Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಮಕ್ಕಳ ಮನಸ್ಸು ಹೂವಿನಂತೆ, ಏಕಾಂಗಿತನ ಕಾಡದಿರಲಿ
ಮಕ್ಕಳು ಹೆಚ್ಚು ಚಟುವಟಿಕೆಯಿಂದ ಇದ್ದರೆ ಮಾತ್ರವೇ ಅವರ ಬಾಲ್ಯ ಮಾಸದ ನೆನಪಾಗಿ ಅವರಲ್ಲಿ ಉಳಿಯುತ್ತದೆ. ಈ ಚಟುವಟಿಕೆ ಅವರಲ್ಲಿ ಉಂಟಾಗುವುದು ನೆರೆಹೊರೆಯವರೊಂದಿಗೆ ಅವರ ಕಲೆತು ಬೆರೆತಾಗ ಮಾತ್ರವೇ. ಸುತ್ತಲಿನ ಮಕ್ಕಳಗೊಂದಿಗೆ ನಿತ್ಯದ ಆಟಪಾಠದಲ್ಲಿ ಅವರು ತೊಡಗಿಕೊಂಡಾಗ ಚುರುಕಾಗಿ ತಮ್ಮೊಳಗಿನ ಪ್ರತಿಭೆಯನ್ನು ತಾವೇ ಕಂಡುಕೊಳ್ಳುತ್ತಾರೆ.

ಮಕ್ಕಳು ಇತರೆ ಮಕ್ಕಳೊಂದಿಗೆ ಬೆರೆತಾಗ ಎಲ್ಲವರು ಹಾಳಾಗುತ್ತಾರೋ ಎಂದು ಭಯಪಟ್ಟುಕೊಂಡು ಎಷ್ಟೋ ಹೆತ್ತವರು ಅವರಲ್ಲಿ ಇತರರೊಂದಿಗೆ ಬೆರೆಯಲು ಬಿಡುವುದಿಲ್ಲ. ಇದರಿಂದ ಮಕ್ಕಳ ಮೃದು ಮನಸ್ಸು ಮುದುಡಿ ಹೋಗುತ್ತದೆ. ಸಾಮಾನ್ಯವಾಗಿ ನಮ್ಮ ಸುತ್ತಲೂ ಹೆಚ್ಚು ಜನರಿದ್ದು ಚಟುವಟಿಕೆ ಇದೆ ಎಂದಾದಲ್ಲಿ ನಾವು ಸಂತೋಷವಾಗಿರುತ್ತೇವೆ. ಖಿನ್ನತೆ ನಮ್ಮನ್ನು ಕಾಡುವುದಿಲ್ಲ.
ನಮ್ಮೊಡನೆ ಯಾರೂ ಇಲ್ಲ ಮತ್ತು ನಾವು ಒಬ್ಬಂಟಿಯಾಗಿ ಇದ್ದ ಸಂದರ್ಭದಲ್ಲಿ ನಾವು ಅಂತರ್ಮುಖಿಗಳಾಗುತ್ತೇವೆ ಮತ್ತು ಮನೋವ್ಯಾಧಿ ನಮ್ಮನ್ನು ಕಾಡುತ್ತದೆ. ಮಕ್ಕಳ ವಿಷಯದಲ್ಲೂ ಈ ಅಂಶ ಇನ್ನೂ ಹೆಚ್ಚು ಪ್ರಖರವಾಗಿರುತ್ತದೆ. ಆದಷ್ಟು ನಿಮ್ಮ ಮಕ್ಕಳನ್ನು ನೆರೆಹೊರೆಯವರೊಂದಿಗೆ ಆಡಲು ಬಿಡಿ.
ಮಾರುಕಟ್ಟೆ, ಗಾರ್ಡನ್ ಮೊದಲಾದ ಜನನಿಬಿಡ ಪ್ರದೇಶಗಳ ನಿಮ್ಮ ಮನೆಯ ಹತ್ತಿರ ಇದೆಯೇ ಎಂಬುದನ್ನು ಕಂಡುಕೊಳ್ಳಿ. ದೊಡ್ಡ ದೊಡ್ಡ ನಗರಗಳಲ್ಲಿ ಕೂಡ ಫ್ಲಾಟ್ ಅಪಾರ್ಟ್‌ಮೆಂಟ್‌ಗಳು ಇದೇ ರೀತಿಯ ಯೋಜನೆಯನ್ನಿಟ್ಟುಕೊಂಡೇ ಮನೆಗಳನ್ನು ಕಟ್ಟುತ್ತಿವೆ.
ಅಪಾರ್ಟ್‌ಮೆಂಟ್ ಎದುರುಗಡೆ ದೊಡ್ಡ ಗಾರ್ಡನ್, ಮಕ್ಕಳು ಆಟವಾಡಲು ಬೇಕಾಗಿರುವ ಸ್ಥಳ, ಮಾರುಕಟ್ಟೆ ಅಂತೆಯೇ ಸಾಮಾಜಿಕ ಒಟ್ಟುಗೂಡುವಿಕೆಗೆ ಅವಶ್ಯಕವಾಗಿರುವ ಸೌಲಭ್ಯಗಳನ್ನೇ ನಿರ್ಮಿಸುತ್ತಿವೆ. ಆದ್ದರಿಂದ ಹೊಸ ಮನೆಯನ್ನು ಕಟ್ಟುವ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳಿಗೆ ನೀವು ಆದ್ಯತೆ ನೀಡಬೇಕಾಗುತ್ತದೆ.
ನಿಮ್ಮ ಮಕ್ಕಳು ಆದಷ್ಟು ಒಬ್ಬಂಟಿಗರಾಗಿ ಇರದಂತೆ ನೀವು ನೋಡಿಕೊಳ್ಳಬೇಕು. ಮಕ್ಕಳ ಮನಸ್ಸು ಹೂವಿನಂತೆ. ಈ ಹೂವಿಗೆ ಕೊಂಚ ಘಾಸಿಯಾದರೂ ಅದನ್ನು ಸರಿಪಡಿಸುವುದು ತುಂಬಾ ಕಷ್ಟ ಎಂಬುದು ನಿಮ್ಮ ನೆನಪಿನಲ್ಲಿರಲಿ.



Click it and Unblock the Notifications




