Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಪೋಷಕರೇ, ಕೆಟ್ಟ ಸ್ನೇಹಿತರ ಸಂಘದಿಂದ ಮಕ್ಕಳನ್ನು ಹೊರ ತರೋದು ಹೇಗೆ?
ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸ್ನೇಹಿತ ತುಂಬಾನೇ ಮುಖ್ಯವಾಗುತ್ತಾನೆ. ನಮ್ಮ ಒಂಟಿತನದಲ್ಲಿ, ಸುಖ, ದುಃಖ ಎಲ್ಲದರಲ್ಲೂ ಆತನ ಜೊತೆಯಾಗುತ್ತಾನೆ. ಯಾರಾದರೂ ಒಬ್ಬರನ್ನು ನಾವು ಆತ್ಮೀಯ ಸ್ನೇಹಿತ ಎಂದು ಒಪ್ಪಿಕೊಂಡ ಮೇಲೆ ನಾವು ಹೆಚ್ಚಿನ ಸಮಯ ಅವರ ಜೊತೆಗೆ ಕಳೆಯುತ್ತೇವೆ. ಹೀಗಾಗಿ ಅವರಿಂದ ನಮಗೆ ಒಳ್ಳೆಯದು ಆಗಬಹುದು. ಅಥವಾ ಕೆಟ್ಟದ್ದು ಆಗಬಹುದು.
ಸಣ್ಣ ಮಕ್ಕಳು ನಿಷ್ಕಲ್ಮಶ ಮನಸ್ಸಿನಿಂದ ಒಬ್ಬರ ಸ್ನೇಹ ಮಾಡುತ್ತಾರೆ. ಕೆಲವೊಂದು ಸಲ ಅವರ ಸ್ನೇಹಿತ ಒಳ್ಳೆಯವನಲ್ಲ ಎಂದು ಪೋಷಕರಾಗಿ ಖಂಡಿತ ನಿಮಗೆ ಗೊತ್ತಾಗುತ್ತದೆ. ಇಂತಹ ಸಂದರ್ಭದಲ್ಲಿ ಏಕಾ ಏಕಿ ನಿಮ್ಮ ಮಗುವಿನ ಸ್ನೇಹವನ್ನು ಮುರಿಯೋದಕ್ಕೆ ಸಾಧ್ಯವಿಲ್ಲ. ಅದು ಅವರ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಹಾಗಾದ್ರೆ ನಿಮ್ಮ ಮಗುವಿನ ಸ್ನೇಹಿತ ಒಳ್ಳೆಯವಲ್ಲ ಅಂತ ಗೊತ್ತಾದಾಗ ನೀವು ಏನು ಮಾಡಬೇಕು. ಅಂತಹ ಸ್ನೇಹದಿಂದ ನಿಮ್ಮ ಮಗುವನ್ನು ಹೊರತರೋದು ಹೇಗೆ ಅನ್ನೋದನ್ನು ತಿಳಿಯೋಣ.

1. ಸ್ನೇಹವನ್ನು ಮುರಿಯಲು ಪ್ರಯತ್ನಿಸಬೇಡಿ
ಒಂದು ವೇಳೆ ನಿಮ್ಮ ಮಗುವಿನ ಸ್ನೇಹಿತ ನಿಮಗೆ ಇಷ್ಟ ಆಗದೇ ಹೋದರೆ ಏಕಾಏಕಿ ಅವರ ಸ್ನೇಹವನ್ನು ನೀವು ಮುರಿಯೋದು ಸರಿಯಲ್ಲ. ನಿಮ್ಮ ಮಗುವಿನ ಬಳಿ ಆತನ ಸ್ನೇಹಿತನನ್ನು ಭೇಟಿಯಾದಂತೆ ನಿರ್ಬಂಧಗಳನ್ನು ಹಾಕೋದು ಸರಿಯಲ್ಲ. ನಾವು ಯಾವ ವಿಚಾರಕ್ಕೆ ನಿರ್ಬಂಧಗಳನ್ನು ಹಾಕುತ್ತೇವೆಯೋ ಮಕ್ಕಳು ಅದರ ಕಡೆಗೆ ಹೆಚ್ಚು ಆಕರ್ಷಿತರಾಗೋದು ಸಹಜ. ಆಗ ನಿಮ್ಮ ಮಗ ನಿಮಗೆ ಗೊತ್ತಾಗದ ಹಾಗೆ ಸ್ನೇಹಿತನನ್ನು ಭೇಟಿಯಾಗೋದಕ್ಕೆ ಪ್ರಯತ್ನಿಸಬಹುದು.
ನೀವು ನಿರ್ಬಂಧ ಹೇರಿದಷ್ಟು ಮಗು ನಿಮ್ಮಲ್ಲಿ ಸುಳ್ಳು ಹೇಳಿ ಆತನ ಸ್ನೇಹಿತನನ್ನು ಭೇಟಿಯಾಗಲು ಯತ್ನಿಸಬಹುದು. ಇದರಿಂದ ನಿಮ್ಮ ಹಾಗೂ ಮಗನ ಮಧ್ಯೆ ಒಂದು ರೀತಿ ಅಸಮಾಧಾನ ಸೃಷ್ಟಿಯಾಗಬಹುದು. ಹೀಗಾಗಿ ಒಂದೇ ಸಾರಿ ಸ್ನೇಹ ಮುರಿಯೋ ಪ್ರಯತ್ನ ಮಾಡಬೇಡಿ.
2. ಕೆಲವೊಂದು ನಿಯಮಗಳನ್ನು ಸೃಷ್ಟಿಸಿ
ಮಕ್ಕಳು ಮನೆಯ ಒಳಗಿರೋವಾಗ ಮಾತ್ರ ನಿಮ್ಮ ನಿಯಂತ್ರಣದಲ್ಲಿ ಇರುತ್ತಾರೆ. ಮನೆಯಿಂದ ಹೊರಗಡೆ ಹೋದ ನಂತರ ಎಲ್ಲಿ ಹೋಗುತ್ತಾರೆ? ಯಾರ ಸಹವಾಸ ಮಾಡುತ್ತಾರೆ ಅನ್ನೋದು ಖಂಡಿತ ಗೊತ್ತಾಗೋದಿಲ್ಲ. ಹೀಗಾಗಿ ಅವರಿಗಾಗಿ ಕೆಲವೊಂದು ನಿಯಮಗಳನ್ನು ಸೃಷ್ಟಿಸಿ. ಆ ನಿಯಮಗಳನ್ನು ತಪ್ಪಿ ನಡೆದರೆ ಶಿಕ್ಷಿಸೋದಾಗಿ ಹೇಳಿ.
ಹೀಗಾಗಿ ಅವರಿಗೆ ಒಂದು ಭಯ ಇರುತ್ತೆ. ಸ್ನೇಹಿತರ ಜೊತೆ ಸೇರಿ ಅವರು ತಪ್ಪು ಕೆಲಸ ಮಾಡುವ ಸಾಧ್ಯತೆಗಳಿದೆ. ಏನಾದರೂ ಕೆಲಸ ಮಾಡೋದಕ್ಕೆ ಹೋದಾಗ ನನ್ನ ಮನೆಯಲ್ಲಿ ಇದಕ್ಕೆ ಒಪ್ಪಿಗೆ ಇಲ್ಲ ಅನ್ನೋದನ್ನು ಅವರು ಅರಿತುಕೊಳ್ಳುತ್ತಾರೆ.
3. ಮಗುವಿಗೆ ಪ್ರಶ್ನೆಗಳನ್ನು ಕೇಳಿ
ಮನೆಯಲ್ಲಿ ಹೆಚ್ಚಿನ ಸಂದರ್ಭದಲ್ಲಿ ನಿಮ್ಮ ಮಗುವಿನ ಜೊತೆಗೆ ಕಾಲ ಕಳೆಯುತ್ತೀರಿ. ಈ ವೇಳೆ ನಿಮ್ಮ ಮಗುವಿನಲ್ಲಿ ಅವರ ಸ್ನೇಹತ ಕುರಿತಾಗಿ ಕೆಲವೊಂದು ಪ್ರಶ್ನೆಗಳನ್ನು ಕೇಳಿ. ನಿಮಗಿಬ್ಬರಿಗೆ ಏನು ಇಷ್ಟ. ಫ್ರೀ ಇರೋವಾಗ ನೀವಿಬ್ಬರು ಏನು ಮಾಡುತ್ತೀರಿ ಇತ್ಯಾದಿ ಪ್ರಶ್ನೆಗಳನ್ನು ಕೇಳಿ.
ಇದರಿಂದ ನಿಮಗೆ ಆತನ ಸ್ನೇಹಿತನ ಬಗ್ಗೆ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ. ಅವರಿಬ್ಬರ ಸ್ನೇಹ ಎಷ್ಟು ಗಟ್ಟಿಯಾಗಿದೆ. ಇದರಿಂದ ನಿಮ್ಮ ಮಗುವಿಗೆ ಏನಾದ್ರು ಸಮಸ್ಯೆ ಆಗ್ತಿದ್ಯಾ? ಎಂದು. ನಮಗೆ ಒಬ್ಬರ ಬಗ್ಗೆ ತಿಳಿಯದ ಹೊರತು ಅವರು ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಇಟ್ಟುಕೊಳ್ಳಬಾರದು.
4. ಸಮಯ ಬಂದಾಗ ಮಾತನಾಡಿ
ನಿಮ್ಮ ಮಗನ ಸ್ನೇಹಿತನಿಂದಾಗಿ ಆತನ ಗುಣ-ನಡತೆಗಳಲ್ಲಿ ಕೆಲವು ಬದಲಾವಣೆಗಳನ್ನು ನೀವು ಗಮನಿಸಿದ್ರೆ ಖಂಡಿತ ಸುಮ್ಮನಿರಬೇಡಿ. ನೇರವಾಗಿ ಆತನ ಸ್ನೇಹಿತನ ಬಳಿ ಮಾತನಾಡಿ. ನಿಮ್ಮ ಮಗನಿಂದ ಆತನನ್ನು ದೂರ ಇರಲು ತಿಳಿಸಿ. ಅದಕ್ಕೂ ಆತ ಕೇರ್ ಮಾಡದಿದ್ದರೆ. ಕೊನೆಗೆ ಅವನ ಪೋಷಕರ ಬಳಿ ಮಾತನಾಡಿ ನಿಮ್ಮ ಮಗ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ತಿಳಿಸಿ.
5. ಉತ್ತಮ ಸ್ನೇಹಿತರನ್ನು ಆಯ್ಕೆ ಮಾಡಲು ಸಹಾಯ ಮಾಡಿ
ಒರ್ವ ಮನುಷ್ಯ ಎಷ್ಟೇ ಒಳ್ಳೆಯವನಾಗಿದ್ದರೂ ಕೂಡ ಸಹವಾಸ ದೋಷದಿಂದ ಆತ ಹಾಳಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಪೋಷಕರು ಆತನ ಸ್ನೇಹಿತ ಬಳಗ ಉತ್ತಮವಾಗಿದ್ಯಾ ಎಂದು ಗಮನ ಹರಿಸಬೇಕು. ಅದಕ್ಕೂ ಮೊದಲು ಯಾವುದು ತಪ್ಪು? ಯಾವುದು ಸರಿ ಅನ್ನೋದನ್ನು ತಿಳಿಸಿ. ಜೊತೆಗೆ ಉತ್ತಮ ಸ್ನೇಹಿತರನ್ನು ಆಯ್ದುಕೊಳ್ಳೋದು ಹೇಗೆ ಅಂತ ಸಲಹೆ ನೀಡಿ.
ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ವಹಿಸೋದು ಪೋಷಕರ ಕರ್ತವ್ಯ. ಚಿಕ್ಕ ವಯಸ್ಸಿನಲ್ಲಿಯೇ ಅವರು ಹಾದಿ ತಪ್ಪದಂತೆ ಜಾಗೃತೆ ವಹಿಸಿ.



Click it and Unblock the Notifications












