Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೋಷಕರಿಗೆ ಟಿಪ್ಸ್: ಮಗು ತುಂಬಾ ಕಡಿಮೆ ಮೈ ತೂಕ ಹೊಂದಿದ್ದರೆ ಏನು ಮಾಡಬೇಕು?
ಮಗು ಜನನ ಪೂರ್ವದಲ್ಲಿ ತಾಯಿಯು ಹೊಟ್ಟೆಯಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ ಅಥವಾ ತಾಯಿಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಮಗುವಿನ ತೂಕ ಕಡಿಮೆ ಇರಬಹುದು ಅಥವಾ 9 ತಿಂಗಳಿಗಿಂತ ಮೊದಲು ಅಂದರೆ ಏಳು ಅಥವಾ ಎಂಟನೇ ತಿಂಗಳಿನಲ್ಲಿ ಹುಟ್ಟಿದ ಮಗುವು ಕೂಡ ಕಡಿಮೆ ತೂಕವನ್ನು ಹೊಂದಿರುವ ಸಾಧ್ಯತೆ ಇರುತ್ತದೆ.
ಅಂಡರ್ವೇಟ್ ಅಥವಾ ಕಡಿಮೆ ತೂಕ ಎನ್ನುವುದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮಗು ಹುಟ್ಟಿದ ತಕ್ಷಣ ಅಂಡರ್ವೇಟ್ ಇದ್ದರೆ ತಾಯಿಯ ಎದೆ ಹಾಲಿನ ಮೂಲಕವೇ ಮಗು ಸಾಮಾನ್ಯ ಸ್ಥಿತಿಗೆ ಬರುವಂತೆ ಅಂದರೆ ಸಾಮಾನ್ಯ ತೂಕಕ್ಕೆ ಬರುವಂತೆ ಮಾಡಬೇಕು. ಇದಕ್ಕೆ ವೈದ್ಯರು ಸೂಕ್ತ ಸಲಹೆಗಳನ್ನು ನೀಡುತ್ತಾರೆ ಅದನ್ನು ತಾಯಂದಿರು ಪಾಲಿಸಬೇಕು. ಇನ್ನು ಪ್ರಿ ಮೆಚ್ಯೂರ್ಡ್ ಜನನದಲ್ಲಿ ಮಾತ್ರವಲ್ಲದೆ ಸಾಮಾನ್ಯ ರೀತಿಯಲ್ಲಿ ಜನಿಸಿದ ಮಗುವು ಕೂಡ ತೂಕ ಕಡಿಮೆ ಇರುವ ಸಾಧ್ಯತೆ ಇರುತ್ತದೆ. ಇದಕ್ಕೆ ಕಾರಣಗಳನ್ನು ತಿಳಿದುಕೊಂಡು ತಕ್ಷಣವೇ ಯಾವ ರೀತಿಯಲ್ಲಿ ಮಗುವಿನ ತೂಕ ಹೆಚ್ಚಳ ಮಾಡಿಕೊಳ್ಳಬಹುದು ಎಂಬುದನ್ನು ತಾಯಂದಿರು ಗಮನಿಸಬೇಕು.

ಮಗು ಕಡಿಮೆ ತೂಕ ಇರಲು ಕಾರಣಗಳು!
ಪ್ರಿ ಮೆಚ್ಯೂರ್ಡ್ ಬರ್ತ್- ಎಷ್ಟೋ ಬಾರಿ ಮಕ್ಕಳು 9 ತಿಂಗಳಿಗಿಂತ ಮೊದಲೇ ಜನಿಸುವ ಸಾಧ್ಯತೆ ಇರುತ್ತದೆ ನಮ್ಮ ದೇಶದಲ್ಲಿ 20% ನಷ್ಟು ನವಜಾತ ಶಿಶುಗಳು ಕಡಿಮೆ ತೂಕವನ್ನು ಹೊಂದಿರುತ್ತವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಮಗು ಕಡಿಮೆ ತೂಕದಲ್ಲಿ ಜನಿಸುವುದಕ್ಕೆ ಬೇರೆ ಬೇರೆ ಕಾರಣಗಳು ಇರುತ್ತವೆ ಆದರೆ ಕಡಿಮೆ ತೂಕ ಇದ್ದಾಗ ಆ ಮಗುವಿನ ಸೂಕ್ತ ಪೋಷಣೆ ಅತ್ಯಗತ್ಯ.
ಅಪೌಷ್ಟಿಕತೆ - ವೈದ್ಯರು ಹೇಳುವ ಪ್ರಕಾರ ಕಳಪೆ ಆಹಾರದ ಗುಣಮಟ್ಟ ಕೂಡ ಮಕ್ಕಳ ತೂಕ ಕಡಿಮೆ ಇರುವುದಕ್ಕೆ ಕಾರಣವಾಗುತ್ತದೆ. ಮಕ್ಕಳಿಗೆ ಸಮರ್ಪಕವಾದ ಕ್ಯಾಲೋರಿ, ಜೀವಸತ್ವ, ಪೌಷ್ಟಿಕಾಂಶ ಇರುವ ಆಹಾರ ಸಿಗಬೇಕು ಒಂದು ವೇಳೆ ಇವೆಲ್ಲ ಸಿಗದೇ ಇದ್ದಾಗ ಅಪೌಷ್ಟಿಕತೆಯಿಂದ ಬಳಲುವ ಸಾಧ್ಯತೆ ಇರುತ್ತದೆ.
ಅನಾರೋಗ್ಯ- ಮಕ್ಕಳಲ್ಲಿ ಧೀರ್ಘಕಾಲದ ಅನಾರೋಗ್ಯ ಇದ್ದರೆ ಅಂದರೆ ಕೆಮ್ಮು, ಉಬ್ಬಸ, ಥೈರಾಯಿಡ್, ಮೂತ್ರ ಜನನಾಂಗದ ಸಮಸ್ಯೆ, ಹಾರ್ಮೋನ್ ಅಸ್ತವ್ಯಸ್ತತೆ ಈ ರೀತಿಯಾದಂತಹ ಸಮಸ್ಯೆ ಇದ್ದಾಗ ತೂಕ ಹೆಚ್ಚಳ ಆಗಲು ಸಾಧ್ಯವಿಲ್ಲ.
ಎಷ್ಟೋ ಪಾಲಕರಿಗೆ ತಮ್ಮ ಮಗು ಬೇರೆ ಮಕ್ಕಳಂತೆ ಸರಿಯಾದ ತೂಕ ಹೊಂದಿಲ್ಲ ದಷ್ಟಪುಷ್ಟವಾಗಿ ಇಲ್ಲ ತಮ್ಮ ವಯಸ್ಸಿಗೆ ತಕ್ಕಂತೆ ತೂಕ ಹೊಂದಿಲ್ಲ ಎನ್ನುವ ಬೇಸರ ಇರುತ್ತದೆ. ಆದರೆ ಕೆಲವು ಮಕ್ಕಳು ಕಡಿಮೆ ತೂಕ ಹೊಂದಿದ್ದರೂ ಕೂಡ ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ ಹಾಗಂದ ಮಾತ್ರಕ್ಕೆ ವಯಸ್ಸಿಗೆ ತಕ್ಕನಾದ ತೂಕ ಇರದೆ ಇದ್ದರೂ ಕೂಡ ಸಮಸ್ಯೆ ಎದುರಿಸಬೇಕಾಗಬಹುದು ಹಾಗಾಗಿ ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಸರಿಯಾದ ಕ್ರಮವನ್ನು ತೆಗೆದುಕೊಳ್ಳಬೇಕು. ಮಕ್ಕಳ ತೂಕ ಹೆಚ್ಚಿಸಲು ಏನು ಮಾಡಬೇಕು ಎಂಬುದನ್ನು ನೋಡುವುದಾದರೆ..
ಎದೆ ಹಾಲು ಉಣಿಸುವುದು!
ಹುಟ್ಟಿದ ತಕ್ಷಣ ಮಗು ಅಂಡರ್ ವೇಟ್ ಎಂದಾದರೆ ಆ ಮಗುವಿಗೆ ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಅತ್ಯಂತ ಮುಖ್ಯವಾಗಿ ಸಿಗಬೇಕಾಗಿರುವುದೇ ತಾಯಿಯ ಎದೆ ಹಾಲು. ಪೂರ್ಣ ಪ್ರಮಾಣದಲ್ಲಿ ಎದೆ ಹಾಲು ಕುಡಿಸಿದರೆ ಮಗು ಬಹಳ ಬೇಗ ಚೇತರಿಸಿಕೊಳ್ಳುತ್ತದೆ ಅದರ ತೂಕವು ಕೂಡ ಹೆಚ್ಚಾಗುತ್ತದೆ ಹಾಗಾಗಿ ಮಗು ಸುಮಾರು ಎರಡರಿಂದ ಎರಡುವರೆ ವರ್ಷದವರೆಗೂ ಕೂಡ ಎದೆ ಹಾಲು ಉಳಿಸಿದರೆ ಮಗು ಹೆಚ್ಚು ಆರೋಗ್ಯಕರವಾಗಿರುತ್ತದೆ ಎಂದು ತಜ್ಞರು ಕೂಡ ಸಲಹೆ ಮಾಡುತ್ತಾರೆ. ಇನ್ನು ಅಷ್ಟು ಪ್ರಮಾಣದಲ್ಲಿ ಎದೆ ಹಾಲು ಕುಡಿಸಲು ಸಾಧ್ಯವಾಗದೇ ಇದ್ದಾಗ ವೈದ್ಯರ ಸಲಹೆ ಪಡೆದು ಮಗುವಿನ ತೂಕ ಹೆಚ್ಚಳಕ್ಕೆ ಅಗತ್ಯವಿರುವ ಲ್ಯಾಕ್ಟೋಸ್ ನೀಡಬೇಕು.
ಪೌಷ್ಟಿಕ ಆಹಾರ:
ಮಗು ಎದೆಹಾಲು ಕುಡಿಯುವುದನ್ನು ಬಿಟ್ಟ ನಂತರವು ಅಂದರೆ 2 ರಿಂದ 3 ವರ್ಷಗಳ ನಂತರವೂ ಕೂಡ ಕಡಿಮೆ ತೂಕ ಹೊಂದಿದ್ದರೆ ಆಗ ಆ ಮಗುವಿನಲ್ಲಿ ಪೌಷ್ಟಿಕಾಂಶದ ಕೊರತೆ ಇದೆ ಎಂದು ಅರ್ಥ. ಸರಿಯಾದ ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಕೊಡುವುದು ಕ್ಯಾಲರಿ ಇರುವಂತಹ ಹಾಗೂ ಕ್ಯಾಲ್ಸಿಯಂ ಇರುವಂತಹ ಆಹಾರ ತಿನಿಸುವುದು ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ತಾಯಂದಿರು ಬಹಳ ಸುಲಭವಾಗಿ ಎನ್ನುವ ಕಾರಣಕ್ಕೆ ಹಾಗೂ ಮಗು ಇಷ್ಟಪಟ್ಟು ತಿನ್ನುತ್ತದೆ ಎನ್ನುವುದಕ್ಕೆ ಪ್ಯಾಕೆಟ್ ಆಹಾರವನ್ನು ಕೊಡುತ್ತಾರೆ ಉದಾಹರಣೆಗೆ ಪಾಕೆಟ್ ನಲ್ಲಿ ಬರುವಂತಹ ಧಾನ್ಯಗಳ ಪೌಡರ್ ಅನ್ನು ತಿನ್ನಿಸುತ್ತಾರೆ. ಅದರ ಬದಲು ತಾಯಂದಿರು ಮನೆಯಲ್ಲಿಯೇ ಧಾನ್ಯಗಳನ್ನು ತೊಳೆದು ಒಣಗಿಸಿ ಹುರಿದು ಪುಡಿ ಮಾಡಿ ಮಕ್ಕಳಿಗೆ ತಿನ್ನಿಸಿದರೆ ಅದರಷ್ಟು ಉತ್ತಮವಾದ ಪೌಷ್ಟಿಕ ಆಹಾರ ಬೇರೊಂದಿಲ್ಲ.
ಅಷ್ಟೇ ಅಲ್ಲದೆ ಮಕ್ಕಳಿಗೆ ಆಹಾರ ನೀಡುವಾಗ ಪ್ರತಿದಿನ ಒಂದೊಂದು ರೀತಿಯ ಆಹಾರವನ್ನು ಕೊಡಬೇಕು ಉದಾಹರಣೆಗೆ ತರಕಾರಿ ಬೇಯಿಸಿ ಕೊಡುವುದು, ಅನ್ನದ ಜೊತೆಗೆ ಬೇಳೆಕಾಳುಗಳನ್ನು ಬೇಯಿಸಿ ಕೊಡುವುದು, ಉತ್ತಮವಾದ ಹಣ್ಣುಗಳ ರಸ ಕುಡಿಸುವುದು ಈ ರೀತಿಯಾಗಿ ಮಾಡಿದರೆ ಮಗುವಿಗೆ ಅಗತ್ಯವಿರುವ ಎಲ್ಲಾ ಪೌಷ್ಟಿಕಾಂಶಗಳು ಕೂಡ ಸಿಗುತ್ತವೆ ಇದರಿಂದಾಗಿ ಬಹಳ ಬೇಗ ಮಗುವಿನ ತೂಕ ಹೆಚ್ಚಾಗುತ್ತದೆ.
ಆರೋಗ್ಯ ಉತ್ತಮಗೊಳಿಸಿ!
ಕೆಲವು ಮಕ್ಕಳು ಕಡಿಮೆ ತೂಕ ಹೊಂದಿರುವುದಕ್ಕೆ ಅವರ ಅನಾರೋಗ್ಯವು ಕೂಡ ಕಾರಣವಾಗಿರುತ್ತದೆ ಇತ್ತೀಚಿನ ದಿನಗಳಲ್ಲಿ ಪೊಲ್ಲ್ಯೂಷನ್ ಕಾರಣದಿಂದ ಹಾಗೂ ನಮ್ಮ ಕೆಟ್ಟ ಜೀವನ ಕ್ರಮದಿಂದ ಮಕ್ಕಳ ಮೇಲು ಕೂಡ ಪರಿಣಾಮ ಬೀರುತ್ತಿದ್ದು ಮಕ್ಕಳಲ್ಲಿ ಆಗಾಗ ಶೀತ, ಕೆಮ್ಮು, ನೆಗಡಿ, ಜ್ವರ ಮೊದಲಾದ ಕಾಯಿಲೆಗಳು ಉಂಟಾಗುತ್ತವೆ ಇದರಿಂದಾಗಿ ಎಷ್ಟೇ ಆಹಾರ ಸೇವನೆ ಮಾಡಿದರು ಕೂಡ ಮಗು ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಇದರಿಂದ ತೂಕ ಕೂಡ ಹೆಚ್ಚಳವಾಗುವುದಿಲ್ಲ. ಹಾಗಾಗಿ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದಬೇಕು ಅಂದರೆ ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಸರಿಯಾದ ಆಹಾರ ನೀಡುವುದು ಬಹಳ ಮುಖ್ಯ ಅದರ ಜೊತೆಗೆ ಶಿಸ್ತಿನ ಜೀವನ ಕ್ರಮವನ್ನು ಕೂಡ ಕಲಿಸಬೇಕು. ಮಕ್ಕಳಿಗೆ ಪೌಷ್ಟಿಕಯುಕ್ತವಾದ ಆಹಾರ ಸೇವನೆ ಮಾಡಿಸುವುದರ ಜೊತೆಗೆ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವಂತೆ ಸಲಹೆ ನೀಡಬೇಕು ಅಥವಾ ನೀರು ಕುಡಿಸಬೇಕು.
ಹೆಣ್ಣು ಮಕ್ಕಳ ತೂಕ ಹೆಚ್ಚಳಕ್ಕೆ ತಲತಲಾಂತರ ವರ್ಷಗಳಿಂದ ನಡೆದುಕೊಂಡು ಬಂದ ಕೆಲವು ಮನೆಮದ್ದುಗಳು ಕೂಡ ಸಹಾಯಕವಾಗಬಹುದು ಮನೆಯಲ್ಲಿ ಹಿರಿಯರು ಇದ್ದರೆ ಈ ಮನೆ ಮದ್ದುಗಳ ಬಗ್ಗೆ ಕೇಳಿ ತಿಳಿದುಕೊಂಡು ಮಕ್ಕಳಿಗೆ ಕೊಟ್ಟರೆ ಅವರ ಬೆಳವಣಿಗೆಗೆ ಸಹಾಯಕವಾಗುತ್ತದೆ. ಇವೆಲ್ಲವುದರ ಹೊರತಾಗಿ ವೈದ್ಯರ ಸಲಹೆ ಪಡೆದು ಮಕ್ಕಳ ತೂಕ ಹೆಚ್ಚಳಕ್ಕೆ ಅಗತ್ಯವಾದ ಕ್ರಮವನ್ನು ಪಾಲಕರು ಕೈಗೊಳ್ಳಬಹುದು. ಆರಂಭದಿಂದಲೇ ಮಕ್ಕಳು ಆಯಾ ವಯಸ್ಸಿಗೆ ತಕ್ಕ ಹಾಗೆ ತೂಕ ಹೊಂದುವುದಕ್ಕೆ ಪೌಷ್ಟಿಕಯುಕ್ತ, ಆಹಾರ ವೈದ್ಯರ ಸಲಹೆ ಬಹಳ ಮುಖ್ಯವಾಗಿರುತ್ತವೆ.



Click it and Unblock the Notifications