Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತಾಯಿ ಹಾಲು ಮಗುವಿಗೆ ಅತ್ಯಗತ್ಯ ಏಕೆ?
ಲೋಕದಲ್ಲಿ ಬೆಲೆ ಕಟ್ಟಲಾಗದ ವಸ್ತುವೆಂದರೆ ಅದು ತಾಯಿ ಮಗುವಿನ ಸಂಬಂಧಕ್ಕೆ ಎಂದು ಹೇಳುತ್ತಾರೆ. ಮಗು ಹುಟ್ಟಿದಾಗಿನಿಂದ ಅದನ್ನು ಪೋಷಿಸಿ ದೊಡ್ಡವರನ್ನಾಗಿ ಮಾಡಿ ನಂತರ ತನಗೂ ವಯಸ್ಸಾದರೂ ಮಗ ಅಥವಾ ಮಗಳು ಎದೆ ಎತ್ತರಕ್ಕೆ ಬೆಳೆದು ನಿಂತರೂ ಅಮ್ಮನಿಗೆ ಮಗುವೇ. ನಾವು ಸಣ್ಣ ಮಗುವಾಗಿದ್ದಾಗ ಆಕೆ ತನ್ನ ಅಮೃತ ಸಮಾನ ಸ್ತನ್ಯದಿಂದ ನಮ್ಮ ಒಡಲನ್ನು ತುಂಬುತ್ತಾಳೆ.
ಬಾಟಲ್ ಹಾಲು ಕೊಡುವ ಮೊದಲು ಕೆಲವೊಂದು ಸಲಹೆ

ಈ ಎದೆ ಹಾಲು ಏಕಿಷ್ಟು ಮಹತ್ವಪೂರ್ಣವಾದುದು ಎಂಬುದು ನಿಮಗೆ ತಿಳಿದಿದೆಯೇ? ಸ್ತನ್ಯ ಪಾನವನ್ನು ಭಾರತೀಯ ಸಂಸ್ಕೃತಿಯಲ್ಲಿ ಅಮೃತಕ್ಕೆ ಹೋಲಿಸುತ್ತಾರೆ. ಮಗುವಿಗೆ ರಕ್ಷಾ ಕವಚವಾಗಿ ಸಂರಕ್ಷಣೆಯನ್ನು ನೀಡುವ ತಾಯಿ ಹಾಲು ಏಕಿಷ್ಟು ಮಹತ್ವಪೂರ್ಣವಾದುದು ಎಂಬುದನ್ನು ತಿಳಿದುಕೊಳ್ಳೋಣ.
ಮಗು ನಿರ್ದಿಷ್ಟ ವಯಸ್ಸನ್ನು ತಲುಪಿದಾಗ, ತಾಯಿಗೆ ಅನಿಸುತ್ತದೆ ಇನ್ನು ಮಗುವಿಗೆ ಎದೆ ಹಾಲುಣಿಸುವುದು ಬೇಕಾಗಿಲ್ಲ ಎಂದು. ಮಗು ಘನ ಪದಾರ್ಥಗಳನ್ನು ಸೇವಿಸಲು ಪ್ರಾರಂಭಿಸಿದೊಡನೆ ತಾಯಿ ಕೂಡ ಆಗಾಗ್ಗೆ ಮಾತ್ರ ಮಗುವಿಗೆ ಹಾಲುಣಿಸುತ್ತಾಳೆ.
ಎದೆ ಹಾಲುಣಿಸುವ ಸಮಯದಲ್ಲಿ ಸ್ತನದ ರಕ್ಷಣೆ
ಆದರೆ ಮಗುವಿಗೆ ನೀವು ಆರು ತಿಂಗಳುಗಳ ಕಾಲ ಹಾಲುಣಿಸುವುದರಿಂದ ಆಗುವ ಪ್ರಯೋಜನ ನಿಮಗೆ ಗೊತ್ತೇ? ತಜ್ಞರ ಪ್ರಕಾರ ಮಗು ಆರು ತಿಂಗಳುಗಳ ಕಾಲ ತಾಯಿ ಹಾಲನ್ನು ಕುಡಿಯಬೇಕು. ತಾಯಿ ಹಾಲಿನಲ್ಲಿ ಇರುವ ಶಕ್ತಿ ಬೇರಾವುದೇ ಆಹಾರಗಳಿಲ್ಲ. ಮಗುವಿನ ರೋಗನಿರೋಧಕ ಶಕ್ತಿ ಹೆಚ್ಚಲು ಪ್ರೋಟೀನ್ ನ್ಯೂಟ್ರೀನ್ ಪೂರೈಕೆ ಅಧಿಕಗೊಳ್ಳಲು ತಾಯಿ ಹಾಲು ಅತೀ ಅಗತ್ಯ.
ಆರು ತಿಂಗಳುಗಳ ಕಾಲ ಮಗುವಿಗೆ ಎದೆ ಹಾಲುಣಿಸುವುದರಿಂದ ಉಂಟಾಗುವ ಪ್ರಯೋಜನವನ್ನು ಬೋಲ್ಡ್ ಸ್ಕೈ ಇಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ.
ಮಗುವಿಗೆ ಉಂಟಾಗುವ ಸೋಂಕು ಮತ್ತು ಆಸ್ಪತ್ರಗೆ ಅದು ಆಗಾಗ್ಗೆ ದಾಖಲಾಗುವುದನ್ನು ನಿವಾರಿಸಲು ಆರು ತಿಂಗಳುಗಳ ಕಾಲ ಮೊಲೆ ಹಾಲುಣಿಸುವುದು ಕಡ್ಡಾಯ. ಆರು ತಿಂಗಳುಗಳ ಕಾಲ ಮಗುವಿಗೆ ಎದೆ ಹಾಲುಣಿಸುವುದು ಶೀತ, ಕಿವಿ ನೋವು ಮತ್ತು ಗಂಟಲು ಸೋಂಕಿನಿಂದ ಮಗುವನ್ನು ರಕ್ಷಿಸುತ್ತದೆ.
ಎದೆ ಹಾಲನ್ನು ಹೆಚ್ಚಿಸುವ 10 ಮನೆಮದ್ದುಗಳು
ಮಗುವನ್ನು ಕಾಡುವ ಕರುಳ ಸೋಂಕನ್ನು ತಡೆಗಟ್ಟುವ ಶಕ್ತಿ ಸ್ತನ್ಯ ಪಾನಕ್ಕಿದೆ. ಇದು ಸ್ಥೂಲಕಾಯದ ಸಮಸ್ಯೆಯನ್ನು ಕೂಡ ನಿವಾರಿಸುತ್ತದೆ. ದನದ ಹಾಲು ಅಥವಾ ಇತರ ಹಾಲನ್ನು ಸೇವಿಸಿದ ಮಕ್ಕಳು ಎದೆ ಹಾಲು ಕುಡಿದ ಮಕ್ಕಳಿಗಿಂತ ಹೆಚ್ಚು ಅಲರ್ಜಿಗಳಿಗೆ ಒಳಗಾಗುತ್ತಾರೆ.
ತಾಯಿಯ ಹಾಲಿನಲ್ಲಿ ಐಜಿಎ ಅಂಶ ಇರುವುದರಿಂದ ತಾಯಿ ಹಾಲು ಅಲರ್ಜಿಯಿಂದ ಮಕ್ಕಳನ್ನು ರಕ್ಷಿಸುತ್ತದೆ. ಒಂದು ರೀತಿಯ ರಕ್ಷಾ ಕವಚವನ್ನು ತಾಯಿ ಹಾಲು ಮಗುವಿಗೆ ನೀಡುತ್ತದೆ. ಮೆದುಳು, ಮಾತು ಹಾಗೂ ದೇಹದ ನರನಾಡಿಗಳ ಪೂರ್ಣ ಬೆಳವಣಿಗೆಗೆ ತಾಯಿ ಹಾಲು ಅತೀ ಅಗತ್ಯ.



Click it and Unblock the Notifications
