Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Menstruation: ಮಗಳ ಋತುಚಕ್ರದ ಸಂದರ್ಭದಲ್ಲಿ ತಾಯಿ ಈ ವಿಚಾರಗಳ ಬಗ್ಗೆ ಕಾಳಜಿ ವಹಿಸಲೇಬೇಕು!
ಹೆಣ್ಣು ಮಕ್ಕಳು ಸಾಮಾನ್ಯವಾಗಿ ಹತ್ತು ವರ್ಷ ದಾಟಿದ ನಂತರ ಋತುಮತಿಯಾಗುತ್ತಾರೆ. ಹದಿಹರೆಯದ ವಯಸ್ಸಿನಲ್ಲಿ ಅವರಿಗೆ ಮುಟ್ಟಿನ ಬಗ್ಗೆ ಹೆಚ್ಚಾಗಿ ಮಾಹಿತಿ ಇರೋದಿಲ್ಲ. ಯಾವೆಲ್ಲಾ ವಿಚಾರದ ಬಗ್ಗೆ ಗಮನ ಕೊಡಬೇಕು ಎನ್ನುವುದು ಗೊತ್ತಿರೋದಿಲ್ಲ. ಈ ವಯಸ್ಸಿನಲ್ಲಿ ಮಗಳ ಋತುಚಕ್ರದ ಬಗ್ಗೆ ಕಾಳಜಿ ವಹಿಸೋದು ತಾಯಿಯಾದವಳ ಕರ್ತವ್ಯವಾಗಿರುತ್ತದೆ.
ಮಗಳಿಗಾಗಿ ತಾಯಿಯು ಯಾವ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎನ್ನುವ ಬಗ್ಗೆ ಸಂಪೂರ್ಣ ಕಾಳಜಿಯನ್ನು ತಾಯಿಯೇ ವಹಿಸಬೇಕು. ಅಷ್ಟಕ್ಕು ಹದಿಹರೆಯದ ಮಗಳು ಋತುಮತಿಯಾಗಿದ್ದಾಗ ತಾಯಿಯು ನಿಭಾಯಿಸಬೇಕಾದ ಕರ್ತವ್ಯಗಳೇನು? ಯಾವ ವಿಚಾರದ ಬಗ್ಗೆ ಕಾಳಜಿ ಮಾಡಬೇಕು ಅನ್ನೋದನ್ನು ತಿಳಿಯೋಣ.

1. ಮಗಳು 16 ವಯಸ್ಸಿಗಿಂತ ಮೊದಲು ಋತುಮತಿಯಾಗದ್ದಿದ್ದಾಗ
ಸಾಮಾನ್ಯವಾಗಿ 10 ರಿಂದ 15 ವರ್ಷಗಳ ಮಧ್ಯೆ ಹೆಣ್ಣು ಮಕ್ಕಳು ಋತುಮತಿಯಾಗುತ್ತಾರೆ. ಆದರೆ ನಿಮ್ಮ ಮಗಳು 15 ವರ್ಷಗಳ ನಂತರವೂ ಋತುಮತಿಯಾಗದಿದ್ದರೆ ನೀವು ಖಂಡಿತ ಆಕೆಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಲೇಬೇಕು. ಮಕ್ಕಳು ಆರೋಗ್ಯವಂತರಾಗಿದ್ದರೆ ಈ ರೀತಿ ಆಗೋದಿಲ್ಲ. ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದಾಗ ಮಾತ್ರ ಈ ಸಮಸ್ಯೆ ಸಂಭವಿಸೋದಕ್ಕೆ ಸಾಧ್ಯ.
ನಿಮ್ಮ ಮಗಳು 15 ವರ್ಷಗಳ ನಂತರವೂ ಋತುಮತಿಯಾಗದಿದ್ದರೆ ಅವರು ಅಮೆನೋರಿಯಾದಿಂದ ಬಳಲುತ್ತಿದ್ದಾರೆ ಎಂದರ್ಥ. ಈ ಸಮಸ್ಯೆ ಇದ್ದಾಗ ಅವರು 15 ವರ್ಷಕ್ಕಿಂತ ಮೊದಲು ಋತುಮತಿಯಾಗೋದಿಲ್ಲ. ಇದಕ್ಕೆ ಕಾರಣಗಳು ಅನೇಕ ಇರಬಹುದು. ಮೊದಲನೇಯದ್ದು ಅನುವಂಶೀಯತೆ, ಎರಡನೇಯದ್ದು ಅಂಗರಚನಾ ವೈಪರೀತ್ಯ. ಹೀಗಾಗಿ ವೈದ್ಯರನ್ನು ಸಂಪರ್ಕಿಸುವುದು ತುಂಬಾನೇ ಮುಖ್ಯ.
2. ರಕ್ತಸ್ರಾವವಾಗದಿದ್ದಾಗ ನೋವು ಅಧಿಕವಾಗಿರುತ್ತದೆ
ಹದಿಹರೆಯದ ಮಕ್ಕಳಿಗೆ ಋತುಚಕ್ರದ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿರೋದಿಲ್ಲ. ತಾಯಿಯಾದವಳು ಮಗಳಲ್ಲಿ ಮುಕ್ತವಾಗಿ ಮಾತನಾಡಿಸಿ ಆಕೆಯ ಸಮಸ್ಯೆಯನ್ನು ಅರಿತುಕೊಳ್ಳಬೇಕು. ಮುಟ್ಟಿನ ಸಮಯದಲ್ಲಿ ನಿಮ್ಮ ಮಗಳು ಅತೀವ ನೋವನ್ನು ಅನುಭವಿಸುತ್ತಿರುತ್ತಾರೆ. ಆದರೆ ರಕ್ತಸ್ರಾವ ಆಗುತ್ತಿರೋದಿಲ್ಲ. ಹೀಗಾದರೆ ಖಂಡಿತ ಆರೋಗ್ಯ ಸಮಸ್ಯೆಯಿದೆ ಎಂದರ್ಥ.
ನಿಮ್ಮ ಮಗಳಲ್ಲಿ ಅಂಡೋತ್ಪತ್ತಿ, ಶ್ರೋಣಿಯ ಉರಿಯೂತದ ಕಾಯಿಲೆ, ಎಂಡೊಮೆಟ್ರಿಯೊಸಿಸ್ ನಂತಹ ಗಂಭೀರ ಸಮಸ್ಯೆಗಳಿರಬಹುದು. ಇಂತಹ ಸಂದರ್ಭದಲ್ಲಿ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ. ಇಲ್ಲದಿದ್ದರೆ ಇದರಿಂದ ಮುಂದೆ ಬಹುದೊಡ್ಡ ಅಪಾಯವನ್ನು ಎದುರಿಸಬೇಕಾಗುತ್ತದೆ.
3. ಮಗಳಿಗೆ 7 ದಿನಕ್ಕಿಂತ ಹೆಚ್ಚು ರಕ್ತಸ್ರಾವವಾದರೆ
ಸಾಮಾನ್ಯವಾಗಿ ಋತುಮತಿಯಾದಾಗ ರಕ್ತಸ್ರಾವವು 7 ದಿನಗಳವರೆಗೂ ಇರುತ್ತದೆ. ಇಲ್ಲವಾದರೆ ಅದಕ್ಕಿಂತ ಮೊದಲೇ ನಿಂತು ಹೋಗುತ್ತದೆ. ಆದರೆ ಯಾರಿಗೆ 7 ದಿನಗಳ ನಂತರವೂ ಮುಟ್ಟಾಗುತ್ತದೆಯೋ ಅದು ಖಂಡಿತ ಸಾಮಾನ್ಯವಲ್ಲ. ಈ ಸ್ಥಿತಿಯನ್ನು ಮೆನೊರ್ಹೇಜಿಯಾ ಎಂದು ಕರೆಯಲಾಗುತ್ತದೆ. ಇನ್ನು ಎಲ್ಲಾ ದಿನವೂ ಅಧಿಕ ರಕ್ತಸ್ರಾವವಾಗುತ್ತಿರುತ್ತದೆ. ಇದು ಕೂಡ ನಿಮ್ಮ ಮಗಳಿಗೆ ಗಂಭೀರ ಆರೋಗ್ಯ ಸಮಸ್ಯೆಯಿದೆ ಅನ್ನೋದನ್ನು ಸೂಚಿಸುತ್ತದೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸಿದರೆ ಉತ್ತಮ.
4. ಮಗಳ ಋತುಚಕ್ರದ ಅವಧಿಯ ಬಗ್ಗೆ ತಿಳಿದುಕೊಳ್ಳಿ
ಮಹಿಳೆಯರಲ್ಲಿ ಪ್ರತಿ 28 ದಿನಗಳಿಗೊಮ್ಮೆ ಮುಟ್ಟು ಸಂಭವಿಸಿದರೆ ಉತ್ತಮ. ಆದರೆ ಸಾಮಾನ್ಯವಾಗಿ ಕೆಲವರಲ್ಲಿ 21 ರಿಂದ 35 ದಿನಗಳ ಮಧ್ಯೆ ಕೂಡ ಮುಟ್ಟು ಸಂಭವಿಸುವ ಸಾಧ್ಯತೆಯಿದೆ. ಇದು ಸಾಮಾನ್ಯ ಋತುಚಕ್ರ. ಆದರೆ 21 ದಿನಗಳಿಗಿಂತ ಮುಂಚೆ ಅಥವಾ 45 ದಿನಗಳ ನಂತರ ರಕ್ತಸ್ರಾವವಾಗುತ್ತಿದ್ದರೆ ಇದು ಖಂಡಿತ ಸಾಮಾನ್ಯವಲ್ಲ. ನಿಮ್ಮ ಮಗಳಲ್ಲಿ ಈ ರೀತಿ ಆಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರಿಹಾರ ಕಂಡುಕೊಳ್ಳೋದು ಉತ್ತಮ.
5. 90 ದಿನಗಳ ಕಾಲ ಮುಟ್ಟಾಗದಿರುವುದು
ಆರೋಗ್ಯವಂತರಲ್ಲಿ 21 ರಿಂದ 35 ದಿನಗಳ ಮಧ್ಯೆ ಮುಟ್ಟಾಗುತ್ತದೆ. ಆದರೆ ಇನ್ನೂ ಕೆಲವರಲ್ಲಿ ಒಂದು ಸಾರಿ ಮುಟ್ಟಾಗಿ 90 ದಿನಗಳಾದ್ರೂ ಕೂಡ ಮತ್ತೆ ಮುಟ್ಟಾಗೋದಿಲ್ಲ. ಇನ್ನೂ ಕೆಲವರಲ್ಲಿ ವರ್ಷಕ್ಕೆ ಎರಡು ಬಾರಿ ಅಥವಾ ವರ್ಷಕ್ಕೆ ಒಂದು ಬಾರಿ ಹೀಗೆ ಮುಟ್ಟಾಗುತ್ತದೆ. ಇದು ಖಂಡಿತ ಒಳ್ಳೆಯದಲ್ಲ. ಇಂತಹ ಸಮಸ್ಯೆ ಇದ್ದರೆ ಅನೇಕರು ಮನೆಯಲ್ಲಿಯೇ ಮದ್ದು ಮಾಡುತ್ತಾರೆ. ಆದರೆ ಇದು ತಪ್ಪು, ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಿ.
ಹದಿಹರೆಯದ ಮಕ್ಕಳಲ್ಲಿ ಋತುಚಕ್ರದ ಬಗ್ಗೆ ಅನೇಕ ಸಮಸ್ಯೆಗಳು ಇರುತ್ತದೆ. ತಾಯಿಯಾದವಳು ಈ ಬಗ್ಗೆ ಕಾಳಜಿ ವಹಿಸಿ ಮಗಳ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.



Click it and Unblock the Notifications
