Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
PCOS ಇದ್ದರೆ ನೈಸರ್ಗಿಕವಾಗಿ ಗರ್ಭಧಾರಣೆಯಾಗಲು ಸಾಧ್ಯವೇ?
ತಾಯ್ತನ ಎಲ್ಲಾ ಮಹಿಳೆಯರ ಕನಸು. ಇನ್ನೊಂದು ಜೀವಕ್ಕೆ ಜನ್ಮ ನೀಡುವ ಆ ಸಾರ್ಥಕ ಭಾವ ಬೇರೊಂದಿಲ್ಲಾ ಎನ್ನುತ್ತಾರೆ. ಹೆರಿಗೆಯ ನೋವಿನಂತಹ ನೋವೇ ಇಲ್ಲಾ ಎಂದು ತಿಳಿದಿದ್ದರೂ ಯಾರೂ ಮಗು ಬೇಡ ಎನ್ನುವುದಿಲ್ಲ. ಹೊತ್ತು ಹೆತ್ತು ಸಾಕಿದ ಮಗು ದೊಡ್ಡವನಾಗುತ್ತಾ ಇರುವುದನ್ನು ಕಾಣುವುದೇ ಒಂದು ದೊಡ್ಡ ಖುಷಿ.
ಮಕ್ಕಳು ದೇವರ ಆಶಿರ್ವಾದ ಎನ್ನುತ್ತಾರೆ. ಮಕ್ಕಳು ಬೇಕು ಎಂದುಕೊಂಡ ಎಲ್ಲರಿಗೂ ಕೂಡಲೇ ಮಕ್ಕಳಾಗದೇ ಇರಬಹುದು. ವಿಜ್ಞಾನ ಬೆಳವಣಿಗೆಯಾಗದ ಸಮಯದಲ್ಲಿ ದೇವರ ಬಳಿ ಬೇಡಿಕೊಳ್ಳುವುದಲ್ಲದೇ ಬೇರೆಯಾವುದೇ ದಾರಿ ಇರಲಿಲ್ಲ.

ಆದರೆ ಇವತ್ತಿನ ಸಮಯ ಹಾಗಲ್ಲ ಎಲ್ಲದಕ್ಕೂ ಪರೀಕ್ಷೆಗಳಿವೆ, ಪರಿಹಾರಗಳಿವೆ. ಮಕ್ಕಳಾಗುವುದಿಲ್ಲ ಎಂದು ಹೋದ ದಂಪತಿಗಳಲ್ಲಿ ಯಾರಿಗೆ ಯಾವ ಸಮಸ್ಯೆಯಿದೆ ಎಂದು ಮಾಡುವ ಕೆಲವು ಸರಳ ಪರೀಕ್ಷೆಗಳಿಂದ ತಿಳಿದು ಹೋಗುತ್ತದೆ.
ಹೀಗೆ ಮಕ್ಕಳಾಗದಿರುವುದಕ್ಕೆ ಮಹಿಳೆಯರಲ್ಲಿ ಇರುವ ಒಂದು ಪ್ರಮುಖ ಸಮಸ್ಯೆ ಎಂದರೆ ಪಿ.ಸಿ.ಒ.ಎಸ್. ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಎನ್ನುವ ಈ ಹಾರ್‍ಮೋನ್ ಅಸಮತೋಲನದ ಸ್ಥಿತಿ ಸಾಮಾನ್ಯವಾಗಿದ್ದು ಗುಣಪಡಿಸಬಹುದಾದ ಸಮಸ್ಯೆಯಾಗಿದೆ. ಸ್ತ್ರೀರೋಗ ತಜ್ಞರು ಮತ್ತು ಬಂಜೆತನ ತಜ್ಞರ ಪ್ರಕಾರ ಜಗತ್ತಿನ 7 ಜನ ಮಹಿಳೆಯರಲ್ಲಿ ಒಬ್ಬ ಮಹಿಳೆಗೆ ಈ ಸಮಸ್ಯೆ ಇರುತ್ತದೆ. ಪಿ.ಸಿ.ಒ.ಎಸ್ ಇದ್ದವರು ಗರ್ಭಿಣಿಯಾಗುವುದಿಲ್ಲ ಎಂದಲ್ಲ. ಆದರೆ ಸುಲಭವಾಗಿ ಆಗದೇ ಇರಬಹುದು ಅಥವಾ ವೈದ್ಯಕೀಯ ನೆರವಿನ ಅಗತ್ಯ ಬರಬಹುದು.
ಹಾಗಾದರೆ ಪಿ.ಸಿ.ಒ.ಎಸ್. ಇದ್ದವರ ದೇಹದಲ್ಲಿ ಆಗುವ ಯಾವೆಲ್ಲಾ ಬದಲಾವಣೆಗಳಿಂದ ಮಹಿಳೆಯರಲ್ಲಿ ಗರ್ಭಿಣಿಯಾಗಲು ಸಮಸ್ಯೆ ಯಾಗುತ್ತದೆ ಎಂದು ತಿಳಿದುಕೊಳ್ಳೋಣ. ಪಿ.ಸಿ.ಒ.ಎಸ್. ಇದ್ದವರಲ್ಲಿ ಪುರುಷ ಹಾರ್ಮೋನ್ ಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತವೆ. ಇವರಲ್ಲಿ ಅನಿಯಮಿತ ಅಥವಾ ಅಲ್ಪ ಅವಧಿಯ ಋತುಚಕ್ರಗಳು ಆಗುತ್ತವೆ. ಇದು ಅಂಡೋತ್ಪತ್ತಿ ಮತ್ತು ಫಲವತ್ತತೆಯ ಮೇಲೆ ಭಾರೀ ಪರಿಣಾಮ ಬೀರಬಹುದು. ಪಿ.ಸಿ.ಒ.ಎಸ್ ನ ಇನ್ನೊಂದು ಅಡ್ಡ ಪರಿಣಾಮ ಎಂದರೆ ದೇಹದ ತೂಕ ಹೆಚ್ಚಾಗುವುದು. ಇದರಿಂದಾಗಿಯೂ ಮಹಿಳೆ ಗರ್ಭಿಣಿಯಾಗುವುದರಲ್ಲಿ ತಡವಾಗಬಹುದು.
ಪಿ.ಸಿ.ಒ.ಎಸ್ ಇದ್ದವರು ಸಹಜವಾಗಿ ಗರ್ಭಿಣಿಯರಾಗಬಹುದೇ ?
ಪಿ.ಸಿ.ಒ.ಎಸ್ ಇದ್ದವರು ಸಹಜವಾಗಿ ಗರ್ಭಿಣಿಯರಾಗಬಹುದೇ ಎಂಬ ಪ್ರಶ್ನೆಗೆ ಉತ್ತರ ಹೌದು. ಆದರೆ ಇತರ ಮಹಿಳೆಯರಿಗಿಂತ ಸ್ವಲ್ಪ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು. ಹೀಗೆ ನೈಸರ್ಗಿಕವಾಗಿ ಗರ್ಭಿಣಿಯರಾಗುವ ಸಾಧ್ಯತೆಯನ್ನು ಹೆಚ್ಚಿಸಲು ಕೆಲವು ಸರಳವಾದ ದಾರಿಗಳಿವೆ. ನಿಯಮಿತವಾಗಿ ವ್ಯಾಯಾಮ ಮಾಡುವುದು, ಆರೋಗ್ಯಕರ ಆಹಾರಕ್ರಮ ಹಾಗೂ ತಮ್ಮ ಜೀವನಶೈಲಿಯಲ್ಲಿ ಮಾಡಿಕೊಳ್ಳುವ ಕೆಲವು ಬದಲಾವಣೆಗಳಿಂದ ಮಹಿಳೆಯರು ಯಾವುದೇ ವೈದ್ಯಕೀಯ ನೆರವಿಲ್ಲದೆ ಗರ್ಭಿಣಿಯರಾಗಲು ಸಾಧ್ಯವಿದೆ. ಪಿ.ಸಿ.ಒ.ಎಸ್ ಇರುವ ಮಹಿಳೆಯರು ಪಾಲಿಸಬೇಕಾದ ಕೆಲವು ಕ್ರಮಗಳು ಇಲ್ಲಿವೆ.
ದೇಹತೂಕವನ್ನು ನಿಯಂತ್ರಣದಲ್ಲಿಡುವುದು:
ಪಿ.ಸಿ.ಒ.ಎಸ್ ಇರಲಿ ಅಥವಾ ಇಲ್ಲದಿರಲಿ ದೇಹ ತೂಕವನ್ನು ನಿಯಂತ್ರಣದಲ್ಲಿಡುವುದು ಎಂದರೆ ಗರ್ಭಿಣಿಯರಾಗುವ ಸಾಧ್ಯತೆಯನ್ನು ಹೆಚ್ಚಿಸುವುದು ಎಂದರ್ಥ. ಹೆಚ್ಚಿನ ತೂಕ ಉರಿಯೂತ ಮತ್ತು ದೇಹದ ಮೇಲೆ ಹೆಚ್ಚಿನ ಒತ್ತಡವನ್ನು ನೀಡುವುದರಿಂದ ಗರ್ಭಿಣಿಯರಾಗುವುದನ್ನು ತಡಮಾಡಬಹುದು. ಬಿ.ಎಮ್.ಐ. (ಬಾಡಿ ಮಾಸ್ ಇಂಡೆಕ್ಸ್) ಅನ್ನು ಸರಿಯಾದ ಮಟ್ಟದಲ್ಲಿ ನಿರ್ವಹಣೆ ಮಾಡುವುದು ಬಹಳ ಅಗತ್ಯ. ಒಂದು ಅಧ್ಯಯನದ ಪ್ರಕಾರ ದೇಹದ ತೂಕವನ್ನು ಐದರಿಂದ ಹತ್ತು ಶೇಕಡಾ ಕಡಿಮೆ ಮಾಡಿದರೂ ಗರ್ಭಿಣಿಯಾಗುವ ಸಾಧ್ಯತೆಯನ್ನು ಅದೆಷ್ಟೋ ಪಾಲು ಹೆಚ್ಚಿಸಿದಂತೆ.
ಆರೋಗ್ಯಕದವಾದ ಆಹಾರ ಕ್ರಮ:
ಪಿ.ಸಿ.ಒ.ಎಸ್. ಇದ್ದವರಿಗೇ ಇದೇ ಆಹಾರ ತೆಗೆದುಕೊಳ್ಳಬೇಕು ಎಂಬ ಯಾವುದೇ ಪಟ್ಟಿ ಇಲ್ಲವಾದರೂ ದೇಹಕ್ಕೆ ಆರೋಗ್ಯಕರವಾದ ಆಹಾರವನ್ನು ಸೇವಿಸುವುದು ಬಹಳ ಸಹಕಾರಿ. ಕಾರ್‍ಬೋಹೈಡ್ರೇಟ್ ಯುಕ್ತ ಆಹಾರ ಬಹಳ ಒಳ್ಳೆಯದು. ಬೀಜಗಳು, ಬಿ. 12, ಡಿ. ಫೊಲೇಟ್ ಮತ್ತು ಕಬ್ಬಿಣದ ಅಂಶಯುಕ್ತ ಆಹಾರ ಸೇವಿಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಮತ್ತು ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಲಿನ ಉತ್ಪನ್ನಗಳನ್ನು ಕಡಿಮೆ ಸೇವಿಸುವುದು ಕೂಡ ಬಹಳ ನೆರವಾಗುತ್ತದೆ.
ವ್ಯಾಯಾಮ ಮಾಡುವುದು:
ಕೇವಲ ಪಿ.ಸಿ.ಒ.ಎಸ್ ಇದ್ದವರಿಗಷ್ಟೇ ಅಲ್ಲ ಅಥವಾ ಗರ್ಭಿಣಿಯಾಗಬೇಕೆಂದು ಪ್ರಯತ್ನಿಸುತ್ತಿರುವವರಿಗಷ್ಟೇ ಅಲ್ಲ ಎಲ್ಲರಿಗೂ ವ್ಯಾಯಾಮ ಅಗತ್ಯ. ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದವರಲ್ಲಿ ರೋಗಗಳೂ ಕಡಿಮೆ ಮತ್ತು ಹೆಚ್ಚು ಉತ್ಸಾಹದಿಂದ ಇರುತ್ತಾರೆ. ಇದು ದೇಹ ತೂಕ ಮತ್ತು ಒತ್ತಡ ಎಂಬ ಎರಡು ದೊಡ್ಡ ಸಮಸ್ಯೆಗಳಿಗೆ ಪರಿಹಾರವೂ ಹೌದು. ಕೇವಲ ದಿನಕ್ಕೆ ಒಂದಷ್ಟು ನಡೆದಾಡುವುದು ಅಥವಾ ಹೃದಯ ಆರೋಗ್ಯಕ್ಕೆ ಸಹಾಯವಾಗುವ ಕಾರ್ಡಿಯೋ ವ್ಯಾಯಾಮಗಳನ್ನು ಮಾಡುವುದು ದೇಹಕ್ಕೆ ಬಹಳ ಸಹಕಾರಿ.
ಸಕ್ಕರೆ ಅಂಶವನ್ನು ನಿಂಯಂತ್ರಣದಲ್ಲಿಡುವುದು: ಪಿ.ಸಿ.ಒ.ಎಸ್ ಇದ್ದವರಲ್ಲಿ ಬಾಣಂತಿಯಾದ ಬಳಿಕ ಡಯಾಬಿಟೀಸ್ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಬಹಳ ಹೆಚ್ಚು. ಆದ್ದರಿಂದ ಮೊದಲಿನಿಂದಲೇ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುವುದು ಬಹಳ ಅಗತ್ಯ.
ಇದರ ಜೊತೆಗೆ ಧ್ಯಾನ ಅಥವಾ ಮನಸ್ಸನ್ನು ಉಲ್ಲಸಿತ ಗೊಳಿಸುವ ಚಟುವಟಿಕೆಗಳೂ ಬಹಳಾ ಅಗತ್ಯ.
ಈ ತರಹದ ಚಟುವಟಿಕೆ ಮತ್ತು ಜೀವನಶೈಲಿಯಿಂದ ಯಾವುದೇ ನೆರವು ಆಗದಿದ್ದಲ್ಲಿ ವೈದ್ಯಕೀಯ ನೆರವು ಪಡೆಯಬೇಕಾಗುತ್ತದೆ. ಸಾಮಾನ್ಯವಾದ ಫಲವತ್ತತೆ ಹೆಚ್ಚಿಸುವ ಮಾತ್ರೆಗಳು ಮತ್ತು ಔಷಧಿಗಳು ಬಹಳ ನೆರವಾಗುತ್ತವೆ. ಒಂದು ಅಧ್ಯಯನದ ಪ್ರಕಾರ ಸುಮಾರು ಎಂಭತ್ತು ಶೇಕಡಾಗಿಂತಲೂ ಹೆಚ್ಚಿನ ಮಹಿಳೆಯರು ಇಂತಹ ಸಾಮಾನ್ಯವಾದ ವೈದ್ಯಕೀಯ ನರಿವಿನಿಂದ ಗರ್ಭಿಣಿಯರಾಗಿದ್ದಾರೆ. ಇಂತಹ ಔಷಧೀಯ ಕ್ರಮಗಳಿಂದಲೂ 12 - 16 ಋತುಚಕ್ರಗಳ ತನಕ ಯಾವುದೇ ಪರಿಣಾಮ ಇಲ್ಲದಿದ್ದಲ್ಲಿ ಆಗ ಐ.ವಿ.ಎಫ್ ನಂತಹ ಆಯ್ಕೆಗಳನ್ನು ಮಾಡಿಕೊಳ್ಳಬಹುದು.



Click it and Unblock the Notifications