Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೇಕನ್ನಿಂದ ಮಾಡಿದ ತಿಂಡಿ-ತಿನಿಸನ್ನು ಮಕ್ಕಳಿಗೆ ನೀಡಬೇಡಿ
ಮಗುವಿನ ಆರೋಗ್ಯ ವಿಷಯದಲ್ಲಿ ಹೆತ್ತವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದಷ್ಟು ಅವರಿಗೆ ಕೊಬ್ಬಿನ ಆಹಾರವನ್ನು ನೀಡುವುದರ ಬದಲಿಗೆ ದೇಹಕ್ಕೆ ಹೊಂದುವ ಅವರನ್ನು ಆರೋಗ್ಯವಾಗಿರಿಸುವ ತಿಂಡಿ ತಿನಿಸುಗಳನ್ನು ನೀಡಬೇಕಾಗುತ್ತದೆ. ಮಗುವಿನ ತಿಂಡಿ ತಿನಿಸಿನಲ್ಲಿ ಬೇಕನ್ ಬಳಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳನ್ನು ನಾವು ಇಂದು ತಿಳಿಸುತ್ತಿದ್ದೇವೆ. ಸಾಮನ್ಹೆಯವಾಗಿ ಹೆಚ್ಚಿನ ಕೊಬ್ಬು, ಸೋಡಿಯಮ್ ಮಗುವಿನ ಆಹಾರವನ್ನು ಜೀರ್ಣ ಮಾಡುವಲ್ಲಿ ತೊಡಕನ್ನುಂಟ ಮಾಡುತ್ತದೆ.
ಮಗುವಿಗೆ ದೇಹಾಭಿವೃದ್ಧಿಗೆ ಬೇಕನ್ ಹಾನಿಯನ್ನುಂಟು ಮಾಡುವುದರಿಂದ ಮಗುವಿಗೆ ನೀಡಲೇಬಾರದ ಆಹಾರ ಪದಾರ್ಥಗಳಲ್ಲಿ ಇದೂ ಒಂದಾಗಿದೆ. ಮಗುವಿಗೆ ಹೃದಯ ಸಂಬಂಧಿ ರೋಗವನ್ನು ತಂದೊಡ್ಡುವ ಅಪಾಯ ಬೇಕನ್ನಲ್ಲಿರುವುದರಿಂದ ಹೆಚ್ಚಿನ ರಕ್ತದೊತ್ತಡ ಮತ್ತು ಕಿಡ್ನಿ ವಿಫಲತೆಯಂತಹ ಕಾಯಿಲೆಗಳನ್ನು ಇದು ತಂದೊಡ್ಡುವ ಸಾಧ್ಯತೆ ಇದೆ.

ಬೇಕನ್ನಲ್ಲಿ ನೈಟ್ರೇಟ್ ಅಂಶಗಲು ಹೆಚ್ಚು ಇರುವುದರಿಂದ ಮಗುವಿಗೆ ಇದು ಹೆಚ್ಚಿನ ಅಪಾಯವನ್ನು ತಂದೊಡ್ಡಬಹುದು. ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುವ ಬೇಕನ್ ಅಪಧಮನಿಗಳನ್ನು ಗಟ್ಟಿಯಾಗಿಸುತ್ತದೆ. ಇಂದಿನ ಲೇಖನದಲ್ಲಿ ಬೇಕನ್ ಅನ್ನು ಮಗುವಿನ ಆಹಾರ ಪದಾರ್ಥಗಳಲ್ಲಿ ಸೇರಿಸುವುದರಿಂದ ಉಂಟಾಗುವ ಅಪಾಯಗಳನ್ನು ತಿಳಿಸುತ್ತಿದ್ದೇವೆ.
ಸೋಡಿಯಮ್
ಸಣ್ಣ ಮಕ್ಕಳಿಗೆ ನೀಡುವ ಆಹಾರಗಳಲ್ಲಿ ಈ ಅಂಶವನ್ನು ಆದಷ್ಟು ಕಡಿಮೆಗೊಳಿಸಲೇಬೇಕು. ಅವರ ಆರೋಗ್ಯಕ್ಕೆ ಇದು ಹೆಚ್ಚು ಹಾನಿಯನ್ನುಂಟು ಮಾಡುವುದರಿಂದ ಇದನ್ನು ಹೆಚ್ಚು ನೀಡಲೇಬಾರದು. ಬೇಕನ್ನಲ್ಲಿ ಈ ಪ್ರಮಾಣ ಹೆಚ್ಚು ಇರುವುದರಿಂದ ಹೆಚ್ಚು ರಕ್ತದೊತ್ತಡ ಮತ್ತು ಕಿಡ್ನಿ ವಿಫಲತೆಗೆ ಇದು ಕಾರಣವಾಗಲಿದೆ.
ನೈಟ್ರೇಟ್ ಮತ್ತು ನೈಟ್ರೀಟ್ಗಳು
ಮಗುವಿಗೆ ಹಾನಿಕಾರಕ ಎಂದೆನಿಸಿರುವ ನೈಟ್ರೀಟ್ಗಳನ್ನು ಬೇಕನ್ ಒಳಗೊಂಡಿದೆ. ಹೃದಯದ ಅಪಧಮನಿಗಳನ್ನು ಕಿರಿದುಗೊಳಿಸಿ ಮತ್ತು ಗಟ್ಟಿಯಾಗಿಸುವುದರ ಮೂಲಕ ಹೃದಯವನ್ನು ಸುತ್ತುವರೆದಿರುವ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ.
ಸಂಪೂರ್ಣ ಪ್ರಮಾಣದ ಕೊಬ್ಬು
ತೀವ್ರ ಆರೋಗ್ಯ ಸಮಸ್ಯೆಗಳಾದ ಅನಾರೋಗ್ಯಕರ ತೂಕ ಹಾಗೂ ಹೃದಯ ಸಂಬಂಧಿ ರೋಗಗಳನ್ನು ತಂದೊಡ್ಡಬಹುದು.
ಜೀರ್ಣಕ್ರಿಯೆ ಸಮಸ್ಯೆಗಳು
ಬೇಕನ್ನಂತಹ ಭಾರೀ ಆಹಾರಗಳನ್ನು ಜೀರ್ಣಿಸಿಕೊಳ್ಳುವ ಶಕ್ತಿ ಮಕ್ಕಳಲ್ಲಿ ಇರುವುದಿಲ್ಲ. ಹೊಟ್ಟೆ ನೋವು, ಕಿಬ್ಬೊಟ್ಟೆ ನೋವು ಮತ್ತು ಅನಿಯಮಿತ ಕರುಳಿನ ಸಹಲಕ್ಷಣಗಳನ್ನು ಇದು ಉಂಟುಮಾಡುತ್ತದೆ.



Click it and Unblock the Notifications

