Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮಕ್ಕಳನ್ನು ಬೆಳೆಸುವಾಗ ಪೋಷಕರು ಮಾಡುವ ಈ ತಪ್ಪುಗಳು ಅವರ ಆತ್ಮವಿಶ್ವಾಸ ಕುಂದಿಸಬಹುದು!
ಮಕ್ಕಳ ಪಾಲನೆ ಎಂದರೆ ಕೇವಲ ಮಗುವಿಗೆ ಜನ್ಮ ನೀಡಿ, ಅವರನ್ನು ಬೆಳೆಸುವುದು ಎಂದರ್ಥವಲ್ಲ. ಅವರ ಸಂಪೂರ್ಣ ವ್ಯಕ್ತಿತ್ವ ರೂಪಿಸುವುದು ಕೂಡ ಸೇರಿದೆ. ಬಾಲ್ಯದಲ್ಲಿ ಮಕ್ಕಳಿಗೆ ಏನೇ ಕಲಿಸಿದರೂ ಆ ವಿಷಯಗಳು ಅವರ ಮನಸ್ಸಿನಲ್ಲಿ ಹಾಗೇ ಅಚ್ಚೊತ್ತಿಬಿಡುತ್ತವೆ. ಮುಂದೆ ಅವರು ಬೆಳೆದು ದೊಡ್ಡವರಾದಾಗ ಈ ಅನುಭವಗಳೇ ಅವರ ವ್ಯಕ್ತಿತ್ವ ಬೆಳವಣಿಗೆಗೆ ಕಾರಣವಾಗಿರುತ್ತವೆ.
ಕೆಲವು ಮಕ್ಕಳಲ್ಲಿ ಪ್ರತಿಭೆಯಿದ್ದರೂ ಅವರಲ್ಲಿ ಆತ್ಮವಿಶ್ವಾಸದ ಕೊರತೆಯಿರುವುದನ್ನು ನೀವು ನೋಡಿರಬೇಕು. ಇದಕ್ಕೆ ಹಲವು ಕಾರಣಗಳಿರಬಹುದು, ಆದರೆ ಬಾಲ್ಯದಲ್ಲಿ ಪೋಷಕರು ಮಾಡಿದ ವಿಷಯಗಳು ಕೂಡ ಇದಕ್ಕೆ ಕಾರಣವಾಗಿವೆ. ಆದ್ದರಿಂದ ಪ್ರತಿಯೊಬ್ಬ ಪೋಷಕರು ಮಕ್ಕಳನ್ನು ಬೆಳೆಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಏಕೆಂದರೆ ಇದು ಮಕ್ಕಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುವುದು.

ಪೋಷಕರು ಮಕ್ಕಳನ್ನು ಬೆಳೆಸುವಾಗ ನೆನಪಿಡಬೇಕಾದ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ:
ಮಕ್ಕಳನ್ನು ಗೇಲಿ ಮಾಡಬೇಡಿ:
ವಿಷಯಗಳು ದೊಡ್ಡದಾಗಲಿ ಅಥವಾ ಚಿಕ್ಕದಾಗಲಿ, ಇದು ವರ್ತನೆ ಹಾಗೂ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ, ಹಾಸಿಗೆಯಿಂದ ಜಿಗಿಯುವುದು, ಫುಟ್ಬಾಲ್ ಅನ್ನು ಒದೆಯವಂತಹ ವಿಚಾರಗಳು ನಿಮಗೆ ಚಿಕ್ಕದಾಗಿರಬಹುದು, ಆದರೆ ಮಗುವಿಗೆ ಈ ವಿಷಯಗಳು ಬಹಳ ಮುಖ್ಯ. ಆದ್ದರಿಂದ ಇಂತಹ ವಿಚಾರಗಳ ಕುರಿತು ಮಗುವನ್ನು ಗೇಲಿ ಮಾಡಬಾರದು. ಇದು ಮುಂದೆ ಅವರು ಯಾವುದೇ ಕೆಲಸ ಮಾಡಲು ಹೋದಾಗ, ಆತ್ಮವಿಶ್ವಾಸ ಕುಂದಿಸಲು ಕಾರಣವಾಗುತ್ತದೆ.

ಇತರರೊಂದಿಗೆ ಹೋಲಿಸುವುದನ್ನು ತಪ್ಪಿಸಿ:
ಪ್ರತಿ ಮಗುವೂ ವಿಭಿನ್ನ, ಅಭ್ಯಾಸ, ಹವ್ಯಾಸ, ಅಂದ-ಚಂದವನ್ನು ಹೊಂದಿರುತ್ತಾರೆ. ಆದರೆ ಮಕ್ಕಳು ಚಿಕ್ಕವರಿದ್ದಾಗ ಪೋಷಕರು, ಇತರರೊಂದಿಗೆ ಹೋಲಿಕೆ ಮಾಡಿ ಮಾತನಾಡುತ್ತಾರೆ. ನಿಮ್ಮ ಮಗುವಿನ ಆಸಕ್ತಿಯನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವುದು ಸರಿಯಲ್ಲ, ನಿಮ್ಮ ಮಗುವಿಗೆ ಓದಿನಲ್ಲಿ ಆಸಕ್ತಿ ಇಲ್ಲದಿದ್ದರೆ, ಚಿಂತೆ ಬೇಡ, ಆತನಿಗೆ ಇಷ್ಟವಿರುವ ಆಸಕ್ತಿಗಳನ್ನು ಪೋಷಿಸಬೇಕೇ ಹೊರತು, ಓದೇ ಎಲ್ಲಾ ಎನ್ನುವ ಮಗುವಿನೊಂದಿಗೆ ಹೋಲಿಕೆ ಬೇಡ. ಏಕೆಂದರೆ ಇಬ್ಬರ ಆಸಕ್ತಿಯೂ ವಿಭಿನ್ನ. ಹೀಗೆ ಮಾಡುವುದರಿಂದ ನಿಮ್ಮ ಮಗುವಿನಲ್ಲಿ ಕೀಳರಮೆ ಭಾವನೆ ಮೂಡುತ್ತದೆ.

ಪ್ರತಿ ಕೆಲಸದಲ್ಲೂ ತಪ್ಪು ಕಂಡುಹಿಡಿಯುವುದು:
ಮಕ್ಕಳು ತಪ್ಪು ಮಾಡುವುದು ಸಹಜ. ಆದರೆ ಅವರ ಪ್ರತಿಯೊಂದು ಕೆಲಸದಲ್ಲಿ ಕೇವಲ ತಪ್ಪನ್ನೇ ಹುಡುಕಿದರೆ, ಮಗುವಿನ ಮನಸ್ಥಿತಿ ಮೇಲೆ ನಕಾರಾತ್ಮಕ ಪ್ರಭಾವ ಬೀರುವುದು. ಬಾಲ್ಯದಲ್ಲಿ ಯಾವುದೇ ಕೆಲಸವನ್ನು ಪರಿಪೂರ್ಣವಾಗಿ ಮಾಡುವುದು ಅಸಾಧ್ಯ. ಆದರೆ ಮಾಡುವ ಕೆಲಸದಲ್ಲಿ ತಪ್ಪು ಕಂಡುಹಿಡಿಯುವ ಬದಲು, ಮಾಡಿದ ಕೆಲಸಕ್ಕೆ ಪ್ರೋತ್ಸಾಹ ನೀಡಿ. ಉದಾಹರಣೆಗೆ, ನಿಮ್ಮ ಮಗು ಚಿತ್ರಕಲೆ ಮಾಡುತ್ತಿದ್ದರೆ, ಆತನ ಚಿತ್ರಕಲೆಯಲ್ಲಿನ ದೋಷಗಳನ್ನು ಕಂಡುಕೊಳ್ಳುವ ಬದಲು ಆತನ ಚಿತ್ರಕಲೆಯಲ್ಲಿರುವ ಒಳ್ಳೆಯ ವಿಷಯಗಳನ್ನು ಪ್ರಶಂಸಿಸಿ.

ಇತರರ ಮುಂದೆ ದೂರು ಹೇಳುವುದು:
ಅನೇಕ ಪೋಷಕರು ತಮ್ಮ ಮಕ್ಕಳ ಬಗ್ಗೆ ಇತರ ಜನರ ಬಳಿ ಅಥವಾ ನೆರೆಹೊರೆಯವರಿಗೆ ದೂರು ನೀಡುತ್ತಾರೆ. ಕೆಲವೊಮ್ಮೆ ಪೋಷಕರು ಇದನ್ನು ತಮಾಷೆಯಾಗಿ ಅಥವಾ ಗಾಸಿಪ್ ಮಾಡುವ ಉದ್ದೇಶದಿಂದ ಮಾಡುತ್ತಾರೆ, ಆದರೆ ಈ ವಿಷಯಗಳು ಮಗುವಿನ ಮನಸ್ಸಿನಲ್ಲಿ ಹಾಗೆಯೇ ಕುಳಿತುಬಿಡುತ್ತವೆ. ಇದರಿಂದ ಅವರ ಆತ್ಮವಿಶ್ವಾಸ ಕುಸಿಯಲು ಆರಂಭವಾಗುತ್ತದೆ.

ಚಿಕ್ಕಪುಟ್ಟ ವಿಷಯಕ್ಕೆ ಮಕ್ಕಳನ್ನು ಹೊಡೆಯುವುದು:
ಬಾಲ್ಯದಲ್ಲಿ ಮಾಡಿದ ಯಾವುದೇ ತಪ್ಪು ತುಂಬಾ ದೊಡ್ಡದಿರುವುದಿಲ್ಲ, ಅದಕ್ಕಾಗಿ ಅವರನ್ನು ಹೊಡೆಯುವುದು ಸರಿಯಲ್ಲ. ಅದರ ಬದಲಾಗಿ, ತಪ್ಪನ್ನು ಅವರಿಗೆ ಅರ್ಥ ಮಾಡಿಸಬೇಕು, ತಿಳಿ ಹೇಳಬೇಕು. ಪ್ರತಿ ಸಣ್ಣ ವಿಷಯಕ್ಕೂ ಮಕ್ಕಳನ್ನು ಹೊಡೆಯುವ ಮೂಲಕ ತಪ್ಪು ಸರಿ ಆಗುವುದಿಲ್ಲ, ಇದರಿಂದ ನಿಮ್ಮನ್ನು ತುಂಬಾ ಕೆಟ್ಟವರು ಎಂದು ಭಾವಿಸುತ್ತಾರೆ. ಅಷ್ಟೇ ಅಲ್ಲ, ನಿಮ್ಮ ಮೇಲಿನ ಪ್ರೀತಿ ಕಡಿಮೆಯಾಗುವುದು. ಅದೇ ಸಮಯದಲ್ಲಿ, ಅವರಲ್ಲಿ ಅಭದ್ರತೆಯ ಭಾವನೆ ಹೆಚ್ಚಾಗುತ್ತದೆ, ಅವರು ಭಯಭೀತರಾಗಲು ಪ್ರಾರಂಭಿಸುತ್ತಾರೆ.



Click it and Unblock the Notifications











