Latest Updates
-
ದೆಹಲಿಯಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಆತಂಕ: ಸೊಳ್ಳೆ ನಿಯಂತ್ರಣಕ್ಕೆ ಬೆಳಗಿನ 10 ನಿಮಿಷದ ಸಿಂಪಲ್ ರೂಟಿನ್! -
ಚಂಡಮಾರುತದ ಭೀತಿ: ನಿಮ್ಮ ಬಾಲ್ಕನಿ ಮತ್ತು ಕಿಟಕಿಗಳನ್ನು 30 ನಿಮಿಷದಲ್ಲಿ ಸುರಕ್ಷಿತವಾಗಿಡುವುದು ಹೇಗೆ? -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: ದೆಹಲಿಯಲ್ಲಿ 922 ಕೆಜಿ ಕಲ್ಮಷ ಸ್ವೀಟ್ಸ್ ವಶ, ಸುರಕ್ಷಿತವಾಗಿರುವುದು ಹೇಗೆ? -
ಆಫೀಸ್ನಲ್ಲೇ IND vs NZ ಮ್ಯಾಚ್ ಎಂಜಾಯ್ ಮಾಡ್ಬೇಕಾ? ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪ್ಲೇಯಿಂಗ್ 11! -
ವಿಶ್ವ ಸ್ಟ್ರೋಕ್ ದಿನ: ಪಾರ್ಶ್ವವಾಯು ಲಕ್ಷಣಗಳ ಪತ್ತೆಗೆ 'FAST' ಪರೀಕ್ಷೆ ಮತ್ತು ಬಿಪಿ ನಿಯಂತ್ರಣಕ್ಕೆ 7 ನಿಮಿಷದ ವ್ಯಾಯಾಮ! -
'ಅರ್ನಬ್' ಚಂಡಮಾರುತದ ಅಬ್ಬರ: ಆಂಧ್ರದ ಈ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ, ಪರೀಕ್ಷೆಗಳು ಮುಂದೂಡಿಕೆ -
ಚೆನ್ನೈ ಮಳೆ ಅಲರ್ಟ್: ಬಾಡಿಗೆ ಮನೆಯಲ್ಲಿ ಸುರಕ್ಷಿತವಾಗಿರಲು ಇಲ್ಲಿವೆ ಸರಳ ಮುನ್ನೆಚ್ಚರಿಕಾ ಕ್ರಮಗಳು -
ಅರ್ನಬ್ ಚಂಡಮಾರುತದ ಅಬ್ಬರ: ಅಡುಗೆ ಇಲ್ಲದೆ 48 ಗಂಟೆಗಳ ಕಾಲ ಬದುಕುವುದು ಹೇಗೆ? -
ಅರ್ನಬ್ ಚಂಡಮಾರುತ ಅಬ್ಬರ: ಆಂಧ್ರ ಕರಾವಳಿಯತ್ತ ಭೀಕರ ಸೈಕ್ಲೋನ್, ಇಂದೇ ಮಾಡಿಕೊಳ್ಳಿ ಈ ಮುನ್ನೆಚ್ಚರಿಕೆ! -
2026ರ ಕರ್ವಾ ಚೌತ್: ಆಫೀಸ್ ಕೆಲಸದ ನಡುವೆ ಉಪವಾಸ ಮಾಡ್ತಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ!
ಹೊಟ್ಟೆಯೊಳಗಡೆ ಇರೋ ಮಗು ಜೊತೆ ಮಾತನಾಡಬೇಕು ಎಂದು ಹೇಳುವುದು ಇದೇ ಕಾರಣಕ್ಕೆ
ನಿಮಗೆ "ಕೃಷ್ಣ ಹಾಗೂ ಅಭಿಮನ್ಯುವಿನ ಕಥೆ ಗೊತ್ತಿದ್ಯಲ್ಲ. ಅಭಿಮನ್ಯು ತನ್ನ ತಾಯಿ ಸುಭದ್ರೆ ಗರ್ಭದಲ್ಲಿರಬೇಕಾದರೆ ಕೃಷ್ಣ ಹೇಳಿದ ಚಕ್ರವ್ಯೂಹವನ್ನು ಭೇಧಿಸುವ ಕಥೆಯನ್ನ ಆಲಿಸಿದ್ದನು".
ಗರ್ಭಿಣಿಯಾಗಿರುವಾಗ ನೀವು ಎಂದಾದರೂ ನಿಮ್ಮ ಮಗುವಿನ ಜೊತೆಗೆ ಮಾತನಾಡಿದ್ದೀರಾ..? ಅಧ್ಯಯನಗಳ ಪ್ರಕಾರ ಹೊಟ್ಟೆಯೊಳಗಡೆ ಇರುವ ಭ್ರೂಣದ ಜೊತೆಗೆ ಮಾತನಾಡುವುದರಿಂದ ತಾಯಿ ಹಾಗೂ ಮಗುವಿನ ಮಧ್ಯೆ ಒಂದು ಒಳ್ಳೆಯ ಒಡನಾಟ ಸೃಷ್ಟಿಯಾಗುತ್ತಂತೆ. ನಿಧಾನವಾಗಿ ಮಗು ನಿಮ್ಮ ಧ್ವನಿಯನ್ನ ಗುರುತಿಸುತ್ತಂತೆ. ಹೀಗಾಗಿ ಮಗು ಹೊರ ಬಂದ ಮೇಲೆ ತಾಯಿ-ಮಗುವಿನಲ್ಲಿ ಒಂದೊಳ್ಳೆ ಬಾಂಡ್ ಸೃಷ್ಟಿಯಾಗಲಿದೆಯಂತೆ.

ಗರ್ಭದೊಳಗಿರುವ ಭ್ರೂಣ ನಿಜವಾಗಲು ನಿಮ್ಮ ಮಾತು ಕೇಳುತ್ತಾ?
ಸರಿ ಸುಮಾರು 14 ವಾರಗಳ ನಂತರ ಭ್ರೂಣವು ನಿಮ್ಮ ಧ್ವನಿ ಆಲಿಸಲು ಶುರು ಮಾಡುತ್ತದೆ. ಪ್ರತಿ ನಿತ್ಯ ಪೋಷಕರು 15 ನಿಮಿಷಗಳ ಕಾಲ ಮಗುವಿನ ಜೊತೆಗೆ ಸಂಭಾಷಣೆ ನಡೆಸಬೇಕು. ಈ ವೇಳೆ ಹೊಟ್ಟೆಯನ್ನ ನಯವಾಗಿ ಸವರಬೇಕು ಇದರಿಂದಾಗಿ ಮಗುವಿನ ಜೊತೆಗೆ ಉತ್ತಮ ಬಾಂಡಿಂಗ್ ಸೃಷ್ಟಿಯಾಗುತ್ತದೆ. ಈ ಹಿಂದೆ ಹೊಟ್ಟೆಯ ಭಾಗಕ್ಕೆ ಹೆಡ್ಫೋನ್ ಇಟ್ಟು ಮಗುವಿಗೆ ಹಾಡನ್ನು ಕೇಳಿಸಲಾಗುತ್ತಿತ್ತು. ಆದರೆ ಅದಕ್ಕಿಂತಲೂ ಪೋಷಕರು ಮಗುವಿನ ಜೊತೆಗೆ ಮಾತನಾಡುವುದೇ ಉತ್ತಮ ಎಂದು ಹೇಳಲಾಗಿದೆ.

ಭ್ರೂಣದ ಜೊತೆ ಮಾತನಾಡುವುದರಿಂದ ಆಗುವ ಲಾಭಗಳೇನು?
ಮಗು ಹೊಟ್ಟೆಯಲ್ಲಿರಬೇಕಾದರೆ ಪೋಷಕರು ಮಗುವಿನ ಜೊತೆಗೆ ಮಾತನಾಡುವುದರಿಂದ ಈ ಕೆಳಗಿನ ಲಾಭಗಳನ್ನು ಪಡೆದುಕೊಳ್ಳಬಹುದು.
* ಹೊಟ್ಟೆಯೊಳಗಿರುವ ಮಗುವಿನ ಜೊತೆಗೆ ಪ್ರತಿನಿತ್ಯ ಮಾತನಾಡುವುದರಿಂದ ನಿಮಗೆ ಮಗುವಿನ ಬಗ್ಗೆ ಸುರಕ್ಷಿತ ಭಾವನೆ ಮೂಡುತ್ತದೆ. ಮತ್ತು ಹೆರಿಗೆಯ ಸಮಯದಲ್ಲಿ ಕೊಂಚ ಒತ್ತಡ ಕಡಿಮೆಯಾಗುತ್ತದೆ.
* ಇದು ಮಗು ಹೊಟ್ಟೆಯಿಂದ ಹೊರಬಂದ ಮೇಲೆ ಪೋಷಕರು ಮತ್ತು ತನಗೆ ಹತ್ತಿರವಾಗಿರುವ ಪ್ರಮುಖ ವ್ಯಕ್ತಿಗಳ ಧ್ವನಿಗೆ ಒಗ್ಗಿಕೊಳ್ಳಲು ಸಹಾಯ ಮಾಡುತ್ತದೆ.
* ಬಾಡಿಗೆ ತಾಯ್ತನದಿಂದ ಮಗು ಜನಿಸುವುದಾದರೆ ಮಗುವಿನೊಂದಿಗೆ ಪದೇ ಪದೇ ಮಾತನಾಡುವುದು ಅತ್ಯಗತ್ಯ.
* ಮಗುವಿನ ಭಾಷೆಯ ಅಭಿವೃದ್ಧಿಗೆ ಮತ್ತು ಭಾಷೆಯ ವ್ಯತ್ಯಾಸವನ್ನು ತಿಳಿದುಕೊಳ್ಳಲು, ಮತ್ತು ಕೆಲವು ಪದಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ.
* ತಾಯಿಯಾದವಳು ಭ್ರೂಣದ ಜೊತೆಗೆ ಮಾತನಾಡುವುದರಿಂದ ಆಕೆಗೆ ತಾಯ್ತನಕ್ಕೆ ಸಿದ್ಧವಾಗಲು ಇದು ನೆರವಾಗುತ್ತದೆ ಎಂದು ಅಧ್ಯಯನಗಳು ಸಾಬೀತುಪಡಿಸಿದೆ.

ಭ್ರೂಣದ ಜೊತೆಗೆ ಮಾತನಾಡುವ ವಿಧಾನ ಹೇಗೆ?
ಹೊಟ್ಟೆಯೊಳಗಡೆ ಇರುವ ಮಗುವಿನ ಜೊತೆಗೆ ಹೇಗೆ ಮಾತನಾಡಬೇಕು ಎನ್ನುವುದಕ್ಕೆ ಇಲ್ಲಿದೆ ಸಿಂಪಲ್ ಟಿಪ್ಸ್.
* ಮೊದ ಮೊದಲು ನಿಮಗೆ ಈ ಅನುಭವ ವಿಚಿತ್ರ ಅನ್ನಿಸಬಹುದು. ಆದರೆ ನೀವು ಒಬ್ಬರೆ ಇರುವಾಗಲೆಲ್ಲ ಈ ರೀತಿ ಮಾತನಾಡುತ್ತಾ ಇರಿ. ನಿಮ್ಮ ದಿನನಿತ್ಯ ಚಟುವಟಿಕೆಗಳ ಬಗ್ಗೆ ನಿಮ್ಮ ಮಗುವಿನ ಜೊತೆಗೆ ಶೇರ್ ಮಾಡಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ನಿಧಾನವಾಗಿ ತಾಯಿ-ಮಗುವಿನ ಮಧ್ಯೆ ಒಂದು ಸುಂದರ ಬಂಧ ಸೃಷ್ಟಿಯಾಗುತ್ತದೆ.
* ಗರ್ಭದಲ್ಲಿರುವ ಭ್ರೂಣಕ್ಕೆ ಹಾಡು ಕೇಳಿಸುವುದರ ಬದಲು ನೀವೆ ಹಾಡಲು ಶುರು ಮಾಡಿ. ನಿಮ್ಮ ಧ್ವನಿ ಚೆನ್ನಾಗಿಲ್ಲ ಅಂದ್ರೂ ಪರವಾಗಿಲ್ಲ. ಒಟ್ಟಿನಲ್ಲಿ ಮಗು ನಿಮ್ಮ ಧ್ವನಿಗೆ ಒಗ್ಗಿಕೊಳ್ಳಬೇಕು ಅಷ್ಟೇ.
* ನಿಮ್ಮ ಹೊಟ್ಟೆಯ ಮೇಲೆ ನಿಧಾನವಾಗಿ ಕೈ ಸವರುತ್ತಾ ಮಗುವಿನ ಜೊತೆಗೆ ಮಾತನಾಡಿ. ಈ ನಿಮ್ಮ ಸ್ಪರ್ಶವನ್ನು ಮಗು ಅನುಭವಿಸುತ್ತದೆ. ತಂದೆಯೂ ಕೂಡ ಇದೇ ರೀತಿ ಮಗುವನ್ನು ಮಾತನಾಡಿಸುವುದರಿಂದ ಮಗು ನಿಮ್ಮ ಅನುಪಸ್ಥಿತಿಯನ್ನು ಕಂಡುಕೊಳ್ಳುತ್ತದೆ.
* ಗರ್ಭಿಣಿ ತಾಯಿ ಏನನ್ನು ತಿನ್ನುತ್ತಾಳೋ ಮಗು ಕೂಡ ಅದನ್ನೇ ತಿನ್ನುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ನೀವು ಆಹಾರವನ್ನು ಸೇವಿಸುವಾಗ ಮಗುವಿನ ಹೊಟ್ಟೆಯನ್ನು ಮುಟ್ಟಿ ಆಹಾರ ಇಷ್ಟವಾಯಿತಾ ಎಂದು ಕೇಳಿ. ಈ ರೀತಿ ಬಾಂಡಿಂಗ್ ಸೃಷ್ಟಿಯಾಗುತ್ತದೆ. ಅಷ್ಟೇ ಅಲ್ಲ, 4 ವಾರಗಳ ನಂತರ ಭ್ರೂಣವು ಆಹಾರವನ್ನು ಮೊದಲ ಬಾರಿಗೆ ರುಚಿ ನೋಡುತ್ತಂತೆ.
* ಬಿಡುವಿನ ಸಮಯದಲ್ಲಿ ನಿಮ್ಮ ಜೊತೆಗೆ ನಿಮ್ಮ ಹೊಟ್ಟೆಯಲ್ಲಿರುವ ಮಗುವಿಗೂ ಹಿತವಾದ ಸಂಗೀತವನ್ನು ಆಲಿಸಿ.
* ನಿಮ್ಮ ಭಾವನೆಗಳನ್ನು ಮಗುವಿನೊಂದಿಗೆ ಹಂಚಿಕೊಳ್ಳಿ. ನೀವು ಒತ್ತಡದಿಂದಿದ್ದರೆ ಮಗುವು ಆ ಒತ್ತಡವನ್ನು ಅನುಭವಿಸುತ್ತದೆ. ಆದ್ದರಿಂದ ಹಿತವಾದ ಧ್ವನಿಯಲ್ಲಿ ಮಗುವನ್ನು ಶಾಂತಗೊಳಿಸಿ. ನಿಮ್ಮ ಸಂತೋಷ ಅಥವಾ ದುಃಖವನ್ನು ಮಗುವಿನೊಂದಿಗೆ ಹಂಚಿಕೊಳ್ಳಿ.
ಅಧ್ಯಯನಗಳ ಪ್ರಕಾರ ಮಗುವು ಹೊಟ್ಟೆಯಲ್ಲಿರಬೇಕಾದರೆ ಎಲ್ಲಾ ತರಹದ ಧ್ವನಿಯನ್ನು ಕೇಳಿಸಿಕೊಳ್ಳುತ್ತದೆ. ಆದ್ದರಿಂದ ಮುಂದೆ ನೀವು ಪೋಷಕರಾಗುವ ಸಂದರ್ಭದಲ್ಲಿ ನಾವು ಕೊಟ್ಟ ಟಿಪ್ಸ್ಗಳನ್ನು ಖಂಡಿತ ಪಾಲಿಸಬಹುದು.



Click it and Unblock the Notifications
