Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹಾಲುಣಿಸುವ ತಾಯಂದಿರು ತಿನ್ನಬಾರದ ಆಹಾರ

ಹಾಲುಣಿಸುವ ಸಮಯದಲ್ಲಿ ತಾಯಂದಿರು ತ್ಯಜಿಸಬೇಕಾದ ಆಹಾರ:
* ಹಸುವಿನ ಹಾಲು: ಹಸುವಿನ ಹಾಲಿನಲ್ಲಿ ಉತ್ತಮ ಅಂಶಗಳಿದ್ದರೂ ಕೂಡ ಅದು ಹಾಲುಣಿಸುವ ಸಮಯದಲ್ಲಿ ಅಲರ್ಜಿ ಉಂಟುಮಾಡಬಹುದು. ತಾಯಿಗೂ ಅಲರ್ಜಿಯಾಗಿ ತಾಯಿಯ ಹಾಲನ್ನು ಕುಡಿಯುವ ಮಗುವಿಗೂ ಅಲರ್ಜಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಲಿನ ಬದಲಾಗಿ ಬೆಣ್ಣೆ, ಮೊಸರನ್ನು ಸೇವಿಸಬಹುದು.
* ಮಸಾಲೆ ಪದಾರ್ಥ: ಮಸಾಲೆ ಭರಿತ ಪದಾರ್ಥಗಳು ಗ್ಯಾಸ್ ತುಂಬಿಕೊಳ್ಳಲು ಅನುವು ಮಾಡಿಕೊಡಬಹುದು. ಆದ್ದರಿಂದ ಚೆಕ್ಕೆ, ಬೆಳ್ಳುಳ್ಳಿ, ಮೆಣಸು ಇಂತಹ ಪದಾರ್ಥಗಳನ್ನು ಈ ಸಮಯದಲ್ಲಿ ತ್ಯಜಿಸಿದರೆ ಉತ್ತಮ.
* ಸುವಾಸನೆ ಭರಿತ ಪದಾರ್ಥ: ಸುವಾಸನೆ ಭರಿತ ಸಾಮಾಗ್ರಿಗಳಾದ ಕೊತ್ತಂಬರಿ, ಚೆಕ್ಕೆ, ಏಲಕ್ಕಿ ಮುಂತಾದುವನ್ನು ಈ ಸಮಯದಲ್ಲಿ ಕಡಿಮೆ ಮಾಡಿದರೆ ಉತ್ತಮ. ಇದು ಎದೆ ಹಾಲಿನ ರುಚಿಯನ್ನು ಬದಲಾಯಿಸಬಹುದು. ಇದರಿಂದ ಮಗುವಿಗೆ ಅಹಿತವೆನಿಸ ಹಾಲು ಕುಡಿಯಲೂ ಹಟ ಹಿಡಿಯಬಹುದು.
* ಸಿಟ್ರಸ್ ಆಹಾರ: ವಿಟಮಿನ್ ಸಿ ಹೇರಳವಾಗಿರುವ ಹಣ್ಣು ಮತ್ತು ತರಕಾರಿಗಳನ್ನು ಹಾಲುಣಿಸುವ ಅವಧಿಯಲ್ಲಿ ತ್ಯಜಿಸಬೇಕು. ಇದನ್ನು ಅತಿಯಾಗಿ ಸೇವಿಸಿದರೆ ಆಸಿಡಿಟಿ ಉಂಟಾಗಿ ಮಗುವನ್ನೂ ಅಲರ್ಜಿ ತೊಂದರೆಗೀಡುಮಾಡುತ್ತದೆ.
* ಮದ್ಯ ಮತ್ತು ಹೊಗೆಸೊಪ್ಪು: ಹಾಲುಣಿಸುವ ಸಮಯದಲ್ಲಿ ಮದ್ಯಪಾನ, ಹೊಗೆಸೊಪ್ಪು ಇವುಗಳನ್ನು ಬಿಡಬೇಕು. ಇದು ಹಾಲಿನ ಉತ್ಪಾದನೆಯನ್ನು ಕಡಿಮೆಗೊಳಿಸಿ ಮಗುವಿನ ಆರೋಗ್ಯವನ್ನೂ ಗಂಭೀರವಾಗಿರಿಸುತ್ತದೆ.



Click it and Unblock the Notifications
