Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಹೆರಿಗೆಯ ನಂತರ ಕಂಡು ಬರುವ ಸಮಸ್ಯೆಗಳು
ಗರ್ಭಿಣಿಯಾದಾಗಿನಿಂದ ಸ್ತ್ರೀಯ ಶರೀರದಲ್ಲಿ ಮಾತ್ರವಲ್ಲ, ಮಾನಸಿಕ ಸ್ಥಿತಿಯಲ್ಲೂ ಸಾಕಷ್ಟು ಬದಲಾವಣೆ ಉಂಟಾಗುವುದು. ಹೆರಿಗೆಯ ನಂತರ ಬದಲಾವಣೆ ಉಂಟಾಗುವುದು. ಹೆರಿಗೆಯಾದ ಹೆಚ್ಚಿನ ಮಹಿಳೆಯರು ದಪ್ಪಗಾಗುತ್ತಾರೆ, ಆದರೆ ದಪ್ಪಗಾಗುವುದು ದೊಡ್ಡ ಸಮಸ್ಯೆ ಅಲ್ಲ, ಬಾಣಂತನದ ನಂತರ ವ್ಯಾಯಾಮ ಮಾಡಿ ಮೈ ತೂಕ ಕಮ್ಮಿ ಮಾಡಿಕೊಳ್ಳಬಹುದು.
ಆದರೆ ಕೆಲವು ಆರೋಗ್ಯ ಸಂಬಂಧಿ ಸಮಸ್ಯೆಗಳು ಕಂಡು ಬರಬಹುದು. ಅದು ಮಾನಸಿಕವಾಗಿ ಆಗಿರಬಹುದು, ದೈಹಿಕವಾಗಿ ಇರಬಹುದು. ಮಾನಸಿಕ ಸಮಸ್ಯೆಯನ್ನು ಮನೆಯವರು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಬೇಕು. ಹೆರಿಗೆಯಾದ ಮಹಿಳೆಯರು ಈ ಕೆಳಗಿನ ಸಮಸ್ಯೆಗಳ ಬಗ್ಗೆ ಅರಿತಿದ್ದರೆ ಒಂದು ವೇಳೆ ಇಂಥ ಕಂಡು ಬಂದರೆ ಸಮಸ್ಯೆಯನ್ನು ಗುರುತಿಸುವುದು ಸುಲಭ.

ಖಿನ್ನತೆ
ಖಿನ್ನತೆ ಕೆಲ ಮಹಿಳೆಯರಲ್ಲಿ ಹೆರಿಗೆಯ ನಂತರ ಕಂಡು ಬರುವ ಸಮಸ್ಯೆಯಾಗಿದೆ. ಹೆರಿಗೆಯ ನಂತರ ಮಹಿಳೆ ಖಿನ್ನತೆ ಅನುಭವಿಸುತ್ತಿದ್ದರೆ ಮನೆಯವರು ಅವಳಿಗೆ ತಕ್ಷಣ ಸೂಕ್ತ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಅವಳು ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯ ಕೂಡ ಇದೆ.
ದೈಹಿಕ ಸಮಸ್ಯೆಗಳು
ಬೆನ್ನು ನೋವು
ಬಾಣಂತನದ ಸಮಯದಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯದಿದ್ದರೆ ಬೆನ್ನು ನೋವಿನ ಸಮಸ್ಯೆ ಕಂಡು ಬರುವುದು. ಬಾಣಂತನದ ಸಮಯದಲ್ಲಿ ಸರಿಯಾದ ಆರೈಕೆ ಮತ್ತು ಪೌಷ್ಟಿಕಾಂಶವಿರುವ ಆಹಾರ ಈ ಬೆನ್ನು ನೋವನ್ನು ದೂರವಿಡುವಲ್ಲಿ ಸಹಕಾರಿ.
ಗಾಲಾಸ್ಟೋನ್
ಗರ್ಭಾವಸ್ಥೆಯಲ್ಲಿ ಕೆಲವರಿಗೆ progesterone ಹಾರ್ಮೋನ್ ಅಧಿಕ ಬಿಡುಗಡೆಯಾಗುವುದು, ಇದು ಪಿತ್ತ ರಸದ ಉತ್ಪತ್ತಿಗೆ ಅಡಚಣೆ ಉಂಟು ಮಾಡಿ ಗಾಲಾಸ್ಟೋನ್ ಉಂಟಾಗುವುದು.
ಹರ್ನಿಯಾ
ಸಿಸೇರಿಯನ್ ಆದರೆ, ಗಾಯ ಸಂಪೂರ್ಣವಾಗಿ ಗುಣಮುಖವಾಗುವವರೆಗೆ ರೆಸ್ಟ್ ತೆಗೆದುಕೊಳ್ಳದಿದ್ದರೆ ಹರ್ನಿಯಾ ಬರಬಹುದು.
ಸ್ತನದಲ್ಲಿ ಸಮಸ್ಯೆ
Mastitis ಎಂಬ ಸ್ತನದ ಸಮಸ್ಯೆ ಕಂಡು ಬರುವುದು. ಈ ರೀತಿ ಉಂಟಾದಾಗ ನೋವಿನಿಂದ ಜ್ವರ ಬರುವುದು. antibiotics ಮಾತ್ರೆ ತೆಗದುಕೊಂಡರೆ ಕಡಿಮೆಯಾಗುವುದು.



Click it and Unblock the Notifications
