Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ನಿಮ್ಮ ಮಗುವಿನಲ್ಲಿ ಈ ಬಗೆಯ ವರ್ತನೆ ಕಂಡು ಬಂದರೆ ಪೋಷಕರೇ ಗಮನಿಸಿ
ಮಕ್ಕಳು" ಅಂತ ಮಕ್ಕಳನ್ನ ಸುಮ್ಮನೆ ಕರೆಯುವುದಿಲ್ಲ ಬಿಡಿ! ಮಕ್ಕಳು ನಮ್ಮಂತೆ ಅಂದರೆ ದೊಡ್ಡವರಂತೆ ಯೋಚನೆ ಮಾಡಲು ಸಾಧ್ಯವಲ್ಲ. ನಾನು ಹೀಗೆ ಇರಬೇಕು ಅನ್ನುವಂತಹ ಕಲ್ಪನೆ ಮಗುವಿನಲ್ಲಿ ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಆ ಮಗು ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತೆ ಅದು ತಪ್ಪು ಎನ್ನುವ ಕಲ್ಪನೆಯೂ ಕೂಡ ಆ ಮಗುವಿಗೆ ಇರುವುದಿಲ್ಲ. ಇನ್ನು ಮಕ್ಕಳಲ್ಲಿ ದಿನದಿಂದ ದಿನಕ್ಕೆ ನಡವಳಿಕೆಯಲ್ಲಿ ಅಥವಾ ಅವರು ಇರುವ ರೀತಿಯಲ್ಲಿ ಬದಲಾವಣೆಗಳು ಆಗಬಹುದು ಇದನ್ನ ಅರಿತುಕೊಳ್ಳುವುದು ಪಾಲಕರಾದವರ ಕರ್ತವ್ಯ.

ಮಕ್ಕಳಲ್ಲಿ ನಡವಳಿಕೆಯ ಬದಲಾವಣೆ;
ಮಕ್ಕಳು ಹೀಗೆ ಇರಬೇಕು, ಹೀಗೆ ಇರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ ಅವರ ಮೈಂಡ್ ಸೆಟ್ ಒಂದೇ ರೀತಿಯಾಗಿ ಇರುವುದಿಲ್ಲ ಹಾಗಾಗಿ ಆಗಾಗ ಅವರ ನಡವಳಿಕೆಯಲ್ಲಿ ಬದಲಾವಣೆಯನ್ನು ಕಾಣಬಹುದು. ಕೆಲವೊಮ್ಮೆ ವಾದಿಸುತ್ತಾರೆ, ಕೆಲವೊಮ್ಮೆ ಹಠ ಮಾಡುತ್ತಾರೆ, ಇನ್ನೂ ಕೆಲವೊಮ್ಮೆ ಅತಿಯಾಗಿ ಅಳುತ್ತಾರೆ. ಇದಕ್ಕೆ ಸರಿಯಾದ ಕಾರಣ ಅವರಿಗೂ ಗೊತ್ತಿಲ್ಲದೆ ಇರಬಹುದು ಇದನ್ನ ತಿಳಿದುಕೊಳ್ಳುವುದು ಪಾಲಕರ ಕರ್ತವ್ಯ. ಏನು ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.
ಮಕ್ಕಳ ನಡವಳಿಕೆ ಬದಲಾವಣೆಯ ಲಕ್ಷಣಗಳು;
ಇದ್ದಕ್ಕಿದ್ದ ಹಾಗೆ ಕೋಪ ಮಾಡಿಕೊಳ್ಳುವುದು
ಕೈಯಲ್ಲಿ ಇರುವ ವಸ್ತುವನ್ನು ಎಸೆದು ಹಠ ಮಾಡುವುದು
ಒಂದೇ ಸಮನೆ ಅಳುವುದು
ಹೊಟ್ಟೆಗೆ ಈಗ ತಾನೇ ಆಹಾರ ಸೇವನೆ ಮಾಡಿದ್ದರು ಮತ್ತೆ ಆಹಾರ ಬೇಕು ಎಂದು ಹಠ ಮಾಡುವುದು
ಅಥವಾ ಊಟ ಮಾಡುವುದಿಲ್ಲ ಎಂದು ರಚ್ಚೆ ಹಿಡಿಯುವುದು
ಈ ಲಕ್ಷಣಗಳು ಕಂಡು ಬಂದಲ್ಲಿ ಮಕ್ಕಳಲ್ಲಿ ಇರುವ ಅಸಮಾಧಾನವನ್ನು ಅರ್ಥಮಾಡಿಕೊಳ್ಳಬೇಕು. ಒಂದು ಮಗು ಸುಮಾರು ಐದರಿಂದ ಆರು ವರ್ಷಗಳನ್ನು ದಾಟುವವರೆಗೂ ಆ ಮಗುವಿಗೆ ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಅರಿವು ಇರುವುದಿಲ್ಲ ಅಥವಾ ಅದನ್ನ ಹೇಳಿಕೊಳ್ಳಲು ಆ ಮಗುವಿಗೆ ಸಾಧ್ಯವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ಪಾಲಕರಾದವರು ಅವರ ಹಠಕ್ಕೆ ಅಳುವಿಗೆ ಕೋಪಕ್ಕೆ ಕಾರಣವನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.
ಮಕ್ಕಳಿಗೆ ಅಸಮಾಧಾನ:
ಮಕ್ಕಳಿಗೆ ಯಾವ ವಿಚಾರದಲ್ಲಿ ಯಾವ ಸಂದರ್ಭದಲ್ಲಿ ಅಸಮಾಧಾನ ಉಂಟಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಹಾಗಾಗಿ ಮಕ್ಕಳಿಗೆ ಕಂಫರ್ಟ್ ಫೀಲ್ ಕೊಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯ. ಇನ್ನು ಪುಟ್ಟ ಮಗುವಿನ ಹೊಟ್ಟೆಯಲ್ಲಿ ಕೆಲವೊಮ್ಮೆ ಅಸ್ವಸ್ಥತೆ ಉಂಟಾಗುತ್ತದೆ ಹೊಟ್ಟೆ ನೋವು ಅಥವಾ ಉರಿ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಆಗ ಮಗುವಿಗೆ ಅದನ್ನು ಬಾಯಿ ಬಿಟ್ಟು ಹೇಳಿಕೊಳ್ಳಲು ತಿಳಿಯುವುದಿಲ್ಲ. ಅಂತಹ ಸಂದರ್ಭದಲ್ಲಿ ಮಗು ಅತಿಯಾಗಿ ಹಠ ಮಾಡಬಹುದು ಅಥವಾ ಜೋರಾಗಿ ಅಳಬಹುದು ಇದನ್ನ ನೀವು ಅರಿತುಕೊಂಡು ಆ ಮಗುವಿನ ಹೊಟ್ಟೆಗೆ ಸರಿ ಹೋಗುವಂತಹ ಔಷಧೀಯನ ಅಥವಾ ಮನೆ ಮದ್ದುನ ಕೊಡಬೇಕು ಅಥವಾ ಸರಿಯಾದ ಆಹಾರವನ್ನು ಕೊಡಬೇಕು.
ಮಗು ಅತ್ತಾಗ ಪಾಲಕರ ವರ್ತನೆ!
ಇದು ಬಹಳ ಮುಖ್ಯವಾಗಿರುವಂತಹ ಅಂಶ. ಮಗು ಜೋರಾಗಿ ರಚ್ಚೆ ಹಿಡಿದು ಅಳುವುದಕ್ಕೆ ಶುರು ಮಾಡಿದಾಗ, ತಂದೆ ಇರಬಹುದು ಅಥವಾ ತಾಯಿ ಇರಬಹುದು ಆ ಮಗುವಿಗೆ ಮತ್ತೆ ಹೊಡೆಯುವುದು ಅಥವಾ ಗದರುವುದು ಮಾಡಬಾರದು ಆಗ ಮಗು ಇನ್ನಷ್ಟು ಹೆದರಿಕೊಳ್ಳುವ ಸಾಧ್ಯತೆ ಇರುತ್ತದೆ ಅದಕ್ಕೆ ಯಾವ ಸಮಸ್ಯೆ ಆಗುತ್ತಿದೆ ಎಂಬುದನ್ನು ಸಮಾಧಾನವಾಗಿ ಪ್ರಶ್ನಿಸಬೇಕು. ನೀವು ಎಷ್ಟು ಪ್ರೀತಿಯಿಂದ ನಿಮ್ಮ ಮಗುವನ್ನು ಸಂಪಾದಿಸುತ್ತಿರುವ ಅಷ್ಟು ಸರಿಯಾಗಿ ಮಗುವಿನ ನಡವಳಿಕೆ ಅಥವಾ ವರ್ತನೆ ಬದಲಾಗುತ್ತದೆ.
ಇನ್ನು ಮಕ್ಕಳು ಹಠ ಮಾಡಿದರೆ ಅವುಗಳಿಗೆ ಕೇವಲ ತನಗೆ ಬೇಕಾಗಿರುವ ವಸ್ತು ಸಿಗಬೇಕು ಎನ್ನುವುದಷ್ಟೇ ಉದ್ದೇಶವಾಗಿರುವುದಿಲ್ಲ. ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆ ಕೂಡ ಕಾರಣವಾಗಿರುತ್ತದೆ. ಉದಾಹರಣೆಗೆ ಕೆಲವೊಮ್ಮೆ ಮಗುವಿಗೆ ಸರಿಯಾಗಿ ನಿದ್ದೆ ಆಗಿರುವುದಿಲ್ಲ ಅಥವಾ ರಾತ್ರಿ ನಿದ್ದೆ ಮಾಡಿದಾಗ ಕೆಟ್ಟ ಕನಸು ಬಿದ್ದಿರಬಹುದು. ಹಗಲಿನಲ್ಲಿ ಯಾರಾದರೂ ಹೆದರಿಸಿದ್ದ ಮಾತು ರಾತ್ರಿ ಕನಸಿನಲ್ಲಿ ಭಯ ಹುಟ್ಟಿಸಿರಬಹುದು. ಈ ರೀತಿ ಆದಾಗ ಮಗು ಮಾನಸಿಕ ಸಮತೋಲನವನ್ನು ಕಳೆದುಕೊಳ್ಳುತ್ತದೆ ಅಥವಾ ದೈಹಿಕ ಅಸ್ವಸ್ಥತೆಯನ್ನು ಅನುಭವಿಸುತ್ತದೆ. ಇದನ್ನು ಅರ್ಥ ಮಾಡಿಕೊಳ್ಳದೆ ನಾವು ಮಗು ಹಠ ಮಾಡುತ್ತಿದೆ ಎನ್ನುವ ಕಾರಣಕ್ಕೆ ಅದಕ್ಕೆ ಹೊಡೆಯುವುದು ಅಥವಾ ಅದರ ಮೇಲೆ ನಮ್ಮ ಪವರ್ ತೋರಿಸಲು ಹೋಗುತ್ತೇವೆ ಈ ರೀತಿ ಮಾಡುವುದರಿಂದ ಮಗುವಿನ ವರ್ತನೆ ಇನ್ನಷ್ಟು ಕೆಟ್ಟದಾಗುತ್ತಾ ಹೋಗುತ್ತದೆಯೇ ಹೊರತು ಸರಿಯಾಗುವುದಿಲ್ಲ. ಹಾಗಾಗಿ ನಿಮ್ಮ ಮಗುವಿನ ಪಾಲನೆ ನಿಮ್ಮ ಕರ್ತವ್ಯ ಅದರ ಬಗ್ಗೆ ಸರಿಯಾಗಿ ಗಮನವಹಿಸಿ ಸೂಕ್ಷ್ಮವಾಗಿ ಮಗುವನ್ನು ಗಮನಿಸುತ್ತಾ ಹೋದರೆ ಮಗುವಿನಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಕಾರಣ ಏನು ಅಥವಾ ಮಗು ಅಳುವುದಕ್ಕೆ ಕಾರಣ ಎಂಬ ವಿಷಯಗಳು ನಿಮಗೆ ಅರ್ಥವಾಗುತ್ತದೆ. ಇದರಿಂದ ನಿಮ್ಮ ಮಗುವನ್ನು ಸರಿಪಡಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಮಗು ಮತ್ತೆ ಮತ್ತೆ ಅಳುವುದು ಅಥವಾ ಹಠ ಮಾಡುವ ಅಭ್ಯಾಸ ಮಾಡಿಕೊಂಡಿದ್ದರೆ ತಕ್ಷಣ ವೈದ್ಯರನ್ನ ಸಂಪರ್ಕಿಸಿ.



Click it and Unblock the Notifications











