Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಮಗುವಿನಲ್ಲಿ ಮಂಗನ ಬಾವು ಕಾಯಿಲೆ: ಈ ಕಾಯಿಲೆಯ ಲಕ್ಷಣಗಳೇನು, ಅಪಾಯಗಳೇನು?
ಮಂಪ್ಸ್ (ಮಂಗನ ಬಾವು)ಎಂಬುವುದು ವೈರಸ್ ತಗುಲಿ ಬರುವ ಕಾಯಿಲೆಯಾಗಿದೆ. ಈ ವೈರಸ್ ತಗುಲಿದರೆ ದವಡೆಯ ಎರಡೂ ಬದಿ ಊದಿಕೊಳ್ಳುವುದು ಹಾಗೂ ತುಂಬಾ ನೋವುಂಟಾಗುವುದು.
ಮಂಗನ ಬಾವು ಹೇಗೆ ಹರಡುತ್ತದೆ?
ಇದು ಸಾಂಕ್ರಮಿಕ ರೋಗವಾಗಿದ್ದು ವೈರಾಣು ಪೀಡಿತ ವ್ಯಕ್ತಿಯ ಸಂಪರ್ಕದಿಂದ ಉಂಟಾಗುವುದು. ಸೋಂಕು ತಗುಲಿದ ವ್ಯಕ್ತಿಯ ಎಂಜಲು, ಉಸಿರಾಟ, ದೈಹಿಕ ಸಂಪರ್ಕದಿಂದ ಹರಡುವುದು. ಈ ಸೋಂಕು ಹೆಚ್ಚಾಗಿ ಮಕ್ಕಳಲ್ಲಿ ಕಂಡು ಬರುವುದು. ಈ ಸೋಂಕು ತಗುಲಿದ ಆರಂಭದಲ್ಲಿ ಪ್ಯಾರೊಟಿಡ್ ಗ್ರಂಥಿ ಊದಿಕೊಂಡು ದವಡೆ ನೋವು ಉಂಟಾಗುವುದು. ಈ ಕಾಯಿಲೆ ಬಂದಾಗ ಆಹಾರ ನುಂಗುವಾಗ ತುಂಬಾನೇ ನೋವುಂಟಾಗುವುದು.
ಮಂಪ್ಸ್ ಲಕ್ಷಣಗಳೇನು?
ಜ್ವರ
ತಲೆನೋವು
ಸ್ನಾಯುಗಳಲ್ಲಿ ನೋವು
ತಿನ್ನಬೇಕೆಂದು ಅನಿಸುವುದಿಲ್ಲ
ಸುಸ್ತು

ಎಂಜಲು ಗ್ರಂಥಿಯಲ್ಲಿ ಮೊದಲಿಗೆ ಊತ ಉಂಟಾಗುವುದು, ಈ ಕಾಯಿಲೆ ಬಂದಾಗ ಈ ಲಕ್ಷಣಗಳೂ ಕಂಡು ಬರುವುದು
ದವಡೆಯ ಒಂದು ಬದಿ ಅಥವಾ ಎರಡೂ ಬದಿಯಲ್ಲಿ ಊತ
ದವಡೆಯಲ್ಲಿ ನೋವು
ಗಂಟಲ ಭಾಗದಲ್ಲಿ ನೋವು
ಯಾವಾಗ ವೈದ್ಯರನ್ನು ಕಾಣಬೇಕು?
ನಿಮ್ಮ ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ನೀವು ವೈದ್ಯರಿಗೆ ತೋರಿಸಬೇಕು. ಮಂಪ್ಸ್ ಬಹು ಬೇಗನೆ ಹರಡುತ್ತದೆ. ಆದ್ದರಿಂದ ರೋಗ ಲಕ್ಷಣಗಳು ಕಂಡು ಬಂದಲೇ ಕೂಡಲೇ ವೈದ್ಯರಿಗೆ ತೋರಿಸುವುದು ಒಳ್ಳೆಯದು.
ಮಗುವಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ
103F (39 C) ಜ್ವರ
ತಿನ್ನಲು ಕಷ್ಟವಾಗುವುದು, ನೀರು ಕುಡಿಯಲು ಕಷ್ಟವಾಗುವುದು
ಒಂದು ರೀತಿಯ ಗೊಂದಲ
ಹೊಟ್ಟೆನೋವು
ಗಂಡು ಮಗುವಿಗೆ ವೃಷಣಗಳಲ್ಲಿ ನೋವು
ಮಗುವಿಗೆ ಮಂಪ್ಸ್ ಬಂದಾಗ ಏನು ಮಾಡಬೇಕು?
ತುಂಬಾನೇ ವಿಶ್ರಾಂತಿ ಕೊಡಬೇಕು
ದವಡೆಯಲ್ಲಿ ಊತ ಬಂದ ಕಡೆ ತಣ್ಣೀರಿನಲ್ಲಿ ಬಟ್ಟೆ ಅದ್ದಿ ಇಡಿ.
ಸಾಕಷ್ಟು ನೀರು ಕುಡಿಯಬೇಕು
ಮೊಸರು, ಸೂಪ್‌ಕೊಡ ಬೇಕು, ನುಂಗಲು ಸುಲಭವಾದ ಆಹಾರ ನೀಡಿ.
ಆಮ್ಲೀಯ ಅಂದರೆ ಹುಳಿ ಆಹಾರ ನೋವು ಮತ್ತಷ್ಟು ಹೆಚ್ಚಿಸಬಹುದು ಆದ್ದರಿಂದ ನೀಡಬೇಡಿ.
ಮಂಪ್ಸ್ ಬಂದರೆ ಮಗುವನ್ನು ಶಾಲೆಗೆ ಕಳುಹಿಸಬಹುದೇ?
ಮಗುವಿಗೆ ಮಂಪ್ಸ್ ಬಂದರೆ ಒಂದು ವಾರದವರೆಗೆ ಶಾಲೆಗೆ ಕಳುಹಿಸಬೇಡಿ, ಇದರಿಂದ ಮಗು ಬೇಗ ಚೇತರಿಸಿಕೊಳ್ಳುವುದು, ಬೇರೆ ಮಗುವಿಗೆ ಹರಡುವುದನ್ನೂ ತಡೆಗಟ್ಟಬಹುದು. ಸಾಮಾನ್ಯವಾಗಿ ಮಂಪ್ಸ್ ಬಂದರೆ ಕನಿಷ್ಠ 10 ದಿನಗಳವರೆಗೆ ವಿಶ್ರಾಂತಿ ಒಳ್ಳೆಯದು.
ಮಂಪ್ಸ್ ತುಂಬಾ ಅಪಾಯಕಾರಿಯೇ?
ಮಂಪ್ಸ್ ಅಪಾಯಕಾರಿಯಾಗುವುದು ತುಂಬಾನೇ ಕಡಿಮೆ. ಇದರಿಂದ ಉರಿಯೂತದ ಸಮಸ್ಯೆ ಉಂಟಾಗುವುದು , ಮೆದುಳು, ಸಂತಾನೋತ್ಪತ್ತಿ ಅಂಗಾಂಗದಲ್ಲಿ ಉರಿಯೂತದ ಸಮಸ್ಯೆ ಕಂಡು ಬರುವುದು.
ವೃಷನಗಳಲ್ಲಿ ಉರಿಯೂತದ ಸಮಸ್ಯೆ ಕಂಡು ಬರುವುದು, ಈ ರೀತಿಯಾದಾಗ ಕೋಲ್ಡ್ ಪ್ಯಾಕ್ ಇಡಬೇಕು.
ಮಹಿಳೆಯರಿಗೆ ಬಂದರೆ ಗರ್ಭಕೋಶದಲ್ಲಿ ಊತ ಕಂಡು ಬರುವುದು.
ಗರ್ಭಿಣಿಯರಿಗೆ ಬಂದರೆ ಗರ್ಭಪಾತ ಉಂಟಾಗುವುದು.
ಕೆಲವರಿಗೆ ಪಿಡ್ಸ್ ಕೂಡ ಬರಬಹುದು. ತಲೆಸುತ್ತು, ತಲೆನೋವು ಈ ಬಗೆಯ ಸಮಸ್ಯೆಗಳು ಕಂಡು ಬರುವುದು.
ಮೇಧೋಜೀರಕ ಗ್ರಂಥಿಯಲ್ಲಿ ಊತ ಕಂಡು ಬರುವುದ.
ಮಂಪ್ಸ್ ತಡೆಗಟ್ಟುವುದು ಹೇಗೆ?
ಲಸಿಕೆ ಪಡೆಯುವುದರ ಮೂಲಕ ಇದನ್ನು ತಡೆಗಟ್ಟಬಹುದು. ತುಂಬಾ ಮಕ್ಕಳು ದಡಾರ, ಮಂಪ್ಸ್ ರುಬೆಲ್ಲಾಗೆ 12-15 ತಿಂಗಳ ಒಳಗೆ ಲಸಿಕೆ ಪಡೆದಿರುತ್ತಾರೆ. ಎರಡನೇ ಲಸಿಕೆ ಶಾಲಾ ಪ್ರಾಯದಲ್ಲಿ ಅಂದರೆ 4-6 ವರ್ಷದೊಳಗೆ ಕೊಡಿಸಬೇಕು.
ಚಿಕಿತ್ಸೆಯೇನು?
ಮಂಪ್ಸ್‌ಗೆ ನಿರ್ದಿಷ್ಟ ಚಿಕಿತ್ಸೆಯಿಲ್ಲ, ಆದರೆ ರೋಗ ಲಕ್ಷಣಗಳನ್ನು ನೋಡಿ ಚಿಕಿತ್ಸೆ ನೀಡಲಾಗುವುದು. ಈ ಕಾಯಿಲೆ ಬಂದರೆ ಮಕ್ಕಳಿಗೆ ಆಸ್ಪಿರಿನ್ ನೀಡಬಾರದು. ಅಲ್ಲದೆ ಹುಳಿ ಆಹಾರಗಳನ್ನು ನೀಡಬಾರದು. ಮಕ್ಕಳಿಗೆ ಸಾಕಷ್ಟು ನೀರು ಕುಡಿಯಲು ನೀಡಬೇಕು. ಮಕ್ಕಳಿಗೆ ವಿಶ್ರಾಂತಿ ಅಗ್ಯತ, ಹಾಗಂತ ಅವರು ಮಲಗಿಕೊಂಡೇ ಇರಬೇಕು ಎಂದರೆ ಅವರು ಕೇಳಲ್ಲ, ಅವರು ಅವರಿಷ್ಟಕ್ಕೆ ಮನೆಯೊಳಗಡೆ ಓಡಾಡಿಕೊಂಡು ಆರಮವಾಗಿ ಇರಲಿ. ಗಂಜಿ ಆಹಾರ ನೀಡಿ.



Click it and Unblock the Notifications