Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಪ್ಪಂದಿರೇ, ಈ ವಿಚಾರಗಳನ್ನು ಮಗಳ ಮೇಲೆ ಹೇರಿದರೆ ಖಂಡಿತ ಆಕೆ ನಿಮ್ಮನ್ನು ದ್ವೇಷಿಸುತ್ತಾಳೆ!
ಅಪ್ಪ ಹಾಗೂ ಮಗಳ ಮಧ್ಯೆ ಒಂದು ಬಿಡಸಲಾರದ ಬಾಂಧವ್ಯ ಇರುತ್ತದೆ. ಮಗಳಿಗೆ ಅಪ್ಪನೇ ಮೊದಲ ಹೀರೋ. ಆಕೆಯ ಬಾಳಿನಲ್ಲಿ ಬರೋ ಮೊದಲ ಗಂಡೆಂದರೆ ಅದು ಅಪ್ಪ. ಮಗಳಿಗೆ ಅಪ್ಪ ನೀಡೋ ಪ್ರೀತಿಗೆ ಬೆಲೆ ಕಟ್ಟೋದಕ್ಕೆ ಸಾಧ್ಯವಿಲ್ಲ. ಹೆಚ್ಚಿನ ಹೆಣ್ಣು ಮಕ್ಕಳು ಅಮ್ಮನಿಗಿಂತಲೂ ಅಪ್ಪನ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿರುತ್ತಾರೆ.
ಹೆಣ್ಣು ಮಕ್ಕಳು ತುಂಬಾನೇ ಸೂಕ್ಷ್ಮ. ತಾನು ಬೆಟ್ಟದಷ್ಟು ಪ್ರೀತಿಸುವ ಅಪ್ಪ ಸ್ವಲ್ಪ ಏರು ಧ್ವನಿಯಲ್ಲಿ ಮಾತನಾಡಿದರೂ ನೊಂದುಕೊಳ್ಳುತ್ತಾರೆ. ಹೀಗಾಗಿ ಅಪ್ಪಂದಿರು ಮಗಳ ಬಳಿ ಕೆಲವೊಂದು ವಿಚಾರವನ್ನು ಹೇಳುವಾಗ ನೂರು ಬಾರಿ ಆಲೋಚಿಸಬೇಕು. ಅಷ್ಟಕ್ಕು ಅಪ್ಪಂದಿರು ಯಾವ ವಿಚಾರಗಳ ಬಗ್ಗೆ ಮಗಳ ಮೇಲೆ ಕಂಮೆಂಟ್ ಮಾಡಬಾರದು ಅನ್ನೋದನ್ನು ತಿಳಿದುಕೊಳ್ಳೋಣ.

1. ಮಗನೊಂದಿಗೆ ಮಗಳನ್ನು ಹೋಲಿಕೆ ಮಾಡಬೇಡಿ
ಕೆಲವು ಕುಟುಂಬಗಳು ಈಗಲೂ ಕೂಡ ಗಂಡು ಮಗನಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಾರೆ. ಅಪ್ಪಂದಿರು ಗಂಡು ಮಕ್ಕಳನ್ನೇ ತಲೆ ಮೇಲೆ ಹೊತ್ತು ಮೆರೆಸುತ್ತಾರೆ. ಮಕ್ಕಳ ಮಧ್ಯೆ ಜಗಳ ನಡೆದಾಗ ಗಂಡು ಮಗನಿಗೆ ಸಪೋರ್ಟ್ ಮಾಡುತ್ತಾರೆ. ಇದು ನಿಮ್ಮ ಹೆಣ್ಣು ಮಗುವಿನಲ್ಲಿರುವ ಆತ್ಮ ವಿಶ್ವಾಸವನ್ನು ಕುಗ್ಗಿಸುವಂತೆ ಮಾಡುತ್ತದೆ. ಹೀಗಾಗಿ ಅಪ್ಪಂದಿರು ಇಬ್ಬರನ್ನೂ ಸಮಾನಾಗಿ ಸ್ವೀಕರಿಸಬೇಕು. ಹಾಗೂ ಯಾವುದೇ ಕಾರಣಕ್ಕೂ ನಿಮ್ಮ ಮಕ್ಕಳನ್ನು ಒಬ್ಬರೊಂದಿಗೆ ಮತ್ತೊಬ್ಬರನ್ನು ಹೋಲಿಕೆ ಮಾಡಬೇಡಿ.
2. ದಾಂಪತ್ಯ ಜೀವನದಲ್ಲಿ ಪತಿಯ ತ್ಯಾಗ ತುಂಬಾನೇ ಮುಖ್ಯವಾಗಿರುತ್ತದೆ
ನಿಮ್ಮ ಹೆಂಡತಿ ತಾನು ಹುಟ್ಟಿ ಬೆಳೆದ ಮನೆಯನ್ನು, ಕುಟುಂಬವನ್ನು ಬಿಟ್ಟು ನಿಮ್ಮನ್ನು ನಂಬಿ ಬಂದಿರುತ್ತಾಳೆ. ಆಕೆಯನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಯ ಮೇಲೆ ನೀವು ಹಲ್ಲೆ ಮಾಡಬಾರದು, ಆಕೆಯನ್ನು ನಿಂದಿಸೋದನ್ನು ಮಾಡಬಾರದು. ನೀವು ಈ ರೀತಿ ಮಾಡುತ್ತಿದ್ದರೆ ನಿಮ್ಮ ಮಗಳಿಗೆ ಒಂದು ರೀತಿ ಭಯ ಶುರುವಾಗುತ್ತೆ.
ಅಪ್ಪನ ಹತ್ತಿರ ಬರೋದಕ್ಕೂ ಆಕೆ ಭಯ ಪಡುತ್ತಾಳೆ. ನಾಳೆ ನಾನು ಮದುವೆಯಾದರೆ ನನ್ನ ಗಂಡನೂ ಈ ರೀತಿ ಮಾಡಬಹುದು ಎನ್ನುವ ಆತಂಕ ಆಕೆಯನ್ನು ಕಾಡೋದಕ್ಕೆ ಶುರುವಾಗುತ್ತೆ. ದಾಂಪತ್ಯದಲ್ಲಿ ಮನಸ್ಥಾಪ ಇದ್ದಿದ್ದೇ ಅದನ್ನು ನೀವು ಸರಿಪಡಿಸಿಕೊಂಡು ಹೋಗಬೇಕು. ನಿಮ್ಮ ಹೆಂಡತಿ ಹಾಗೂ ಮಕ್ಕಳ ಮೇಲೆ ಪ್ರೀತಿ, ಕಾಳಜಿ ತೋರಿಸೋದನ್ನು ಮರೆಯಬೇಡಿ. ನಿಮ್ಮವರಿಗಾಗಿ ನೀವು ತ್ಯಾಗ ಮಾಡಿದರೂ ತಪ್ಪಿಲ್ಲ.
3. ಮನೆ ಕೆಲಸಗಳನ್ನು ಮಾಡುವಂತೆ ಒತ್ತಾಯ ಹೇರಬೇಡಿ
ನಿಮ್ಮ ಮಗಳನ್ನು ಪ್ರೀತಿಯಿಂದ ಕಾಣಬೇಕು. ತಪ್ಪಾದಾಗ ತಿದ್ದಿ ಬುದ್ಧಿ ಹೇಳಿ ಪರವಾಗಿಲ್ಲ. ಆದರೆ ಮಗಳ ಮೇಲೆ ತಾತ್ಸರ ಭಾವನೆ ಬೇಡ. ನಿಮ್ಮ ಪುಟ್ಟ ಮಗಳಿಗೆ ಮನೆ ಕೆಲಸದ ಮೇಲೆ ಆಸಕ್ತಿ ಇಲ್ಲದೆ ಇರಬಹುದು. ಹೀಗಾಗಿ ಆಕೆಯ ಮೇಲೆ ಕೆಲಸ ಮಾಡುವಂತೆ ಒತ್ತಡ ಹೇರುವುದು ಸರಿಯಲ್ಲ. ನೀನು ಹೆಣ್ಣು ಹೀಗಾಗಿ ನೀನು ಕೆಲಸ ಕಲಿತಿರಲೇಬೇಕು ಎಂದು ಲಿಂಗ ಭೇದ ಮಾಡಬೇಡಿ. ಇದು ನಿಮ್ಮ ಪುಟ್ಟ ಮಗಳ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಬಹುದು.
4. ಮಗಳ ಸ್ವತಂತ್ರವನ್ನು ಕಿತ್ತುಕೊಳ್ಳಬೇಡಿ
ಮಗಳ ಮೇಲೆ ನಿಮಗೆ ಅತಿಯಾದ ಪ್ರೀತಿಯಿದೆ. ಹೌದು, ಹಾಗಂತ ಮಗಳ ಸಂಪೂರ್ಣ ಸ್ವತಂತ್ರವನ್ನು ಕಿತ್ತುಕೊಳ್ಳೋದು ಎಷ್ಟು ಸರಿ. ಮಗಳಿಗೂ ಅವಳದ್ದೇ ಆದ ಆಸೆ, ಆಕಾಂಕ್ಷೆಗಳು ಇರುತ್ತದೆ. ತಂದೆಯಾಗಿ ನೀವು ಆಕೆಗೆ ರಕ್ಷಣೆ ನೀಡುವುದು ನಿಮ್ಮ ಕರ್ತವ್ಯ. ಆದರೆ ಪ್ರತಿ ಸಲ ಆಕೆಯನ್ನು ಕಟ್ಟಿ ಹಾಕೋದು ಎಷ್ಟು ಸರಿ? ಈ ರೀತಿ ಮಾಡಿದರೆ ಆಕೆಗೆ ಬಂಧನದಲ್ಲಿರುವ ಅನುಭವವಾಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಆಕೆಯ ಸ್ವತಂತ್ರ ಕಿತ್ತುಕೊಳ್ಳಬೇಡಿ.
5. ಆಕೆಗಾಗಿ ಸಮಯ ಕೊಡದೇ ಇರುವುದು
ಪೋಷಕರು ಎಷ್ಟೇ ಬ್ಯುಸಿಯಾಗಿ ಇದ್ದರೂ ಕೂಡ ಮಕ್ಕಳಿಗಾಗಿ ಸಮಯ ಕೊಡಲೇಬೇಕು. ಸಾಮಾನ್ಯವಾಗಿ ಅಪ್ಪ ಆಫಿಸ್ ಕೆಲಸದಲ್ಲಿ ಬ್ಯುಸಿ ಇರೋದ್ರಿಂದ ಮಕ್ಕಳಿಗೆ ಅಮ್ಮನ ಜೊತೆಗೆ ಬಾಂಧವ್ಯ ಹೆಚ್ಚಾಗಿರುತ್ತದೆ. ತಮ್ಮ ಎಲ್ಲಾ ರಹಸ್ಯಗಳನ್ನು ಅಮ್ಮನ ಜೊತೆಗೆ ಹಂಚಿಕೊಳ್ಳುತ್ತಾರೆ. ಹೀಗಾಗಿ ಅಪ್ಪ ಕೂಡ ಮಕ್ಕಳಿಗಾಗಿ ಸಮಯ ಮೀಸಲಿಡಬೇಕು. ಅವರ ಜೊತೆಗೆ ಸಮಯ ಕಳೆಯಬೇಕು. ಆಗ ಅಪ್ಪನ ಜೊತೆಗೆ ಮಕ್ಕಳು ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ.
ಕೆಲವು ಮನೆಗಳಲ್ಲಿ ತಂದೆಯಂದಿರಿಗೆ ಮಗಳು ಎಂದರೆ ಒಂದು ರೀತಿಯ ತಾತ್ಸಾರ ಮನೋಭಾವವಿರುತ್ತದೆ. ನಿಮ್ಮ ಮಗಳನ್ನು ಮಗನಂತೆ ಸಮಾನವಾಗಿ ಕಾಣಬೇಕು. ನೀವು ಎಷ್ಟು ಪ್ರೀತಿಯನ್ನು ನಿಮ್ಮ ಮಗಳಿಗೆ ಕೊಡುತ್ತಿರೋ ಅದಕ್ಕಿಂತ ನೂರು ಪಟ್ಟು ಪ್ರೀತಿಯನ್ನು ನಿಮ್ಮ ಮಗಳು ನಿಮಗೆ ನೀಡುತ್ತಾಳೆ.



Click it and Unblock the Notifications
