Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳಲ್ಲಿ ಕಾಡುವ ಮಲಬದ್ಧತೆ ಹೋಗಲಾಡಿಸುವುದು ಹೇಗೆ?
ಮಕ್ಕಳಲ್ಲಿ ಕಾಡುವ ಮಲಬದ್ಧತೆ ಸಮಸ್ಯೆ ಪೋಷಕರಿಗೆ ತುಂಬಾ ಚಿಂತೆಗೀಡು ಮಾಡುತ್ತದೆ. ಮಕ್ಕಳು ಪ್ರತಿದಿನ ಮಲವಿಸರ್ಜನೆ ಮಾಡದಿದ್ದರೆ ಅವರು ಏಕೆ ಮಾಡುತ್ತಿಲ್ಲ, ಇದರಿಂದ ಅವರಿಗೆ ಹೊಟ್ಟೆ ನೋವು ಬರಬಹುದೇ ಎಂಬ ಚಿಂತೆ ಪೋಷಕರದ್ದು. ಇನ್ನು ಕೆಲವು ಮಕ್ಕಳು ಸರಿಯಾಗಿ ನೀರು ಕುಡಿಯದೇ ಇರುವುದರಿಂದ 2-3 ದಿನಕ್ಕೊಮ್ಮೆ ಮಲ ವಿಸರ್ಜನೆಗೆ ಹೋಗುತ್ತಾರೆ.

ಮಕ್ಕಳು ಆಟದಲ್ಲಿ ತುಂಬಾ ಬ್ಯುಸಿಯಾಗಿದ್ದರೆ, ಇಲ್ಲಾ ಅವರಿಗೆ ಪ್ರತಿದಿನ ಟಾಯ್ಲೆಟ್‌ಗೆ ಹೋಗುವ ಅಭ್ಯಾಸ ಮಾಡಿಸದೇ ಹೋದರೂ ಮಕ್ಕಳು ಪ್ರತಿದಿನ ಮಲವಿಸರ್ಜನೆಗೆ ಹೋಗುವುದಿಲ್ಲ. ತಾಯಿಯ ಎದೆ ಹಾಲು ಮಾತ್ರ ಕುಡಿಯುವಾಗ ಕೆಲ ಮಕ್ಕಳು 3-4 ದಿನವಾದರೂ ಮಲವಿಸರ್ಜನೆ ಮಾಡುವುದಿಲ್ಲ. ಹೀಗಾದರೆ ಭಯ ಪಡುವ ಅಗ್ಯತವಿಲ್ಲವೆಂದು ಮಕ್ಕಳ ತಜ್ಞರು ಹೇಳುತ್ತಾರೆ.
ಮಕ್ಕಳಿಗೆ 6 ತಿಂಗಳ ಬಳಿಕ ಹಣ್ಣು, ತರಕಾರಿಗಳನ್ನು ನೀಡಲು ಪ್ರಾರಂಭಿಸಿದ ಮೇಲೆ ಅವರು ಪ್ರತಿದಿನ ಟಾಯ್ಲೆಟ್‌ಗೆ ಹೋಗುತ್ತಾರೆ, ಆದರೂ ಕೆಲ ಮಕ್ಕಳು ಎರಡು ಮೂರು ದಿನವಾದರೂ ಹೋಗುವುದಿಲ್ಲ, ಅಲ್ಲದೆ ಮಲವಿಸರ್ಜನೆಗೆ ಮಾಡುವಾಗ ನೋವಿನಿಂದ ಅಳುತ್ತಾರೆ, ಈ ರೀತಿ ಉಂಟಾದರೆ ಪೋಷಕರಿಗೆ ಆತ ಕ ಉಂಟಾಗುವುದು.
ಇಲ್ಲಿ ನಾವು ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆಗೆ ಕಾರಣವೇನು, ಇದನ್ನು ಹೇಗೆ ಹೋಗಲಾಡಿಸಬಹುದು, ಯಾವ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು ಎಂಬ ಮಾಹಿತಿ ನೀಡಿದ್ದೇವೆ ನೋಡಿ:

ಮಲಬದ್ಧತೆ ಲಕ್ಷಣಗಳು
ಮಲಬದ್ಧತೆ ಸಮಸ್ಯೆ ಮಕ್ಕಳಲ್ಲಿ ಅವರ ಮಲ ವಿಸರ್ಜನೆಯ ಅಭ್ಯಾಸವನ್ನೇ ಬದಲಾಯಿಸುತ್ತದೆ. ಮಲ ತುಂಬಾ ಗಟ್ಟಿಯಾಗಿದ್ದರೆ, ಮಾಡುವಾಗ ತುಂಬಾ ನೋವಾಗುತ್ತಿದ್ದರೆ ಮಕ್ಕಳು ಸರಿಯಾಗಿ ಮಲವಿಸರ್ಜನೆ ಮಾಡದೆ
ಮಲಬದ್ಧತೆ ಸಮಸ್ಯೆ ಕಾಡುವುದು.
- ಕಿಬ್ಬೊಟ್ಟೆಯಲ್ಲಿ ನೋವು
- 2-3 ದಿನಕ್ಕೊಮ್ಮೆ ಮಲ ವಿಸರ್ಜನೆಗೆ ಹೋಗುವುದು
- ಮಲವಿಸರ್ಜನೆ ಮಾಡುವಾಗ ನೋವುಂಟಾಗುವುದು ಹಾಗೂ ಮಲ ತುಂಬಾ ಗಟ್ಟಿಯಾಗಿರುವುದು
- ಆಟ ಅಡುತ್ತಿರುವ ಮಗು ಇದ್ದಕ್ಕಿದ್ದಂತೆ ಸುಮ್ಮನೆಯಾಗುವುದು ಇವೆಲ್ಲಾ ಮಲಬದ್ಧತೆಯ ಲಕ್ಷಣಗಳು.
- ಮಗುವಿಗೆ ಟಾಯ್ಲೆಟ್ ಅಭ್ಯಾಸ ಮಾಡಿಸಬೇಕು. ಮಗುವಿಗೆ ಊಟ ನೀಡಿದ ಬಳಿಕ 5 ನಿಮಿಷ ಟಾಯ್ಲೆಟ್‌ನಲ್ಲಿ ಕೂರಿಸಿ. ಮಗು ಊಟ ಮಾಡಿದ ಇಪ್ಪತ್ತು ನಿಮಿಷದ ಬಳಿಕ ಹೀಗೆ ಮಾಡಿ. ಬೆಳಗ್ಗೆ ಅಥವಾ ಮಧ್ಯಾಹ್ನ ಊಟ ಮಾಡಿಸಿದ ಮೇಲೆ ಹೀಗೆ ಮಾಡಿ. ಪ್ರತಿದಿನ ಒಂದೇ ಸಮಯಕ್ಕೆ ಟಾಯ್ಲೆಟ್‌ಗೆ ಕರೆದುಕೊಂಡು ಹೋಗಿ. ಅವರು ಕೂರುವಾಗ ಫೂಟ್‌ಸ್ಟೀಲ್ ಇಡಿ, ಮುಂದೆಕ್ಕೆ ಬಾಗಿ ಕೂರಲು ಬಿಡಬೇಡಿ.
- ಮಗು ಟಾಯ್ಲೆಟ್‌ಗೆ ಹೋಗುವಂತೆ ಉತ್ತೇಜಿಸಿ. ಅದಕ್ಕೆ ಗೊಂಬೆ ಕೊಡುವುದು, ಚಾಕೋಲೇಟ್ ಕೊಡುವುದು ಮಾಡಿ. ಈ ರೀತಿ ಮಾಡುವುದರಿಂದ ಅವರು ಪ್ರತಿನಿತ್ಯ ಹೀಗುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ. ಮಗುವಿನ ಮಲ ಬೇಯಿಸಿದ ಆಲೂಗಡ್ಡೆ ರೀತಿ ಮೃದುವಾಗಿರಬೇಕು, ಗಟ್ಟಿಯಾಗಿರಬಾರದು.
- ಮಗುವಿಗೆ ಹಣ್ಣು, ತರಕಾರಿಗಳನ್ನು ನೀಡಿ, ಒಣ ದ್ರಾಕ್ಷಿ, ಧಾನ್ಯಗಳು ಇವೆಲ್ಲಾ ಮಲವಿಸರ್ಜನೆ ಮಾಡುವಂತೆ ಮಾಡುವಲ್ಲಿ ಸಹಕಾರಿ.
- ಮಗುವಿಗೆ ಸಾಕಷ್ಟು ನೀರು ಕುಡಿಸಿ, ಅದು ಕುಡಿಯದಿದ್ದರೂ ಏನಾದರೂ ಆಟವಾಡಿಸುತ್ತಾ ಕುಡಿಸಿ. ಒಣ ಪ್ಲಮ್‌ನ ಜ್ಯೂಸ್ ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ಸಹಕಾರಿ.
- ಮಗು ಮಲವಿಸರ್ಜನೆಗೆ ಹೋಗದಿದ್ದರೆ ಟೆನ್ಷನ್ ಮಾಡಿಕೊಳ್ಳಬೇಡಿ, ಮಗುವನ್ನು ಅದೇ ದಿನ ಬೇರೆ ಸಮಯದಲ್ಲಿ ಕೂರಿಸಿ ಮಾಡುವುದು.
- ಮಗುವಿನ ಮಲವಿಸರ್ಜನೆ ಮಾಡಿದಾಗ ರಕ್ತ ಕಂಡು ಬಂದರೆ
- ಆಗಾಗ ಮಲಬದ್ಧತೆ ಕಾಡುತ್ತಿದ್ದರೆ
- 3 ದಿನಕ್ಕಿಂತ ಹೆಚ್ಚು ದಿನ ಟಾಯ್ಲೆಟ್‌ಗೆ ಹೋಗದೇ ಇದ್ದರೆ
- ಮಲವಿಸರ್ಜನೆ ಮಾಡುವಾಗ ಮಗು ನೋವಿನಿಂದ ಅಳುತ್ತಿದ್ದರೆ
- ಔಷಧಿ ತೆಗೆದುಕೊಂಡರೂ ಮಲಬದ್ಧತೆ ಸಮಸ್ಯೆ ಕಾಡುತ್ತಿದ್ದರೆ

ಏನು ಮಾಡಬೇಕು?

ಏನು ಮಾಡಬಾರದು?
ಮಗುವಿಗೆ ಲ್ಯಾಕ್ಸಾಟಿವ್ಸ್ ವೈದ್ಯರ ಸಲಹೆ ಇಲ್ಲದೆ ನೀಡಬೇಡಿ.ಕೆಲ ಮಕ್ಕಳಿಗೆ ಹೊರಗಿನ ಹಾಲು ಹಾಕಿದರೂ ಮಲವಿಸರ್ಜನೆಗೆ ಕಷ್ಟವಾಗಬಹುದು,ಅಂಥ ಹಾಲನ್ನು ನೀಡಲು ಹೋಗಬೇಡಿ.
ಮಗು ಮಲವಿಸರ್ಜನೆ ಚಡ್ಡಿಯಲ್ಲಿಯೇ ಮಾಡಿದರೆ ಕೋಪಗೊಳ್ಳಬೇಡಿ, ಮಕ್ಕಳು ಬೇಕು ಅಂತ ಮಾಡುವುದಿಲ್ಲ, ಅವರಿಗೆ ಮಲವಿಸರ್ಜನೆಯ ಅನುಭವ ಬಂದಾಗ ಹೇಳುತ್ತಾರೆ, ಅದೇ ಬೈಯ್ಯುವುದು ಮಾಡಿದರೆ ಅವರು ಭಯದಿಂದ ಮಲವಿಸರ್ಜನೆ ತಡೆ ಹಿಡಿಯಲು ಪ್ರಯತ್ನಿಸುತ್ತಾರೆ.

ಮಗುವಿಗೆ ಅದರ ಇಷ್ಟದ ವಸ್ತು, ಆಟಿಕೆ ಕೊಡುತ್ತೇನೆ ಎಂದು ಹೇಳಿ
ಮಗುವಿಗೆ ನೀನು ಟಾಯ್ಲೆಟ್ ಮಾಡಿದರೆ ಅದು ಇಷ್ಟಪಡುವ ವಸ್ತು ಕೊಡುತ್ತೇನೆ ಎಂದು ಹೇಳಿ ಖುಷಿಯಾಗುವುದು. ಅಲ್ಲದೆ ಮಕ್ಕಳಿಗೆ ತಾಜಾ ಫ್ರೂಟ್ ಜ್ಯೂಸ್ ಕೊಡಿ. ಇವೆಲ್ಲಾ ಮಲವಿಸರ್ಜನೆ ಸರಿಯಾಗಿ ಆಗಲು ಸಹಕಾರಿ.

ಯಾವಾಗ ವೈದ್ಯರಿಗೆ ತೋರಿಸಬೇಕು?
ಸಲಹೆ: ಮಕ್ಕಳಿಗೆ ಮಲಬದ್ಧತೆ ಉಂಟಾದಾಗ ಆತಂಕ ಪಡಬೇಡಿ, ಸೊಪ್ಪು, ತರಕಾರಿ, ಹಣ್ಣುಗಳನ್ನು ನೀಡಿ, ಫ್ರೂಟ್ ಜ್ಯೂಸ್ ನೀಡಿ, ನೀರು ಕುಡಿಸಿ, ಇವೆಲ್ಲಾ ಮಲ ವಿಸರ್ಜನೆ ಸರಿಯಾಗಿ ಹೋಗುವಂತೆ ಮಾಡುವುದು.



Click it and Unblock the Notifications
