Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ನಿಮ್ಮ ಮಗುವಿನ ಇಚ್ಛಾಶಕ್ತಿ ಬಲವಾಗಿದ್ದರೆ ಪೋಷಕರಿಗೆ ತಲೆನೋವು ಗ್ಯಾರಂಟಿ!
ಪ್ರತಿಯೊಬ್ಬ ತಂದೆ-ತಾಯಿಗೂ ತನ್ನ ಮಗುವನ್ನು ಸ್ಟ್ರಾಂಗ್ ಆಗಿ ಬೆಳೆಸಬೇಕು. ಆ ಮಗುವಿನಲ್ಲಿ ನಾಯಕತ್ವದ ಗುಣಗಳು ಇರಬೇಕು. ಎಂತಹ ಪರಿಸ್ಥಿತಿಯಲ್ಲೂ ಆತ ಜಗ್ಗಬಾರದು ಎನ್ನುವ ಆಸೆಯಂತೂ ಖಂಡಿತ ಇದ್ದೇ ಇರುತ್ತದೆ. ಕೆಲವೊಂದು ಸಲ ಏನಾಗುತ್ತೆ ಅಂದರೆ ಮಕ್ಕಳನ್ನು ನಾವು ಸ್ಟ್ರಾಂಗ್ ಆಗಿ ಬೆಳೆಸೋದಕ್ಕೆ ಹೋಗಿ ಪಚೀತಿಗೆ ಸಿಲುಕುತ್ತೇವೆ. ಯಾಕಂದ್ರೆ ಅವರು ಹುಟ್ಟು ಹಠಮಾರಿಗಳಾಗಿ ಬದಲಾಗುತ್ತಾರೆ. ಅಷ್ಟಕ್ಕು ನಿಮ್ಮ ಮಗುವನ್ನು ಬಲವಾದ ಇಚ್ಛಾಶಕ್ತಿಯುಳ್ಳ ಮಗುವನ್ನು ಬೆಳೆಸೋದು ಹೇಗೆ? ಇದರಿಂದ ಪೋಷಕರಿಗೆ ಯಾವ ರೀತಿಯ ಸವಾಲು ಎದುರಾಗಲಿದೆ ಅನ್ನೋದನ್ನು ತಿಳಿಯೋಣ.
1. ಅವರ ಕಾಲ ಮೇಲೆ ನಿಲ್ಲುತ್ತಾರೆ
ಮಕ್ಕಳಿಗೆ ಚಿಕ್ಕಂದಿನಿಂದಲೇ ಹಿಂಜರಿಕೆ ಅನ್ನೋದು ಬರಲೇಬಾರದು. ಹೀಗಾಗಿ ಪೋಷಕರು ಚಿಕ್ಕಂದಿನಲ್ಲೇ ಮಕ್ಕಳಲ್ಲಿ ಬಲವಾದ ಇಚ್ಛಾಶಕ್ತಿಯನ್ನು ತುಂಬಬೇಕು. ಹೀಗಾದಾಗ ಅವರು ನಡೆಯುವ ದಾರಿಯಲ್ಲಿ ಯಾವುದೇ ರೀತಿ ಅಡೆ-ತಡೆಗಳು ಬಂದರೂ ಕೂಡ ಅವರು ಅದನ್ನು ಮೆಟ್ಟಿ ನಿಲ್ಲುತ್ತಾರೆ. ಯಾವ ಕಾರಣಕ್ಕೂ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕಿಡೋದಿಲ್ಲ. ಇನ್ನೂ ಕೆಲವೊಂದು ಸಲ ಬಲವಾದ ಇಚ್ಛಾಶಕ್ತಿ ಇರುವವರು ಹಠಮಾರಿಗಳಾಗುವ ಸಾಧ್ಯತೆಯಿದೆ. ಹೀಗಾಗಿ ಪೋಷಕರು ಈ ಬಗ್ಗೆ ಕೂಡ ಗಮನ ಹರಿಸೋದು ಮುಖ್ಯ.

2. ಮಕ್ಕಳು ವಿವರಣೆ ಕೇಳುತ್ತಾರೆ
ನಿಮ್ಮ ಮಗುವನ್ನು ನೀವು ಬಲವಾದ ಇಚ್ಛಾಶಕ್ತಿಯಿಂದ ಬೆಳೆಸಿದರೆ ಕೆಲವೊಂದು ಸವಾಲುಗಳನ್ನು ಪೋಷಕರು ಕೂಡ ಎದುರಿಸಬೇಕಾಗುತ್ತದೆ. ನಿಮ್ಮ ಮಕ್ಕಳು ಯಾವುದೇ ವಿಚಾರವಾದರೂ ಅಷ್ಟೊಂದು ಸುಲಭವಾಗಿ ಕಾಂಪ್ರಮೈಸ್ ಆಗೋದಿಲ್ಲ. ಪ್ರತಿಯೊಂದಕ್ಕೂ ನೀವು ವಿವರಣೆ ಕೊಡಲೇಬೇಕು. ಪೋಷಕರ ಬಳಿ ತಪ್ಪು-ಸರಿಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇದಕ್ಕೆಲ್ಲಾ ಉತ್ತರಿಸೋದಕ್ಕೆ ಪೋಷಕರು ಸಿದ್ಧರಾಗಿರಬೇಕು.
3. ಅವರ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಾರೆ
ನಿಮ್ಮ ಮಗುವಿನಲ್ಲಿ ಉತ್ತಮ ನಾಯಕತ್ವದ ಗುಣಗಳು ಬೆಳೆಯಬೇಕೆಂದು ನೀವು ಇಷ್ಟ ಪಡುತ್ತೀರಿ. ಅವರನ್ನು ಬಲವಾದ ಇಚ್ಛಾಶಕ್ತಿಯುಳ್ಳ ಮಗುವನ್ನಾಗಿ ಕೂಡ ನೀವು ಬೆಳೆಸುತ್ತೀರಿ. ಇಂತಹ ಮಕ್ಕಳು ಮನೆಯ ಹೊರಗಡೆ ಮಾತ್ರವಲ್ಲ ಮನೆಯ ಒಳಗಡೆ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸೋದಕ್ಕೆ ಇಷ್ಟ ಪಡುತ್ತಾರೆ. ಇವರನ್ನು ನೀವು ಸುಮ್ಮನಿರು ಎಂದು ಬಾಯಿ ಮುಚ್ಚಿಸೋದಕ್ಕೆ ಖಂಡಿತ ಸಾಧ್ಯವಿಲ್ಲ. ಒಂದು ವಿಚಾರದ ಬಗ್ಗೆ ನಿಖರವಾಗಿ ಅಲೋಚಿಸಿ ತಮ್ಮ ಅಭಿಪ್ರಾಯ ಹೇಳುತ್ತಾರೆ. ಇದನ್ನು ಪೋಷಕರು ಎದುರಿಸಲೇಬೇಕು.
4. ಬಲವಾದ ಇಚ್ಛಶಕ್ತಿಯುಳ್ಳವರಿಗೆ ತಾಳ್ಮೆ ಕಡಿಮೆ ಇರುತ್ತದೆ
ಯಾರಲ್ಲಿ ಬಲವಾದ ಇಚ್ಛಾಶಕ್ತಿ ಇರುತ್ತದೆಯೋ ಅವರಿಗೆ ತಾಳ್ಮೆ ಕಡಿಮೆ. ಇಂತಹ ಮಕ್ಕಳು ಹೆಚ್ಚು ಆಲೋಚನೆ ಮಾಡೋದಿಲ್ಲ. ಬದಲಾಗಿ ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ತಮ್ಮ ನಿರ್ಧಾರದಿಂದ ಮುಂದೆ ಯಾವ ರೀತಿಯ ಪರಿಣಾಮಗಳಾಗುತ್ತೋ ಅನ್ನೋದ್ರ ಬಗ್ಗೆ ಚಿಂತಿಸೋದಕ್ಕೆ ಹೋಗೋದಿಲ್ಲ. ಹೀಗಾಗಿ ಇಂತಹ ಸಮಯದಲ್ಲಿ ಪೋಷಕರು ಅವರಿಗೆ ತಾಳ್ಮೆಯಿಲ್ಲ ಎಂದು ಅವರನ್ನು ದೂಷಿಸೋದಕ್ಕೆ ಹೋಗಬಾರದು. ಬದಲಾಗಿ ಶಾಂತಿಯಿಂದ ಅವರ ತಪ್ಪಿನ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕು.
5. ಅವರು ತಮ್ಮ ನಿಯಮಗಳನ್ನೇ ಮಾಡುತ್ತಾರೆ
ನಿಮ್ಮ ಬಲವಾದ ಇಚ್ಛಾಶಕ್ತಿಯುಳ್ಳ ಮಗು ಅದರದ್ದೇ ಆದ ನಿಯಮಗಳನ್ನು ಮಾಡಿಕೊಳ್ಳುತ್ತದೆ. ಬೇರೆಯವರಿಗಾಗಿ ಕಾಯೋದಿಲ್ಲ. ಯಾವ ನಿಯಮ ಅವರಿಗೆ ಸರಿ ಹೊಂದುತ್ತದೆಯೋ ಅಂತಹ ನಿಯಮಗಳನ್ನು ಮಾತ್ರ ಅವರು ಪಾಲಿಸುತ್ತಾರೆ. ಹೀಗಾಗಿ ಪೋಷಕರು ಇಂತಹ ಮಕ್ಕಳನ್ನು ತಮ್ಮ ಚೌಕಟ್ಟಿನೊಳಗಡೆ ಇಟ್ಟುಕೊಳ್ಳೋದಿಕ್ಕೆ ಆಗೋದಿಲ್ಲ.
ಪೋಷಕರು ಮಾಡಬೇಕಾದುದು ಇಷ್ಟೇ, ನಿಮ್ಮ ಮಕ್ಕಳ ಮುಕ್ತ ಚಿಂತನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಬೇಕು. ನಿಮ್ಮ ಮಗುವಿಗೆ ತಮ್ಮದೇ ಆದ ನಿರ್ಧಾರಗಳನ್ನು ಮತ್ತು ಆಯ್ಕೆಗಳನ್ನು ಮಾಡಲಿ. ನೀವು ಅವರಿಗೆ ಮಾರ್ಗದರ್ಶಕರಾಗಿ ಇದ್ದರಷ್ಟೇ ಸಾಕು. ಅದನ್ನು ಬಿಟ್ಟು ನೀವು ಅವರ ಆಲೋಚನೆಗೆ ಅಡ್ಡಿಯಾದರೆ ಅದರಿಂದ ಅವರಿಗೆ ಕಿರಿಕಿರಿ ಉಂಟಾಗಬಹುದು.
6. ಶಿಕ್ಷೆ ಕೊಟ್ಟು ಅವರನ್ನು ಬದಲಾಯಿಸಲು ಸಾಧ್ಯವಿಲ್ಲ
ಸಾಮಾನ್ಯ ಮಕ್ಕಳನ್ನು ನೀವು ಶಿಕ್ಷೆ ಕೊಟ್ಟು ದಾರಿಗೆ ತರಬಹುದು. ಆದರೆ ಬಲವಾದ ಇಚ್ಛಾಶಕ್ತಿಯುಳ್ಳ ಮಕ್ಕಳು ಶಿಕ್ಷೆ ಕೊಟ್ಟರೆ ಬಗ್ಗುವವರಲ್ಲ. ಅವರು ಮಾಡಿದ್ದು ತಪ್ಪು ಎಂದು ಅವರಿಗೆ ಅನ್ನಿಸೋವರೆಗೂ ಅವರು ನಿಮ್ಮ ಮಾತನ್ನು ಕೇಳೋದೇ ಇಲ್ಲ. ಹೀಗಾಗಿ ಅವರ ಜೊತೆಗೆ ಸಂವಹನ ನಡೆಸಿ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.
ಪೋಷಕರು ಮಕ್ಕಳಿಗೆ ಬಲವಾದ ಇಚ್ಛಾಶಕ್ತಿಯನ್ನು ತುಂಬುವುದು ಮಾತ್ರವಲ್ಲದೇ ಇದರ ಜೊತೆಗೆ ಅಂತಹ ಮಕ್ಕಳನ್ನು ನಿಭಾಯಿಸೋದು ಹೇಗೆ ಅನ್ನೋದನ್ನು ಕೂಡ ಕಲಿತಿರಬೇಕು. ಇಲ್ಲದಿದ್ದರೆ ಇದರಿಂದ ನೀವು ಸಮಸ್ಯೆ ಎದುರಿಸಬೇಕಾದಿತು.



Click it and Unblock the Notifications

