Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಹಾಸ್ಟೆಲ್ ನಲ್ಲಿರೋ ಮಕ್ಕಳಿಗಾಗಿ ಇಲ್ಲಿದೆ ಹೆಲ್ತ್ ಟಿಪ್ಸ್!
ಹಾಸ್ಟೆಲ್ ನಲ್ಲಿ ಇರೋ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಮನೆಯಲ್ಲಿ ಆರೋಗ್ಯವಾದ ಆಹಾರವನ್ನು ಸೇವಿಸೋದ್ರಿಂದ ಯಾವುದೇ ರೀತಿ ಸಮಸ್ಯೆ ಆಗೋದಿಲ್ಲ. ಒಂದು ವೇಳೆ ಚಿಕ್ಕ-ಪುಟ್ಟ ಆರೋಗ್ಯ ಸಮಸ್ಯೆಗಳಾದರೆ ನಮ್ಮ ಕಾಳಜಿ ವಹಿಸೋದಕ್ಕೆ ಪೋಷಕರಿದ್ದಾರೆ.
ಆದರೆ ಹಾಸ್ಟೆಲ್ ನಲ್ಲಿ ಆರೋಗ್ಯ ಸಮಸ್ಯೆ ಎದುರಾದ್ರೆ ತುಂಬಾನೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟಕ್ಕು ಹಾಸ್ಟೆಲ್ ನಲ್ಲಿ ಇರೋ ವಿದ್ಯಾರ್ಥಿಗಳು ತಮ್ಮ ಕಾಳಜಿಯನ್ನು ಯಾವ ರೀತಿ ವಹಿಸಬೇಕು? ಹಾಸ್ಟೆಲ್ ನಲ್ಲಿ ಇರೋ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಹೆಲ್ತ್ ಟಿಪ್ಸ್.

1. ಹಣ್ಣು ಮತ್ತು ಹಣ್ಣಿನ ಜ್ಯೂಸ್ ಸೇವಿಸಿ
ಊಟದ ಜೊತೆಗೆ ನಮಗೆ ಮತ್ತಷ್ಟು ಶಕ್ತಿ ನೀಡೋದಕ್ಕೆ ಹಣ್ಣು ಹಾಗೂ ಹಣ್ಣಿನ ಜ್ಯೂಸ್ ಅನ್ನು ಪ್ರತಿನಿತ್ಯ ಸೇವನೆ ಮಾಡಿದ್ರೆ ಒಳ್ಳೆಯದು. ಮನೆಯಲ್ಲಿ ಕೊಟ್ಟ ಪಾಕೆಟ್ ಮನಿಯನ್ನು ಜಂಕ್ ಫುಡ್ ತಿನ್ನೋದಕ್ಕೆ ವ್ಯರ್ಥ ಮಾಡೋದ್ರ ಬದಲು ಆ ದುಡ್ಡಿನಲ್ಲಿ ಹಣ್ಣು ಖರೀದಿಸಿ. ಬೆಳಗ್ಗೆ ಎದ್ದ ತಕ್ಷಣ ಕಿತ್ತಳೆ ಅಥವಾ ದ್ರಾಕ್ಷಿ ಹಣ್ಣಿನ ಜ್ಯೂಸ್ ಸೇವಿಸಿ. ಮಧ್ಯಾಹ್ನದ ಊಟದ ಸಮಯದಲ್ಲಿ ಸ್ಯಾಂಡ್ವಿಚ್ ತಿನ್ನಿ. ಇದಕ್ಕೆ ಬೀನ್ಸ್ ಮತ್ತು ಕ್ಯಾರೆಟ್ ಕೂಡ ಸೇರಿಸಿ. ಇನ್ನೂ ರಾತ್ರಿಯ ಊಟದ ಆದ ಮೇಲೆ ಸೇಬು ಅಥವಾ ಬಾಳೆಹಣ್ಣು ಸೇವಿಸಿ.
2. ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ
ಹಾಸ್ಟೆಲ್ ನಲ್ಲಿ ಇರೋ ಹೆಚ್ಚಿನ ವಿದ್ಯಾರ್ಥಿಗಳು ನೀರು ಕುಡಿಯೋದಿಲ್ಲ. ಹೀಗಾಗಿ ಡಿಹೈಡ್ರೇಷನ್ ನಂತಹ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಒಂದು ಬಾಟಲ್ ನೀರನ್ನು ನಿಮ್ಮ ಪಕ್ಕದಲ್ಲೇ ಇಟ್ಟುಕೊಳ್ಳಿ. ಆಗಾಗ್ಗೆ ನೀರು ಕುಡಿಯುತ್ತಿರಿ. ನೀರು ಮುಗಿದ ತಕ್ಷಣ ಬಾಟಲ್ ಗೆ ತುಂಬಿಸಿಟ್ಟುಕೊಳ್ಳಿ. ನೀರು ಕುಡಿಯಲು ನೆನಪಾದದಿದ್ದರೆ ಅಲರಾಂ ಇಟ್ಟುಕೊಳ್ಳಿ. ಒಟ್ಟಿನಲ್ಲಿ ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಿ. ಒರ್ವವ್ಯಕ್ತಿ ಪ್ರತಿನಿತ್ಯ 4 ಲೀಟರ್ ನೀರು ಕುಡಿದ್ರೆ ಒಳ್ಳೆಯದು.
3. ಕ್ಯಾಲ್ಸಿಯಂ ಅಧಿಕವಾಗಿರುವ ಆಹಾರಗಳನ್ನು ಸೇವಿಸಿ
ಹಾಸ್ಟೆಲ್ ನಲ್ಲಿ ಪೌಷ್ಠಿಯುಕ್ತ ಆಹಾರ ಹೆಚ್ಚಾಗಿ ಸಿಗೋದಿಲ್ಲ. ಹೀಗಾಗಿ ಆದಷ್ಟು ನೀವು ತಿನ್ನೋ ಆಹಾರದಲ್ಲಿ ಕ್ಯಾಲ್ಸಿಯಂ ಸೇರಿಸೋದಕ್ಕೆ ಪ್ರಯತ್ನಿಸಿ. ಆದಷ್ಟು ಹಾಲು ಹಾಗೂ ಡೈರಿ ಉತ್ಪನ್ನಗಳನ್ನು ಸೇವಿಸಿ. ಇದರ ಜೊತೆಗೆ ಬೆರಿ ಹಣ್ಣುಗಳು, ಯೋರ್ಗಟ್, ಚೀಸ್, ಡ್ರೈ ಫ್ರೂಟ್ಸ್ ತಿನ್ನಿ. ನೀವು ಸುಮ್ಮನೆ ಯಾವುದಕ್ಕೋ ಖರ್ಚು ಮಾಡುವ ಪಾಕೆಟ್ ಮನಿಯಿಂದ ಈ ವಸ್ತುಗಳನ್ನು ಖರೀದಿಸಿ ತಿನ್ನಿ ನೀವು ಆರೋಗ್ಯವಾಗಿರುತ್ತೀರಿ.
4. ಸಕ್ಕರೆ ಅಂಶ ಇರುವ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ
ಅಧಿಕ ಸಕ್ಕರೆಯಂಶ ಇರುವ ಆಹಾರಗಳನ್ನು ಸೇವನೆ ಮಾಡಿದ್ರೆ ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಲಿದೆ. ಇದರಿಂದ ಡಯಾಬಿಟಸ್, ಫ್ಯಾಟಿ ಲಿವರ್, ಅಧಿಕ ರಕ್ತದೊತ್ತಡ ಮುಂತಾದ ಕಾಯಿಲೆಗಳು ಬರೋ ಸಾಧ್ಯತೆಯಿದೆ. ನೀವು ಅಧಿಕ ಸಕ್ಕರೆಯಂಶವಿರುವ ಆಹಾರಗಳನ್ನು ಸೇವಿಸಿದ್ರೆ ಈಗ ನಿಮಗೆ ಯಾವುದೇ ರೀತಿ ತೊಂದರೆ ಆಗದೇ ಇರಬಹುದು. ಆದರೆ 25 ದಾಟಿದ ನಂತರ ಎಲ್ಲಾ ರೋಗಗಳು ವಕ್ಕರಸಿ ಕೊಳ್ಳುತ್ತದೆ.
5. ಸರಿಯಾದ ಸಮಯಕ್ಕೆ ಆಹಾರ ಸೇವಿಸಿ
ಮನೆಯಲ್ಲಿದ್ದರೆ ಅಮ್ಮ ಸರಿಯಾದ ಸಮಯಕ್ಕೆ ಊಟ ಬಡಿಸುತ್ತಾಳೆ. ಕೆಲವೊಂದು ಸಲ ಅವಳೇ ಪ್ರೀತಿಯಿಂದ ತಿನ್ನಿಸುತ್ತಾಳೆ. ಆದರೆ ಹಾಸ್ಟೆಲ್ ನಲ್ಲಿ ನಾವು ಊಟ, ತಿಂಡಿಗಾಗಿ ಇಂತಹದ್ದೇ ಸಮಯ ಅಂತ ನಿರ್ಧರಿಸೋದಿಲ್ಲ. ನಮಗೆ ಮನಸ್ಸು ಬಂದಾಗ ಹೋಗಿ ತಿನ್ನುತ್ತೇವೆ. ಕೆಲವೊಂದು ಸಲವಂತೂ ತಿನ್ನೋದೇ ಇಲ್ಲ. ಈ ರೀತಿ ಮಾಡಬಾರದು. ಮೊದಲು ಒಂದು ವೇಳಾಪಟ್ಟಿಯನ್ನು ತಯಾರು ಮಾಡಿ. ಅದರ ಪ್ರಕಾರ ಊಟ ಹಾಗೂ ಪಠ್ಯಕ್ರಮವನ್ನು ನಿರ್ಧರಿಸಿ.
6. ಸಮಯ ಸಿಕ್ಕಾಗ ವ್ಯಾಯಾಮ ಮಾಡಿ
ಪ್ರತಿನಿತ್ಯ ದೈಹಿಕ ವ್ಯಾಯಾಮ ಮಾಡೋದು ಕೂಡ ತುಂಬಾನೇ ಮುಖ್ಯವಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ದೂವಾಗುತ್ತದೆ. ಜೊತೆಗೆ ಮನಸ್ಸಿಗೆ ಒಂದು ರೀತಿ ಚೈತನ್ಯ ಸಿಗುತ್ತದೆ. ನಮ್ಮ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ. ಹೀಗಾಗಿ ಹಾಸ್ಟೆಲ್ ನಲ್ಲಿ ಇದ್ದರೂ ಕೂಡ ವ್ಯಾಯಾಮ ಮಾಡೋದನ್ನು ಮರೀಬೇಡಿ.
7. ಕಣ್ಣು ತುಂಬಾ ನಿದ್ದೆ ಮಾಡಿ
ಹಾಸ್ಟೆಲ್ ನಲ್ಲಿರುವ ಹೆಚ್ಚಿನ ಮಕ್ಕಳು ಸರಿಯಾದ ಸಮಯಕ್ಕೆ ಮಲಗೋದಿಲ್ಲ. ಮೊಬೈಲ್, ಲ್ಯಾಪ್ ಟಾಪ್ ಅಂತ ಮಧ್ಯರಾತ್ರಿಯವರೆಗೂ ಅದರಲ್ಲೇ ಮುಳುಗಿರುತ್ತಾರೆ. ಇಲ್ಲದಿದ್ದರೆ ಸ್ನೇಹಿತರ ಜೊತೆಗೆ ಮಾತನಾಡುತ್ತಾ ಕೂರುತ್ತಾರೆ. ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗನೆ ಏಳಬೇಕು. ಇನ್ನೂ ನಿಮ್ಮೊಂದಿಗೆ ಯಾವಾಗಲೂ ಒಂದು ಪುಟ್ಟ ಔಷಧಿಯ ಕಿಟ್ ಇರಲಿ. ಶೀತ, ಜ್ವರ, ಕೆಮ್ಮಿನ ಔಷಧಿಯನ್ನು ಅದರಲ್ಲಿ ಇಟ್ಟುಕೊಳ್ಳಿ.
ಹಾಸ್ಟೆಲ್ ನಲ್ಲಿ ನಮ್ಮ ಕಾಳಜಿಯನ್ನು ನಾವೇ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡೋದನ್ನು ಮರಿಬೇಡಿ.



Click it and Unblock the Notifications
