Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳ ಕಾಫಿ ಸೇವನೆಗೆ ಈಗಲೇ ಬ್ರೇಕ್ ಹಾಕಿ
ಮಕ್ಕಳ ಆಹಾರದ ವಿಷಯದಲ್ಲಿ ತಾಯಂದಿರುವ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಮನೆಯಲ್ಲೇ ಮಾಡುವ ತಿಂಡಿಗಿಂತಲೂ ಎಳೆಯರು ಹೊರಗೆ ದೊರೆಯುವ ಪಿಜಾ ಬರ್ಗರ್‌ಗೂ ಮನಸೋಲುತ್ತಿದ್ದರೂ ಹಿತಮಿತವಾಗಿ ಮಕ್ಕಳಿಗೆ ಅವರಿಗೆ ಇಷ್ಟದ ತಿನಿಸನ್ನೂ ನೀಡಿ ಮನೆಯಲ್ಲೇ ತಯಾರಾಗುವ ಆಹಾರವನ್ನು ನೀಡುವಲ್ಲಿ ತಾಯಂದಿರು ಜಾಣೆಯಾಗಿದ್ದಾರೆ. ಇನ್ನು ಕೆಲವು ಮಕ್ಕಳಂತೂ ದೊಡ್ಡವರು ಹೇಗೆ ತಿಂಡಿ ತಿನಿಸು ಸೇವಿಸುತ್ತಾರೋ ಅಂತೆಯೇ ತಮಗೂ ಬೇಕು ಎಂಬ ಹಠ ಮಾಡಿ ಅದನ್ನು ಸೇವಿಸುತ್ತಾರೆ. ಮಗುವಿಗೂ ಟೀ ಕುಡಿಸುತ್ತಿದ್ದಿರಾ? ಹಾಗಾದರೆ ಇಂದೇ ನಿಲ್ಲಿಸಿ!
ಮಕ್ಕಳ ಹಠಕ್ಕೆ ಕಟ್ಟುಬಿದ್ದು ಇಂತಹ ಆಹಾರಗಳನ್ನು ಅವರಿಗೆ ನೀಡಬೇಕಾಗುತ್ತದೆ. ಇಂತಹ ಆಹಾರಗಳಲ್ಲಿ ಬರುವಂತಹುದೇ ಟೀ ಕಾಫಿಯಾಗಿದೆ. ಅದರಲ್ಲೂ ಮಕ್ಕಳು ಹೆಚ್ಚು ಆದ್ಯತೆ ನೀಡುವುದು ಕಾಫಿಗಾಗಿದೆ. ಹಾಲು ಕುಡಿಯಬೇಕಾದ ಚಿಣ್ಣರು ಕಾಫಿಗೆ ಮನಸೋತು ಅದನ್ನೇ ಹೆಚ್ಚು ಸೇವಿಸುತ್ತಾರೆ.
ಕಾಫಿಯಲ್ಲಿ ಕೆಫೇನ್ ಅಂಶ ಹೆಚ್ಚು ಇರುವುದರಿಂದ ಇದರ ದುಷ್ಪರಿಣಾಮಗಳಿಂದ ಮಕ್ಕಳು ಬಳಲುತ್ತಾರೆ. ಕೆಫೇನ್ ಮಾದಕ ದ್ರವ್ಯದಂತಿದ್ದು ಮಕ್ಕಳನ್ನು ಇದು ಶಕ್ತಿಶಾಲಿಯನ್ನಾಗಿ ಮಾಡಿದರೂ, ಸ್ವಲ್ಪ ಸಮಯದಲ್ಲೇ ಮಕ್ಕಳನ್ನು ಮಂಕಾಗಿಸುತ್ತದೆ ಇಂದಿನ ಲೇಖನದಲ್ಲಿ ಮಕ್ಕಳು ಕಾಫಿ ಮತ್ತು ಕೆಫೇನ್ ಅಂಶವುಳ್ಳ ಆಹಾರ ಪದಾರ್ಥಗಳನ್ನು ಏಕೆ ಸೇವಿಸಬಾರದು ಎಂಬುದರ ಮಾಹಿತಿ ನೀಡುತ್ತಿದ್ದು ನೀವು ಇದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ....

ಅಂಶ:1
ಕೆಫೇನ್ ಅಂಶವುಳ್ಳ ಯಾವುದೇ ಪೇಯಗಳನ್ನು ಸೇವಿಸುವ ಮಕ್ಕಳಲ್ಲಿ ಬೊಜ್ಜು ಕಾಣಿಸಿಕೊಳ್ಳುತ್ತದೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಇದರಲ್ಲಿರುವ ಸಕ್ಕರೆ ಕೂಡ ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.

ಅಂಶ:2
ಕೆಫೇನ್ ಅಂಶವು ಹೃದಯ ಸಂಬಂಧಿ ರೋಗಗಳು ಮತ್ತು ಕೆಲವೊಂದು ನರ ದೌರ್ಬಲ್ಯಗಳನ್ನು ಉಂಟುಮಾಡುತ್ತದೆ. ಆದರೆ ಮಕ್ಕಳಿಗೆ ಈ ಅಪಾಯಗಳ ಬಗ್ಗೆ ಅರಿವು ಇಲ್ಲದೇ ಇರುವುದರಿಂದ ಅವರು ಇಂತಹ ಪದಾರ್ಥಗಳನ್ನೇ ಹೆಚ್ಚು ಸೇವಿಸುತ್ತಾರೆ.

ಅಂಶ:3
ಕೆಫೇನ್ ಸೇವನೆಗೆ ನೀವು ನಿರ್ಬಂಧಿತರಾದಾಗ, ಇದು ನಿಮ್ಮ ಮಕ್ಕಳಲ್ಲಿ ಕೂಡ ಅದನ್ನೊಂದು ಚಟವನ್ನಾಗಿ ಮಾರ್ಪಡಿಸುತ್ತದೆ. ಆದ್ದರಿಂದ ಮಕ್ಕಳಿಂದ ಆದಷ್ಟು ಈ ಪೇಯವನ್ನು ದೂರವಿರಿಸಿ.

ಅಂಶ:4
ನಿಮ್ಮ ದೇಹದಿಂದ ನೀರನ್ನು ಇದು ಹೀರಿಕೊಳ್ಳುವುದರಿಂದ ನಿರ್ಜಲೀಕರಣದ ಸಮಸ್ಯೆಯನ್ನು ಮಕ್ಕಳು ಅನುಭವಿಸುವ ಸ್ಥಿತಿ ಬಂದೊದಗಬಹುದು. ಇದರಿಂದಾಗಿ ಮಗು ಆಗಾಗ್ಗೆ ನೀರಡಿಕೆ ಸಮಸ್ಯೆಯನ್ನು ಎದುರಿಸಬಹುದು.

ಅಂಶ:5
ಕೆಫೇನ್ ಅಂಶವುಳ್ಳ ಆಹಾರ ಪದಾರ್ಥಗಳು ಮತ್ತು ಕಾಫಿ ನಿಮ್ಮ ಹಲ್ಲಿಗೆ ಒಳ್ಳೆಯದಲ್ಲ. ನಿಮ್ಮ ಹಲ್ಲಿನ ಸಂರಕ್ಷಣಾ ಪದರವನ್ನು ತೊಡೆದು ಹಾಕಿ ದಂತ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಅಂಶ:6
ಕೆಫೇನ್ ಪೇಯಗಳು ಸೊನ್ನೆ ಕ್ಯಾಲೊರಿಗಳನ್ನು ಒಳಗೊಂಡಿರುತ್ತದೆ, ಇದರಿಂದ ಮಕ್ಕಳು ಇತರ ಪೋಷಕಾಂಶ ನ್ಯೂನತೆಗಳಿಂದ ಬಳಲಬಹುದು.



Click it and Unblock the Notifications
