Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮಕ್ಕಳಿಗೆ ಬ್ರೇಕ್‌ಪಾಸ್ಟ್‌ಗೆ ಇಂಥ ಆಹಾರಗಳನ್ನು ಕೊಟ್ಟು ನೋಡಿ, ಖಂಡಿತ ಇಷ್ಟಪಡುತ್ತಾರೆ
ಮಕ್ಕಳಿಗೆ ತಿನಿಸುವುದು ಅಥವಾ ಅವರು ತಿನ್ನುವಂತೆ ಮಾಡುವುದು ಹೆಚ್ಚಿನ ಪೋಷಕರಿಗೆ ದೊಡ್ಡ ಸಾಹಸದ ಕೆಲಸವೇ ಆಗಿದೆ. ಒಂದು ದೋಸೆ ಕೊಟ್ಟರೆ ಅದರ ಒಂದು ಭಾಗ ಕೂಡ ಅವರ ಹೊಟ್ಟೆಗೆ ಹೋಗುವುದಿಲ್ಲ, ಸಾಕು, ನಂಗೆ ಬೇಡ ಹೀಗೆ ನೂರೆಂಟು ನೆಪ ಹೇಳಿ ಅವುಗಳನ್ನು ತಿನ್ನುವುದಿಲ್ಲ.
ಅದೇ ಜಂಕ್ ಫುಡ್ಸ್ ಬೇಡ-ಬೇಡ ಅಂದರೂ ತಿನ್ನುತ್ತವೆ. ಆದರೆ ಅವುಗಳನ್ನು ತಿಂದರೆ ಮಕ್ಕಳ ದೈಹಿಕ , ಮಾನಸಿಕ ಬೆಳವಣಿಗೆಗೆ ಅಗ್ಯತವಾದ ಪೋಷಕಾಂಶಗಳು ದೊರೆಯುವುದಿಲ್ಲ. ಆದ್ದರಿಂದ ಅಗ್ಯತವಾದ ಪೋಷಕಾಂಶಗಳಿರುವ ಆಹಾರವನ್ನೇ ಮಕ್ಕಳಿಗೆ ನೀಡಬೇಕು ಹಾಗೂ ಹೇಗಾದರೂ ಪುಸಲಾಯಿಸಿ ಆ ಆಹಾರಗಳನ್ನು ತಿನ್ನುವಂತೆ ಮಾಡಬೇಕು. ಅದಕ್ಕಿಂತ ಮೊದಲು ಮನೆಗೆ ಜಂಕ್ ಫುಡ್ಸ್ ತಂದು ಸ್ಟಾಕ್ ಇಡುವುದನ್ನು ನಿಲ್ಲಿಸಬೇಕು.
ನಿಮ್ಮ ಮಕ್ಕಳು ಇಷ್ಟ ಪಟ್ಟು ಸವಿಯುವ ಕೆಲವೊಮದು ಆಹಾರಗಳ ಬಗ್ಗೆ ನಾವಿಲ್ಲಿ ಹೇಳಿದ್ದೇವೆ. ಈ ಆಹಾರಗಳನ್ನು ಕೊಟ್ಟು ನೋಡಿ, ಅವರು ತಿನ್ನಲ್ಲ ಎಂಬ ಕಂಪ್ಲೇಂಟ್ ಇರಲ್ಲ, ಅಗ್ಯತವಾದ ಪೋಷಕಾಂಶಗಳು ಅವರ ದೇಹವನ್ನು ಸೇರುತ್ತವೆ.ಇನ್ನು ಏಕೆ ತಡ, ಇಂದಿನಿಂದಲೇ ಟ್ರೈ ಮಾಡಿ:

ಮಕ್ಕಳಿಗೆ ಬ್ರೇಕ್‌ಪಾಸ್ಟ್‌ಗೆ ಇಂಥ ಆಹಾರಗಳನ್ನು ಕೊಟ್ಟು ನೋಡಿ
* ಬೇಳೆ ಕಾಳುಗಳನ್ನು ಹಾಕಿ ಮಾಡುವ ದೋಸೆ ತುಂಬಾ ರುಚಿ ಇರುತ್ತದೆ. ಆದ್ದರಿಂದ ಮಕ್ಕಳು ಇದನ್ನು ತಿನ್ನುತ್ತಾರೆ. ಅವರಿಗೆ ಕಾರ್ಬೋಹೈಡ್ರೇಟ್ಸ್ ಹಾಗೂ ಪ್ರೊಟೀನ್ ಕೂಡ ಸಿಗುವುದು.

ಮೊಟ್ಟೆ ಹಾಕಿ ಮಾಡುವ ಫ್ರೆಂಚ್ ಟೋಸ್ಟ್, ಬೇಯಿಸಿದ ಮೊಟ್ಟೆಯ
ಸ್ಯಾಂಡ್‌ವಿಚ್, ಆಮ್ಲೆಟ್ ಸ್ಯಾಂಡ್‌ವಿಚ್, ಬೇಯಿಸಿದ ಮೊಟ್ಟೆ
ಈ ರೀತಿಯ ಆಹಾರ ಮಾಡಿ ಕೊಟ್ಟರೆ ಅವರು ಬೇಡ ಅಂತ ಹೇಳುವುದೇ ಇಲ್ಲ, ಇಷ್ಟಪಟ್ಟು ತಿನ್ನುತ್ತಾರೆ. ಮೊಟ್ಟೆಯಲ್ಲಿ 13 ಪೋಷಕಾಂಶಗಳಿವೆ. ಅಲ್ಲದೆ ಹೊಟ್ಟೆ ತುಂಬುವುದರಿಂದ ಅತ್ಯತ್ತಮವಾದ ಬ್ರೇಕ್‌ಫಾಸ್ಟ್ ಆಯ್ಕೆ ಆಗಿದೆ.

ಪೀನಟ್ ಅಥವಾ ಆಲ್ಮೋಂಡ್ (ನೆಲ ಕಡಲೆ ಅಥವಾ ಬಾದಾಮಿ) ಬಟರ್ ಜೊತೆ ಪ್ಯಾನ್ ಕೇಕ್
ಪ್ಯಾನ್ ಕೇಕ್ ಮಾಡಿ ನೀವು ಅದಕ್ಕೆ ಆಮ್ಲೋಂಡ್ ಅಥವಾ ಪೀನಟ್ ಬಟರ್ ಹಾಕಿ ಕೊಟ್ಟರೆ ತುಂಬಾ ರುಚಿಯಾಗಿರುವುದರಿಂದ ಯಾವುದೇ ಕಿರಿಕ್ ಇಲ್ಲದೆ ಸವಿಯುತ್ತಾರೆ. ಅಲ್ಲದೆ ಅವರ ದೇಹಕ್ಕೆ ಅಗ್ಯತವಾಗಿರುವ ಪ್ರೊಟೀನ್, ವಿಟಮಿನ್‌ಗಳು ಹಾಗೂ ನಾರಿನಂಶ ದೊರೆಯುವುದು.

ದಾಲ್ ಪೊಟೆಟೊ ಪರೋಟ
ಇದೊಂದು ಅದ್ಭುತ ಕಾಂಬಿನೇಷನ್ ಹಾಕಿದೆ. ಒಂದು ಕಪ್ ಹಾಲು ಅಥವಾ ಟೀ ಜೊತೆಗೆ ಇದನ್ನು ಕೊಟ್ಟರೆ ತುಂಬಾನೇ ಇಷ್ಟಪಟ್ಟು ಸವಿಯದಿದ್ದರೆ ಮತ್ತೆ ಕೇಳಿ.

ಬಾಳೆಹಣ್ಣಿನ ಜೊತೆಗೆ ಆಲ್ಮೋಂಡ್ ಬಟರ್ ಟೋಸ್ಟ್
ಟೋಸ್ಟ್ ಅಂದ್ರೆ ಎಲ್ಲಾ ಮಕ್ಕಳು ಇಷ್ಟ ಪಡುತ್ತಾರೆ. ಅದರಲ್ಲೂ ಆಲ್ಮೋಂಡ್ ಹಾಕಿ ಮಾಡುವ ಟೋಸ್ಟ್ ಅಂತೂ ತುಂಬಾನೇ ಚೆನ್ನಾಗಿರುತ್ತದೆ.

ಇಡ್ಲಿ, ದೋಸೆ, ಉಪ್ಪಿಟ್ಟು ಅನ್ನು ಸ್ಟೈಲಿಷ್ ಆಗಿ ನೀಡಿ
ಮಕ್ಕಳು ಸ್ವಲ್ಪ ಸ್ಟೈಲಿಷ್ ಆಗಿ ಡೆಕೋರೇಟ್ ಮಾಡಿ ಕೊಟ್ಟರೆ ಇಷ್ಟಪಡುತ್ತಾರೆ. ಇಡ್ಲಿ ಮೇಲೆ ಚಾಕೋಲೆಟ್ ಸಿರಪ್ ಹಾಕಿ ಕೊಡುವುದು, ಎಗ್ ದೋಸೆ, ಚಿಸ್ ದೋಸೆ, ತರಕಾರಿ, ಡ್ರೈ ಫ್ರೂಟ್ಸ್ ಹಾಕಿದ ಉಪ್ಪಿಟ್ಟು ಇವೆಲ್ಲಾ ಬಾಯಿಗೆ ರುಚಿಯಾಗಿರುತ್ತೆ.
ಕೊನೆಯದಾಗಿ: ನಿಮ್ಮ ಮಕ್ಕಳು ಏನೂ ತಿನ್ನುತ್ತಿಲ್ಲ ಎಂದಾದರೆ ಅವರು ತಿನ್ನದೇ ಇರಲು ಕಾರಣವೇನು ನೋಡಿ, ಬಹುಶಃ ತುಂಬಾ ಚಾಕ್ಲೆಟ್, ಬಿಸ್ಕೆಟ್, ಜಂಕ್ಸ್ ತಿನ್ನುತ್ತಿದ್ದರೆ ಆರೋಗ್ಯಕರ ಆಹಾರ ಇಷ್ಟಪಡಲ್ಲ. ಆದ್ದರಿಂದ ಅವುಗಳನ್ನು ಕೊಳ್ಳುವುದು ಕಡಿಮೆ ಮಾಡಿ ಇಂಥ ಆರೋಗ್ಯಕರ ಆಹಾರದ ಅಭ್ಯಾಸ ಬೆಳೆಸಿ. ಅವರು ಒಂದು ಹೊತ್ತು ತಿನ್ನದಿದ್ದರೂ ತೊಂದರೆಯಿಲ್ಲ, ಹೊಟ್ಟೆ ಹಸಿದಾಗ ತಿಂತಾರೆ, ಅವರು ತಿಂದಿಲ್ಲ ಜಂಕ್ ಕೊಟ್ಟರೆ ಒಳ್ಳೆಯ ಆಹಾರಗಳಿಂದ ದೂರವಿರುತ್ತಾರೆ.



Click it and Unblock the Notifications
