Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
Krishna Janmashtami 2021: ಕೃಷ್ಣ ಜನ್ಮಾಷ್ಟಮಿಗೆ ಮಕ್ಕಳಿಗೆ ಕಂಫರ್ಟ್ ಡ್ರೆಸ್ಸಿಂಗ್ ಐಡಿಯಾ
ಆಗಸ್ಟ್ 30ಕ್ಕೆ ಕೃಷ್ಣ ಜನ್ಮಾಷ್ಟಮಿ. ವಿಷ್ಣುವಿನ 8ನೇ ಅವತಾರವಾದ ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುವುದು. ಕೃಷ್ಣ ಜನ್ಮಾಷ್ಟಮಿ ಅಂದರೆ ಏನೋ ಸಡಗರ. ಮನೆಯಲ್ಲಿ ಮುದ್ದು ಮಕ್ಕಳಿದ್ದರೆ ಅವರಿಗೆ ಕೃಷ್ಣ, ರಾಧೆಯ ಡ್ರೆಸ್ಸಿಂಗ್ ಮಾಡಿ ಸಂಭ್ರಮಿಸುವ ಕ್ಷಣ.
ಮಕ್ಕಳಿಗೆ ಕೃಷ್ಣ ವೇಷ ತೊಡಿಸಿದಾಗ ಆ ನಿಷ್ಕಲ್ಮಷ ಮನಸ್ಸಿನ ಮಗು ಥೇಟ್ ಭಗವಾನ್ ಸ್ವರೂಪದಂತೆಯೇ ಕಾಣುವುದು. ಆದರೆ ಮಕ್ಕಳಿಗೆ ಅಲಂಕಾರ ಮಾಡುವಾಗ ತುಂಬಾ ಭಾರದ ಆಭರಣಗಳನ್ನು ಹಾಕಿದರೆ ಅವರಿಗೆ ಕಿರಿಕಿರಿ ಉಂಟಾಗುತ್ತದೆ. ನಮಗೆ ಅವರನ್ನು ನೋಡಲು ಇಷ್ಟವಾಗುವುದೇನೋ ಸರಿ, ಆದರೆ ಅವರು ಕೂಡ ಕಂಫರ್ಟ್ ಆಗಿರಬೇಕು ಅಲ್ಲವೇ.

ಅಲ್ಲದೆ ಕೃಷ್ಣ ಅಲಂಕಾರಕ್ಕೆ ನೀವು ಫ್ಯಾನ್ಸಿ ಸ್ಟೋರ್‌ನಿಂದ ಕಾಸ್ಟ್ಯೂಮ್ ಕೊಂಡು ತರಬೇಕಾಗಿಲ್ಲ. ಅದಕ್ಕೆ ಬೇಕಾದ ಸಾಮಗ್ರಿ ತಂದರಷ್ಟೇ ಸಾಕು ಗೋಲ್ಡನ್ ಪೇಪರ್‌ನಿಂದ ಮುಕುಟ, ತೋಳು ಬಂದಿ, ಸೊಂಟಕ್ಕೆ ಪಟ್ಟಿ ಹಾಗೂ ಚೈನ್ ಎಲ್ಲಾ ಮಾಡಬಹುದು. ಇಲ್ಲಿ ಅಂಜಲಿಯವರು ವೀಡಿಯೋದಲ್ಲಿ ತುಂಬಾ ಸರಳವಾಗಿ ಕೃಷ್ಣನ ಅಲಂಕಾರ ಮಾಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದಾರೆ ನೋಡಿ.

ಕೃಷ್ಣ ಎಂದಿಗೂ ಭಕ್ತರ ಬಾಲ ಕೃಷ್ಣ
ಬಾಲ ಕೃಷ್ಣನ ಫೋಟೋಗಳನ್ನು ನೋಡಲು, ಅವನ ಲೀಲೆಗಳನ್ನು ಕೇಳಲು ಪ್ರತಿಯೊಬ್ಬರು ಇಷ್ಟಪಡುತ್ತಾರೆ. ಕೃಷ್ಣನ ಒಂದೊಂದು ಲೀಲೆಯೂ ಸುಂದರ. ಮನೆಯಲ್ಲಿ ಬೆಣ್ಣೆಯಿದ್ದರೆ ಮಗುವಿಗೆ ಕೃಷ್ಣನ ವೇಷ ತೋಡಿಸಿ ಬೆಣ್ಣೆ ತಿನ್ನಲು ನೀಡಿದರೆ ಆಹಾ ನೋಡಲು ಎಂಥ ಸೊಬಗು.

ಕೃಷ್ಣನ ಉಡುಗೆ
ಕೃಷ್ಣ ಉಡುಗೆ ತುಂಬಾ ಸರಳ. ಮನೆಯಲ್ಲಿ ಶಲ್ಯ ಅಥವಾ ಚಿಕ್ಕ ಪಂಚೆ ಇದ್ದರೆ ಸಾಕು, ಮಗುವಿಗೆ ಪಂಚೆ ಉಡಿಸಬಹುದು. ಪಂಚೆ ಹಳದಿ, ನೀಲಿ ಹೀಗೆ ಬಣ್ಣದ ಪಂಚೆಯಾಗಿದ್ದರೆ ತುಂಬಾ ಆಕರ್ಷಕ.

ಕೊಳಲು ಕೃಷ್ಣ
ಕೃಷ್ಣ ಎಂದರೆ ತಕ್ಷಣ ನೆನಪಾಗುವುದು ಕೊಳಲು ಊದುತ್ತಾ ಗೋಪಿಕೆಯರ ನಡುವೆ ಇರುವ ತುಂಟ ಕೃಷ್ಣ. ಕೊಳಲು, ತಲೆಗೆ ನವಿಲು ಗಿರಿ ಇಲ್ಲಾ ಅಂದ್ರೆ ಕೃಷ್ಣ ಲುಕ್ ಕಂಪ್ಲೀಟ್ ಆಗುವುದೇ ಇಲ್ಲ. ಕಿರೀಟಕ್ಕೆ ನವಿಲು ಗಿರಿ ಅಂಟಿಸಿ. ಇನ್ನು ಕೊಳಲು ಅನ್ನು ಗಟ್ಟಿ ರಟ್ಟಿನ ಪೇಪರ್‌ನಿಂದ ತಯಾರಿಸಿ ಅದಕ್ಕೆ ಗೋಲ್ಡನ್ ಬಣ್ಣದ ಪೇಪರ್ ಸುತ್ತಿದರೆ ಸಾಕು.

ಸಿಂಗಾರ ಬೊಟ್ಟು
ಇನ್ನು ಬೊಟ್ಟು ಹಾಕಿದ ಮೇಲೆ ಬಿಳಿ ಹಾಗೂ ಕೆಂಪು ಬಣ್ಣದ ಸಿಂಗಾರದಿಂದ ಬೊಟ್ಟು ಹಾಕಬೇಕು. ಹುಬ್ಬು ಮೇಲೆ ಕೂಡ ಬಿಳಿ, ಕೆಂಪು ಚುಕ್ಕಿ ಇಡಬೇಕು. ಇಷ್ಟು ಮಾಡಿದರೆ ಕೃಷ್ಣನ ಲುಕ್ ಪರ್ಫೆಕ್ಟ್.

ರಾಧೆ
ಇನ್ನು ಜನ್ಮಾಷ್ಟಮಿಗೆ ಮುದ್ದು ಕೃಷ್ಣ ಜೋಡಿ ರಾಧೆಯ ವೇಷ ತೊಡಿಸುವುದಾದರೆ ಸ್ವಲ್ಪ ಅಧಿಕವೇ ಅಲಂಕಾರ ಬೇಕು. ಮಗುವಿಗೆ ಉದ್ದ ಲಂಗವಿದ್ದರೆ ತುಂಬಾ ಒಳ್ಳೆಯದು. ಹಣೆಗೆ ನೆತ್ತಿ ಬೊಟ್ಟು ಹಾಕಿ, ಆಭರಣಗಳನ್ನು ಮುದ್ದು ರಾಧೆಯನ್ನು ಸಿದ್ಧ ಪಡಿಸಬಹುದು. ಆದರೆ ಮಕ್ಕಳು 5 ವರ್ಷಕ್ಕಿಂತ ಮೇಲ್ಪಟ್ಟವರು ಆದರೆ ಓಕೆ, ಆದರೆ ತುಂಬಾ ಚಿಕ್ಕವರಾದರೆ ಅವರಿಗೆ ತುಂಬಾ ಅಲಂಕಾರ ಮಾಡಿದಾಗ ಕಿರಿಕಿರಿ ಆಗುವುದು. ಆದ್ದರಿಂದ ಆಗ ಸ್ವಲ್ಪ ಸರಳ ಅಲಂಕಾರ ಮಾಡಿ.



Click it and Unblock the Notifications
