Latest Updates
-
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು
ಮಕ್ಕಳಲ್ಲಿ ವಿಟಮಿನ್ ಎ ಕೊರತೆಯಾದಾಗ ಕಂಡು ಬರುವ ಲಕ್ಷಣಗಳಿವು
ಹೆಚ್ಚಿನ ಮಕ್ಕಳಲ್ಲಿ ವಿಟಮಿನ್ ಕೊರತೆ ಕಂಡು ಬರುವುದು, ಮಕ್ಕಳು ಪೋಷಕಾಂಶದ ಆಹಾರ ಸರಿಯಾಗಿ ತಿನ್ನದಿದ್ದರೆ ಪೋಷಕಾಂಶದ ಕೊರತೆ ಉಂಟಾಗುವುದು. ಮಕ್ಕಳಿಗೆ ಎಲ್ಲಾ ಬಗೆಯ ವಿಟಮಿನ್ಸ್ ದೊರೆಯಬೇಕು, ಇಲ್ಲದಿದ್ದರೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಈ ಲೇಖನದಲ್ಲಿ ಮಕ್ಕಳಿಗೆ ವಿಟಮಿನ್ ಎ ಎಷ್ಟು ಅವಶ್ಯಕ, ಅದರ ಕೊರತೆ ಉಂಟಾದರೆ ಆಗುವ ತೊಂದರೆಗಳೇನು ಎಂಬುವುದರ ಬಗ್ಗೆ ವಿವರವಾಗಿ ನೀಡಲಾಗಿದೆ ನೋಡಿ:
ವಿಟಮಿನ್ ಎ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ಅವಶ್ಯಕ. ಕಣ್ಣು ದೃಷ್ಟಿ ಚೆನ್ನಾಗಿರಲು, ರೋಗ ನಿರೋಧಕ ಶಕ್ತಿ ಉತತಮವಾಗಲು, ತ್ವಚೆ ಆರೋಗ್ಯಕ್ಕೆ ವಿಟಮಿನ್ ಎ ಅವಶ್ಯಕ.
ಆಹಾರದಲ್ಲಿ 2 ಬಗೆಯ ವಿಟಮಿನ್‌ಗಳು ಸಿಗುತ್ತವೆ. ಅವುಗಳೆಂದರೆ ವಿಟಮಿನ್ ಎ ಮತ್ತು ಪ್ರೊ ವಿಟಮಿನ್ ಎ.
ವಿಟಮಿನ್ ಎ ಅನ್ನು ರೆಟಿನೋಲ್ ಎಂದು ಕರೆಯಲಾಗುತ್ತಿದ್ದು ಇವು ಮಾಂಸಾಹಾರ, ಮೀನು, ಮೊಟ್ಟೆ, ಹಾಲಿನ ಉತ್ಪನ್ನಗಳಲ್ಲಿ ಇರುತ್ತದೆ.
ಇನ್ನು ನಮ್ಮ ದೇಹವು ಸಸ್ಯಾಹಾರಗಳಲ್ಲಿ ಅಂದರೆ ಕೆಂಪು, ಹಸಿರು, ಹಳದಿಹಾಗೂ ಕಿತ್ತಳೆ ಬಣ್ಣದ ಹಣ್ಣು ಹಾಗೂ ತರಕಾರಿಗಳಲ್ಲಿರುವ ಕ್ಯಾರೊಟಿನಾಯ್ಡ್‌ಗಳನ್ನು ವಿಟಮಿನ್ ಎ ಆಗಿ ಪರಿವರತಿಸುತ್ತದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಅಭಿವೃದ್ದಿ ಹೊಂದುತ್ತಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರಗಳಲ್ಲಿ ವಿಟಮಿನ್ ಕೊರತೆ ಹೆಚ್ಚಾಗಿ ಕಂಡು ಬರುತ್ತದೆ.
ಮಕ್ಕಳಲ್ಲಿ ವಿಟಮಿನ್ ಎ ಕೊರತೆ ಉಂಟಾದರೆ ಈ ಕೆಳಗಿನ ಲಕ್ಷಣಗಳು ಕಂಡು ಬರುತ್ತದೆ:

1. ತ್ವಚೆ ಡ್ರೈಯಾಗುವುದು
ತ್ವಚೆಯನ್ನು ಆರೋಗ್ಯವಾಗಿ ಇಡುವಲ್ಲಿ ವಿಟಮಿನ್ ಎ ಪಾತ್ರ ಪ್ರಮುಖವಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ತ್ವಚೆಯಲ್ಲಿ ತುರಿಕೆ ಉಂಟಾಗುವುದು, ತ್ವಚೆ ಒಣಗುವುದು, ತುರಿಕೆ ಹೆಚ್ಚುವುದು. ಈ ರೀತಿಯ ಸಮಸ್ಯೆಗೆ ವಿಟಮಿನ್ ಎ ಸಪ್ಲಿಮೆಂಟ್ ನೀಡುವ ಮೂಲಕ ಸರಿಪಡಿಸಬಹುದು.
ಡ್ರೈ ಸ್ಕಿನ್ ಅನೇಕ ಕಾರಣಗಳಿಂದ ಉಂಟಾಗಬಹುದು, ಅದರಲ್ಲೊಂದು ವಿಟಮಿನ್ ಎ ಕೊರತೆಯೂ ಆಗಿರಬಹುದು.

2. ದೃಷ್ಟಿ ದೋಷ
ವಿಟಮಿನ್ ಎ ಕೊರತೆ ಇರುವವರಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಯೆಂದರೆ ದೃಷ್ಟಿದೋಷ. ಕಣ್ಣುಗಳು ಒಣಗುವುದು, ಬೇಗನೆ ಕಣ್ಣೀರು ಬರದಿರುವುದು ಇವೆಲ್ಲಾ ವಿಟಮಿನ್ ಎ ಕೊರತೆಯ ಲಕ್ಷಣಗಳಾಗಿವೆ. ವಿಟಮಿನ್ ಎ ಸಪ್ಲಿಮೆಂಟ್ ತೆಗೆದುಕೊಂಡರೆ ಈ ಸಮಸ್ಯೆ ದೂರಾಗುವುದು.
ಸ್ವ ಚಿಕಿತ್ಸೆ ಮಾಡಬೇಡಿ, ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ.

3. ಇರಳು ಕುರುಡುತನ
ವಿಟಮಿನ್ ಎ ಕೊರತೆ ತುಂಬಾ ಇದ್ದರೆ ಇರಳು ಕುರುಡುತನ ಅಂದ್ರೆ ರಾತ್ರಿ ಹೊತ್ತಿನಲ್ಲಿ ಕಣ್ಣು ಕಾಣಿಸುವುದಿಲ್ಲ. ಸಮಸ್ಯೆ ಶುರುವಾಗುತ್ತಿದ್ದಂತೆ ಚಿಕಿತ್ಸೆ ಪಡೆಯಿರಿ. ಆಗ ಈ ಸಮಸ್ಯೆ ಕಡಿಮೆ ಮಾಡಬಹುದು.

4. ಮಕ್ಕಳ ಬೆಳವಣಿಗೆ ಕುಂಠಿತವಾಗುವುದು
ವಿಟಮಿನ್ ಎ ಕೊರತೆ ಉಂಟಾದರೆ ಮಕ್ಕಳ ಬೆಳವಣಿಗೆ ಕುಂಠಿತವಾಗಬಹುದು. ವಯಸ್ಸಿಗೆ ತಕ್ಕ ಉತ್ತರ, ಮೈ ತೂಕ ಇರಲ್ಲ, ಕುಬ್ಜ ದೇಹವನ್ನು ಹೊಂದುತ್ತಾರೆ. ಮಕ್ಕಳ ಬೆಳವಣಿಗೆ ತುಂಬಾ ಕುಂಠಿತವಾಗುವುದು.

5. ಆಗಾಗ ಗಂಟಲು ಹಾಗೂ ಎದೆ ಭಾಗದಲ್ಲಿ ಸೋಂಕು ಉಂಟಾಗುವುದು
ಮಕ್ಕಳಲ್ಲಿ ವಿಟಮಿನ್ ಎ ಕೊರತೆ ಉಂಟಾದರೆ ಗಂಟಲು ಹಾಗೂ ಎದೆಯಲ್ಲಿ ಆಗಾಗ ಇನ್‌ಫೆಕ್ಷನ್ ಅಥವಾ ಸೋಂಕು ಕಂಡು ಬರುವುದು. ಇದರಿಂದ ಗಂಟಲು, ಕೆಮ್ಮು ಈ ರೀತಿಯ ಸಮಸ್ಯೆ ಆಗಾಗ ಕಂಡು ಬರುವುದು.

6. ಗಾಯವಾದರೆ ಬೇಗನೆ ಒಣಗುವುದಿಲ್ಲ
ವಿಟಮಿನ್ ಎ ಕೊರತೆ ಉಂಟಾದರೆ ಗಾಯವಾದರೆ ಬೇಗನೆ ಒಣಗುವುದಿಲ್ಲ. ಅಲ್ಲದೆ ವಿಟಮಿನ್ ಎ ಕೊರತೆ ಉಂಟಾದರೆ ತ್ವಚೆಯಲ್ಲಿ ಕೊಲೆಜಿನ್ ಉತ್ಪತ್ತಿ ಕಡಿಮೆಯಾಗುವುದು.

7. ಹದಿ ಹರೆಯದ ಮಕ್ಕಳಲ್ಲಿ ಮೊಡವೆ ಸಮಸ್ಯೆ ಹೆಚ್ಚಾಗುವುದು
ವಿಟಮಿನ್ ಎ ಕೊರತೆ ಉಂಟಾದರೆ ಮೊಡವೆ ಸಮಸ್ಯೆ ಶೇ.50ರಷ್ಟು ಹೆಚ್ಚಾಗುವುದು. ವಿಟಮಿನ್ ಸಪ್ಲಿಮೆಂಟ್ ತೆಗೆದುಕೊಳ್ಳುವುದು ಹಾಗೂ ವಿಟಮಿನ್ ಎ ಇರುವ ಕ್ರೀಮ್ ಬಳಸುವುದರಿಂದ ಮೊಡವೆ ಸಮಸ್ಯೆ ಕಡಿಮೆಯಾಗುವುದು.
ಇನ್ನು ದೊಡ್ಡವರಲ್ಲಿ ವಿಟಮಿನ್ ಎ ಸಮಸ್ಯೆ ಉಂಟಾದರೆ ಬಂಜೆತನ ಕೂಡ ಉಂಟಾಗುವುದು.

ವಿಟಮಿನ್ ಎ ಇರುವ ಆಹಾರಗಳು
* ಚೀಸ್
* ಮೊಟ್ಟೆ
* ಮೀನು
* ಮಾಂಸಾಹಾರ
* ಹಾಲು ಮತ್ತು ಮೊಸರು
* ಲಿವರ್
* ಹಳದಿ, ಕೆಂಪು, ಹಸಿರು ತರಕಾರಿಗಳು ಅಂದ್ರೆ ಪಾಲಾಕ್, ಕ್ಯಾರೆಟ್, ಸಿಹಿ ಗೆಣಸು,ಕೆಂಪು ದುಂಡು ಮೆಣಸು
* ಹಳದಿ ಹಣ್ಣುಗಳು ಅಂದ್ರೆ ಮಾವಿನ ಹಣ್ಣು, ಪಪ್ಪಾಯಿ, ಆಪ್ರಿಕಾಟ್



Click it and Unblock the Notifications