For Quick Alerts
ALLOW NOTIFICATIONS  
For Daily Alerts

ಕಿತ್ತೂರ ರಾಣಿ ಚೆನ್ನಮ್ಮ ಕತೆ ಈ ಪುಟಾಣಿ ಹೇಗೆ ವರ್ಣಿಸಿದ್ದಾಳೆ ನೋಡಿ

|

ಕಿತ್ತೂರ ರಾಣಿ ಚೆನ್ನಮ್ಮ ಕತೆಯನ್ನು ಎಷ್ಟೊಂದು ವೀರಾವೇಷದಿಂದ ವರ್ಣಿಸುತ್ತಿದ್ದಾಳೆ ನೋಡಿ ಈ ಪುಟಾಣಿ....

ನಮ್ಮ ಮಕ್ಕಳಿಗೆ ತಂತ್ರಜ್ಞಾನದ ಅರಿವು ಎಷ್ಟಿರುತ್ತದೋ ಅಷ್ಟೇ ಅರಿವು ಇತಿಹಾಸದ ಬಗ್ಗೆ ಮೂಡಿಸುವುದು ಪೋಷಕರ ಕರ್ತವ್ಯವಾಗಿದೆ. ನಮ್ಮ ಸ್ವಾತಂತ್ರ್ಯ ಚಳುವಳಿ, ನಮ್ಮ ಪರಂಪರೆ ಇವೆಲ್ಲಾ ಮಕ್ಕಳಿಗೆ ಕಲಿಸುವುದರಿಂದ ಅವರಲ್ಲಿ ದೇಶಪ್ರೇಮ ಹಾಗೂ ಸಂಸ್ಕಾರ ಬೆಳೆಯುವುದು.

Kids Story: Baby Mananya Telling Kittur Rani Chennamma Story

ನಮ್ಮ ನಾಡಿನ ಇತಿಹಾಸವನ್ನು ಪುಟಾಣಿಗಳ ಬಾಯಿಂದ ಕೇಳಿದರೆ ಎಷ್ಟೊಂದು ಖುಷಿಯಾಗುತ್ತದೆ ಅಲ್ಲವೇ? ಇಲ್ಲಿ ಬೇಬಿ ಮನನ್ಯ ವೀರ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಅವರ ಕತೆಯನ್ನು ಎಷ್ಟೊಂದು ಚೆನ್ನಾಗಿ, ವೀರಾವೇಷದಿಂದ ವರ್ಣಿಸುತ್ತಿದ್ದಾಳೆ.

ಕನ್ನಡ ನಾಡಿನ ನಮ್ಮೆಲ್ಲರ ವೀರ ಮಹಿಳೆ ಕಿತ್ತೂರ ರಾಣಿ, ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ರಾಜ್ಯದ ಮೇಲೆ ಬ್ರಿಟಿಷರು ಮುಗಿ ಬಿದ್ದಾಗ ಬ್ರಿಟಿಷರ ದೊಡ್ಡ ಸಯನ್ಯಗೆ ಹೆದರದೆ, ಸೆಟೆದು ನಿಂತು ಅವರ ವಿರುದ್ಧ ಹೋರಾಡಿದ ಸಾಹಸಿ.

ಈಕೆಯ ಹೋರಾಟದ ಕತೆ ಕೇಳುತ್ತಿದ್ದರೆ ಮೈಯಲ್ಲಿ ವೀರಾವೇಶ ಮೂಡುವುದು, ಅದೇ ವೀರಾವೇಶದಿಂದ ಈ ಪುಟಾಣಿ ವರ್ಣಿಸುತ್ತಿರುವ ಶೈಲಿ ಮನೋಜ್ಞವಾಗಿದೆ ಅಲ್ಲವೇ?.

English summary

Kids Story: Baby Mananya Telling Kittur Rani Chennamma Story

Here are video of kid Mananya telling story of Freedom Fighter Kittur Rani Chennamma, have a look...
X
Desktop Bottom Promotion