Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ, ನೋವು ಕೊಡಬೇಡಿ...
ಮಕ್ಕಳು ದೇವರಿಗೆ ಸಮಾನ ಎಂಬ ಮಾತಿದೆ. ಅವರ ಆಟ ಪಾಠ ಹಾವ ಭಾವ ಹೀಗೆ ಪ್ರತಿಯೊಂದೂ ಕಣ್ಣಿಗೆ ಆನಂದ ನೀಡುವ ಸಂಗತಿಗಳೇ. ಮಕ್ಕಳು ಬಾಲ್ಯದಲ್ಲಿ ತಮ್ಮ ಪೋಷಕರ ಒಡನಾಟವನ್ನು ಹೆಚ್ಚು ಹಚ್ಚಿಕೊಳ್ಳುವುದರಿಂದ ತಂದೆ ತಾಯಿ ತಮ್ಮೊಡನೇ ಇರಬೇಕು ಅವರೊಂದಿಗೆ ಹೆಚ್ಚುವರಿ ಸಮಯವನ್ನು ಕಳೆಯಬೇಕು ಎಂಬ ಇಂಗಿತ ಅವರಲ್ಲಿರುತ್ತದೆ. ಸಂಜೆಯ ಸಮಯದಲ್ಲಿ ತಮ್ಮೊಂದಿಗೆ ಆಟವಾಡುವುದು, ತಮ್ಮನ್ನು ಪಾರ್ಕ್‌ಗೆ ಕರೆದೊಯ್ಯುವುದು, ಶಾಲಾ ಚಟುವಟಿಕೆಗಳಲ್ಲಿ ತಮ್ಮ ಸಾಧನೆಯನ್ನು ನೋಡಿ ಹೆತ್ತವರು ಖುಷಿಪಡಬೇಕು ಎಂಬುದಾಗಿ ಮಕ್ಕಳು ಭಾವಿಸುತ್ತಾರೆ.

ಆದರೆ ಮುಂಚಿನ ದಿನಗಳಲ್ಲಿ ತಂದೆ ತಾಯಿಯರು ತಮ್ಮ ಮಕ್ಕಳಿಗೆ ನೀಡುತ್ತಿದ್ದ ಕಾಳಜಿ ಸಮಯ ಈಗ ಇಲ್ಲವಾಗಿದೆ. ಪೋಷಕರಿಬ್ಬರೂ ದುಡಿಯುವುದರ ಕಡೆಗೆ ಗಮನ ನೀಡುವುದರಿಂದ ಮಕ್ಕಳ ಕಡೆಗೆ ಸಾಕಷ್ಟು ಗಮನ ನೀಡಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಆಟಪಾಠಗಳನ್ನು ಕಣ್ತುಂಬಿಕೊಳ್ಳಲು ಈಗ ಅವರಲ್ಲಿ ಸಮಯವೇ ಇಲ್ಲ. ಇದರಿಂದ ಹೂವಿನಂತಹ ಮಕ್ಕಳ ಹೃದಯಕ್ಕೆ ಬರೆ ಎಳೆದಂತಾಗುತ್ತದೆ. ಅವರುಗಳು ಕೀಳರಿಮೆಯಿಂದ ಬಳಲುತ್ತಾರೆ. ತಾವು ಏಕಾಂಗಿಯೆಂಬ ಭಾವನೆಯಿಂದ ತತ್ತರಿಸಿ ಹೋಗುತ್ತಾರೆ. ಹೂವಿನಂತಹ ಆ ಮೃದು ಮನಸ್ಸಿಗೆ ಒಂದು ಸ್ವಲ್ಪ ವೇದನೆಯಾದರೂ ಅದು ಮಾಸಲಾಗದೇ ಇರುವ ಕಲೆಯಾಗಿ ಅಚ್ಚೊತ್ತದೆ.
ಇಂದಿನ ಲೇಖನದಲ್ಲಿ ಮಕ್ಕಳು ಪೋಷಕರ ಪಾಲನೆಯನ್ನು ಪಡೆದುಕೊಳ್ಳದೇ ಬೆಳೆದಾಗ ಏನು ಸಂಭವಿಸುತ್ತದೆ ಎಂಬುದನ್ನು ನಾವು ನಿಮಗೆ ವಿಷದವಾಗಿ ತಿಳಿಸಲಿದ್ದು ನಿಮ್ಮ ಮಕ್ಕಳ ಪಾಲನೆ ಪೋಷಣೆಯಲ್ಲಿ ನಿಮ್ಮ ಪಾತ್ರವೇನು ಎಂಬುದನ್ನು ತಿಳಿಸಿಕೊಡಲಿದೆ. ಅಂತೆಯೇ ನಿಮ್ಮ ಮಗು ಈ ಕೆಳಗಿನ ಗುಣಗಳನ್ನು ಹೊಂದಿದೆ ಎಂದಾದಲ್ಲಿ ನೀವು ಆ ಮಗುವಿಗೆ ಸಾಕಷ್ಟು ಕಾಳಜಿ ಪ್ರಾಧಾನ್ಯತೆ ನೀಡುತ್ತಿಲ್ಲ ಎಂದೇ ಅರ್ಥವಾಗಿದೆ.
ಒಂಟಿ ಭಾವನೆ
ಪೋಷಕರು ತಮ್ಮದೇ ಕೆಲಸದಲ್ಲಿ ನಿರತರಾದಾಗ ಮಕ್ಕಳು ಒಬ್ಬಂಟಿಗರಾಗಿ ಬಿಡುತ್ತಾರೆ. ಈ ಒಂಟಿತನ ಅವರಿಗೆ ಸಾಕಷ್ಟು ನೋವನ್ನು ಉಂಟುಮಾಡುತ್ತದೆ ಮತ್ತು ಇದರಿಂದ ಖಿನ್ನತೆ ಅವರಲ್ಲಿ ಉಂಟಾಗುತ್ತದೆ.
ಪ್ರೀತಿಯೇ ಅವರಿಗೆ ದೊರೆಯುವುದಿಲ್ಲ
ಅವರ ಭಾವನೆಗಳಿಗೆ ಸ್ಪಂದಿಸುವವರು ಇಲ್ಲದಾದಾಗ, ಪೋಷಕರು ವಿರಳವಾಗಿ ಮಕ್ಕಳಗೊಂದಿಗೆ ಸಮಯ ಕಳೆಯುವಾಗ ಅವರಿಗೆ ಅದರಲ್ಲಿ ಆಸಕ್ತಿ ಇಲ್ಲವಾಗುತ್ತದೆ ಮತ್ತು ಅಸಡ್ಡೆಯನ್ನು ತೋರ್ಪಡಿಸುತ್ತಾರೆ.
ವ್ಯಗ್ರರಾಗುವುದು
ಪ್ರೀತಿ ದೊರೆಯದೇ ಇದ್ದ ಮಕ್ಕಳು ವ್ಯಗ್ರರಾಗುತ್ತಾರೆ. ಒಳಗೆ ಕೋಪವನ್ನು ಇಟ್ಟುಕೊಂಡು ಅದನ್ನು ಇತರ ಮಕ್ಕಳ ಮೇಲೆ ದೊಡ್ಡವರ ಮೇಲೆ ತೋರಿಸಿಕೊಳ್ಳಲು ಆರಂಭಿಸುತ್ತಾರೆ.
ಕೀಳರಿಮೆ
ತಮ್ಮ ಮೇಲೆ ಪ್ರೀತಿ ತೋರಿಸುವವರು ಇಲ್ಲ ನಮ್ಮನ್ನು ಬೆಂಬಲಿಸುವವರು ಇಲ್ಲ ಎಂದಾದಾಗ ಕೀಳರಿಮೆಯನ್ನು ಅವರು ಬೆಳೆಸಿಕೊಳ್ಳುತ್ತಾರೆ ಮತ್ತು ತಮ್ಮ ಆತ್ಮವಿಶ್ವಾಸವನ್ನೇ ಅವರು ಕಳೆದುಕೊಳ್ಳುತ್ತಾರೆ.



Click it and Unblock the Notifications


