Latest Updates
-
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್! -
ಬೆಂಗಳೂರು ಮಳೆ: ಟ್ರಾಫಿಕ್ ಜಾಮ್ ತಪ್ಪಿಸಿ ಸುರಕ್ಷಿತವಾಗಿ ಮನೆ ತಲುಪಲು ಇಲ್ಲಿದೆ ಸ್ಮಾರ್ಟ್ ಟ್ರಾವೆಲ್ ಪ್ಲಾನ್! -
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು?
ಹದಿಹರೆಯದವರಲ್ಲಿ ಬಾಡಿ ಶೇಮಿಂಗ್: ಈ ಸಮಸ್ಯೆ ಸಮರ್ಥವಾಗಿ ಹ್ಯಾಂಡಲ್ ಮಾಡುವುದು ಹೇಗೆ?
ಬಾಡಿ ಶೇಮಿಂಗ್ ಎಂಬುವುದು ಹದಿಹರೆಯದವರ ಪ್ರಾಯದವರಲ್ಲಿ ಅನೇಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಸ್ವಲ್ಪ ದಪ್ಪಗಿದ್ದರೆ ಬಾಡಿ ಶೇಮಿಂಗ್‌ಗೆ ಒಳಗಾಗುತ್ತಾರೆ. ಆದರೆ ಈ ರೀತಿ ಬಾಡಿ ಶೇಮಿಂಗ್‌ಗೆ ಅಷ್ಟು ಚಿಕ್ಕ ಪ್ರಾಯದಲ್ಲಿ ಒಳಗಾದರೆ ಅದು ಮನಸ್ಸಿನ ಮೇಲೆ ತುಂಬಾನೇ ಆಘಾತ ಬೀರುವುದು.

ಹೌದು ಬಾಡಿ ಶೇಮಿಂಗ್‌ಗೆ ಹೆದರಿ ಎಷ್ಟೋ ಹದಿಹರೆಯದ ಮಕ್ಕಳು ಪೋಷಕಾಂಶದ ಆಹಾರ ಸೇವಿಸುತ್ತಿಲ್ಲ.
ಇತ್ತೀಚೆಗೆ ನಡೆದ ಒಂದು ಘಟನೆ ಬಗ್ಗೆ ಹೇಳುತ್ತೇನೆ, ಆಕೆ ಒಬ್ಬಳೇ ಮಗಳು, ಪಿಯುಸಿ ಓದುತ್ತಿದ್ದಳು, ಅವರ ಅಮ್ಮ ಮಗಳು ಏನೂ ತಿನ್ನಲ್ಲ, ಅರ್ಧ ದೋಸೆ ತಿನ್ನುವುದೇ ಹೆಚ್ಚು, ಹೀಗೆ ತಿಂದರೆ ಹೇಗೆ? ಎಂದು ಪ್ರತಿದಿನ ಬೈಯ್ಯುತ್ತಿದ್ದರು, ಆದರೆ ಆಕೆ ತಲೆಕೆಡಿಸಿಕೊಂಡಿರಲಿಲ್ಲ, ಒಂದು ದಿನ ಇದ್ದಕ್ಕಿದ್ದಂತೆ ತಲೆಸುತ್ತು ಬಂದು ಬೀಳುತ್ತಾಳೆ, ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ವೈದ್ಯರು ನಿಮ್ಮ ಮಗಳಿಗೆ ವೀಕ್ನೆಸ್‌ನಿಂದಾಗಿ ಹೀಗಾಗಿದೆ, ಅವಳಿಗೆ ಪೋಷಕಾಂಶದ ಕೊರತೆಯಾಗಿದೆ ಎಂದು ಹೇಳುತ್ತೇರೆ. ಆಕೆಗೆ ಮಲಗಿದ್ದಲ್ಲಿಂದ ಏಳಲು ಸಾಧ್ಯವಾಗುತ್ತಿರಲಿಲ್ಲ, ವೈದ್ಯರ ಚಿಕಿತ್ಸೆ, ಮನೆಯವರ ಆರೈಕೆಯಿಂದ ಆರೋಗ್ಯ ಮರಳಿ ಪಡೆದಳು.
ಈ ವಿಷಯ ಏಕೆ ಹೇಳಿದ್ದೇನೆ ಎಷ್ಟೋ ಹದಿಹರೆಯದ ಮಕ್ಕಳು ದಪ್ಪಗಾಗುತ್ತೇವೆ ಎಂದು ಹೆದರಿ ಸರಿಯಾಗಿ ಆಹಾರ ಸೇವಿಸುತ್ತಿಲ್ಲ, ಇದರಿಂದಾಗಿ ಅವರಲ್ಲಿ ವೀಕ್ನೆಸ್ ಅಂದರೆ ಪೋಷಕಾಂಶದ ಕೊರತೆ ಉಂಟಾಗುತ್ತಿದೆ.
ಬಾಡಿ ಶೇಮಿಂಗ್ ಆತ್ಮವಿಶ್ವಾಸ ಕುಗ್ಗಿಸುತ್ತಿದೆ
ಬಾಡಿ ಶೇಮಿಂಗ್‌ಗೆ ಒಳಗಾದರೆ ಆತ್ಮವಿಶ್ವಾಸ ಕಡಿಮೆಯಾಗುವುದು. ಎಲ್ಲಿ ನನ್ನನ್ನು ಆಡಿಕೊಂಡು ನಗುತ್ತಾರೋ ಎಂಬ ಹಿಂಜರಿಕೆಯಲ್ಲಿ ಶಾಲಾ, ಕಾಲೇಜಿನಲ್ಲಿ ಚಟುವಟಿಕೆಯಿಂದ ಇರಲು ಹಿಂದೇಟು ಹಾಕುತ್ತಾರೆ.
ಮನೆಯಲ್ಲೂ ಒಂಟಿತನ ಇಷ್ಟಪಡುತ್ತಾರೆ
ಬಾಡಿ ಶೇಮಿಂಗ್‌ನಿಂದಾಗಿ ಮನಸ್ಸಿಗೆ ಬೇಸರವಾಗಿರುತ್ತದೆ, ಕೆಲವರು ಮನೆಯವರ ಬಳಿ ಹೇಳಿಕೊಂಡರೆ ಇನ್ನು ಕೆಲವರು ಒಂಟಿಯಾಗಿರಲು ಇಷ್ಟಪಡುತ್ತಾರೆ.
ಈ ಬಾಡಿ ಶೇಮಿಂಗ್ ಮಾಡುವುದರಿಂದ ಹದಿಹರೆಯದವರ ಮೇಲೆ ತುಂಬಾನೇ ಕೆಟ್ಟ ಪ್ರಭಾವ ಬೀರಲಿದೆ.
ಬಾಡಿ ಶೇಮಿಂಗ್ ಸಮರ್ಥವಾಗಿ ಎದುರಿಸುವುದು ಹೇಗೆ?
ನಿಮ್ಮ ದೇಹವನ್ನು ನೀವು ಪ್ರೀತಿಸಿ, ಇತರರು ಏನು ಬೇಕಾದರೂ ಹೇಳಲಿ ಅದರತ್ತ ಕಿವಿ ಕೊಡಲು ಹೋಗಬೇಡಿ. ನಿಮ್ಮ ಆತ್ಮವಿಶ್ವಾಸ ಎಂದಿಗೂ ತಗ್ಗಲು ಬಿಡಬೇಡಿ.
ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬ ಬೇಕಾಗಿದೆ
ಕೆಲವು ಮನೆಗಳಲ್ಲಿ ದಪ್ಪಗಿರುವುದಕ್ಕೆ ಮನೆಯವರೇ ತಮಾಷೆ ಮಾಡುತ್ತಾರೆ. ಆ ರೀತಿ ಮಾಡಲು ಹೋಗಬೇಡಿ. ದೇಹದ ಆಕಾರದ ಕಡೆಗೆ ಹೆಚ್ಚಿ ಗಮನ ನೀಡುವ ಬದಲಿಗೆ ನಿಮ್ಮ ಕೌಶಲ್ಯದತ್ತ ಗಮನ ಹರಿಸಿ. ನಿಮ್ಮ ಕೌಶಲ್ಯ ನಿಮ್ಮ ಬಗ್ಗೆ ಜನರು ಹೆಮ್ಮೆಯಿಂದ ಮಾತನಾಡುವಂತೆ ಮಾಡಿ.
ಬಾಡಿ ಶೇಮಿಂಗ್ ಮಾಡಿದಾಗ ಪ್ರತಿಕ್ರಿಯಿಸಬೇಡಿ
ಅವರು ನಿಮಗೆ ಬಾಡಿ ಶೇಮಿಂಗ್ ಮಾಡಿದಾಗ ಅಳುವುದರಿಂದ ಅವರು ನಿಮ್ಮನ್ನು ಮತ್ತಷ್ಟು ತಮಾಷೆ ಮಾಡಲಾರಂಭಿಸುತ್ತಾರೆ. ನಿಮ್ಮ ದೇಹದ ಬಗ್ಗೆ ಏನಾದರೂ ಹೇಳಿದರೆ ಖಾರವಾಗಿಯೇ ಹೇಳಿ, ಬದಲಿಗೆ ಅಳಲು ಹೋಗಬೇಡಿ.
ಯಾರು ದೇಹ ಸೌಂದರ್ಯದ ಬಗ್ಗೆ ತುಂಬಾ ಗಮನ ಹರಿಸುತ್ತಾರೆ ಆ ಗುಂಪಿನಲ್ಲಿ ಶೆರಬೇಡಿ. ಬದಲಿಗೆ ನಿಮ್ಮ ಓದಿನತ್ತ ಗಮನಹರಿಸಿ.



Click it and Unblock the Notifications


