಾರೆಟ್ ಮತ್ತು ಸಿಹಿಗೆಣಸುಗಳಲ್ಲಿ ತಾಯಿಹಾಲನ್ನು ಹೆಚ್ಚಿಸುವ ಪೋಷಕಾಂಶಗಳಿವೆ. ಇವುಗಳನ್ನು ಸಾಧ್ಯವಾದಷ್ಟು ಹಸಿಯಾಗಿ ಸೇವಿಸಿ. ತೆಳುವಾದ ಬಿಲ್ಲೆಗಳಂತೆ ಕತ್ತರಿಸಿ ಪ್ರತಿ ಊಟದಲ್ಲಿ ಸಲಾಡ್ ರೂಪದಲ್ಲಿ ಸೇವಿಸಿ. ಇದರಲ್ಲಿ ಬೀಟ್ ರೂಟ್ ಅತ್ಯುತ್ತಮವಾಗಿದೆ.

ಬಾದಾಮಿ ಮತ್ತು ಗೋಡಂಬಿ
ಪ್ರತಿದಿನ ಕೆಲವು ಬಾದಾಮಿ ಮತ್ತು ಗೋಡಂಬಿಗಳನ್ನು ಕುರುಕುವ ಮೂಲಕವೂ ತಾಯಿಹಾಲನ್ನು ಹೆಚ್ಚಿಸಬಹುದು. ಆದರೆ ಒಂದು ದಿನಕ್ಕೆ ಹತ್ತಕ್ಕಿಂತ ಹೆಚ್ಚು ಬಾದಾಮಿ ಅಥವಾ ಗೋಡಂಬಿಯನ್ನು ಸೇವಿಸಬೇಡಿ.

ಶುಂಠಿಯ ಪೇಸ್ಟ್
ನಿಮ್ಮ ನಿತ್ಯದ ಅಡುಗೆಗಳಲ್ಲಿ ಶುಂಠಿ ಯಥೇಚ್ಛವಾಗಿರುವಂತೆ ನೋಡಿಕೊಳ್ಳಿ. ಹಸಿಶುಂಠಿಯ ಪೇಸ್ಟ್ ಮಾಡಿಕೊಂಡು ನಿಮ್ಮ ನಿತ್ಯದ ಅಡುಗೆಗಳಾದ ಸಾರು, ಪಲ್ಯ ಮೊದಲಾದವುಗಳ ಜೊತೆ ಸೇರಿಸುವ ಮೂಲಕ ರುಚಿಯನ್ನು ಹೆಚ್ಚಿಸುವ ಜೊತೆಗೆ ತಾಯಿಹಾಲಿನ ಉತ್ಪಾದನೆಯಲ್ಲಿಯೂ ಹೆಚ್ಚಳವಾಗುತ್ತದೆ.

ನೀರು ಮತ್ತು ಹಾಲು
ದೇಹದ ಎಲ್ಲಾ ಕಾರ್ಯಗಳಿಗೆ ನೀರು ಅಗತ್ಯವಾಗಿರುವಂತೆಯೇ ತಾಯಿಹಾಲಿನ ಉತ್ಪಾದನೆಯಲ್ಲಿಯೂ ನೀರು ಅಗತ್ಯವಾಗಿದೆ. ಈ ಅಗತ್ಯವನ್ನು ಪೂರೈಸುವಲ್ಲಿ ಅತ್ಯುತ್ತಮವಾದುದು ಹಸುವಿನ ಹಾಲು. ಇದರಲ್ಲಿ ಶೇಖಡಾ ಎಂಭತ್ತು ಅಪ್ಪಟ ನೀರು ಇರುವುದರಿಂದ ಹಾಗೂ ಹಾಲಿನಲ್ಲಿರುವ ಇತರ ಪೋಷಕಾಂಶಗಳು ತಾಯಿಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತವೆ. ಬೇರೆ ಸಮಯದಲ್ಲಿ ಎಂಟು ಲೋಟ ನೀರು ನಿಮಗೆ ಅಗತ್ಯವಿದೆ. ಪ್ರಥಮ ತಿಂಗಳುಗಳಲ್ಲಿ ಈ ಪ್ರಮಾಣವನ್ನು ಸುಮರು ಹನ್ನೆರಡು ಲೋಟಗಳಿಗೆ ಹೆಚ್ಚಿಸುವುದು ಒಳಿತು.



Click it and Unblock the Notifications
