Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹೆರಿಗೆಯ ನಂತರ ಋತುಚಕ್ರದಲ್ಲಿ ವಿಳಂಬ ಏಕೆ?
ಗರ್ಭಿಣಿಯಾದಾಗಿನಿಂದ ಸ್ತ್ರೀಯ ದೇಹದಲ್ಲಿ ತುಂಬಾ ಬದಲಾವಣೆ ಉಂಟಾಗುತ್ತದೆ, ಹಾರ್ಮೋನ್ ಗಳಲ್ಲಿ ವ್ಯತ್ಯಾಸ ಉಂಟಾಗುತ್ತದೆ, ದೇಹದ ತೂಕ ಹೆಚ್ಚಾಗುತ್ತದೆ, ಹೊಟ್ಟೆಯಲ್ಲಿ ಸ್ಟ್ರೆಚ್ ಮಾರ್ಕ್ಸ್ ಬೀಳುತ್ತದೆ. ಅದೇ ಹೆರಿಗೆಯ ನಂತರ ಎದೆ ಹಾಲಿನಲ್ಲಿ ಕೊರತೆ, ದೇಹದ ತೂಕದಲ್ಲಿ ವ್ಯತ್ಯಾಸ ಮುಂತಾದ ಸಮಸ್ಯೆ ಕಂಡು ಬರಬಹುದು.
ಗರ್ಭಿಣಿಯಾದಾಗ ನಿಲ್ಲುವ ಮುಟ್ಟು ಹೆರಿಗೆಯಾಗಿ 6 ತಿಂಗಳ ನಂತರ ಪುನಃ ಪ್ರಾರಂಭವಾಗುತ್ತದೆ. ಕೆಲವರಿಗೆ 6 ತಿಂಗಳಿಗಿಂತ ಅಧಿಕ ಸಮಯ ತೆಗೆದುಕೊಳ್ಳುತ್ತದೆ. ಹೆಚ್ಚಿನವರು ಹೆರಿಗೆಯ ಸಮಯದಲ್ಲಿ ಅಧಿಕ ರಕ್ತ ಹೋಗುವುದರಿಂದ ಮುಟ್ಟು ನಿಧಾನವಾಗುತ್ತದದೆ ಎಂದು ಭಾವಿಸುತ್ತಾರೆ. ಆದರೆ ಹೆರಿಗೆಯ ನಂತರ ಮುಟ್ಟು ನಿಧಾನವಾಗಲು ಈ ಕೆಳಗಿನ ಅಂಶಗಳು ಪ್ರಮುಖ ಕಾರಣವಾಗಿವೆ:

ಎದೆ ಹಾಲೂಣಿಸುವುದು: ಎದೆ ಹಾಲನ್ನು ಅಧಿಕ ಕೊಟ್ಟಂತೆ ಮುಟ್ಟಾಗುವ ದೇಹದ ಕ್ರಿಯೆ ಕೂಡ ನಿಧಾನವಾಗುತ್ತಾ ಹೋಗುತ್ತದೆ. ಈ ರೀತಿ ಪ್ರೊಲಕ್ಟಿನ್ (Prolactin) ಹಾರ್ಮೋನ್ ನಿಂದಾಗಿ ಉಂಟಾಗುತ್ತದೆ. ಈ ಹಾರ್ಮೋನ್ ಎದೆ ಹಾಲನ್ನು ಉತ್ಪಾದಿಸುತ್ತದೆ, ಓವ್ಯೂಲೇಶನ್ ಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಕೆಲವರಿಗೆ 6 ತಿಂಗಳ ಬಳಿಕ ಮಗುವಿಗೆ ಹಾಲು ಕೊಡುತ್ತಿದ್ದರೂ ಮುಟ್ಟು ಮರುಕಳಿಸಿದರೆ ಮತ್ತೆ ಕೆಲವರಿಗೆ ಮಗುವಿಗೆ ಹಾಲು ಕೊಡುವುದನ್ನು ಸಂಪೂರ್ಣ ನಿಲ್ಲಿಸಿದ ಮೇಲೆ ಋತುಚಕ್ರ ಪ್ರಾರಂಭವಾಗುತ್ತದೆ.
ದೇಹದಲ್ಲಿ ವ್ಯತ್ಯಾಸ: ಹೆರಿಗೆಯ ನಂತರ ಪೋಷಕಾಂಶಗಳ ಕೊರತೆ ಉಂಟಾದರೆ, ಥೈರಾಯ್ಡ್ ಸಂಬಂಧಿ ಕಾಯಿಲೆಗಳು ಕಾಣಿಸಿಕೊಂಡರೆ ಮುಟ್ಟಿನಲ್ಲಿ ತೊಂದರೆ ಉಂಟಾಗುತ್ತದೆ.
ಕಡಿಮೆ ಪ್ರಮಾಣದ ಓವ್ಯೂಲೇಶನ್: ಹೆರಿಗೆಯ ನಂತರ ಓವ್ಯೂಲೇಶನ್ ಕಡಿಮೆ ಪ್ರಮಾಣದಲ್ಲಿದ್ದರೆ ಋತುಚಕ್ರ ಕಂಡು ಬರುವುದಿಲ್ಲ. ಹೆರಿಗೆಯಾಗಿ ಒಂದು ವರ್ಷ ಕಳಿದ ನಂತರವೂ ಋತುಚಕ್ರ ಮರುಕಳಿಸದಿದ್ದರೆ ವೈದ್ಯರನ್ನು ಕಾಣಿರಿ.



Click it and Unblock the Notifications
