Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮಗುವಿಗೆ ಇದು ಮೊದಲ ಮಳೆಗಾಲವೇ? ಹಾಗಿದ್ದಲ್ಲಿ ಮಗುವಿನ ಚರ್ಮದ ಆರೈಕೆ ಹೀಗಿರಲಿ
ಇದು ನಿಮ್ಮ ಮಗುವಿನ ಮೊದಲ ಮಳೆಗಾಲವೇ? ಹಾಗಾದರೆ ಜಾಗರೂಕರಾಗಿರಿ, ಇದು ತಂಪಿನ ಜೊತೆಗೆ ಮಗುವಿಗೆ ಬೆವರಸಾಲೆ, ದದ್ದು, ಚರ್ಮದ ಸೋಂಕು, ಕೀವುಗಳನ್ನು ಸಹ ತರುತ್ತದೆ ಎಂಬುದನ್ನು ಮರೆಯಬೇಡಿ. ನವಜಾತ ಶಿಶುವಿನ ಚರ್ಮವು ಮಳೆಗಾಲದಲ್ಲಿ ಬೇಗ ಸೋಂಕಿಗೆ ಒಳಗಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಮಗುವಿನ ಚರ್ಮಕ್ಕೆ ಹೆಚ್ಚಿನ ಆರೈಕೆಯ ಅಗತ್ಯವಿರುತ್ತದೆ. ಆದ್ದರಿಂದ ಹೊಸದಾಗಿ ಪೋಷಕರಾದವರು ಮಳೆಗಾಲದ ಚರ್ಮ ಸಮಸ್ಯೆಗಳಿಂದ ನಿಮ್ಮ ಮಗುವನ್ನು ರಕ್ಷಿಸಲು ಈ ಕೆಳಗಿನ ಸಲಹೆಗಳನ್ನು ಅನುಸರಿಸುವುದು ಉತ್ತಮ.
ಮಳೆಗಾಲದಲ್ಲಿ ನಿಮ್ಮ ಮಗುವನ್ನು ಚರ್ಮ ಸಮಸ್ಯೆಯಿಂದ ರಕ್ಷಿಸಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ;

ನಿಯಮಿತವಾಗಿ ಸ್ವಚ್ಛಗೊಳಿಸಿ:
ಮಳೆಗಾಲ ತಾಪಮಾನವನ್ನು ತಗ್ಗಿಸಿದರೂ, ವಾತಾವರಣದಲ್ಲಿ ಸಾಕಷ್ಟು ಆರ್ದ್ರತೆ ಇರುವಂತೆ ಮಾಡುತ್ತದೆ. ಇದು ನಿಮ್ಮ ಮಗುವನ್ನು ಬೆವರುವಂತೆ ಮಾಡುತ್ತದೆ. ಈ ಬೆವರಿನಿಂದಾಗಿ ಬ್ಯಾಕ್ಟೀರಿಯಾದ ಸೋಂಕಿನ ಸಾಧ್ಯತೆಗಳು ಹೆಚ್ಚು. ಇದಲ್ಲದೆ, ಮಗುವಿನ ಚರ್ಮವು ಹೆಚ್ಚಿನ ಪಿಹೆಚ್ ಮಟ್ಟವನ್ನು ಹೊಂದಿರುತ್ತದೆ, ಇದು ಚರ್ಮದ ಕಿರಿಕಿರಿಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ನಿಮ್ಮ ಮಗುವಿನ ಚರ್ಮವನ್ನು ಶುದ್ಧೀಕರಿಸಲು ಗ್ಲಿಸರಿನ್ ಮತ್ತು ವಿಟಮಿನ್ ಬಿ 5 ಅಧಿಕವಾಗಿರುವ ಸೌಮ್ಯವಾದ ಬೇಬಿ ವಾಶ್ ಅನ್ನು ಆರಿಸಿಕೊಳ್ಳಿ.

ಸೂಕ್ತವಾದ ಲೋಷನ್‌ನೊಂದಿಗೆ ಚರ್ಮವನ್ನು ತೇವಗೊಳಿಸಿ:
ಮಗುವಿನ ಚರ್ಮ ತೇವಾಂಶವನ್ನು ಉಳಿಸಿಕೊಳ್ಳುವ ಸಾಮರ್ಥ್ಯವನ್ನು ವಯಸ್ಕರಿಗಿಂತ ಕಡಿಮೆ ಹೊಂದಿರುವುದಿಂದ ಶುಷ್ಕತೆಗೆ ಗುರಿಯಾಗುತ್ತದೆ. ಸೋಯಾಬೀನ್ ಎಣ್ಣೆ, ಶಿಯಾ ಬೆಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆಯಂತಹ ಪದಾರ್ಥಗಳನದನು ಹೊಂದಿರುವ ಲೋಷನ್ ಆಯ್ಕೆ ಮಾಡಬಹುದು. ಲೋಷನ್ ನಿಮ್ಮ ಮಗುವಿನ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಅದರ ವಿನ್ಯಾಸವನ್ನು ಸುಧಾರಿಸುತ್ತದೆ.

ಬೇಬಿ ಆಯಿಲ್ ನಿಂದ ಮಸಾಜ್ ಮಾಡಿ:
ಮಸಾಜ್ ಆಯಿಲ್ ನಿಮ್ಮ ಮಗುವಿನ ಚರ್ಮವನ್ನು ಆರೋಗ್ಯಕರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಟಮಿನ್ ಇ ಅಥವಾ ಚರ್ಮವನ್ನು ಮೃದುಗೊಳಿಸುವ ಪದಾರ್ಥಗಳಿಂದ ತುಂಬಿದ ಎಣ್ಣೆಯನ್ನು ಆರಿಸಿ.

ಕಠಿಣ ಡಿಟರ್ಜೆಂಟ್ ಗಳನ್ನು ಬಳಸಬೇಡಿ:
ನಿಮ್ಮ ಮಗುವಿನ ಹೊಸ ಬಟ್ಟೆಗಳನ್ನು ಬಳಕೆಗೂ ಮುನ್ನ ತೊಳೆಯುವುದನ್ನು ಮರೆಯಬೇಡಿ. ಅಲ್ಲದೆ, ಬೆವರುಸಾಲೆಗಳನ್ನು ತಡೆಗಟ್ಟಲು ಸಡಿಲವಾದ ಬಟ್ಟೆಗಳನ್ನು ಹಾಕಿ. ಬೇಬಿ ಪೌಡರ್ ಗಳನ್ನು ಬಳಸುವುದನ್ನು ತಪ್ಪಿಸಿ ಅದು ಉಸಿರಾಟದ ತೊಂದರೆಗೆ ಕಾರಣವಾಗಬಹುದು, ಜೊತೆಗೆ ಈ ರಾಸಾಯನಿಕ ತುಂಬಿದ ಉತ್ಪನ್ನಗಳು ಅಲರ್ಜಿಗೆ ಕಾರಣವಾಗಬಹುದು.

ಸರಿಯಾದ ಬಟ್ಟೆಗಳನ್ನು ಬಳಸಿ:
ನವಜಾತ ಶಿಶುಗಳು ಬೆವರುಸಾಲೆಗೆ ಗುರಿಯಾಗುತ್ತಾರೆ. ಅದರಲ್ಲೂ ಮಳೆಗಾಲದ ಸಮಯದಲ್ಲಿ ಗಾಳಿಯ ಗುಣಮಟ್ಟದಿಂದಾಗಿ ಅವರ ದೇಹದಾದ್ಯಂತ ದದ್ದುಗಳು ಅಥವಾ ಬೆವರು ಗುಳ್ಳೆಗಳು ಉಂಟಾಗುತ್ತವೆ. ಅದಕ್ಕಾಗಿ ಮಗುವನ್ನು ಬೆಚ್ಚಗಿನ ಉಣ್ಣೆ ಬಟ್ಟೆಯಿಂದ ಸುತ್ತಿ ಮಲಗಿಸುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ಮಗುವನ್ನು ಕೀಟಗಳು / ಸೊಳ್ಳೆಗಳು ಕಚ್ಚದಂತೆ ತಡೆಯುತ್ತದೆ. ಆದರೆ ಬಟ್ಟೆ ಆಯ್ಕೆ ಮಾಡುವಾಗ ಗಮನವಿರಲಿ, ಮೃದು ಬಟ್ಟೆ ಬಳಸಿ.

ಡೈಪರ್ ದದ್ದುಗಳ ಬಗ್ಗೆ ಜಾಗರೂಕರಾಗಿರಿ:
ಡೈಪರ್ ದದ್ದುಗಳು ಸಾಮಾನ್ಯವಾಗಿ ತೇವವಾಗುವುದರಿಂದ ಉಂಟಾಗುತ್ತವೆ. ಮಳೆಗಾಲದಲ್ಲಿ ಇರುವ ತೇವಾಂಶವನ್ನು ಗಮನಿಸಿದರೆ, ಮಗು ದದ್ದುಗಳಿಗೆ ಹೆಚ್ಚು ಒಳಗಾಗುತ್ತದೆ. ಆದ್ದರಿಂದ ಈ ರಾಶಸ್ ತಡೆಗಟ್ಟಲು ಉತ್ತಮ ಮಾರ್ಗವೆಂದರೆ ಡಯಾಪರ್ ಕ್ರೀಮ್ ಬಳಸುವುದು.

ಸೊಳ್ಳೆ ಪರದೆ ಮತ್ತು ನಿವಾರಕಗಳನ್ನು ಬಳಸಿ:
ನವಜಾತ ಶಿಶು ಸೊಳ್ಳೆ ಕಚ್ಚುವಿಕೆಯಿಂದ ಈ ಸಮಯದಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿರುವುದರಿಂದ ಪೋಷಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ಇಂತಹ ಯಾವುದೇ ರೀತಿಯ ಸೋಂಕುಗಳನ್ನು ತಪ್ಪಿಸಲು ಸೊಳ್ಳೆ ಪರದೆ ಮತ್ತು ನಿವಾರಕಗಳನ್ನು ಬಳಸಿ.



Click it and Unblock the Notifications