Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಸಿಸೇರಿಯನ್ ನಂತರ ತೊಂದರೆ ಖಚಿತ

ಸಾಮಾನ್ಯ ಹೆರಿಗೆಯಾಗಿ ತಾಯಿ-ಮಗು ಕ್ಷೇಮವಾಗಿ ಬಂದರೆ ಸಾಕು ಎಂದು ಮನೆಯವರು ಬಯಸುತ್ತಾರೆ. ಆದರೆ ಕೆಲವೊಮ್ಮೆ ಹೆರಿಗೆಯ ಸಂದರ್ಭದಲ್ಲಿ ತುಂಬಾ ಕಷ್ಟವಾದರೆ ಶಸ್ತ್ರ ಚಿಕಿತ್ಸೆ ಅನಿವಾರ್ಯ.
ಆದರೆ ಸಾಮಾನ್ಯ ಹೆರಿಗೆಯಲ್ಲಿ 36 ಗಂಟೆ ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ ಕಾಲ ನೋವು ಅನುಭವಿಸಬೇಕಾಗುತ್ತದೆ. ಆದ್ದರಿಂದ ಅದನ್ನು ಸಹಿಸಲು ಸಾಧ್ಯವಿಲ್ಲವೆಂದು ಅನೇಕ ಜನರು ಸಿಸೇರಿಯನ್ ನಿಂದ ಹೆರಿಗೆ ಆಗಲು ಬಯಸುತ್ತಾರೆ. ಈ ರೀತಿ ಹೆರಿಗೆಗೆ ಸಿಸೇರಿಯನ್ ವಿಧಾನವನ್ನು ಬಳಸುವುದರ ಒಳಿತು ಕೆಡಕುಗಳ ಬಗ್ಗೆ ತಿಳಿದುಕೊಳ್ಳೋಣ.
ಸಾಮಾನ್ಯ ಹೆರಿಗೆಯಲ್ಲಿ ಅಧಿಕ ಕಾಲ ನೋವನ್ನು ಸಹಿಸ ಬೇಕಾಗುತ್ತದೆ, ಆದರೆ ಹೆರಿಗೆ ಆದ ಸ್ವಲ್ಪ ದಿನದಲ್ಲಿ ಮೊದಲಿನಂತೆ ಕೆಲಸವನ್ನು ಮಾಡಬಹುದಾಗಿದೆ.
ಆದರೆ ಸಿಸೇರಿಯನ್ ನಂತರ ತುಂಬಾ ತೊಂದರೆ ಎದುರಾಗುತ್ತದೆ, ಹೆಚ್ಚಿನ ವಿಶ್ರಾಂತಿಯನ್ನು ತೆಗೆದು ಕೊಳ್ಳಬೇಕಾಗುತ್ತದೆ. ಅಲ್ಲದೆ ದಿನ ನಿತ್ಯದ ಕಾರ್ಯ ಚಟುವಟಿಕೆಗಳಿಗೂ ಸಾಕಷ್ಟು ತೊಂದರೆ ಉಂಟಾಗುವುದು.
ಇದರಲ್ಲಿ ದೇಹದ ಪೋಷಣೆಯ ಬಗ್ಗೆ ಗಮನಕೊಡುವುದಕ್ಕಿಂತ ಗಾಯವನ್ನು ಒಣಗಿಸುವುದರ ಬಗ್ಗೆ ಹೆಚ್ಚಿನ ಗಮನವನ್ನು ಕೊಡಬೇಕಾಗುತ್ತದೆ. ಅಲ್ಲದೆ ಸಾಮಾನ್ಯ ಹೆರಿಗೆಗೆ ಹೋಲಿಸಿದರೆ ಇದಕ್ಕೆ ತಗುಲುವ ವೆಚ್ಚ ಕೂಡ ಅಧಿಕ.
ಆದ್ದರಿಂದ ಸಾಮಾನ್ಯ ಹೆರಿಗೆಯಲ್ಲಿ ಹೆಚ್ಚಿನ ನೋವು ತಿನ್ನಬೇಕಾಗುತ್ತದೆ ಎಂದು ಶಸ್ತ್ರ ಚಿಕಿತ್ಸೆಯ ವಿಧಾನವನ್ನು ಅನುಸರಿಸದೆ, ಹೆರಿಗೆಯಲ್ಲಿ ತುಂಬಾ ಕಷ್ಟವಾದಾಗ ಮಾತ್ರ ಈ ರೀತಿಯ ಹೆರಿಗೆಯನ್ನು ಮಾಡಿಕೊಳ್ಳುವುದು ಒಳ್ಳೆಯದು.



Click it and Unblock the Notifications
