Latest Updates
-
ವಿಶ್ವ ಮಾನಸಿಕ ಆರೋಗ್ಯ ದಿನ: ಆತಂಕ ಮತ್ತು ಸ್ಕ್ರೀನ್ ಸುಸ್ತಿನಿಂದ ಮುಕ್ತಿ ಪಡೆಯಲು 10 ನಿಮಿಷದ ಈ 'ಮಾರ್ನಿಂಗ್ ರಿಸೆಟ್' ಟ್ರೈ ಮಾಡಿ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧದ ಗೌಪ್ಯತೆ ಕಾಪಾಡಿಕೊಳ್ಳಿ: ದಂಪತಿಗಳಿಗಾಗಿ 7 ಪ್ರಮುಖ ನಿಯಮಗಳು -
ಬೆಂಗಳೂರು ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಇಂದೇ ಈ 20 ನಿಮಿಷದ ಕೆಲಸ ಮಾಡಿ -
ವಿಶ್ವ ಮೊಟ್ಟೆ ದಿನ: ಕೇವಲ ₹20ರಲ್ಲಿ ಪ್ರೋಟೀನ್ ಪಡೆಯುವ ಅದ್ಭುತ ಹ್ಯಾಕ್ಸ್! -
ಮೈಸೂರು ದಸರಾ 2026: ಅಂಬಾರಿ ಹೊರುವ ಆನೆ ಯಾರು? ಟಿಕೆಟ್, ರೂಟ್ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ -
ನವರಾತ್ರಿ ಗರ್ಬಾ: ಕಾಲು ನೋವು, ಸುಸ್ತು ಇಲ್ಲದೆ ಗಂಟೆಗಟ್ಟಲೆ ಡ್ಯಾನ್ಸ್ ಮಾಡಲು ಈ 12 ನಿಮಿಷದ ಟ್ರಿಕ್ ಫಾಲೋ ಮಾಡಿ! -
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ
ಎದೆ ಹಾಲು ಹೆಚ್ಚಿಸಲು ಸೇವಿಸಿ ಈ ಆಹಾರ

ಎದೆ ಹಾಲು ಮಕ್ಕಳ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿದೆ. ಆದ್ದರಿಂದ ಎದೆ ಹಾಲಿನ ಕೊರತೆಯಿದೆ ಎಂದು ಎದೆ ಹಾಲು ಕೊಡುವುದನ್ನು ನಿಲ್ಲಿಸಬೇಡಿ. ಅದರ ಬದಲು ತಾಯಿಯು ತನ್ನ ಆಹಾರದ ಜೊತೆ ಈ ಕೆಳಗಿನ ವಸ್ತುಗಳನ್ನು ತಿಂದರೆ ಎದೆ ಹಾಲು ಹೆಚ್ಚಾಗುವುದು.
ಮೆಂತೆ: ಮೆಂತೆಯಲ್ಲಿ ಕಬ್ಬಿಣದಂಶ, ವಿಟಮಿನ್ ಗಳು, ಕ್ಯಾಲ್ಸಿಯಂ ಮತ್ತು ಖನಿಜಾಂಶಗಳು ಅಧಿಕವಿರುತ್ತದೆ. ಇದನ್ನು ಎದೆ ಹಾಲು ಹೆಚ್ಚಿಸುವ ಮನೆ ಮದ್ದಾಗಿ ಉಪಯೋಗಿಸಲಾಗುವುದು. ಮೆಂತೆ ಅನ್ನ ಮಾಡಿ ಸೇವಿಸಿ, ಮೆಂತೆ ತುಂಬಾ ತಿನ್ನಬಾರದು, ತುಂಬಾ ತಿಂದರೆ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಇದನ್ನು ಹಸಿಯಾಗಿ ತಿನ್ನದೆ ಆಹಾರಗಳ ಜೊತೆ ಹಾಕಿ ತಿನ್ನಿ.
ತುಳಸಿ: ತುಳಸಿಯನ್ನು ಮನೆಮದ್ದಿನಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದನ್ನು ಎದೆ ಹಾಲನ್ನು ಹೆಚ್ಚಿಸಲು ಕೂಡ ಬಳಸಲಾಗುವುದು. ಇದರಲ್ಲಿ ವಿಟಮಿನ್ ಕೆ ಅಂಶ ಇರುವುದರಿಂದ ಎದೆ ಹಾಲು ಹೆಚ್ಚಿಸಲು ಸಹಾಯಕವಾಗಿದೆ. ಇದನ್ನು ಹಸಿ ಅಥವಾ ಸೂಪ್ ಜೊತೆ ಅಥವಾ ಜೇನಿನ ಜೊತೆ ಮಿಶ್ರ ಮಾಡಿ ಸೇವಿಸಿ.
ತರಕಾರಿಗಳು: ಸೋರೆಕಾಯಿ, ಹಾಗಲಕಾಯಿ ಇವುಗಳು ಎದೆ ಹಾಲನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
ಕೊಬ್ಬಿನಂಶದ ಆಹಾರಗಳು: ತುಪ್ಪ, ಬೆಣ್ಣೆ, ಹಾಲು ಇವುಗಳನ್ನು ಎದೆ ಹಾಲನ್ನು ಹೆಚ್ಚಿಸುತ್ತದೆ. ಆದರೆ ಈ ಆಹಾರಗಳನ್ನು ತಾಯಿ ತಿಂದರೆ ಎದೆ ಹಾಲನ್ನು ಕುಡಿದಾಗ ಮಗುವಿನಲ್ಲಿ ಅಲರ್ಜಿ ಸಮಸಯೆ ಕಂಡು ಬರುತ್ತದೆ. ಆದ್ದರಿಂದ ಮಗುವಿಗೆ ಅಲರ್ಜಿ ಆಗದಿದ್ದರೆ ಮಾತ್ರ ಈ ಆಹಾರ ಸೇವಿಸಿ.
ಬೆಳ್ಳುಳ್ಳಿ: ಬೆಳ್ಳುಳ್ಳಿ ಎದೆ ಹಾಲು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಇದನ್ನು ಹಸಿಯಾಗಿ ತಿನ್ನದೆ ಸಾರಿನಲ್ಲಿ, ಉಪ್ಪಿನ ಕಾಯಿಯಲ್ಲಿ ಹಾಕಿ ಸೇವಿಸಿ.
ಕೆಂಪು ತರಕಾರಿ: ಕೆಂಪು ತರಕಾರಿಯಲ್ಲಿ ಅಧಿಕ ನಾರಿನಂಶವಿರುತ್ತದೆ. ಪಾಲಕ್, ಬೀನ್ಸ್, ಸಿಹಿಗೆಣಸು ಇವುಗಳು ಎದೆ ಹಾಲನ್ನು ಹೆಚ್ಚಿಸುತ್ತದೆ.



Click it and Unblock the Notifications
