Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಿಂಗಲ್ ಪೇರೆಂಟ್ ಅಶ್ರಯದಲ್ಲಿ ಬೆಳೆದ ಮಕ್ಕಳಲ್ಲಿ ಈ ಗುಣಗಳು ಇರುತ್ತದೆ
ಸಿಂಗಲ್ ಪೇರೆಂಟಿಂಗ್ ಅಂದ್ರೆ ಒಬ್ಬಂಟಿ ತಾಯಿ ಅಥವಾ ಒಬ್ಬಂಟಿ ತಂದೆ. ಒಬ್ಬರೇ ಸ್ವತಂತ್ರವಾಗಿ ಮಕ್ಕಳನ್ನು ಸಾಕುವುದು ಸುಲಭದ ಕೆಲಸವಲ್ಲ. ತಂದೆ ಹಾಗೂ ತಾಯಿಯ ಇಬ್ಬರೂ ಜೊತೆಯಲ್ಲಿದ್ದಾಗಲೂ ಮಕ್ಕಳು ಹಾದಿ ತಪ್ಪುವ ಸಾಧ್ಯತೆಗಳು ಇರುತ್ತದೆ. ಅಂತದ್ರಲ್ಲಿ ಒಂಟಿಯಾಗಿ ಮಕ್ಕಳನ್ನು ಸಾಕುವುದು ಸವಾಲೇ ಸರಿ.
ಕೆಲಸಕ್ಕೆ ಹೋಗ್ಬೇಕು ಅದರ ಜೊತೆಗೆ ಮಕ್ಕಳ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು. ಸಿಂಗಲ್ ಪೇರೆಂಟ್ ಆಗಿರೋದು ತುಂಬಾನೇ ಕಷ್ಟ. ಆದ್ರೆ ಇದ್ರಲ್ಲೇ ಖುಷಿ ಕಂಡುಕೊಂಡವರು ಅನೇಕ ಜನರಿದ್ದಾರೆ. ಅಷ್ಟೇ ಅಲ್ಲ, ಮಕ್ಕಳನ್ನು ಉತ್ತಮವಾಗಿ ಸಾಕಿ ಸೈ ಎನಿಸಿಕೊಂಡಿದ್ದಾರೆ. ಹಾಗಾದ್ರೆ ಒಬ್ಬಂಟಿ ಪೋಷಕರಾಗೋದು ಮಕ್ಕಳ ಮೇಲೆ ಯಾವ ರೀತಿ ಧನಾತ್ಮಕ ಪರಿಣಾಮ ಬೀಳಲಿದೆ ಅನ್ನೋದನ್ನ ತಿಳಿದುಕೊಳ್ಳೋಣ.

1. ತಂದೆ ಅಥವಾ ತಾಯಿ ಜೊತೆಗಿನ ಭಾಂದವ್ಯ ಉತ್ತಮವಾಗುತ್ತದೆ
ಸಿಂಗಲ್ ಪೇರೆಂಟ್ ಆದ್ರೆ ತಂದೆ ಅಥವಾ ತಾಯಿ ಇಬ್ಬರಲ್ಲಿ ಒಬ್ಬರು ಮಾತ್ರ ಮಕ್ಕಳ ಹಾಗೂ ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ತಂದೆ ಹಾಗೂ ತಾಯಿ ಇಬ್ಬರು ಇದ್ದಾಗ ಇಬ್ಬರು ಪ್ರೀತಿಯನ್ನು ಕೊಡುತ್ತಾರೆ. ಆದ್ರೆ ಅವರಲ್ಲಿ ಯಾರು ಹೆಚ್ಚು ಕೇರ್ ಮಾಡುತ್ತಾರೋ ಅವರನ್ನು ಮಕ್ಕಳು ನೆಚ್ಚಿಕೊಳ್ಳುತ್ತಾರೆ. ಆದರೆ ಒಬ್ಬರೇ ಇದ್ದಾಗ ಮಕ್ಕಳಿಗೆ ಅವರೇ ಪ್ರಪಂಚವಾಗುತ್ತಾರೆ. ಅವರ ಜೊತೆಗೆ ಮಕ್ಕಳ ಭಾಂದವ್ಯ ಹೆಚ್ಚಾಗುತ್ತದೆ.
2. ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾರೆ
ಸಿಂಗಲ್ ಪೇರೆಂಟ್ ಆಗಿದ್ದಾಗ ತಂದೆ ಅಥವಾ ತಾಯಿ ಹಚ್ಚಿನ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಚಿಕ್ಕಂದಿನಿಂದಲೇ ಮಕ್ಕಳ ಹಾಗೂ ಮನೆಯ ಕೆಲಸವನ್ನು ನಿಭಾಯಿಸಿರುತ್ತಾರೆ. ಇದನ್ನೇ ನೋಡಿಕೊಂಡು ಬೆಳೆದ ಮಕ್ಕಳು ಸ್ವಲ್ಪ ದೊಡ್ಡವರಾಗುತ್ತಿದ್ದ ಹಾಗೇ ಪೋಷಕರಿಗೆ ಸಹಾಯ ಮಾಡೋದಕ್ಕೆ ಶುರು ಮಾಡುತ್ತಾರೆ. ಮನೆ ಕೆಲಸ ಅಥವಾ ಹೊರಗಡೆ ಹೋಗಿ ಮನೆಗೆ ಬೇಕಾದ ಸಾಮಾಗ್ರಿ ತರುವುದು, ಅಥವಾ ಕಾಲೇಜಿಗೆ ಹೋಗುವಾಗಲೇ ಬಿಡುವಿನ ಸಮಯದಲ್ಲಿ ಕೆಲಸ ಮಾಡುತ್ತಾರೆ. ಈ ರೀತಿ ಮಕ್ಕಳು ಪೋಷಕರಿಗೆ ಹೆಗಲಾಗುತ್ತಾರೆ.
3. ಪ್ರಬುದ್ಧತೆ
ಒಂಟಿ ಪೋಷಕರ ಆಶ್ರಯದಲ್ಲಿ ಬೆಳೆದ ಮಕ್ಕಳು ಪ್ರಬುದ್ಧರಾಗಿರುತ್ತಾರೆ. ಅಂತಹ ಮಕ್ಕಳಿಗೆ ಮನೆಯಲ್ಲಿ ಪ್ರೀತಿ, ಅಕ್ಕರೆಯ ಜೊತೆಗೆ ಜವಾಬ್ದಾರಿಯನ್ನು ಕಲಿಸಿಕೊಟ್ಟಿರುತ್ತಾರೆ. ಹೀಗಾಗಿ ಅಮ್ಮ ಅಥವಾ ಅಪ್ಪ ಎಷ್ಟು ಕಷ್ಟ ಪಟ್ಟು ನಮ್ಮನ್ನು ಬೆಳೆಸುತ್ತಿದ್ದಾರೆ ಅನ್ನೋ ವಿಚಾರ ಮಕ್ಕಳಿಗೆ ಗೊತ್ತಿರುತ್ತದೆ. ದುಡ್ಡಿನ ಮೌಲ್ಯದ ಬಗ್ಗೆ ಅರ್ಥ ಮಾಡಿಕೊಂಡಿರುತ್ತಾರೆ. ಅವರ ವಯಸ್ಸಿಗಿಂತ ಹೆಚ್ಚಿನ ಪ್ರಬುದ್ಧತೆ ಅವರಲ್ಲಿರುತ್ತದೆ.
4. ಮಕ್ಕಳು ಪೋಷಕರನ್ನೇ ಪ್ರೇರಣೆಯಾಗಿ ತೆಗೆದುಕೊಳ್ಳುತ್ತಾರೆ
ಮನೆಯೇ ಮೊದಲ ಪಾಠ ಶಾಲೆ ಅಂತಾರಲ್ಲ ಈ ಗಾದೆ ಮಾತು ಸಿಂಗಲ್ ಪೇರೆಂಟ್‌ಗೆ ಸರಿಯಾಗಿ ಒಪ್ಪುತ್ತದೆ. ಸಿಂಗಲ್ ಪೇರೆಂಟ್ ಆಶ್ರಯದಲ್ಲಿ ಬೆಳೆದ ಮಕ್ಕಳಿಗೆ ಕುಟುಂಬದ ಮಹತ್ವದ ಬಗ್ಗೆ ಗೊತ್ತಿರುತ್ತದೆ. ತಂದೆ ಅಥವಾ ತಾಯಿ ಒಬ್ಬಂಟಿಯಾಗಿ ಮಕ್ಕಳನ್ನು ಬೆಳೆಸೋದಕ್ಕೆ ಪಟ್ಟ ಕಷ್ಟದ ಬಗ್ಗೆ ಅರ್ಥ ಮಾಡಿಕೊಂಡಿರುತ್ತಾರೆ. ಹಾಗೂ ಪೋಷಕರನ್ನೇ ಮಕ್ಕಳು ಪ್ರೇರಣೆಯಾಗಿ ತೆಗೆದುಕೊಳ್ಳುತ್ತಾರೆ.
5. ಮನೆಯಲ್ಲಿ ಶಾಂತಿ, ನೆಮ್ಮದಿಯ ವಾತಾವರಣವಿರುತ್ತದೆ
ಗಂಡ-ಹೆಂಡತಿ ಇಬ್ಬರೂ ಇದ್ದಾಗ ಮನೆಯಲ್ಲಿ ಜಗಳ, ಮನಸ್ಥಾಪಗಳು ಆಗೋದು ಸಹಜ. ಇದು ನಿಮ್ಮ ಮಕ್ಕಳ ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಮನೆಯಲ್ಲಿ ಕಿರಿಕಿರಿಯನ್ನು ಅನುಭವಸುತ್ತಾರೆ. ತಂದೆ ತಾಯಿಯ ಬುದ್ಧಿಯನ್ನೇ ಮಕ್ಕಳು ಕಲಿತು ಕೊಳ್ಳುತ್ತಾರೆ. ಆದರೆ ಸಿಂಗಲ್ ಪೇರೆಂಟ್ ಆಗಿದ್ದಾಗ ಮನೆಯಲ್ಲಿ ಜಗಳಗಳಾಗೋ ಪ್ರಸಂಗ ಎದುರಾಗೋದಿಲ್ಲ. ತಾಯಿ ಅಥವಾ ತಂದೆ ಏನು ಹೇಳುತ್ತಾರೋ ಮಕ್ಕಳು ಅದನ್ನೇ ಕೇಳುತ್ತಾರೆ.
6. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ
ಸಿಂಗಲ್ ಪೇರೆಂಟ್ ಆಶ್ರಯದಲ್ಲಿ ಬೆಳೆದ ಮಕ್ಕಳು ಯಾರ ಮೇಲೆಯೂ ಅವಲಂಬಿತವಾಗೋದಿಲ್ಲ. ಎಂತಹ ಸಂದರ್ಭಗಳನ್ನು ನಿಭಾಯಿಸುವ ಶಕ್ತಿ ಅವರಲ್ಲಿರುತ್ತಾರೆ. ಅವರು ಯಾವುದಕ್ಕೂ ಜಗ್ಗೋದಿಲ್ಲ. ನಿರ್ಧಾರಗಳನ್ನು ಕೂಡ ಸ್ವತಂತ್ರವಾಗೇ ತೆಗೆದುಕೊಳ್ಳುತ್ತಾರೆ. ಸ್ವತಂತ್ರವಾಗಿ ಬದುಕೋದು ಹೇಗೆ ಅನ್ನೋದು ಅವರಿಗೆ ಚಿಕ್ಕದಿರಬೇಕಾದರೆ ಅಭ್ಯಾಸವಾಗಿರುತ್ತದೆ.
ಸಿಂಗಲ್ ಪೇರೆಂಟ್ ಆಗಿರೋದು ಕಷ್ಟ. ಆದರೆ ಅನೇಕ ಸಂದರ್ಭಗಳಲ್ಲಿ ಮಕ್ಕಳಿಗೆ ಉತ್ತಮ ಮೌಲ್ಯಗಳನ್ನು ನೀಡೋದಕ್ಕೆ ಸಿಂಗಲ್ ಪೇರೆಂಟ್‌ನಿಂದ ಸಾಧ್ಯವಾಗುತ್ತದೆ.



Click it and Unblock the Notifications



