Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಕ್ಕಳಿಗೆ ಅನಾನಾಸು ಹಣ್ಣು ಕೊಡುತ್ತಿದ್ದೀರಾ? ಹಾಗಾದ್ರೆ ಈ ವಿಚಾರ ಗೊತ್ತಿರಲಿ
ಅನಾನಾಸು ಹಣ್ಣು. ಈ ಹಣ್ಣು ನೋಡೋದಿಕ್ಕೆ ಎಷ್ಟು ವಿಭಿನ್ನವಾಗಿದ್ಯೋ ಅದೇ ರೀತಿ ಇದರ ರುಚಿ ಕೂಡ ಒಂದು ರೀತಿ ವಿಭಿನ್ನ ಅಂತಾಏ ಹೇಳಬಹುದು. ಸ್ವಲ್ಪ ಸಿಹಿ, ಸ್ವಲ್ಪ ಹುಳಿ. ಕೆಲವರು ಈ ಹಣ್ಣನ್ನು ಇಷ್ಟ ಪಟ್ಟು ತಿಂದ್ರೆ ಇನ್ನೂ ಕೆಲವರು ಇಷ್ಟ ಪಡೋದಿಲ್ಲ.
ಮಕ್ಕಳ ವಿಚಾರಕ್ಕೆ ಬರೋದಾದರೆ ಮಕ್ಕಳಿಗೆ ಈ ಹಣ್ಣನ್ನು ನೀಡಬಹುದಾ? ಮಕ್ಕಳಿಗೆ ಇದರಿಂದಾಗುವ ಆರೋಗ್ಯಕಾರಿ ಉಪಯೋಗಗಳೇನು? ಇದರಿಂದ ಏನಾದ್ರು ಅಡ್ಡ ಪರಿಣಾಮಗಳಿದ್ಯಾ? ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಅನಾನಾಸು ಕೊಟ್ರೆ ಒಳ್ಳೆಯದು ಅನ್ನೋದನ್ನ ಹೇಳ್ತೀವಿ.

ಅನಾನಾಸು ಹಣ್ಣು ಶಿಶುವಿನ ಆರೋಗ್ಯಕ್ಕೆ ಸುರಕ್ಷಿತವೇ?
ಮಕ್ಕಳಿಗೆ ಹೊಸದಾಗಿ ಯಾವ ಆಹಾರವನ್ನು ಕೊಡುವಾಗಲು ಪೋಷಕರು ಮುಂಜಾಗರೂಕತೆಯಿಂದ ಇದ್ದರೆ ಒಳ್ಳೆಯದು. ಅದ್ರಲ್ಲೂ ಸಿಟ್ರಕ್ (ಹುಳಿ ಅಂಶ) ಹಣ್ಣುಗಳನ್ನು ಮಕ್ಕಳಿಗೆ ನೀಡುವಾಗ ಮತ್ತೂ ಜಾಗರೂಕತೆಯಿಂದ ಇರಬೇಕು. ಯಾಕಂದ್ರೆ ಸಿಟ್ರಿಕ್ ಅಂಶ ಹೊಂದಿರುವ ಹಣ್ಣುಗಳಿಂದ ಅಲರ್ಜಿಯಂತಹ ಅಪಾಯಗಳು ಸಂಭವಿಸುವ ಸಾಧ್ಯತೆ ಹೆಚ್ಚು.
ಯಾವ ವಯಸ್ಸಿನಲ್ಲಿ ಮಕ್ಕಳಿಗೆ ಅನಾನಾಸು ಹಣ್ಣು ನೀಡಬೇಕು?
ಅನಾನಾಸು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ಮಕ್ಕಳಿಗೆ ಆರು ತಿಂಗಳ ನಂತರವೇ ಅನಾನಾಸು ಹಣ್ಣನ್ನು ನೀಡಿದರೆ ಉತ್ತಮ. ಆರು ತಿಂಗಳ ನಂತರ ಮಕ್ಕಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಕೆಲ ಬದಲಾವಣೆಗಳು ಆಗುತ್ತದೆ. ಹೀಗಾಗಿ ಘನ ಆಹಾರಗಳನ್ನು ಜೀರ್ಣಿಸೋದಕ್ಕೆ ಶುರು ಮಾಡುತ್ತಾರೆ. ಆದರೆ ತಾಯಂದಿರು ಸಿಟ್ರಿಕ್ ಹಣ್ಣುಗಳನ್ನು ಮಕ್ಕಳಿಗೆ ನೀಡುವಾಗ ತುಂಬಾನೇ ಮುಂಜಾಗರೂಕತೆ ವಹಿಸೋದು ಉತ್ತಮ. ತುಂಬಾ ಸೂಕ್ಷ್ಮ ಮಕ್ಕಳಾದರೆ ಒಂದು ವರ್ಷ ಆಗುವಾಗ ಇಂತಹ ಹಣ್ಣುಗಳನ್ನು ಕೊಟ್ಟರೆ ಸಾಕು.
ಅನಾನಾಸು ಹಣ್ಣಿನಲ್ಲಿರುವ ಪೋಷಕಾಂಶಗಳು
ಮಕ್ಕಳ ಆಹಾರದಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ನೀಡುವುದು ಅವರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅನಾನಾಸು ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಈ ಹಣ್ಣನ್ನು ಸೇವಿಸುವುದರಿಂದ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಾಗುತ್ತದೆ. ಇನ್ನೂ ಈ ಹಣ್ಣಿನಲ್ಲಿ ವಿಟಮಿನ್ ಬಿ 1 ಅಂಶ ಹೆಚ್ಚಾಗಿದ್ದು, ಇದು ಸ್ನಾಯುವಿನ ಕಾರ್ಯ ಮತ್ತು ನರಮಂಡಲದ ಬೆಳವಣಿಗೆಗೆ ಕೊಡುಗೆ ನೀಡುತ್ತದೆ. ಇದು ಫೋಲಿಕ್ ಆಮ್ಲ, ಮ್ಯಾಂಗನೀಸ್ ಮತ್ತು ಫೈಬರ್ ಅಂಶವನ್ನು ಒಳಗೊಂಡಿದೆ. ಇನ್ನೂ ಅನಾನಾಸು ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.
ಅನಾನಾಸು ಹಣ್ಣಿನ ಆರೋಗ್ಯಕಾರಿ ಉಪಯೋಗಗಳು
1. ಹೈಡ್ರೇಷನ್
100 ಗ್ರಾಂ ಅನಾನಾಸು ಹಣ್ಣಿನಲ್ಲಿ 85 ರಷ್ಟು ನೀರಿನ ಅಂಶವಿರುತ್ತದೆ. ಹೀಗಾಗಿ ಅನಾನಾಸು ಹಣ್ಣು ಜಲೀಕರಣಕ್ಕೆ ಸಹಾಯ ಮಾಡುತ್ತದೆ. ಇದು ದೇಹವನ್ನು ರಿಫ್ರೆಶ್ ಮಾಡುವುದಷ್ಟೇ ಅಲ್ಲ ಸೂಕ್ಷ್ಮ ಪೋಷಕಾಂಶವನ್ನು ಒದಗಿಸುತ್ತದೆ.
2. ಉರಿಯೂತವನ್ನು ನಿಯಂತ್ರಿಸುತ್ತದೆ
ಅನಾನಾಸಿನಲ್ಲಿ ಬ್ರೋಮೆಲಿನ್ ಅಂಶವಿದೆ. ದೀರ್ಘಕಾಲದ ಉರಿಯೂತ ಮತ್ತು ಸ್ವಯಂ ನಿರೋಧಕ ಕಾಯಿಲೆಗಳ ಚಿಕಿತ್ಸೆಯಲ್ಲಿ ಬ್ರೋಮೆಲಿನ್ ಅನ್ನು ಪೂರಕ ಔಷಧವಾಗಿ ಶಿಫಾರಸು ಮಾಡಲಾಗುತ್ತದೆ.
3. ನೋವು ನಿವಾರಕ
ಅನಾನಸ್‌ನಲ್ಲಿರುವ ಬ್ರೋಮೆಲಿನ್ ನೋವು ನಿವಾರಕ ಗುಣಗಳನ್ನು ಹೊಂದಿದೆ. ಇದು ನೋವಿನಿಂದ ಪರಿಹಾರವನ್ನು ನೀಡಲು ಸಹಾಯ ಮಾಡುತ್ತದೆ.
4. ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ
ಅನಾನಾಸು ಹಣ್ಣಿನಲ್ಲಿ ನೀರಿನ ಜೊತೆಗೆ ಗಣನೀಯ ಪ್ರಮಾಣದ ಫೈಬರ್ ಅಂಶವಿದೆ. ಇದು ಕರುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ಜೊತೆಗೆ ಇದು ಮಲಬದ್ಧತೆಯನ್ನು ನಿಯಂತ್ರಿಸುತ್ತದೆ.
5. ಹೃದಯದ ಆರೋಗ್ಯಕ್ಕೆ ಉತ್ತಮ
ಅನಾನಾಸು ಹಣ್ಣು ಬ್ರೋಮೆಲಿನ್ ಅಂಶವನ್ನು ಹೊಂದಿದೆ. ಇದನ್ನು ನಿತ್ಯ ಸೇವಿಸುವುದರಿಂದ ಹೃದಯದ ರಕ್ತನಾಳಗಳಿಗೆ ತುಂಬಾನೇ ಪ್ರಯೋಜನಕಾರಿಯಾಗಿದೆ. ಅನಾನಾಸ್‌ನಲ್ಲಿರುವ ಬ್ರೋಮೆಲಿನ್ ಅಂಶ ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡುತ್ತದೆ.
6. ಕರುಳಿನ ಹುಳುಗಳನ್ನು ನಾಶ ಪಡಿಸುತ್ತದೆ
ಆಯುರ್ವೇದದ ಪ್ರಕಾರ ನಿತ್ಯವು ಅನಾನಾಸು ಹಣ್ಣು ಸೇವಿಸುವುದರಿಂದ ಅದು ಕರುಳಿನ ಹುಳುಗಳನ್ನು ನಾಶ ಪಡಿಸುತ್ತದೆ ಎಂದು ನಂಬಲಾಗಿದೆ.
ಮಕ್ಕಳ ಆರೋಗ್ಯ ತುಂಬಾನೇ ಸೂಕ್ಷ್ಮ. ಏಕಾಏಕಿ ಯಾವುದೇ ಹೊಸ ಆಹಾರವನ್ನು ಮಕ್ಕಳಿಗೆ ನೀಡಬಾರದು. ಮಕ್ಕಳ ಆರೋಗ್ಯಕ್ಕೆ ಆ ಆಹಾರ ಹೋಲುತ್ತೆ ಅಂತಾದ್ರೆ ಮಾತ್ರ ಅಂತಹ ಆಹಾರವನ್ನು ಮುಂದುವರಿಸಿದರೆ ಒಳ್ಳೆಯದು.



Click it and Unblock the Notifications



