Latest Updates
-
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ?
ಎದೆಹಾಲು ಉಣಿಸುವಾಗ ಮಗುವಿನ ಹೊಟ್ಟೆ ತುಂಬಿದೆಯೇ, ಇಲ್ಲವೇ ಎಂಬುದನ್ನು ತಿಳಿಯುವುದು ಹೇಗೆ?
ಮಗು ಸಾಮಾನ್ಯವಾಗಿ ಅಳುವಿನ ಮೂಲಕ ತನಗೆ ಹಸಿವಾಗಿರುವುದನ್ನು ವ್ಯಕ್ತಪಡಿಸುತ್ತದೆ. ಆದರೆ, ಕೆಲವೊಮ್ಮೆ ಹೊಟ್ಟೆ ತುಂಬಿದ್ದಾಗಲೂ ಅಳುವುದಿದೆ. ಏಕೆಂದರೆ ಅಳುವುದು ಶಿಶುಗಳ ಸಹಜ ಅಭ್ಯಾಸ. ಆದರೆ, ಇದು ಪೋಷಕರನ್ನು ಚಿಂತೆಗೆ ಸಿಲುಕಿಸುತ್ತದೆ. ತನ್ನ ಮಗುವಿಗೆ ಸಾಕಷ್ಟು ಎದೆಹಾಲು ಸಿಗುತ್ತಿದೆಯೇ? ಮಗುವಿನ ಹೊಟ್ಟೆ ತುಂಬುತ್ತಿದೆಯೇ? ಇಂತಹ ಪ್ರಶ್ನೆಗಳು ಮನಸ್ಸಲ್ಲಿ ಮೂಡತೊಡಗುತ್ತವೆ. ಇದಕ್ಕೆ ನಾವಿಂದು ಉತ್ತರ ನೀಡಲಿದ್ದೇವೆ.
ತಜ್ಞರ ಪ್ರಕಾರ, ಶಿಶುಗಳು ಎಷ್ಟು ಸಮಯದವರೆಗೆ ಕುಡಿಯುತ್ತಾರೆ ಎಂಬುದಕ್ಕೂ ಹಾಲಿನ ಪ್ರಮಾಣಕ್ಕ, ಅವರ ಹೊಟ್ಟೆ ತುಂಬುವುದಕ್ಕೂ ಯಾವುದೇ ಸಂಬಂಧವಿಲ್ಲ. ಮುಖ್ಯ ವಿಷಯವೆಂದರೆ ಮಗು ಸ್ವತಃ ಹಾಲು ಕುಡಿಯುವುದನ್ನು ನಿಲ್ಲಸಿ, ಸ್ವಲ್ಪ ನಿದ್ರಿಸಲು ಪ್ರಾರಂಭಿಸುತ್ತವೆ. ಮಗು ಹಾಲು ಕುಡಿಯುವುದನ್ನು ನಿಲ್ಲಿಸಿದ ಸಮಯದಿಂದ, ಮುಂದಿನ ಬಾರಿಗೆ ಅದೇ ಮಧ್ಯಂತರವನ್ನು ನೀಡಬಹುದು.
ನವಜಾತ ಶಿಶುಗಳು ಎಷ್ಟು ಎದೆಹಾಲು ಕುಡಿಯಬಹುದು?:

2 ತಿಂಗಳವರೆಗೆ:
ಜನನದಿಂದ ಎರಡು ತಿಂಗಳವರೆಗೆ ಶಿಶುಗಳು ದಿನಕ್ಕೆ 8 ರಿಂದ 12 ಬಾರಿ ಹಾಲು ಕುಡಿಯುತ್ತವೆ. ಇದರರ್ಥ ನಿಮ್ಮ ಮಗು ಪ್ರತಿ ಎರಡರಿಂದ ಮೂರು ಗಂಟೆಗಳಿಗೊಮ್ಮೆ ಆಹಾರಕ್ಕಾಗಿ ನಿಮಗೆ ಸನ್ನೆ ಮಾಡುತ್ತದೆ. ಆರಂಭದಲ್ಲಿ ನಿಮ್ಮ ಮಗು ಕಾಲಕಾಲಕ್ಕೆ ಹಾಲು ಕುಡಿಯಲು ಕೇಳದಿದ್ದರೆ, ನೀವೇ ಅದನ್ನು ಎತ್ತಿಕೊಂಡು ಕುಡಿಸಬೇಕು. ಕೆಲವು ಮಹಿಳೆಯರು ಮಗುವಿಗೆ ಕೇವಲ 10 ನಿಮಿಷಗಳ ಕಾಲ ಹಾಲುಣಿಸುತ್ತಾರೆ, ಆದರೆ ಕೆಲವರು ಹೆಚ್ಚು ಸಮಯ ನೀಡುತ್ತಾರೆ. ಇದು ನಿಮಗೆ ಬಿಟ್ಟದ್ದು ಆದರೆ ಮಗು ಹಾಲು ಕುಡಿಯುತ್ತಿದೆಯೇ ಎಂಬುದನ್ನು ಗಮನಿಸಿ. ಎರಡು ತಿಂಗಳಾಗುವ ಹೊತ್ತಿಗೆ ಮೂರ್ನಾಲ್ಕು ಗಂಟೆಗಳ ಅಂತರದಲ್ಲಿ ಹಾಲು ಕುಡಿಯಲು ಆರಂಭಿಸುತ್ತವೆ.

4 ತಿಂಗಳಿಗೆ:
ನಾಲ್ಕು ತಿಂಗಳ ವಯಸ್ಸಿನಲ್ಲಿ, ಮಗು ಕಡಿಮೆ ಹಾಲು ಕುಡಿಯಲು ಪ್ರಾರಂಭಿಸುತ್ತದೆ. ಈ ಹಂತದಲ್ಲಿ ಆರು ಗಂಟೆಗೊಮ್ಮೆ ಹಾಲಿಗಾಗಿ ಕಿರಿಕಿರಿ ಮಾಡುತ್ತದೆ. ಇದಲ್ಲದೆ, ಈ ಸಮಯದಲ್ಲಿ ನೀವು ಅವರಿಗೆ ಸ್ವಲ್ಪ ಘನ ಆಹಾರವನ್ನು ನೀಡಲು ಪ್ರಾರಂಭಿಸಬಹುದು.

ಆರು ತಿಂಗಳಿಗೆ :
ಈ ವಯಸ್ಸಿಗೆ ಬರುವಾಗ, ಅನೇಕ ತಾಯಂದಿರು ತಮ್ಮ ಮಗುವಿಗೆ ಧಾನ್ಯಗಳಂತಹ ಘನ ಆಹಾರವನ್ನು ನೀಡಲು ಪ್ರಾರಂಭಿಸುತ್ತಾರೆ, ಆದ್ದರಿಂದ ಮಗುವಿಗೆ ಹಾಲಿನ ಅಗತ್ಯವು ಕಡಿಮೆಯಾಗುತ್ತದೆ. ಆದರೆ, ಈ ಸಮಯದಲ್ಲಿ ಮಗು 8 ಗಂಟೆಗಳಿಗೊಮ್ಮೆ ಹಾಲು ಕುಡಿಸಬೇಕು.

ಮಗು ಸಾಕಷ್ಟು ಹಾಲು ಕುಡಿಯುತ್ತಿದೆಯೇ ಎಂದು ಕಂಡುಹಿಡಿಯುವುದು ಹೇಗೆ?:
ಮಗು ಸಾಕಷ್ಟು ಎದೆಹಾಲು ಕುಡಿಯುತ್ತಿದ್ದರೆ, ಅದು ಈ ವರ್ತನೆ ತೋರುವುದು, ಅವುಗಳೆಂದರೆ:
ಮಗು ಸಂತೋಷ ಮತ್ತು ಸಕ್ರಿಯವಾಗಿರುವುದು:
ಪೂರ್ಣ ಪ್ರಮಾಣದಲ್ಲಿ ಹಾಲು ಸೇವಿಸುವ ಮಕ್ಕಳು ಯಾವಾಗಲೂ ಸಂತೋಷದಿಂದ ಇರುತ್ತಾರೆ, ಜೊತೆಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಹೆಚ್ಚು ಹಸಿದಿರುವ ಮಗು ಯಾವಾಗಲೂ ಕಿರಿಕಿರಿ ಮಾಡುತ್ತಿರುತ್ತಾರೆ.

ಹೆಚ್ಚು ಬಟ್ಟೆ ಒದ್ದೆಯಾಗುವುದು:
ಮೊದಲ ಒಂದು ಅಥವಾ ಎರಡು ದಿನಗಳಲ್ಲಿ ಮಗುವಿನ ಡೈಪರ್ ಅನ್ನು ಒಂದು ಅಥವಾ ಎರಡು ಬಾರಿ ಮಾತ್ರ ಬದಲಾಯಿಸಬೇಕಾಗಬಹುದು, ಆದರೆ ನಂತರದಲ್ಲಿ ಇದು ಹೆಚ್ಚಾಗುತ್ತದೆ. ಒಂದು ಮಗು ದಿನಕ್ಕೆ 5 ರಿಂದ 6 ಬಿಸಾಡಬಹುದಾದ ಬಟ್ಟೆಗಳನ್ನು ಮತ್ತು ಒಂದರಿಂದ ಎರಡು ಡೈಪರ್ಗಳನ್ನು ಬಳಕೆ ಮಾಡುತ್ತಿದೆ ಎಂದರೆ, ನಿಮ್ಮ ಮಗು ಹೊಟ್ಟೆ ತುಂಬಾ ತಿನ್ನುತ್ತಿದ ಎಂದರ್ಥ.

ತೂಕ ಹೆಚ್ಚಾಗುವುದು:
ನಿಮ್ಮ ಮಗು ನಿಧಾನವಾಗಿ ತೂಕವನ್ನು ಪಡೆಯುತ್ತಿದ್ದರೆ ಮತ್ತು ಚೆನ್ನಾಗಿ ಅಭಿವೃದ್ಧಿ ಹೊಂದುತ್ತಿದ್ದರೆ, ನಿಮ್ಮ ಮಗುವಿಗೆ ಕಾಲಕಾಲಕ್ಕೆ ಆಹಾರವನ್ನು ನೀಡುತ್ತಿದ್ದೀರಿ ಎಂದರ್ಥ.

ಮಗು ಸಾಕಷ್ಟು ಹಾಲು ಕುಡಿಯುತ್ತಿಲ್ಲ ಅಥವಾ ತಿನ್ನುತ್ತಿಲ್ಲ ಎಂದು ಕಂಡುಹಿಡಿಯುವುದು ಹೇಗೆ?:
ಮಗುವಿನ ಮೂತ್ರದ ಬಣ್ಣವು ಹೆಚ್ಚು ಹಳದಿ ಆಗುತ್ತದೆ.
ತಿನ್ನುವ ಮತ್ತು ಕುಡಿಯುವ ಬದಲು, ಮಗು ದೀರ್ಘಕಾಲ ನಿದ್ರಿಸುತ್ತದೆ.
ಹಾಲು ಕುಡಿಯುವುದರಲ್ಲಿ ತುಂಬಾ ಗಡಿಬಿಡಿ.
ಮಗುವಿನ ಬಟ್ಟೆ ಕಡಿಮೆ ಒದ್ದೆಯಾಗುವುದು.



Click it and Unblock the Notifications
