Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಪೋಷಕರೇ, ಸ್ಮಾರ್ಟ್ ಫೋನ್ ಮಕ್ಕಳ ಮಾನಸಿಕ ಆರೋಗ್ಯವನ್ನೇ ಹಾಳು ಮಾಡುತ್ತಿದೆ ಜೋಕೆ!
ಈ ಆಧುನಿಕ ಯುಗದಲ್ಲಿ ಮಕ್ಕಳು ಹುಟ್ಟುತ್ತಲೇ ಸ್ಮಾರ್ಟ್ ಆಗ್ತಿದ್ದಾರೆ. ಇದಕ್ಕೆ ಕಾರಣ ಈ ಸ್ಮಾರ್ಟ್ ಫೋನ್ ಗಳು. ನಡೆಯಲು ಬಾರದಿರುವ ಮಕ್ಕಳು ಕೂಡ ಎರಡು ಕೈಯಲ್ಲಿ ಮೊಬೈಲ್ ಹಿಡ್ಕೊಂಡು ತನಗಿಷ್ಟ ಕಾರ್ಟೂನ್ ನೋಡುತ್ತೆ. ಆಟಗಳನ್ನು ಆಡುತ್ತೆ. ದೊಡ್ಡವರ ಹಾಗೇ ಮಕ್ಕಳು ಕೂಡ ಸ್ನಾರ್ಟ್ ಫೋನ್ ಗೆ ಅಡಿಕ್ಟ್ ಆಗಿದ್ದಾರೆ. ಮೂರು ಹೊತ್ತು ಫೋನ್ ಬೇಕು.
ಇದಕ್ಕೆಲ್ಲಾ ಕಾರಣ ಪೋಷಕರು. ಯಾಕಂದ್ರೆ ಮಕ್ಕಳು ಅಳೋವಾಗ, ಊಟ ಮಾಡದಿದ್ದಾಗ ಪೋಷಕರು ಸ್ಮಾರ್ಟ್ ಫೋನ್ ಕೊಟ್ಟು ಮಕ್ಕಳನ್ನು ಸಮಾಧಾನ ಪಡಿಸುತ್ತಾರೆ. ಪೋಷಕರೇ, ನಿಮಗೊತ್ತಾ ನೀವು ಎಷ್ಟು ದೊಡ್ಡ ತಪ್ಪು ಮಾಡುತ್ತಿದ್ದೀರಿ ಎಂದು. ಸ್ಮಾರ್ಟ್ ಫೋನ್ ಗಳಿಂದಾಗಿ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗುತ್ತಿದೆ. ಇದರಿಂದ ಅವರು ನಾನಾ ರೀತಿಯ ಕಾಯಿಲೆಗೆ ತುತ್ತಾಗುತ್ತಾರೆ. ಅಷ್ಟಕ್ಕು ಸ್ಮಾರ್ಟ್ ಫೋನ್ ಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೇಗೆಲ್ಲಾ ಪರಿಣಾಮ ಬೀರುತ್ತಿದೆ ಅನ್ನೋದನ್ನು ತಿಳಿಯೋಣ.

1. ನಿದ್ರಾ ಹೀನತೆ, ಒತ್ತಡ, ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತಿದೆ
ಪೋಷಕರು ಆರಂಭದಲ್ಲಿ ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಟ್ಟು ಅಭ್ಯಾಸ ಮಾಡಿದ್ರೆ ಬರು ಬುರುತ್ತಾ ಅವರು ಫೋನ್ ಗೆ ಅಡಿಕ್ಟ್ ಆಗಿ ಹೋಗ್ತಾರೆ. ಯಾರಿಂದಲೂ ಅವರನ್ನು ಕಂಟ್ರೋಲ್ ಮಾಡೋಕೆ ಆಗೋದಿಲ್ಲ. ಊಟ, ತಿಂಡಿ, ನಿದ್ದೆ ಮಾಡುವಾಗಲೂ ಫೋನ್ ಕೈನಲ್ಲೇ ಹಿಡಿದುಕೊಂಡಿರುತ್ತಾರೆ. ಇದರಿಂದ ಮಕ್ಕಳಲ್ಲಿ ನಿದ್ರಾ ಹೀನತೆ, ಒತ್ತಡದಂತಹ ಸಮಸ್ಯೆ ಉಂಟಾಗುತ್ತದೆ.
ಅಷ್ಟೇ ಅಲ್ಲದೇ ಅವರ ಮಾನಸಿಕ ಸ್ವಾಸ್ಥ್ಯ ಕೂಡ ಹಾಳಾಗುತ್ತದೆ. ಇದು ಅವರ ಭವಿಷ್ಯದ ಮೇಲೂ ಪರಿಣಾಮ ಬೀರಬಹುದು. ಓದೋದಕ್ಕೆ ಆಸಕ್ತಿ ಇರೋದಿಲ್ಲ. ಯಾವುದೇ ರೀತಿ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳೋದಿಲ್ಲ. ಇಡೀ ದಿನ ಅವರು ಮಂಕಾಗಿ ಇರುತ್ತಾರೆ.
2. ಋಣಾತ್ಮಕ ಪರಿಣಾಮ ಬೀರುತ್ತದೆ
ಪೋಷಕರ ಫೋನ್ ಹಿಡಿದುಕೊಳ್ಳೋ ಮಕ್ಕಳು ಫೇಸ್ ಬುಕ್ ಹಾಗೂ ಇನ್ಸ್ಟಾದಲ್ಲಿ ಮೂರು ಹೊತ್ತು ರೀಲ್ಸ್ ನೋಡುತ್ತಾರೆ. ಇದ್ರಿಂದ ಅವರ ಓದಿಗೂ ತೊಂದರೆ ಆಗುತ್ತದೆ. ಇದರ ಜೊತೆಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಾ ರೀತಿಯ ರೀಲ್ಸ್ ಗಳು ಇದ್ದು ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಲವ್, ಸೆಕ್ಸ್, ಕೊಲೆ ಇತ್ಯಾದಿ. ಇಂತಹ ರೀಲ್ಸ್ ಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಆದಷ್ಟು ಮಕ್ಕಳ ಕೈಗೆ ಫೋನ್ ಸಿಗದಂತೆ ನೋಡಿಕೊಳ್ಳಿ
3. ಸಾವು ಸಂಭವಿಸಬಹುದು
ಕೆಲ ವರ್ಷಗಳ ಹಿಂದೆ ಮಕ್ಕಳು ಪಬ್ಜಿ ಗೀಳಿಗೆ ಯಾವ ರೀತಿ ಬಿದ್ದಿದ್ದರೂ ಅನ್ನೋದು ನಮಗೆಲ್ಲಾ ಗೊತ್ತಿದೆ. ಅದೆಷ್ಟೋ ಮಕ್ಕಳು ಈ ಆಟಕ್ಕೆ ಅಡಿಕ್ಟ್ ಆಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ರು. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿದ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೀವಿ. ಇದೇ ರೀತಿ ಅನೇಕ ಆನ್ ಲೈನ್ ಗೇಮ್ ಗಳಿದ್ದು, ಇವುಗಳು ನೇರವಾಗಿ ನಿಮ್ಮ ಖಾತೆಗೆ ಕನ್ನಾ ಹಾಕಬಹುದು. ಕೆಲವು ಕಡೆ ಮಕ್ಕಳು ಗೊತ್ತಿಲ್ಲದೇ ಮೊಬೈಲ್ ನಲ್ಲಿ ಏನೇನೋ ಪ್ರೆಸ್ ಮಾಡಿ ಪೋಷಕರು ದುಡ್ಡು ಕಳೆದುಕೊಂಡಿದ್ದಾರೆ.
4. ಸೈಬರ್ ಬುಲ್ಲಿಂಗ್ ನ ಅಪಾಯವಿದೆ
ಮಕ್ಕಳು ಅತಿಯಾಗಿ ಫೋನ್ ಯೂಸ್ ಮಾಡೋದ್ರಿಂದ ಸೈಬರ್ ಬುಲ್ಲಿಂಗ್ ನ ಅಪಾಯವೂ ಹೆಚ್ಚಾಗಿದೆ. ಆನ್ ಲೈನ್ ನಲ್ಲಿ ಕಿರುಕುಳವೂ ಹೆಚ್ಚಾಗುವ ಸಾಧ್ಯತೆಯಿದೆ. ಆಗಂತುಕರು ದುಡ್ಡು ಕೇಳೋದು ಅಥವಾ ಬೇರೆ ರೀತಿಯ ಒತ್ತಡಗಳನ್ನು ತಂದೊಡ್ಡಬಹುದು. ಇದರಿಂದ ಮಕ್ಕಳಲ್ಲಿ ಆತಂಕ, ಖಿನ್ನತೆಯಂತಹ ಸಮಸ್ಯೆಯನ್ನು ಎದುರಿಸುತ್ತಾರೆ. ಕೊನೆಗೆ ಇತ್ತ ಈ ವಿಚಾರವನ್ನು ಪೋಷಕರ ಬಳಿ ಹೇಳಿಕೊಳ್ಳೋದಕ್ಕೂ ಆಗದೇ ಮಕ್ಕಳು ದುಡುಕಿ ಕೆಟ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
5. ನಿದ್ರಾಹೀನತೆ ಉಂಟಾಗುತ್ತದೆ
ಮಲಗುವ ಸಂದರ್ಭದಲ್ಲಿ ಮಕ್ಕಳು ಫೋನ್ ಹಿಡಿದುಕೊಳ್ಳುವುದನ್ನು ನೀವು ನೋಡಿರ್ತೀರಿ. ಇತ್ತ ಮೊಬೈಲ್ ಕೈಯಲ್ಲಿದ್ದರೆ ಮಕ್ಕಳು ಮಲಗೋದಿಲ್ಲ. ಒಂದು ವೇಳೆ ಒತ್ತಾಯಪಡಿಸಿ ಅವರಿಂದ ಮೊಬೈಲ್ ಕಿತ್ತುಕೊಂಡರೆ ಮಕ್ಕಳು ಹಠ ಹಿಡಿಯುತ್ತಾರೆ. ಅಷ್ಟಕ್ಕು ಮಲಗುವ ಸಮಯದಲ್ಲಿ ಮಕ್ಕಳ ಕೈಗೆ ಮೊಬೈಲ್ ಯಾಕೆ ಕೊಡಬಾರದೆಂದರೆ ಸ್ಮಾರ್ಟ್ ಫೋನ್ ನಲ್ಲಿರುವ ನೀಲಿ ಕಿರಣಗಳು ಹೊರ ಸೂಸಿ ಮಕ್ಕಳ ನಿದ್ರಾ ವ್ಯವಸ್ಥೆಗೆ ಹಾನಿಯುಂಟು ಮಾಡುತ್ತದೆ. ಮತ್ತು ಇದು ನಮ್ಮ ನಿದ್ರೆಗೆ ತೊಂದರೆ ಉಂಟಾಗುತ್ತದೆ.
ನಿದ್ರೆ ಸರಿಯಾಗಿ ಆಗದಿದ್ದರೆ ನಮ್ಮ ಮನಸ್ಸು ಸರಿಯಾಗಿ ಇರೋದಿಲ್ಲ, ಕಿರಿಕಿರಿ ಮತ್ತು ಏಕಾಗ್ರತೆಯ ತೊಂದರೆ ಉಂಟಾಗುತ್ತದೆ. ಇವೆಲ್ಲಾ ನೇರವಾಗಿ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನಸ್ಥಿತಿ ಬದಲಾವಣೆಗಳು, ಕಿರಿಕಿರಿ ಮತ್ತು ಏಕಾಗ್ರತೆಯ ತೊಂದರೆ, ಅಂತಿಮವಾಗಿ ಅವರ ಮಾನಸಿಕ ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತದೆ.
6. ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳೋದಿಲ್ಲ
ಮಕ್ಕಳು ಎಂದ ಮೇಲೆ ಆಟವಾಡುತ್ತಾ ಇರಬೇಕು. ಯಾವುದಾದರೂ ದೈಹಿಕ ಚಟವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆಕ್ಟೀವ್ ಆಗಿರಬೇಕು. ಆದ್ರೆ ಇತ್ತೀಚಿನ ಮಕ್ಕಳು ಮೊಬೈಲ್ ಹಿಡ್ಕೊಂಡು ಮೂಲೆ ಸೇರಿದ್ದಾರೆ. ಕೂತ ಕಡೆಯಿಂದ ಏಳೋದೂ ಇಲ್ಲ. ತಮ್ಮ ಪ್ರಪಂಚವನ್ನು ಮೊಬೈಲ್ ಗೆ ಮಾತ್ರ ಸೀಮಿತಗೊಳಿಸಿದ್ದಾರೆ. ಯಾರ ಜೊತೆಗೆ ಮಾತನಾಡೋದಿಲ್ಲ, ಯಾರೊಬ್ಬರ ಜೊತೆಗೆ ಬೆರೆಯೋದಿಲ್ಲ.
ಮಕ್ಕಳ ಕೈಗೆ ಸ್ಮಾರ್ಟ್ ಫೋನ್ ಕೊಡುವ ಅಭ್ಯಾಸ ಖಂಡಿತ ಬೇಡ. ಇದು ಅವರ ಮಾನಸಿಕ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತದೆ. ಹೀಗಾಗಿ ಈಗಿನಿಂದಾನೇ ಎಚ್ಚೆತ್ತುಕೊಂಡು ಕ್ರಮ ಕೈಗೊಂಡರೆ ಒಳ್ಳೆಯದು.



Click it and Unblock the Notifications


