Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮದರ್ಸ್ ಡೇ 2023 : ಈ ರೀತಿಯ ಗಿಫ್ಟ್‌ಗಳನ್ನು ಅಮ್ಮ ಖಂಡಿತ ಇಷ್ಟ ಪಡುತ್ತಾಳೆ
ತಾಯಿ ಅಂದ್ರೆ ಯಾರಿಗೆ ತಾನೇ ಇಷ್ಟಯಿಲ್ಲ ಹೇಳಿ. ಪ್ರತಿಯೊಬ್ಬ ವ್ಯಕ್ತಿಯು ತಾಯಿಯನ್ನು ಎಷ್ಟು ಪ್ರೀತಿಸುತ್ತಾರೋ ಅದಕ್ಕಿಂತ ನೂರು ಪಟ್ಟು ಹೆಚ್ಚು ಪ್ರೀತಿಯನ್ನು ತಾಯಿಯಾದವಳು ತನ್ನ ಮಗುವಿಗೆ ನೀಡುತ್ತಾಳೆ. ತಾಯಿ ಎಂದರೆ ಪ್ರತಿಯೊಬ್ಬರಿಗೆ ತುಂಬಾನೇ ಸ್ಪೆಷಲ್ ಆಕೆಯ ಸ್ಥಾನವನ್ನು ಯಾರೊಬ್ಬರಿಂದಲೂ ತುಂಬೋದಕ್ಕೆ ಸಾಧ್ಯವೇ ಇಲ್ಲ. ಅಂತಹ ತಾಯಿಗೆ ತಾಯಂದಿರ ದಿನಕ್ಕೆ ಏನಾದ್ರು ಸ್ಪೆಷಲ್ ಗಿಫ್ಟ್ ಕೊಡ್ಬೇಕು ಅಂತ ನೀವು ಖಂಡಿತವಾಗಿ ಯೋಚಿಸುತ್ತಿರುತ್ತೀರಿ.
ಆದ್ರೆ ಸಮಯದ ಅಭ್ಯಾವ ಅಥವಾ ಬೇರ್ಯಾವುದೇ ಕಾರಣದಿಂದ ನಿಮಗೆ ಗಿಫ್ಟ್ ಕೊಡೋದಕ್ಕೆ ಸಾಧ್ಯವಾಗದೇ ಇರಬಹುದು. ತಾಯಿ ಮೇಲಿನ ಪ್ರೀತಿಯನ್ನು ಆಕೆಗೆ ಗಿಫ್ಟ್ ಕೊಡುವುದರ ಮೂಲಕ ತೋರಿಸ್ಬೇಕಾಗಿಲ್ಲ. ಆಕೆಯ ಸ್ಪೆಷಲ್ ಡೇ ಏನಾದ್ರು ಕೊಡದೇ ಹೋದರೆ ಖಂಡಿತ ನಿಮಗೆ ಸಮಾಧಾನವಾಗೋದಿಲ್ಲ. ಅಂತವರಿಗಾಗಿ ಕೆಲವೊಂದು ಬೆಸ್ಟ್ ಗಿಫ್ಟ್ ಐಡಿಯಾಗಳನ್ನು ನಾವು ಕೊಡ್ತೀವಿ. ಖಂಡಿತ ನೀವು ಕೊಟ್ಟ ಗಿಫ್ಟ್‌ಗಳನ್ನು ಆಕೆ ಇಷ್ಟ ಪಡುತ್ತಾಳೆ.

ಅಮ್ಮ ಬಳಸುವ ವಸ್ತುಗಳನ್ನು ಗಿಫ್ಟ್ ಆಗಿ ನೀಡಿ
ಅಮ್ಮನಿಗೆ ಒಂದು ಅತ್ಯುತ್ತಮ ಉಡುಗೊರೆ ನೀಡಬೇಕು ಅನ್ನುವ ಬಯಕೆ ಪ್ರತಿಯೊಬ್ಬರಿಗೂ ಇರುತ್ತದೆ. ಕೆಲವು ಅಮ್ಮಂದಿರಿಗೆ ಹೂಗುಚ್ಛ, ಕೇಕ್, ಚಾಕೊಲೇಟ್ ಅಥವಾ ಕಾರ್ಡ್ ನೀಡಿದರೆ ಇಷ್ಟವಾಗುತ್ತದೆ. ಆದರೆ ನೀವು ಅವಳ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸೋದಾದ್ರೆ ಆಕೆಗೆ ಉಪಯೋಗಕ್ಕೆ ಬರುವಂತಹ ಗಿಫ್ಟ್‌ಗಳನ್ನೇ ನೀಡಿ.
ಚರ್ಮ ಹಾಗೂ ಕೂದಲಿನ ಆರೈಕೆ
ಮಹಿಳೆಯರು ಚರ್ಮ ಮತ್ತು ಕೂದಲಿನ ಆರೈಕೆಗೆ ಸಂಬಂಧಿಸಿದ ತುಂಬಾನೇ ಜಾಗರೂಕರಾಗಿರುತ್ತಾರೆ. ಹೀಗಾಗಿ ಇಂತಹ ವಸ್ತುಗಳನ್ನೇ ಆಕೆಗೆ ಗಿಫ್ಟ್ ಆಗಿ ನೀಡಿ. ಕೂದಲು ಬೆಳ್ಳಗಾಗುತ್ತಿದೆ, ತ್ವಚೆ ಸಡಿಲವಾಗುತ್ತಿದೆ, ತ್ವಚೆಯ ಮೇಲೆ ಸುಕ್ಕುಗಳು, ತ್ವಚೆಯ ಹೊಳಪು ಕಳೆದುಹೋಗುತ್ತಿದೆ ಈ ರೀತಿಯ ಸಮಸ್ಯೆ ಇದ್ದರೆ ಆಂಟಿ ಏಜಿಂಗ್ ಕ್ರೀಮ್‌ಗಳು, ಐ ಕ್ರೀಮ್‌ಗಳು, ಕೂದಲನ್ನು ಆರೋಗ್ಯಕರವಾಗಿಡುವ ಶಾಂಪೂಗಳು, ಮಸಾಜ್ ಎಣ್ಣೆಗಳು, ಅವರಿಗೆ ಉಪಯುಕ್ತವಾದ ಹಲವಾರು ಆಯ್ಕೆಗಳಿವೆ ಇದನ್ನೇ ಗಿಫ್ಟ್ ಆಗಿ ನೀಡಬಹುದು.
ಫ್ಯಾಷನ್ ಸಂಬಂಧಿತ ವಸ್ತುಗಳು
ನಿಮ್ಮ ತಾಯಿ ಇತ್ತೀಚಿನ ಫ್ಯಾಷನ್ ಮತ್ತು ಟ್ರೆಂಡ್‌ಗಳನ್ನು ಅನುಸರಿಸುತ್ತಿದ್ದರೆ ಆಕೆಗೆ ಉಡುಗೊರೆ ನೀಡಲು ನಿಮ್ಮ ಬಳಿ ಸಾಕಷ್ಟು ಆಯ್ಕೆಗಳಿವೆ. ಅವರು ಕೆಲಸಕ್ಕೆ ಹೋಗುವವರಾದರೆ ನೀವು ಅವರಿಗೆ ವಿಭಿನ್ನ ಶೈಲಿಯ ಬಟ್ಟೆಗಳನ್ನು ನೀಡಬಹುದು. ಕುರ್ತಾಗಳಿಂದ ಹಿಡಿದು ಸೀರೆಗಳು, ಸೂಟ್‌ಗಳು ಮತ್ತು ಇನ್ನೂ ಹಲವಾರು ಆಯ್ಕೆಗಳಿದೆ. ಒಂದು ವೇಳೆ ನಿಮಗೆ ಆಫ್‌ಲೈನ್‌ನಲ್ಲಿ ಖರೀದಿಸಲು ಸಮಯವಿಲ್ಲದಿದ್ದರೆ ನೀವು ಆನ್‌ಲೈನ್ ಮೂಲಕ ಕೂಡ ಆರ್ಡರ್ ಮಾಡಬಹುದು.
ಫಿಟ್ನೆಸ್‌ಗೆ ಸಂಬಂಧಿಸಿದ ಗಿಫ್ಟ್
ನಿಮ್ಮ ತಾಯಿ ಫಿಟ್ನೆಸ್ ಫ್ರೀಕ್ ಆಗಿದ್ದರೆ ಆಕೆಯ ಈ ಅಭ್ಯಾಸಗಳು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದು. ಹೀಗಾಗಿ ನೀವು ಆಕೆಗೆ ಪ್ರೋತ್ಸಾಹ ನೀಡಿ. ಫಿಟ್‌ನೆಸ್‌ಗೆ ಸಂಬಂಧಿಸಿದ ಯಾವುದಾದರೂ ವಸ್ತುಗಳನ್ನು ಆಕೆಗೆ ಗಿಫ್ಟ್ ಆಗಿ ನೀಡಿ. ಮೊದಲನೇಯದ್ದು ಸ್ಮಾರ್ಟ್ ವಾಚ್ ಯಾವಾಗಲೂ ಇದು ಮೊದಲ ಮತ್ತು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ನಿಮ್ಮ ತಾಯಿ ದಿನದಲ್ಲಿ ಎಷ್ಟು ಹೆಜ್ಜೆ ನಡೆಯುತ್ತಾರೆ, ಹೃದಯ ಬಡಿತ, ರಕ್ತದ ಆಮ್ಲಜನಕ ಮತ್ತು ಮಲಗುವ ಚಟುವಟಿಕೆಗಳನ್ನು ಕೂಡ ಟ್ರ್ಯಾಕ್ ಮಾಡಬಹುದು.
ಈ ರೀತಿ ಅಮ್ಮಂದಿರ ದಿನವನ್ನು ಸ್ಪೆಷಲ್ ಆಗಿಸಿ. ಆಕೆಗೆ ಇಷ್ಟವಾಗಿರೋ ಹಾಗೂ ಉಪಯೋಗಕ್ಕೆ ಬರೋ ವಸ್ತುಗಳನ್ನೇ ಆಕೆಗೆ ಗಿಫ್ಟ್ ಆಗಿ ನೀಡೋದನ್ನು ಮರೀಬೇಡಿ.



Click it and Unblock the Notifications

