Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಬೇಕೆ?

ದೇಹದ ಬಗ್ಗೆ ಆರೈಕೆ ಕಡಿಮೆಯಾದಾಗ ದೇಹ ಶೇಪ್ ಔಟ್ ಆಗುತ್ತದೆ. ಕೆಲವರು ಜಿಮ್ ಗೆ ಹೋಗಿ ಹಿಂದಿನ ಮೈಕಟ್ಟು ಪಡೆಯಲು ಪ್ರಯತ್ನಿಸಿದರೆ ಮತ್ತೆ ಕೆಲವರು ಸಮಯವಿಲ್ಲ, ಒಂದು ಮಗುವಿನ ತಾಯಿಯಾದ ಮೇಲೆ ಹಿಂದಿನಂತಹ ಮೈಕಟ್ಟು ಪಡೆಯಲು ಸಾಧ್ಯನಾ ಎಂದು ಉದಾಸೀನ ತೋರಿಸುತ್ತಾರೆ.
ಆದರೆ ಎಣ್ಣೆ ಮಸಾಜ್ ಮಾಡಿದರೆ ಆಕರ್ಷಕ ಮೈಕಟ್ಟು ಉಳಿಸಬಹುದು ಮತ್ತು ಸಾಕಷ್ಟು ಪ್ರಯೋಜನ ಪಡೆಯಬಹುದು. ಹೆರಿಗೆಯ ನಂತರ ಎಣ್ಣೆ ಮಸಾಜ್ ಮಾಡಿದರೆ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿಯಲು ಮುಂದೆ ಓದಿ:
1. ಮೈಕೈ ನೋವು ಕಡಿಮೆಯಾಗುತ್ತದೆ: ಹೆರಿಗೆಯ ನಂತರ ಸೊಂಟ ನೋವು, ಮೈಕೈ ನೋವು ಕಂಡುಬರುತ್ತದೆ. ಆದ್ದರಿಂದ ಸ್ನಾನದ ಮೊದಲು ಎಣ್ಣೆ ಮಸಾಜ್ ಮಾಡಿ ಬಿಸಿ ನೀರಿನಿಂದ ಸ್ನಾನ ಮಾಡಿದರೆ ನೋವು ಕಡಿಮೆಯಾಗುತ್ತದೆ.
2. ರಕ್ತ ಸಂಚಲನ ಹೆಚ್ಚಾಗುತ್ತದೆ: ಎಣ್ಣೆ ಮಸಾಜ್ ಮೈಕೈ ನೋವು ಕಡಿಮೆ ಮಾಡುವುದರ ಜೊತೆಗೆ ದೇಹವು ಆಮ್ಲಜನಕವನ್ನು ಹೆಚ್ಚು ಹೀರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ದೇಹಕ್ಕೆ ಅಗತ್ಯವಾದ ಆಮ್ಲಜನಕ ದೊರೆಯುವುದರಿಂದ ರಕ್ತ ಸರಾಗವಾಗಿ ಸಂಚರಿಸಲು ಸಹಾಯಮಾಡುತ್ತದೆ.
3. ಎದೆ ಹಾಲು ಹೆಚ್ಚಾಗುವಂತೆ ಮಾಡುತ್ತದೆ: ಎಣ್ಣೆ ಮಸಾಜ್ ಮಾಡುವುದರಿಂದ ಪ್ರೊಲೆಕ್ಟಿನ್ ಹೆಚ್ಚು ಉತ್ಪತ್ತಿಯಾಗಿ ಎದೆ ಹಾಲನ್ನು ಹೆಚ್ಚಿಸುತ್ತದೆ.
4. ತ್ವಚೆಯನ್ನು ಬಿಗಿಗೊಳಿಸುತ್ತದೆ: ಹೆರಿಗೆಯ ನಂತರ ತ್ವಚೆ ಸ್ವಲ್ಪ ಸಡಿಲವಾಗುತ್ತದೆ. ಮಸಾಜ್ ಮಾಡುವುದರಿಂದ ತ್ವಚೆಯು ಬಿಗಿಯಾಗುತ್ತದೆ. ಇದರಿಂದ ತ್ವಚೆ ಯೌವನಭರಿತವಾಗಿ ಕಾಣುವುದು.
5. ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಮಾಡುತ್ತದೆ: ಸಾಕಷ್ಟು ಜನರಿಗೆ ಹೆರಿಗೆಯ ನಂತರ ಬಿದ್ದ ಸ್ಟ್ರೆಚ್ ಮಾರ್ಕ್ಸ್ ಅನ್ನು ಹೋಗಲಾಡಿಸುವುದು ಹೇಗೆ ಎಂಬ ಚಿಂತೆಯಾಗಿರುತ್ತದೆ. ವಿಟಮಿನ್ ಇ ಎಣ್ಣೆಯಿಂದ ಆ ಭಾಗದಲ್ಲಿ ಮಸಾಜ್ ಮಾಡುತ್ತಾ ಬಂದರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯಾಗುತ್ತದೆ.
6. ತ್ವಚೆ ಕಾಂತಿಯನ್ನು ಹೆಚ್ಚಿಸುತ್ತದೆ: ಮಸಾಜ್ ಮಾಡುವುದರಿಂದ ತ್ವಚೆ ಕಾಂತಿಯನ್ನು ಪಡೆಯುತ್ತದೆ.
7. ವಿಶ್ರಾಂತಿ: ಎಣ್ಣೆ ಮಸಾಜ್ ಮಾಡಿದರೆ ನೆಮ್ಮದಿಯ ನಿದ್ದೆ ಬರಲು ಸಹಾಯ ಮಾಡುತ್ತದೆ. ಒತ್ತಡವನ್ನು ಕಡಿಮೆ ಮಾಡಿ ವಿಶ್ರಾಂತಿಯ ಅನುಭವ ನೀಡುತ್ತದೆ.
ಆದ್ದರಿಂದ ಪ್ರತಿದಿನ ಸಾಧ್ಯವಾಗದಿದ್ದರೂ ವಾರದಲ್ಲಿ 3-4 ಬಾರಿ ಎಣ್ಣೆ ಮಸಾಜ್ ಮಾಡಿದರೆ ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.



Click it and Unblock the Notifications
