Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಅಂತರಾಷ್ಟ್ರೀಯ ಪೋಷಕರ ದಿನ 2023: ಈ ಸ್ಪೆಷಲ್ ಗಿಫ್ಟ್ ನಿಮ್ಮ ಪೋಷಕರಿಗೆ ನೀಡಿ!
ಅಪ್ಪ-ಅಮ್ಮನ ಪ್ರೀತಿಗೆ ಯಾವತ್ತೂ ಬೆಲೆ ಕಟ್ಟೋದಕ್ಕೆ ಸಾಧ್ಯವಿಲ್ಲ. ಪೋಷಕರು ನಿಸ್ವಾರ್ಥ ಜೀವಿಗಳು. ಮಕ್ಕಳ ಸಂತೋಷಕ್ಕಾಗಿ ಸರ್ವಸ್ವವನ್ನೇ ತ್ಯಾಗ ಮಾಡಿರುತ್ತಾರೆ. ಮಕ್ಕಳು ಹುಟ್ಟಿದಾಗಿನಿಂದ ಹಿಡಿದು ಅವರು ಬೆಳೆದು ಒಂದು ದಟ ಸೇರೋವರೆಗೂ ಮಕ್ಕಳ ಕೈ ಹಿಡಿದು ನಡೆಸುತ್ತಾರೆ. ಅವರಿಗಾಗಿ ನಾವು ಏನು ಕೊಟ್ರೂನು ಕಮ್ಮಿನೇ. ಜುಲೈ 23 ಕ್ಕೆ ನ್ಯಾಷನಲ್ ಪೇರೆಂಟ್ಸ್ ಡೇ ಅಂದ್ರೆ ರಾಷ್ಟೀಯ ಪೋಷಕರ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ.
ಈ ದಿನ ನಿಮ್ಮ ಪೋಷಕರಿಗಾಗಿ ಏನಾದ್ರು ಸಪ್ರೈಸ್ ಗಿಫ್ಟ್ ಗಳನ್ನು ನೀಡಿ. ಆ ಉಡುಗೊರೆ ಹೇಗಿರ್ಬೇಕು ಅಂದ್ರೆ ಆ ಉಡುಗೊರೆ ಅಪ್ಪ-ಅಮ್ಮನಿಗೆ ಇಷ್ಟಾನು ಆಗ್ಬೇಕು. ಜೊತೆಗೆ ಅದ್ರಿಂದ ಅವರಿಗೆ ಉಪಯೋಗನೂ ಆಗ್ಬೇಕು ಅಂತಹ ಗಿಫ್ಟ್ ಗಳನ್ನು ನೀಡಬೇಕು. ಹಾಗಾದ್ರೆ ಈ ವರ್ಷದ ಪೇರೆಂಟ್ಸ್ ಡೇ ಗೆ ಅಪ್ಪ-ಅಮ್ಮನಿಗೆ ಏನೆಲ್ಲಾ ಸ್ಪೆಷಲ್ ಗಿಫ್ಟ್ ನೀಡ್ಬೇಕು ಅನ್ನೋದನ್ನು ತಿಳಿಯೋಣ.

1. ಗ್ರೀಟಿಂಗ್ ಕಾರ್ಡ್
ಅಪ್ಪ- ಅಮ್ಮ ನಮಗಾಗಿ ದೊಡ್ಡ ದೊಡ್ಡ ತ್ಯಾಗಗಳನ್ನು ಮಾಡಿರ್ತಾರೆ. ಆದ್ರೆ ಅವರಿಗೆ ಕೃತಜ್ಞತೆ ಸಲ್ಲಿಸೋದಕ್ಕೆ ಇದುವರೆಗೂ ನಮ್ಮಿಂದ ಸಾಧ್ಯ ಆಗಿಲ್ಲ. ಹೆಚ್ಚಿನ ಸಮಯದಲ್ಲಿ ಯಾವುದಾದರೂ ವಿಚಾರಕ್ಕೆ ನಾವು ಅಪ್ಪ- ಅಮ್ಮನಿಗೆ ಥ್ಯಾಂಕ್ಸ್ ಹೇಳೋದಕ್ಕೂ ಸಾಧ್ಯವಾಗಿಲ್ಲ. ಹೀಗಾಗಿ ಈ ಪೋಷಕರ ದಿನದಂದು ಒಂದು ಗ್ರೀಟಿಂಗ್ ಕಾರ್ಡ್ ತೆಗೆದುಕೊಂಡು ಅದರ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿ. ನೀವು ಏನೆಲ್ಲಾ ಹೇಳಬೇಕು ಅಂದುಕೊಂಡಿದ್ದೀರೋ ಅದನ್ನು ಗ್ರೀಟಿಂಗ್ ಕಾರ್ಡ್ ಮೂಲಕ ಬರೆದು ಹೇಳಬಹುದು.
2. ಪರಿಮಳ ಭರಿತ ಮೇಣದ ಬತ್ತಿಗಳು
ಈ ಪೋಷಕರ ದಿನಕ್ಕೆ ನೀವು ನಿಮ್ಮ ಪೋಷಕರಿಗಾಗಿ ಪರಿಮಳ ಭರಿತ ಮೇಣದ ಬತ್ತಿಗಳನ್ನು ಉಡುಗೊರೆಯಾಗಿ ನೀಡಬಹುದು. ಈ ಮೇಣದ ಬತ್ತಿಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೇ, ಜೊತೆಗೆ ಮನೆ ತುಂಬಾ ಘಮ ಘಮ ಪರಿಮಳ ಬೀರುತ್ತದೆ. ಇದರಿಂದ ನಮ್ಮ ಆತಂಕ, ಒತ್ತಡ ಕಡಿಮೆ ಆಗುತ್ತದೆ. ಜೊತೆಗೆ ಚೆನ್ನಾಗಿ ನಿದ್ದೆ ಮಾಡೋದಕ್ಕೂ ಸಹಕರಿಸುತ್ತದೆ.
3. ಕೈ ಗಡಿಯಾರ
ಜೀವನದಲ್ಲಿ ಸಂಬಂಧ ಹಾಗೂ ಸಮಯಕ್ಕೆ ತುಂಬಾನೇ ಬೆಲೆ ನೀಡಲಾಗುತ್ತದೆ. ಹೀಗಾಗಿ ಈ ವರ್ಷದ ಪೋಷಕರ ದಿನದಂದು ನೀವು ಅಪ್ಪ ಹಾಗೂ ಅಪ್ಪನಿಗೆ ಯಾವುದಾದರೂ ಬ್ರ್ಯಾಂಡೆಡ್ ಕೈ ಗಡಿಯಾರವನ್ನು ಉಡುಗೊರೆಯಾಗಿ ನೀಡಿ. ಇದರಿಂದ ಅವರು ತುಂಬಾನೇ ಖುಷಿ ಪಡುತ್ತಾರೆ. ಅವರು ಈ ಕೈ ಗಡಿಯಾರವನ್ನು ಹಾಕಿ ಕೊಂಡಾಗಲೆಲ್ಲಾ ನಿಮ್ಮನ್ನು ನೆನೆದು ಖುಷಿ ಪಡುತ್ತಾರೆ.
4. ಗೃಹಪಯೋಗಿ ವಸ್ತುಗಳು
ಈ ವರ್ಷದ ಪೋಷಕರ ದಿನಕ್ಕೆ ನೀವು ಮನೆಗೆ ಬೇಕಾದ ಯಾವುದಾದರೂ ಗೃಹಪಯೋಗಿ ವಸ್ತುಗಳನ್ನು ಉಡುಗೊರೆಯನ್ನಾಗಿ ನೀಡಬಹುದು. ಪಾತ್ರೆಗಳು, ವಾಷಿಂಗ್ ಮೆಷಿನ್, ಫ್ರಿಡ್ಜ್, ಸೋಪಾ ಸೆಟ್. ಈ ರೀತಿ ವಸ್ತುಗಳನ್ನು ಕೊಟ್ಟರೆ ಅಪ್ಪ- ಅಮ್ಮ ತುಂಬಾನೇ ಖುಷಿ ಪಡುತ್ತಾರೆ.
5. ಸೀರೆ, ಪಂಚೆ-ಶರ್ಟ್
ಅಪ್ಪ- ಅಮ್ಮ ಯಾವತ್ತಿಗೂ ಮಕ್ಕಳಿಂದ ದೊಡ್ಡದು ಏನನ್ನೂ ಬಯಸೋದಿಲ್ಲ. ನೀವು ಈ ಪೋಷಕರ ದಿನಕ್ಕೆ ಅಮ್ಮನಿಗೆ ಸೀರೆ ಹಾಗೂ ಅಪ್ಪನಿಗಾಗಿ ಪಂಚೆ-ಶರ್ಟ್ ಕೊಟ್ಟರೂ ಕೂಡ ಅವರು ತುಂಬಾನೇ ಖುಷಿ ಪಡುತ್ತಾರೆ. ಸಣ್ಣ-ಸಣ್ಣ ವಿಚಾರಗಳಲ್ಲಿಯೂ ಅವರೂ ಖುಷಿಯನ್ನು ಕಂಡುಕೊಳ್ಳುತ್ತಾರೆ. ದೊಡ್ಡದೂ ಏನೂ ಅವರಿಗೆ ಬೇಕಾಗಿರೋದಿಲ್ಲ.
ಪೋಷಕರಿಗೆ ನಿಮ್ಮಿಂದ ಪ್ರತಿಫಲಾಪೇಕ್ಷೆಯನ್ನು ಇಟ್ಟುಕೊಳ್ಳೋದಿಲ್ಲ. ಆದರೆ ನೀವು ಸಣ್ಣ-ಸಣ್ಣ ಉಡುಗೊರೆ ಕೊಟ್ಟರೂ ಕೂಡ ಅಪ್ಪ- ಅಮ್ಮ ತುಂಬಾನೇ ಖುಷಿ ಪಡುತ್ತಾರೆ.



Click it and Unblock the Notifications
