Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Menstrual Hygiene Day 2023: ಮುಟ್ಟಾದ ಹೆಣ್ಣು ಮಗಳು ತಯಾರಿಸಿದ ಆಹಾರ ತಿನ್ನಬಾರದೇ? ತಿಂದರೆ ಏನಾಗುತ್ತೆ?
ಹಿಂದಿನ ಕಾಲದಲ್ಲಿ ಮುಟ್ಟಾಗಿದ್ದ ಮಹಿಳೆಯನ್ನು ಯಾವ ರೀತಿ ನಡೆಸಿಕೊಳ್ಳಲಾಗುತ್ತಿತ್ತು ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಆಕೆಗೆ ಮನೆಯೊಳಗಡೆ ಮಲಗೋದಕ್ಕೂ ಅವಕಾಶ ಇರಲಿಲ್ಲ. ಗಂಡಸರನ್ನು ಮುಟ್ಟೋ ಹಾಗಿರಲಿಲ್ಲ, ಅಡುಗೆ ಮಾಡೋ ಹಾಗಿರಲಿಲ್ಲ. ಹೀಗೆ ಹೆಂಗಸರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಆದರೆ ಕಾಲ ಬದಲಾದಂತೆ ಎಲ್ಲವೂ ಬದಲಾಯ್ತು.
ಇತ್ತೀಚಿಗೆ ಇಂತಹ ಪದ್ಧತಿ ಆಚರಣೆಗೆ ಕಡಿವಾಣ ಬಿದ್ದಿದೆ. ಆದರೆ ನೀವು ಹಳ್ಳಿ ಕಡೆ ಹೋದ್ರೆ ಜನ ಈಗಲೂ ಇದೇ ಪದ್ಧತಿಯನ್ನು ಆಚರಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಮಹಿಳೆಯರು ಮುಟ್ಟಾದ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದಂತೆ. ಹಾಗಾದ್ರೆ ಮಹಿಳೆಯರ ಮುಟ್ಟಿನ ಬಗೆಗೆ ಇರುವ ಕೆಲವೊಂದು ನಂಬಿಕೆಗಳು ಮತ್ತು ಸತ್ಯಾಂಶ ಏನು ಅನ್ನೋದನ್ನು ತಿಳಿಯೋಣ.

1. ಮುಟ್ಟಾಗುವುದು ಅಶುದ್ಧ ಮತ್ತು ಅಪವಿತ್ರವೇ?
ಹಿಂದಿನ ಕಾಲದಲ್ಲಿ ಮುಟ್ಟಾದ ಮಹಿಳೆಯನ್ನು ಅಪವಿತ್ರಯೆಂದು ಶುಭ ಕಾರ್ಯಗಳಿಂದ ಹೊರಗಿಡಲಾಗುತ್ತಿತ್ತು. ಆದರೆ ಮುಟ್ಟಾಗುವುದು ಸಂತಾನೋತ್ಪತ್ತಿ ಚಕ್ರದ ನೈಸರ್ಗಿಕ ಭಾಗ ಎನ್ನುವುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು. ಪ್ರೌಢವಸ್ಥೆಗೆ ಬರುವಾಗ ಹೆಣ್ಣು ಮಕ್ಕಳು ಋತುಮತಿಯಾಗುತ್ತಾರೆ. ಹಾಗೂ ಅಲ್ಲಿಂದ ಪ್ರತಿ ತಿಂಗಳು ಸಾಮಾನ್ಯವಾಗಿ 45-50 ವರ್ಷದವರೆಗೂ ಹೆಣ್ಣು ಮುಟ್ಟಾಗುತ್ತಾಳೆ. ಇದು ನೈಸರ್ಗಿಕವೇ ಹೊರತು ಇದರಿಂದ ಮಹಿಳೆ ಅಪವಿತ್ರಳಾಗೋದಿಲ್ಲ.
2. ಮುಟ್ಟಾದ ಹೆಣ್ಣು ಮಗಳು ಮುಟ್ಟಿದ ಆಹಾರ ಅಶುದ್ಧವೇ?
ಗ್ರಾಮೀಣ ಭಾಗದ ಹೆಣ್ಣು ಮಕ್ಕಳಿಗೆ ಇಂದಿಗೂ ಮನೆಯ ಒಳಗಡೆ ಪ್ರವೇಶವಿಲ್ಲ. ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಆಕೆ ಮೂರು ದಿನ ಕಳೆಯಬೇಕು. ದೇವರ ಕೋಣೆಗೆ ಬರೋ ಹಾಗಿಲ್ಲ. ಅಡುಗೆ ಕೋಣೆಗೂ ಪ್ರವೇಶವಿಲ್ಲ. ಅಡುಗೆ ಮಾಡಿಟ್ಟ ಪಾತ್ರೆಯನ್ನೂ ಮುಟ್ಟುವಂತಿಲ್ಲ.
ಆಕೆ ಮುಟ್ಟಿದ ವಸ್ತುಗಳೆಲ್ಲಾ ಅಶುದ್ಧವೆಂದು ಪರಿಗಣಿಸಲಾಗುತ್ತದೆ. ಆದರೆ ವೈಜ್ಞಾನಿಕಾಗಿ ನೋಡೋದಾದ್ರೆ ಇವುಗಳೆಲ್ಲಾ ಮೌಡ್ಯ ಆಚರಣೆಗಳಷ್ಟೇ. ಮುಟ್ಟಾದ ಹೆಣ್ಣು ಮಕ್ಕಳಿಂದ ಯಾರಿಗೂ ಯಾವುದೇ ರೀತಿ ತೊಂದರೆ ಆಗೋದಿಲ್ಲ. ಅವರು ತಯಾರಿಸಿದ ಆಹಾರವನ್ನು ತಿನ್ನಬಹುದು.
3. ಮೊಸರು, ಹುಳಿ, ಉಪ್ಪಿನಕಾಯಿ ತಿಂದರೆ ಒಳ್ಳೆಯದಾ?
ಅನೇಕ ಜನರಿಗೆ ಮುಟ್ಟಾದ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸ್ರಾವವಾಗುತ್ತದೆ. ಹೀಗಾಗಿ ಅವರು ಮೊಸರು, ಉಪ್ಪಿನ ಕಾಯಿ ಹೀಗೆ ಹುಳಿಯಾದ ಪದಾರ್ಥಗಳನ್ನು ಸೇವನೆ ಮಾಡುತ್ತಾರೆ. ಈ ಪದಾರ್ಥಗಳನ್ನು ಸೇವನೆ ಮಾಡೋದ್ರಿಂದ ನಿಜವಾಗಿಯೂ ರಕ್ತಸ್ರಾವವಾಗೋದು ಕಡಿಮೆಯಾಗುತ್ತಾ? ಖಂಡಿತ ಇಲ್ಲ. ಯಾವುದೇ ರೀತಿಯ ಆಹಾರವು ನಿಮ್ಮ ಋತುಚಕ್ರದ ಮೇಲೆ ಪರಿಣಾಮ ಬೀರುವುದಿಲ್ಲ.
ಕೆಲವೊಂದು ನಿರ್ದಿಷ್ಟ ರೀತಿಯ ಆಹಾರವು ನಿಮ್ಮ ನೋವು ಉಪಶಮನ ಅಥವಾ ಉದ್ರೇಕಗೊಳ್ಳಲು ಸಹಾಯ ಮಾಡುತ್ತದೆ. ಏಕೆಂದರೆ ಅವುಗಳು ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಅಥವಾ ಕಡಿಮೆ ಮಾಡಬಹುದು. ಜೊತೆಗೆ ಇದು ಹಾರ್ಮೋನ್ ಮೇಲೂ ಪರಿಣಾಮ ಬೀರಬಹುದು.
4. ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಹುದಾ?
ಅನೇಕ ಜನರು ಮುಟ್ಟಿನ ಸಮಯದಲ್ಲಿ ವ್ಯಾಯಾಮ ಮಾಡಬಾರದು. ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡುತ್ತಾರೆ. ಆದರೆ ನಿಮಗೊತ್ತಾ? ಕೆಲವು ವ್ಯಾಯಾಮಗಳನ್ನು ನಾವು ಮುಟ್ಟಿನ ಸಮಯದಲ್ಲೂ ಕೂಡ ಮಾಡಬಹುದಂತೆ. ಇದರಿಂದ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಮತ್ತು ಡಿಸ್ಮೆನೊರಿಯಾದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಮತ್ತು ಉಬ್ಬುವಿಕೆಯನ್ನು ನಿವಾರಿಸುತ್ತದೆ.
5. ನೀವು ನಿಮ್ಮ ದಿನಚರಿಯನ್ನು ಪಾಲಿಸೋದಕ್ಕೆ ಸಾಧ್ಯಾವಿಲ್ವಾ?
ಮುಟ್ಟಾಗೋದ್ರಿಂದ ನಿಮ್ಮ ದಿನಚರಿಗೆ ಯಾವುದೇ ರೀತಿ ತೊಂದರೆಗಳು ಆಗೋದಿಲ್ಲ. ನೀವು ಆರಾಮಾಗಿ ಮನೆ ಕೆಲಸವನ್ನು ಮಾಡಬಹುದು. ಜೊತೆಗೆ ಆಫಿಸ್ ಗೂ ಹೋಗಬಹುದು. ಆದರೆ ಕೆಲವು ಮಹಿಳೆಯರಿಗೆ ಅತೀವ ಹೊಟ್ಟೆನೋವು ಇರುತ್ತದೆ. ಇನ್ನೂ ಕೆಲವರಿಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತದೆ. ಇಂತಹ ಸಮಯದಲ್ಲಿ ರೆಸ್ಟ್ ತೆಗೆದುಕೊಳ್ಳಲೇಬೇಕು.
ಋತುಚಕ್ರ ಎನ್ನುವುದು ಮಹಿಳೆಯರಲ್ಲಿ ನಡೆಯುವ ನೈಸರ್ಗಿಕ ಪ್ರಕ್ರಿಯೆ. ಅದನ್ನು ಅಪವಿತ್ರ, ಅಶುದ್ಧ ಅಂದುಕೊಳ್ಳುವವರು ಮೂಢ ಜನರು. ಮಹಿಳೆಗೆ ಗೌರವ ನೀಡಿ. ನಿಮಗೆ ಜನ್ಮ ಕೊಟ್ಟ ತಾಯಿಯೂ ಒರ್ವ ಮಹಿಳೆ ಅನ್ನೋದನ್ನು ಮರೀಬೇಡಿ.



Click it and Unblock the Notifications
