For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣಗಳೇನು? ಲಕ್ಷಣಗಳೇನು?

|

ಇತ್ತೀಚಿಗೆ ಇದ್ದಕ್ಕಿದ್ದಂತೆ ಮಗು ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿತು ಎಂಬ ಸುದ್ದಿಗಳನ್ನು ಕೇಳಿರಬಹುದು. ಮಕ್ಕಳಿಗೆ ಹೃದಯಾಘಾತ ಉಂಟಾಗುವುದೇ? ಚಿಕ್ಕ ಪ್ರಾಯದಲ್ಲಿಯೇ ಮಕ್ಕಳಿಗೆ ಹೃದಯಾಘಾತ ಬರಲು ಕಾರಣವೇನು ಎಂಬ ಪ್ರಶ್ನೆಗಳು ಮೂಡುವುದು ಸಹಜ.

Children And Heart Attack

ಮಕ್ಕಳಿಗೆ ಹೃದಯಾಘಾತ ಉಂಟಾಗುವುದು ತುಂಬಾ ಅಪರೂಪ, ಆದರೆ ಮಕ್ಕಳಿಗೂ ಹೃದಯಾಘಾತ ಉಂಟಾಗಬಹುದು, ಮಕ್ಕಳಿಗೆ ಹೃದಯ ಸಂಬಂಧಿ ಸಮಸ್ಯೆಯಿದ್ದರೆ ಅಥವಾ ಎದೆನೋವು ಇದ್ದರೆ ಹೃದಯಾಘಾತ ಉಂಟಾಗುವ ಸಾಧ್ಯತೆ ಇದೆ.

ಮಕ್ಕಳಲ್ಲಿ ಹೃದಯಾಘಾತಕ್ಕೆ ಕಾರಣಗಳೇನು?

ಹೃದಯ ಸಂಬಂಧಿ ಸಮಸ್ಯೆಗಳು
ಕೆಲವು ಮಕ್ಕಳಲ್ಲಿ ಹುಟ್ಟುವಾಗಲೇ ಹೃದಯ ಸಂಬಂಧಿ ಸಮಸ್ಯೆಗಳಿರುತ್ತವೆ, ಅಂತಹ ಮಕ್ಕಳಲ್ಲಿ ಶೇ. 1ರಷ್ಟು ಮಕ್ಕಳಲ್ಲಿ ಹೃದಯಾಘಾತ ಉಂಟಾಗಬಹುದು.

ಮಕ್ಕಳಲ್ಲಿ ಹೃದಯದ ರಕ್ತನಾಳಗಳಲ್ಲಿ ಸಮಸ್ಯೆಯಿದ್ದರೆ ಅಂಥ ಮಕ್ಕಳಲ್ಲಿ ಹೃದಯಾಘಾತ ಉಂಟಾಗಬಹುದು.

ಅಭಿದಮನಿ ನಾಳದಲ್ಲಿ ತೊಂದರೆಯಿದ್ದರೆ

ಅಭಿದಮನಿ ನಾಳದಲ್ಲಿ ತೊಂದರೆಯಿದ್ದರೆ

ಹೃದಯದ ರಕ್ತನಾಳಗಳನ್ನು ಅಪಧಮನಿ ಮತ್ತು ಅಭಿದಮನಿ ಎಂದು ಕರೆಯುತ್ತೇವೆ. ಅಭಿದಮನಿ ಎಂದರೆ ದೇಹದ ಎಲ್ಲಾ ಕಡೆಯಿಂದ ಹೃದಯಕ್ಕೆ ರಕ್ತವನ್ನು ತರುವ ರಕ್ತನಾಳವಾಗಿದೆ, ಅಪಧಮನಿ ಎಂದರೆ ಹೃದಯದಿಂದ ಆಮ್ಲಜನಕ ಭರಿತ ಶುದ್ದವಾದ ರಕ್ತವನ್ನು ದೇಹದ ಎಲ್ಲಾ ಅಂಗಾಂಶಕ್ಕೆ ತಲುಪಿಸುತ್ತದೆ. ಅಭಿದಮನಿ ಬ್ಲಾಕ್‌ ಆದರೆ ಹೃದಯಕ್ಕೆ ರಕ್ತದ ಪೂರೈಕೆ ಕಡಿಮೆಯಾಗುತ್ತದೆ ಆಗ ಹೃದಯ ರಕ್ತವನ್ನು ಹೀರಿಕೊಳ್ಳಲು ಹೆಚ್ಚಿನ ಒತ್ತಡ ಹಾಕುತ್ತದೆ, ಇದರಿಂದ ಹೃದಯಾಘಾತ ಉಂಟಾಗುವುದು.

ಹೃದಯ ಸಂಬಂಧಿ ಸಮಸ್ಯೆಯಿದ್ದರೆ

ಕೆಲ ಮಕ್ಕಳಿಗೆ ಹೃದಯ ಸಂಬಂಧಿ ಸಮಸ್ಯೆ ಉಂಟಾಗುತ್ತದೆ. ಈ ಬಗೆಯ ಹೃದಯ ಸಂಬಂಧಿ ಸಮಸ್ಯೆ ಕೆಲ ಮಕ್ಕಳಲ್ಲಿ ಕಂಡು ಬರುವುದು:

ರುಮಾಟಿಕ್ ಹೃದಯ ಕಾಯಿಲೆ

ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ ಇದಾಗಿದೆ, 2015ರ ಅಧ್ಯಯನ ವರದಿ 33. 4 ಮಿಲಿಯನ್‌ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದೆ.

 ಮಕ್ಕಳಲ್ಲಿ ಕವಾಸ್ಕಿ ಸಮಸ್ಯೆ

ಮಕ್ಕಳಲ್ಲಿ ಕವಾಸ್ಕಿ ಸಮಸ್ಯೆ

ಪ್ರತಿ ಒಂದು ಲಕ್ಷ ಮಕ್ಕಳಲ್ಲಿ 9-20 ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುವುದು. 5ಯಿ, ತುಟಿ, ಗಂಟಲಿನಲ್ಲಿ ಕೆರೆತ, ನೋವು

* ಕಜ್ಜಿ, ತುರಿಕೆ ವರ್ಷದೊಳಗಿನ ಮಕ್ಕಳಲ್ಲಿ ಈ ಸಮಸ್ಯೆ ಕಂಡು ಬರುವುದು.

ಈ ಕಾಯಿಲೆಯ ಲಕ್ಷಣಗಳು

* ಅತ್ಯಧಿಕ ಜ್ವರ

* ಕಣ್ಣುಗಳು ಕೆಂಪಾಗುವುದು, ತುರಿಕೆ

* ಬಾ, ಕೈ-ಕಾಲುಗಳಲ್ಲಿ ಊತ

 ಮಕ್ಕಳಲ್ಲಿ ಹೃದಯಾಘಾತಕ್ಕೆ ಮತ್ತಿತರ ಕಾರಣಗಳು

ಮಕ್ಕಳಲ್ಲಿ ಹೃದಯಾಘಾತಕ್ಕೆ ಮತ್ತಿತರ ಕಾರಣಗಳು

* ಹಾರ್ಟ್‌ ಮಸಲ್‌ ಕಾಯಿಲೆ ಇದಕ್ಕೆ cardiomyopathy ಎಂದು ಕರೆಯಲಾಗುವುದು. ಇದು ವಂಶವಾಹಿಯಾಗಿ ಕೂಡ ಬರುತ್ತದೆ

* ಹೃದಯಕ್ಕೆ ರಕ್ತ ಸಂಚಾರ ಕಡಿಮೆಯಾದರೆ

* ಅನಿಯಮಿತ ಹೃದಯ ಬಡಿತ

* ರಕ್ತಹೀನತೆ

* ಸೋಂಕು

* ಔಷಧಿಯ ಅಡ್ಡಪರಿಣಾಮ (ಕ್ಯಾನ್ಸರ್ ಕೊಡುವ ಔಷಧಗಳು)

ಮಕ್ಕಳಲ್ಲಿ ಹೃದಯಾಘಾತ ಲಕ್ಷಣಗಳು

ಮಕ್ಕಳಲ್ಲಿ ಹೃದಯಾಘಾತ ಲಕ್ಷಣಗಳು

ಕಾಲುಗಳು, ಮಣಿಗಂಟು, ಹೊಟ್ಟೆ, ಕಾಲಿನ ಕೆಳಭಾಗದಲ್ಲಿ ಊತ

* ಉಸಿರಾಡಲು ತೊಂದರೆ

* ಸರಿಯಾಗಿ ಆಹಾರ ಸೇವಿಸದಿರುವುದು, ತೂಕ ಹೆಚ್ಚುವುದು

* ಸುಸ್ತು

* ತುಂಬಾ ಬೆವರುವುದು

* ಅಸ್ವಸ್ಥತೆ

ಸ್ವಲ್ಪ ದೊಡ್ಡ ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬರುವುದು

* ತೂಕ ಇಳಿಕೆ

* ಎದೆನೋವು

ಹೃದಯದ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ?

ಹೃದಯದ ಆರೋಗ್ಯದ ಬಗ್ಗೆ ತಿಳಿಯುವುದು ಹೇಗೆ?

* ರಕ್ತ ಮತ್ತು ಮೂತ್ರ ಪರೀಕ್ಷೆ

* ಎದೆಭಾಗದ ಎಕ್ಸ್‌ರೇ

* ಇಸಿಜಿ

* ಎಕೋ (Echocardiography)

* ಕಾರ್ಡಿಯಾಕ್‌ ಕ್ಯಾಥೆಟ್ರೆರೈಸೇಷನ್

ಹೃದಯ ಸಮಸ್ಯೆ ಇದ್ದರೆ ಮಕ್ಕಳ ಆರೈಕೆ

* ದಿನಾ ಔಷಧ ನೀಡಬೇಕು

* ಪೋಷಕಾಂಶಗಳ ಆಹಾರ ನೀಡಬೇಕು

* ಅವರಿಗೆ ವೈದ್ಯರು ಸೂಚಿಸಿದ ವ್ಯಾಯಾಮ ಮಾಡಿಸಬೇಕು.

ಯಾವಾಗ ಕೂಡಲೇ ತುರ್ತು ಚಿಕಿತ್ಸೆ ಕೊಡಿಸಬೇಕು?

* ಉಸಿರಾಟದಲ್ಲಿ ತೊಂದರೆ

* ನುಂಗಲು ತೊಂದರೆ

* ಸುಸ್ತು

* ಸರಿಯಾಗಿ ತಿನ್ನದಿದ್ದರೆ

ಭಾರತದಲ್ಲಿ ಪ್ರತಿವರ್ಷ ಸುಮಾರು 2.4 ಲಕ್ಷ ಮಕ್ಕಳು ಹೃದಯ ಸಮಸ್ಯೆಗಳೊಂದಿಗೆ ಜನಿಸುತ್ತವೆ, ಅವುಗಳಲ್ಲಿ ಐದರಲ್ಲಿ ಒಂದು ಮಗುವಿಗೆ ಮೊದಲ ವರ್ಷದಲ್ಲಿಯೇ ಪರಿಣಿತರಿಂದ ಚಿಕಿತ್ಸೆ ಅಗ್ಯತವಿರುತ್ತದೆ, ಕೆಲವು ಮಕ್ಕಳಿಗೆ ಜನಿಸಿದ ಒಂದು ತಿಂಗಳ ಒಳಗೆ ಹೃದಯದ ಶಸ್ತ್ರ ಚಿಕಿತ್ಸೆ ಮಾಡಬೇಕಾಗುವುದು. ಭಾರತದಲ್ಲಿ ಮಕ್ಕಳ ತಜ್ಞರ ಕೊರತೆ ಇದೆ, ಪ್ರತೀವರ್ಷ 26 ಮಿಲಿಯನ್‌ ಮಕ್ಕಳು ಜನಿಸುತ್ತಾರೆ, ಆದರೆ ಸುಮಾರು 50,000 ಮಕ್ಕಳ ತಜ್ಞರಿದ್ದಾರೆ ಎಂಬುವುದಾಗಿ ಡಾ. ದೇವಿ ಶೆಟ್ಟಿ ಹೇಳಿದ್ದಾರೆ.

English summary

Children And Heart Attack Potential Causes, Diagnosis and Management in Kannada

Children And Heart Attack: What are the possible reason, symptoms and when to call Doctor, read on...
X
Desktop Bottom Promotion