Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಶಾಲೆಗೆ ಹೋಗುವ ಮಕ್ಕಳು ಪದೇ-ಪದೇ ಕಾಯಿಲೆ ಬೀಳುತ್ತಿದ್ದಾರಾ? ಚಳಿಗಾಲದಲ್ಲಿ ಅವರನ್ನು ಹೀಗೆ ರಕ್ಷಣೆ ಮಾಡಿ
ಚಳಿಗಾಲದಲ್ಲಿ ಮಕ್ಕಳು ಕಾಯಿಲೆ ಬೀಳುವುದು ಅಧಿಕ. ಶೀತ-ಕೆಮ್ಮು ಈ 3-4 ತಿಂಗಳು ನಿರಂತರ ಕಾಡುತ್ತದೆ. ಔಷಧಿ ತೆಗೆದಾಗ ಸ್ವಲ್ಪ ಕಡಿಮೆಯಾಗುತ್ತದೆ, ಮತ್ತೆ ಮರುಕಳಿಸುತ್ತದೆ, ಆದ್ದರಿಂದ ಚಳಿಗಾಲ ಬಂತೆಂದರೆ ಮಕ್ಕಳ ಆರೋಗ್ಯದ ಬಗ್ಗೆ ಟೆನ್ಷನ್ ಪೋಷಕರಿಗೆ ಶುರುವಾಗುವುದು.
ಅದರಲ್ಲೂ ಮಕ್ಕಳು ಶಾಲೆಗೆ ಹೋಗುತ್ತಿದ್ದರೆ ಅನಾರೋಗ್ಯ ಆಗಾಗ ಕಾಡುವುದು. ಮಕ್ಕಳಿಂದ ಮಕ್ಕಳಿಗೆ ವೈರಲ್ ಸೋಂಕು ಬೇಗನೆ ಹರಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಈ ಟಿಪ್ಸ್ ಸಹಕಾರಿ.

ಬೆಚ್ಚಗೆ ಇರಿಸಿ
ಚಳಿಗಾಲದಲ್ಲಿ ಮಕ್ಕಳನ್ನು ಬೆಚ್ಚಗೆ ಇರಿಸುವುದು ತುಂಬಾನೇ ಅವಶ್ಯಕವಾಗಿದೆ. ಚಳಿಗಾಲಕ್ಕೆ ಊಕ್ತವಾದ ಬಟ್ಟೆ ಧರಿಸಿ, ಅಲ್ಲದೆ ಚಳಿಗಾಲದಲ್ಲಿ ಮಕ್ಕಳನ್ನು ಚಟುವಟಿಕೆಯಿಂದ ಇಡುವುದು ಕೂಡ ಮುಖ್ಯ. ಸ್ವೆಟರ್, ಟೋಪಿ, ಸಾಕ್ಸ್ ಧರಿಸಿಕೊಡಿ.

ಚಳಿಗಾಲದಲ್ಲಿ ಜ್ವರ ಬರುವುದನ್ನು ತಡೆಗಟ್ಟಲು
ತಂಪಾದ ವಾತಾವರಣದಿಂದ ಶೀತ, ಜ್ವರ ಬರುತ್ತದೆ ಎಂದು ಹೆಚ್ಚಿನವರು ಭಾವಿಸುತ್ತಾರೆ , ತಂಪಾದ ವಾತಾವರಣದಿಂದ ಜ್ವರ ಬರಲ್ಲ, ಬದಲಿಗೆ ವೈರಸ್‌ನಿಂದಾಗಿ ಉಂಟಾಗುತ್ತದೆ.
ವೈರಲ್ ಸೋಂಕು ತಡೆಗಟ್ಟಲು ಹೀಗೆ ಮಾಡಿ
ಆಗಾಗ ಕೈ ತೊಳೆಯುವಂತೆ ಹೇಳಿ
ಮಕ್ಕಳಿಗೆ ಶಾಲೆಯಿಂದ ಬಂದ ತಕ್ಷಣ ಸೋಪು ಹಚ್ಚಿ ಕೈ ತೊಳೆಯುವ ಅಭ್ಯಾಸ ಮಾಡಿಸಿ. ಆಹಾರ ಸೇವಿಸುವ ಮುನ್ನ ಕೈ ತೊಳೆದು ತಿನ್ನುವಂತೆ ಹೇಳಿ.
* ಮಕ್ಕಳು ಶಾಲೆಗೆ ಹೋಗುವಾಗ ಮಾಸ್ಕ್ ಧರಿಸಿ ಹೋಗುವಂತೆ ಹೇಳಿ
* ಸೀನುವಾಗ, ಕೆಮ್ಮುವಾಗ ಕೈಯನ್ನು ಅಡ್ಡ ಹಿಡಿಯುವಂತೆ ಹೇಳಿ, ಅಲ್ಲದೆ ಕರ್ಚೀಫ್ ಬಳಸುವಂತೆ ಹೇಳಿ.
* ನೀರು ಕುಡಿಸಿ: ಚಳಿಗಾಲದಲ್ಲಿ ಬಾಯಾರಿಕೆಯಾಗಲ್ಲ ಅಂತ ಸುಮ್ಮನಾಗಬೇಡಿ, ನೀರು ಕುಡಿಸಿ. ಬೆಚ್ಚನೆಯ ನೀರು, ಸೂಪ್ ಒಳ್ಳೆಯದು.
* ಸನ್‌ಸ್ಕ್ರೀನ್ ಬಳಸಿ: ಚಳಿಗಾಲವಾದರೂ ಮಧ್ಯಾಹ್ನ ಉರಿ ಬಿಸಿಲು ಮೈಗೆ ಬಿದ್ದರೆ ತ್ವಚೆ ಟ್ಯಾನ್ ಆಗುವುದು, ಚಳಿಗಾಲದಲ್ಲಿ ಸನ್‌ಸ್ಕ್ರೀನ್ ಹಚ್ಚಿಕೊಡಿ.

ಆರೋಗ್ಯಕರ ಆಹಾರ ನೀಡಿ
ಮಕ್ಕಳಿಗೆ ಪೋಷಕಾಂಶ ಅಧಿಕವಿರುವ ಆಹಾರ ನೀಡಿ. ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಟೊಮೆಟೊ , ಸೊಪ್ಪು, ಬ್ರೊಕೋಲಿ, ಹಸಿರು ತರಕಾರಿ, ಬಾದಾಮಿ, ಗೋಡಂಬಿ, ಪಿಸ್ತಾ ಇವುಗಳನ್ನು ನೀಡಿ. ಪ್ರತಿದಿನ ರಾತ್ರಿ ಜೇನು ಕೊಡಿ, ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಪ್ರತಿದಿನ ವ್ಯಾಯಾಮ ಮಾಡಿಸಿ
ಮಕ್ಕಳಿಗೆ ಪ್ರತಿದಿನ ವ್ಯಾಯಾಮ ಮಾಡಿಸಿ, ಇದರಿಂದ ಅವರು ತುಂಬಾ ಎನರ್ಜಿಯಿಂದ ಕೂಡಿರುತ್ತಾರೆ., ಓಡುವುದು, ಕುಣಿಯುವುದು, ಸೈಕ್ಲಿಂಗ್, ಜಂಪಿಂಗ್ ಎಲ್ಲಾ ಮಾಡ್ಲಿ. ಪಾರ್ಕ್‌ಗೆ ಕರೆದುಕೊಂಡು ಹೋಗಿ ಆಟ ಆಡಿಸಿ.
ತುಂಬಾ ಚಳಿಯಿದ್ದಾಗ ಮನೆಯೊಳಗಡೆ ಆಟ ಆಡಿಸಿ
ಏನಾದರೂ ಕ್ರಾಫ್ಟ್ ಮಾಡುವುದು, ಪೇಯಿಂಟಿಂಗ್, ಕೇರಂ, ಚೆಸ್ ಹೀಗೆ ಯಾವುದಾದರೂ ಆಟ ಆಡಿಸಿ. ಮಕ್ಕಳನ್ನು ತುಂಬಾ ಹೊತ್ತು ಟಿವಿ ಮುಂದೆ ಕೂರಲು ಬಿಡಬೇಡಿ.

ಚೆನ್ನಾಗಿ ನಿದ್ದೆ ಮಾಡಲಿ
ನಿದ್ದೆ ಕಡಿಮೆಯಾದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು. ಮಕ್ಕಳಿಗೆ 8-10 ಗಂಟೆ ನಿದ್ದೆ ಬೇಕು. ಮಕ್ಕಳಿಗೆ ರಜೆ ಇದ್ದರೂ ಶಾಲೆಗೆ ಹೋಗುವಾಗ ಏಳುವ ಹೊತ್ತಿನಲ್ಲಿಯೇ ಎಬ್ಬಿಸಿ ಅವರನ್ನು ಪಾರ್ಕ್‌ಗೆ ಕರೆದುಕೊಂಡಡು ಹೋಗುವುದು ಅಥವಾ ಆಟ ಆಡುವುದು ಮಾಡಿ.



Click it and Unblock the Notifications
