Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪೋಷಕರೇ ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಮಕ್ಕಳ ಆತ್ಮವಿಶ್ವಾಸ ಕುಗ್ಗುವುದು
ಮಕ್ಕಳನ್ನು ಸಾಕಿ ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ನಿರ್ಮಾಣ ಮಾಡುವುದು ಅಂದ್ರೆ ಅಷ್ಟು ಸುಲಭದ ಮಾತಲ್ಲ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಎನ್ನುವ ಮಾತೇ ಇದೆ. ನೀವು ಆರಂಭದಲ್ಲಿ ಯಾವ ರೀತಿ ಮಕ್ಕಳನ್ನು ಬೆಳೆಸುತ್ತೀರೋ ಅದೇ ರೀತಿ ಮಕ್ಕಳು ದೊಡ್ಡವರಾದ ಮೇಲೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ ಆದರೆ ಪಾಲಕರು ಯಾವುದೇ ತಪ್ಪುಗಳನ್ನು ಮಾಡಿದರು ಕೂಡ ಅದು ಮಕ್ಕಳ ಮೇಲೆ ಭಾರಿ ಪರಿಣಾಮ ಬೀರುತ್ತದೆ.

ನಿಮ್ಮ ಮಗು ಭವಿಷ್ಯದಲ್ಲಿ ಹೀಗೆ ಆಗಬೇಕು ಅಥವಾ ಇಂಥದ್ದೇ ಉದ್ಯೋಗ ಮಾಡಬೇಕು ಎಂದು ಅಂದುಕೊಳ್ಳುವುದು ಸಹಜ ಆದರೆ ಅದಕ್ಕಾಗಿ ಮಕ್ಕಳ ಮೇಲೆ ಒತ್ತಡ ಹೇರುತ್ತ ನೀವು ಮಾಡುವ ಒಂದಿಷ್ಟು ತಪ್ಪುಗಳು ಮಕ್ಕಳನ್ನು ಇನ್ನಷ್ಟು ಕುಗ್ಗಿಸುತ್ತಾ ಹೋಗುತ್ತವೆ. ಮೊದಲನೆಯದಾಗಿ ನಾವು ಮಕ್ಕಳನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲವಾದರೆ ನಾವು ನಮಗೆ ಅರ್ಥವಾದಂತೆ ಮಕ್ಕಳನ್ನು ಬೆಳೆಸಲು ಹೋದಾಗ ಅದು ಅವರ ಮೇಲೆ ಪರಿಣಾಮ ಬೀರುತ್ತದೆ ಹಾಗಾಗಿ ಈ ಕೆಳಗಿನ ಕೆಲವು ತಪ್ಪುಗಳು ಮಕ್ಕಳನ್ನು ಕುಗ್ಗಿಸುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳಿ.
ಅತಿಯಾದ ನಿರೀಕ್ಷೆ;
ತಂದೆ ತಾಯಿಗೆ ಮಕ್ಕಳ ಮೇಲೆ ನಿರೀಕ್ಷೆ ಇರುವುದು ಸಹಜ. ತನ್ನ ಮಗು ಹಾಗೆ ಆಗಬೇಕು ಹೀಗೆ ಆಗಬೇಕು ಅವರಂತೆ ಬೆಳೆಯಬೇಕು ಎಂದಲ್ಲ ಆಸೆ ಇರುವುದು ತಪ್ಪೇನು ಅಲ್ಲ. ಆದರೆ ವಾಸ್ತವಕ್ಕೆ ಹತ್ತಿರವಾಗದೆ ಇರುವ ವಿಚಾರಗಳನ್ನು ಮಕ್ಕಳ ಮೇಲೆ ಹೇರುವುದು ತಪ್ಪು. ಯಾವುದೇ ಕಾರಣಕ್ಕೂ ನೀನು ಹೀಗೆ ಇರಬೇಕು ಎಂದು ಒತ್ತಡವನ್ನ ಹೇರಬಾರದು. ಈ ಒಂದು ತಪ್ಪು ಮಗುವಿನ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಮಕ್ಕಳ ತಪ್ಪನ್ನು ಬೆರಳು ಮಾಡಿ ತೋರಿಸುವುದು!
ಎಲ್ಲವನ್ನು ತಿಳಿದ ದೊಡ್ಡವರೇ ತಪ್ಪು ಮಾಡುತ್ತಾರೆ ಅಂತದ್ರಲ್ಲಿ ಮಕ್ಕಳು ತಪ್ಪು ಮಾಡಿದ್ರೆ ಅದು ದೊಡ್ಡ ವಿಚಾರವೇನು ಅಲ್ಲ. ಆದರೆ ಮಗು ಮತ್ತೆ ಆ ತಪ್ಪನ್ನು ಮಾಡುವಂತೆ ಕುಳಿತು ಮಗುವಿಗೆ ಬುದ್ಧಿ ಹೇಳಬೇಕೇ ಹೊರತು ನೀನು ತಪ್ಪು ಮಾಡಿದೆ ಎಂದು ಮತ್ತೆ ಮತ್ತೆ ಬೆರಳು ಮಾಡಿ ತೋರಿಸಬಾರದು ತಂದೆ ತಾಯಿಗಳಾದ ನಾವೇ ನಮ್ಮ ಮಕ್ಕಳನ್ನು ಆಡಿಕೊಳ್ಳಲು ಶುರು ಮಾಡಿದರೆ ಬೇರೆಯವರ ಎದುರು ಮಗು ಇನ್ನಷ್ಟು ಸಂಕುಚಿತ ಮನೋಭಾವ ಬೆಳೆಸಿಕೊಳ್ಳುತ್ತದೆ ಇದರಿಂದಾಗಿ ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.
ಬೇರೆಯವರೊಂದಿಗೆ ಹೋಲಿಕೆ!
ಬಹುತೇಕ ಪಾಲಕರು ಮಾಡುವ ದೊಡ್ಡ ತಪ್ಪು ಇದು. ನಿನ್ನ ಕ್ಲಾಸಿನಲ್ಲಿ ಇರುವವರನ್ನು ನೋಡು ನಿನಗಿಂತ ಉತ್ತಮವಾಗಿ ಓದುತ್ತಾರೆ ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳುತ್ತಾರೆ, ಪಕ್ಕದ ಮನೆಯ ಹುಡುಗ ನಿನಗಿಂತಲೂ ಜಾಣ. ಈ ರೀತಿಯ ಮಾತುಗಳು ಮಕ್ಕಳನ್ನು ಕುಗ್ಗಿಸಬಹುದು ಮಕ್ಕಳಲ್ಲಿ ಮಾದರಿಯಾಗುವಂತಹ ವ್ಯಕ್ತಿಯ ಉದಾಹರಣೆಯನ್ನು ಕೊಟ್ಟು ನೀನು ಹಾಗೆ ಆಗಲು ಪ್ರಯತ್ನಿಸು ಎಂದು ಸರಿಯಾದ ವಿಧಾನದಲ್ಲಿ ತಿಳಿಸಬೇಕೆ ಹೊರತು ನಿನಗಿಂತ ಇನ್ನೊಬ್ಬರು ಉತ್ತಮರು ಎಂಬ ರೀತಿಯಲ್ಲಿ ಹೇಳಬಾರದು ಈ ರೀತಿ ಮಾಡಿದರೆ ಮಕ್ಕಳ ಮನಸ್ಸಿನ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ ಇದು ಅವರನ್ನು ಜೀವನ ಪರ್ಯಂತ ಕುಗ್ಗುವಂತೆ ಮಾಡುತ್ತದೆ ಖಿನ್ನತೆ ಮಕ್ಕಳಲ್ಲಿ ಉಂಟಾಗುತ್ತದೆ.
ಮಗುವನ್ನು ಅತಿಯಾಗಿ ರಕ್ಷಿಸುವುದು!
ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಪಾಲಕರು ಅತಿಯಾದ ಪ್ರೀತಿ, ಮೋಹ ಬೆಳೆಸಿಕೊಂಡಿರುತ್ತಾರೆ. ತನ್ನ ಮಗು ತಪ್ಪೇ ಮಾಡುವುದಿಲ್ಲ ಎನ್ನುವಂತಹ ಮನೋಭಾವ ಅವರಲ್ಲಿ ಇರುತ್ತದೆ. ಇದಕ್ಕಾಗಿ ಮಕ್ಕಳನ್ನು ಸ್ವಚ್ಛಂದವಾಗಿ ಇನ್ನೊಬ್ಬರ ಜೊತೆಗೆ ಬೆರೆಯಲು ಕೂಡ ಬಿಡುವುದಿಲ್ಲ. ನಿಮ್ಮದೇ ಆದ ಪಂಜರದಲ್ಲಿ ಇಟ್ಟು ಭಯದ ವಾತಾವರಣ ಸೃಷ್ಟಿಸಬೇಡಿ. ಇಂತಹ ಸಂದರ್ಭದಲ್ಲಿ ಮಕ್ಕಳ ಮನಸ್ಸಿನ ಮೇಲೆ ಎರಡು ರೀತಿಯ ಪರಿಣಾಮ ಬೀರಬಹುದು ಒಂದು ತಾನೆ ಶ್ರೇಷ್ಠ ತನಗಿಂತ ಉತ್ತಮ ವ್ಯಕ್ತಿ ಬೇರೊಬ್ಬರಿಲ್ಲ ಎನ್ನುವ ಕೆಟ್ಟ ಮನೋಭಾವನೆ ಬೆಳೆಯಬಹುದು ಅಥವಾ ತಾನು ಬೇರೆಯವರ ಜೊತೆಗೆ ಬೆರೆಯಲು ಸಾಧ್ಯವಾಗುತ್ತಿಲ್ಲ ಎನ್ನುವ ಖಿನ್ನತೆ ಕೂಡ ಬೆಳೆಯಬಹುದು ಹಾಗಾಗಿ ಮಕ್ಕಳನ್ನು ಅತಿಯಾಗಿ ಪ್ರೊಟೆಕ್ಟ್ ಮಾಡುವುದು ಕೂಡ ಒಳ್ಳೆಯದಲ್ಲ.
ಶಿಸ್ತಿನ ಹೆಸರಿನಲ್ಲಿ ಶಿಕ್ಷೆ!
ಸಾಕಷ್ಟು ಪಾಲಕರು ಮಕ್ಕಳ ವಿಷಯದಲ್ಲಿ ಪ್ರತಿಷ್ಠೆ ಮೆರೆಯಲು ಹೋಗುತ್ತಾರೆ ತನ್ನ ಮಗ ಅಥವಾ ಮಗಳು ಬೇರೆ ಮಕ್ಕಳಿಗಿಂತಲೂ ತುಂಬಾನೇ ಶಿಸ್ತಿನಿಂದ ಇರುತ್ತಾರೆ ಎಂಬುದನ್ನ ತೋರಿಸಲು ಆ ಮಕ್ಕಳ ಮೇಲೆ ಅತಿಯಾದ ಶಿಸ್ತನ್ನು ಹೇರಲು ಹೋಗುತ್ತಾರೆ ಮಕ್ಕಳನ್ನು ಮಕ್ಕಳಾಗಿಯೇ ಇರಲು ಬಿಡುವುದು ಕೂಡ ಬಹಳ ಮುಖ್ಯವಾದ ವಿಚಾರ ಅವರ ಎಲ್ಲಾ ಆಸೆಗಳಿಗೆ ಎಲ್ಲಾ ಆಟಗಳಿಗೆ ಕಡಿವಾಣ ಹಾಕುತ್ತಾ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ನೀಡಿದರೆ ಅದು ಮಕ್ಕಳ ಮನಸ್ಸಿನ ಮೇಲೆ ದೀರ್ಘಕಾಲದವರೆಗೆ ಉಳಿದುಕೊಳ್ಳುತ್ತದೆ ಹಾಗೂ ಮಕ್ಕಳ ಆತ್ಮವಿಶ್ವಾಸವನ್ನು ಕುಂಠಿತಗೊಳಿಸುತ್ತದೆ.
ಹಾಗಾಗಿ ಮಕ್ಕಳ ಮೇಲೆ ಪ್ರೀತಿ ಇರಲಿ ಮೋಹವಲ್ಲ, ಶಿಸ್ತನ್ನು ಕಲಿಸಿ ಶಿಕ್ಷೆಯನ್ನು ಕೊಟ್ಟಲ್ಲ, ಆತ್ಮವಿಶ್ವಾಸ ಬೆಳೆಸಿ, ಕುಗ್ಗಿಸಬೇಡಿ. ಮಕ್ಕಳಿಗೆ ಜೀವನ ಪಾಠ ಕಲಿಸಿ, ಜೀವನದ ಬಗ್ಗೆ ಭಯವನ್ನಲ್ಲ!



Click it and Unblock the Notifications











