ಮಕ್ಕಳ ಪೌಷ್ಟಿಕಾಂಶ ಆಹಾರ, ಪುಷ್ಟಿದಾಯಕವಾಗಿರಲಿ

By Super

ಮಕ್ಕಳ ನಗು ಎಷ್ಟು ಸಂತಸ ನೀಡುತ್ತದೆಯೇ ಹಾಗೆಯೇ ಅದರ ಅಳುವೂ ಸಹ ನೋವನ್ನು ಉಂಟುಮಾಡುತ್ತದೆ. ಇದೊಂದು ಕಾಣುವಂತಹ ಸಹಜ ಪ್ರಕ್ರಿಯೆ. ಆದರೆ ಮಗುವಿಗೆ ಕಾಣದಿರುವಂತಹ ನೋವು ಅಥವಾ ತೊಂದರೆಯನ್ನು ಅರಿಯುವುದು ಹೇಗೆ. ಅಚ್ಚರಿಯಾದರೂ ಇದನ್ನು ನಂಬಲೇಬೇಕು. ಮಗುವಿನ ಆರೈಕೆಯಲ್ಲಿ ನಮಗರಿವಿಲ್ಲದಂತೆ ಆಗುತ್ತಿರುವ ಲೋಪದ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇದು ತಾತ್ಕಾಲಿಕವಾಗಿ ಕಂಡರೂ ಅದರ ಪರಿಣಾಮ ದೀರ್ಘಾವಧಿಯಲ್ಲಿ ಅನುಭವಿಸಬೇಕಾಗುತ್ತದೆ. ಹೌದು! ನಾವಿಂದು ಮಗುವಿನ ಹಸಿವಿನ ಬಗ್ಗೆ ಬೆಳಕು ಚೆಲ್ಲುತ್ತಿದ್ದೇವೆ.

ಹಸಿವನ್ನು ನೀಗಿಸಲು ನಮ್ಮ ಆಹಾರ ಶೈಲಿಯಲ್ಲಿ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯು ಅತೀ ಮುಖ್ಯವಾಗಿದೆ. ಅದರಲ್ಲೂ ಕಾಣದ ಹಸಿವಿಗೆ ಸಾಮಾನ್ಯವಾಗಿ ಅನೇಕ ಮಕ್ಕಳು ಬಳಲುತ್ತಿದ್ದು, ಇದನ್ನು ಗಮನಿಸಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಇದನ್ನು ಮುಚ್ಚಿಟ್ಟ ಹಸಿವು ಅಥವಾ ಕಾಣದ ಹಸಿವು ಎಂದು ವ್ಯಾಖ್ಯಾನಿಸಲಾಗಿದೆ. ಅಲ್ಲದೆ ಇದನ್ನು ಸಾಮಾನ್ಯವಾದ ಹಸಿವಾಗಿ ತಿಳಿಯದೇ, ಇದರ ಮರ್ಮವನ್ನು ಪೋಷಕರು ಹೆಚ್ಚಾಗಿ ಅರಿಯಬೇಕಾಗುತ್ತದೆ. ನೀವು ನಿಮ್ಮ ಮಗುವಿಗೆ ಹೊಟ್ಟೆ ತುಂಬುವಷ್ಟು ಆಹಾರವನ್ನು ತಿನ್ನಿಸಿದರೂ ಸಹ ಅವರಿಗೆ ಪೂರ್ಣ ಪ್ರಮಾಣದಲ್ಲಿ ಹಸಿವು ನೀಗಿರುವುದಿಲ್ಲವೆಂಬ ಅರಿವು ಪೋಷಕರಿಗೆ ಇರುವುದಿಲ್ಲ. ಏಕೆಂದರೆ ಅವರು ತಿನ್ನಿಸಿದ ಆಹಾರದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಬೇಕಾಗುವ ಪೌಷ್ಟಿಕಾಂಶಗಳ ಕೊರತೆಯಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆಯು ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದಕ್ಕೆ ಮಕ್ಕಳು ಸೇವಿಸುವ ಆಹಾರದಲ್ಲಿ ಮೈಕ್ರೊ ನ್ಯೂಟ್ರಿಯಂಟ್ ಅಥವಾ ಅವಶ್ಯ ಪೌಷ್ಟಿಕಾಂಶದ ಕೊರತೆಯೇ ಕಾರಣವಾಗಿದೆ. ಈಗಿನ ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿಗೆ ಧನ್ಯವಾದ ಹೇಳಲೇಬೇಕು. ಕಾಣದ ಹಸಿವು ಪೌಷ್ಟಿಕಾಂಶ ಕೊರತೆಯಿಂದ ಬರಲು ಕಾರಣವಾಗುತ್ತಿದ್ದು, ನಮ್ಮ ಮಕ್ಕಳು ವಿಟಮಿನ್ ಕೊರತೆ ಮತ್ತು ಖನಿಜ ಸತ್ವಗಳಾದ ಕಬ್ಬಿಣ, ಜಿಂಕ್, ಕ್ಯಾಲ್ಷಿಯಮ್, ವಿಟಮಿನ್ ಎ, ವಿಟಮಿನ್ ಬಿ, ಇತರೆ ಸತ್ವಗಳ ಕೊರತೆಯಿಂದ ಮುಚ್ಚಿಟ್ಟ ಅಥವಾ ಕಾಣದ ಹಸಿವಿನಿಂದ ಬಳಲುತ್ತಿರುತ್ತಾರೆ.

Nutritious Recipes

ಈ ಪೌಷ್ಟಿಕಾಂಶಗಳು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅತ್ಯಂತ ಅವಶ್ಯಕ. ಮತ್ತೊಂದು ಅಚ್ಚರಿಯ ಸಂಗತಿಯೆಂದರೆ, ಇಡೀ ಪ್ರಪಂಚದಲ್ಲಿ 2 ಬಿಲಿಯನ್ ಜನರು ತಮಗೆ ಪೌಷ್ಟಿಕಾಂಶಗಳನ್ನು ಖರೀದಿಸಿ ಸೇವಿಸುವ ಸಾಮರ್ಥ್ಯವಿದ್ದರೂ ಸಹ ಅವರು ಈ ರೀತಿಯ ಹಸಿವಿನಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯು ಸದ್ಯಕ್ಕೆ ಯಾವುದೇ ತೊಂದರೆ ನೀಡದಿದ್ದರೂ ಸಹ ದಿನಕಳೆದಂತೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದೀರ್ಘಕಾಲದ ಈ ತೊಂದರೆಯಿಂದ ಮಾನಸಿಕ ಏಕಾಗ್ರತೆಯ ಸಮಸ್ಯೆ, ದುರ್ಬಲ ಜ್ಞಾಪಕ ಶಕ್ತಿ, ದುರ್ಬಲ ದೇಹ ಸಾಮರ್ಥ್ಯ, ರೋಗ ನಿರೋಧಕ ಶಕ್ತಿಯ ಕೊರತೆಗಳಿಗೆ ಕಾರಣವಾಗಲಿದ್ದು, ಇನ್ನು ಕೆಲವು ಪ್ರಕರಣಗಳಲ್ಲಿ ಪೌಷ್ಟಿಕಾಂಶ ಕೊರತೆಯಿಂದ ಸಾವು ಕೂಡ ಸಂಭವಿಸುವ ಸಂದರ್ಭಗಳು ಎದುರಾಗುತ್ತವೆ. ಪೋಷಕರಾಗಿ ನಮಗೆ ಈ ರೀತಿಯ ಹಸಿವಿನ ಬಗ್ಗೆ ಅರಿವಿರುವುದಿಲ್ಲ. ಇದರಿಂದ ನಿಮ್ಮ ಮಗುವಿಗೆ ಅವಶ್ಯಕ ಪೌಷ್ಟಿಕಾಂಶಗಳನ್ನು ನೀಡದೆ ತೊಂದರೆ ಎದುರಿಸಬೇಕಾಗುತ್ತದೆ.

ಈ ರೀತಿಯ ಪೌಷ್ಟಿಕಾಂಶದ ಕೊರತೆಯನ್ನು ಹೇಗೆ ಗಮನಿಸುವುದು?
ಇದಕ್ಕೆ ಉತ್ತರ ಪ್ರಶ್ನೆಯಲ್ಲಿಯೇ ಇದೆ. ಮೊದಲಿಗೆ ನಮ್ಮ ಮಕ್ಕಳಿಗೆ ಹೆಚ್ಚು ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡಬೇಕು. ಈಗಿನ ಆಧುನಿಕ ತಿನಿಸುಗಳಲ್ಲಿ ಕ್ಯಾಲೋರಿ ಸತ್ವಗಳು ಹೆಚ್ಚಾಗಿದ್ದರೂ ಸಹ, ಇವುಗಳಲ್ಲಿ ಪೌಷ್ಟಿಕಾಂಶದ ಕೊರತೆಯಿರುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಬಗೆಹರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಆದ್ದರಿಂದ, ಪೋಷಕರು ಮೊದಲಿಗೆ ಹೆಚ್ಚಿನ ಕ್ಯಾಲೋರಿಯುಕ್ತ ಆಹಾರಕ್ಕೂ ಮತ್ತು ಹೆಚ್ಚಿನ ಪೌಷ್ಟಿಕಾಂಶಯುಕ್ತ ಆಹಾರಕ್ಕೂ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕು. ಹೆಚ್ಚಿನ ಕ್ಯಾಲೋರಿಯುಕ್ತ ಆಹಾರಗಳು ಕೇವಲ ಹೊಟ್ಟೆಯನ್ನು ತುಂಬಿಸುತ್ತದೆಯೇ ವಿನಹ ದೇಹದ ಹಸಿವನ್ನು ನೀಗಿಸುವುದಿಲ್ಲ. ನಿಮ್ಮ ಮಕ್ಕಳಿಗೆ ಹೆಚ್ಚಿನ ಕ್ಯಾಲೋರಿಯಿರುವ ಮತ್ತು ಹೆಚ್ಚಿನ ಪೌಷ್ಟಿಕಾಂಶವಿರುವ ಎರಡೂ ರೀತಿಯ ಆಹಾರಗಳನ್ನು ಸೇವಿಸಲು ನೀಡಬೇಕು. ಏಕೆಂದರೆ, ಕೇವಲ ಮಗುವಿನ ಹೊಟ್ಟೆ ತುಂಬಿದರೆ ಸಾಲದು ಒಟ್ಟಾರೆಯಾಗಿ ದೇಹಕ್ಕೆ ಅವಶ್ಯವಿರುವ ಪೌಷ್ಟಿಕಾಂಶಗಳನ್ನು ನೀಡಿ ದೇಹದ ಹಸಿವನ್ನು ನೀಗಿಸುವ ಕಡೆ ಹೆಚ್ಚಿನ ಗಮನ ಹರಿಸಬೇಕು.

ಮಕ್ಕಳಿಗೆ ಅವಶ್ಯಕವಾಗಿ ಪೌಷ್ಟಿಕಾಂಶ ಗುಣ ನೀಡುವ ಉತ್ತಮವಾದ ಸಾಧನವೆಂದರೆ ಹಾಲು. ಇದು ನಿಮ್ಮ ಮಗುವಿಗೆ ಗಾತ್ರದ ಮತ್ತು ಸೂಕ್ಷ್ಮ ಪೌಷ್ಟಿಕಾಂಶ ಸತ್ವಗಳನ್ನು ಹೇರಳಾವಾಗಿ ನೀಡಿ ನಿಮ್ಮ ಮಗುವಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆದರೆ, ಹಾಲು ನೀಡಿದರೂ ಸಹ ಅನೇಕ ತೊಂದರೆಗಳನ್ನು ಎದುರಿಸಲಾಗುತ್ತಿದೆ. ವಿಶೇಷವಾಗಿ ತಿಳಿ ಹಾಲಿನಲ್ಲಿ ಯಾವುದೇ ರುಚಿಯು ಮಗುವಿನ ಅನುಭವಕ್ಕೆ ಬರುವುದಿಲ್ಲ. ಆದ್ದರಿಂದ ಹಾಲನ್ನು ಹೆಚ್ಚು ಪೌಷ್ಟಿಕಾಂಶಯುಕ್ತಗೊಳಿಸಲು ಇದಕ್ಕೆ ಒಂದು ಚಮಚ ಹಾರ್ಲಿಕ್ಸ್ ಬೆರೆಸಿ ನೀಡಿದರೆ, ಮಗುವಿಗೆ ಪೌಷ್ಟಿಕಾಂಶದ ಜೊತೆಗೆ ರುಚಿಯ ಅನುಭವವೂ ಆಗುತ್ತದೆ. ಜೊತೆಗೆ ಸೂಕ್ಷ್ಮ ಪೌಷ್ಟಿಕಾಂಶಗಳೂ ಸಹ ನಿಮ್ಮ ಮಗುವಿಗೆ ಸೇರಿಕೊಳ್ಳುತ್ತದೆ. ಒಟ್ಟಾರೆಯಾಗಿ ಮಗುವಿನ ಸಮರ್ಪಕ ಪೋಷಣೆಯು ನಿಮ್ಮ ಕೈಯಲ್ಲಿದೆ... ಎಚ್ಚರ!

ಮಕ್ಕಳಿಗೆ ಪ್ರಿಯವೆನಿಸುವ ಈ ರೀತಿಯ ರುಚಿಯಾದ ಮತ್ತು ಪೌಷ್ಟಿಕಾಂಶ ಸತ್ವ ಇರುವ ಎರಡು ಆಹಾರ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಈ ಆಹಾರ ವಿಧಾನಗಳು ನಿಮ್ಮ ಮಕ್ಕಳಿಗೆ ಸವಿಯಲು ನೀಡಿದರೆ ಹೆಚ್ಚು ಪ್ರಯೋಜನವಾಗಲಿದೆ.

ಪಾಕ ವಿಧಾನ - 1 : ಮೈ ಫೇರ್ ಲೇಡಿ

ರೆಸಿಪಿ ವರ್ಗ : ಪೌಷ್ಟಿಕಾಂಶಯುಕ್ತ ಬಿಸಿ ಪಾನೀಯ (ಇದನ್ನು ತಂಪಾದ ಸ್ಥಿತಿಯಲ್ಲಿಯೂ ಮಗುವಿಗೆ ನೀಡಬಹುದು)

ಈ ಹಾರ್ಲಿಕ್ಸ್ ಯುಕ್ತ ಹಾಲಿನ ಪಾನೀಯವು ನಿಮ್ಮ ಮಗುವಿಗೆ ಹೆಚ್ಚು ಪೌಷ್ಟಿಕಾಂಶ ಸತ್ವವನ್ನು ನೀಡಲು ನೆರವಾಗುತ್ತದೆ. ಇದು ಕೇವಲ ಹಾಲನ್ನು ರುಚಿಸುವುದಲ್ಲದೇ ಆರೋಗ್ಯಕರ ಮತ್ತು ಪೌಷ್ಟಿಕಾಂಶ ಸತ್ವವನ್ನು ಸಹ ನೀಡಲು ಸಹಕಾರಿಯಾಗಿದೆ. ಇದರ ಜೊತೆಯಲ್ಲಿ ತೆಂಗಿನ ಮಾಕರೂನ್ ಅಥವಾ ತೆಂಗಿನ ಹೋಳಿನ ಜೊತೆಯಲ್ಲಿ ಸೇವಿಸಲು ನಿಮ್ಮ ಮಗು ಇಷ್ಟಪಡುತ್ತದೆ. ಈ ಹಾಲಿನೊಂದಿಗೆ ತೆಂಗಿನ ಅಂಶವೂ ಸೇರಿದರೆ ಪೌಷ್ಟಿಕಾಂಶ ಸತ್ವ ಇಮ್ಮಡಿಯಾಗಲಿದ್ದು, ಹೆಚ್ಚು ಮೃದುವಾಗುತ್ತದೆ.

ಬೇಕಾಗುವ ಸಾಮಗ್ರಿಗಳು:
*ಸಹಜವಾದ ಹಾರ್ಲಿಕ್ಸ್ ಪುಡಿ : 27 ಗ್ರಾಂ
*ತೆಂಗಿನ ಮಕರೂನ್ ಅಥವಾ ತುರಿದ ತೆಂಗಿನಕಾಯಿ
*ಬಿಸಿ ಹಾಲು : 200 ಮಿಲಿ
*ಸಕ್ಕರೆಯ ರಸ : ರುಚಿಗೆ ತಕ್ಕಷ್ಟು
*ಅಲಂಕಾರಕ್ಕೆ ಕೆಲವು ಗುಲಾಬಿ ದಳಗಳು

ತಯಾರಿಸಲು ಬೇಕಾಗುವ ಸಮಯ : 5 ರಿಂದ 7 ನಿಮಿಷಗಳು
ಸೇವಿಸುವ ಸಮಯ : ಉಪಹಾರಕ್ಕೆ/ಮಧ್ಯಾಹ್ನ/ಸಂಜೆ ಚಹಾ ವೇಳೆಯಲ್ಲಿ

ತಯಾರಿಸುವ ವಿಧಾನ :
* 27 ಗ್ರಾಂ ಹಾರ್ಲಿಕ್ಸ್ ಪುಡಿಯನ್ನು 40 ಮಿಲಿ ತಂಪಾದ ಹಾಲಿನೊಂದಿಗೆ ಬೆರೆಸಿ
* ಉಳಿದ ಹಾಲನ್ನು ಕಾಯಿಸಿ ಅದಕ್ಕೆ ತುರಿದ ತೆಂಗಿನಕಾಯಿಯನ್ನು ಬೆರೆಸಿ
* ತಂಪಾದ ಹಾರ್ಲಿಕ್ಸ್ ಯುಕ್ತ ಹಾಲನ್ನು ಕಾಯಿಸಿದ ತೆಂಗಿನ ಅಂಶಯುಕ್ತ ಹಾಲಿಗೆ ಬೆರೆಸಿ
* ಗ್ಲಾಸ್ ನಲ್ಲಿ ತೆಂಗಿನ ಕುಕೀ ಯೊಂದಿಗೆ ಸವಿಯಲು ನೀಡಿ
* ಗುಲಾಬಿ ದಳಗಳಿಂದ ಅಲಂಕರಿಸಿ

ಪ್ರತಿ ಸೇವನೆಯಲ್ಲಿ ದೊರಕುವ ಪೌಷ್ಟಿಕಾಂಶದ ಪ್ರಮಾಣ

ಶಕ್ತಿ (ಕೆ ಕಾಲೊರಿ) 601.82
ಕ್ಯಾಲ್ಷಿಯಮ್ (ಮಿ.ಗ್ರಾಂ) 387.5
ಪ್ರೊಟೀನ್ (ಗ್ರಾಂ) 14.35
ಬೊಜ್ಜು (ಗ್ರಾಂ) 29.65
ಕಾರ್ಬೊಹೈಡ್ರೇಟ್ಸ್ (ಗ್ರಾಂ) 71.09
ಸಕ್ಕರೆ (ಗ್ರಾಂ) 8.8

ಪಾಕ ವಿಧಾನ 2 : ಹೆಚ್ಚಿನ ಉಪಹಾರ

ಪಾಕ ವಿಧಾನದ ವರ್ಗ : ಪೌಷ್ಟಿಕಾಂಶಯುಕ್ತ ತಂಪು ಪಾನೀಯ
ಈ ತಂಪು ಹಾರ್ಲಿಕ್ಸ್ ಯುಕ್ತ ಪೌಷ್ಠಿಕಾಂಶ ಯುಕ್ತ ಹಾಲಿನ ಪಾನೀಯ ನಿಮ್ಮ ಮಗುವಿಗೆ ಬೇಸಿಗೆಕಾಲದಲ್ಲಿ ಹೆಚ್ಚು ಪೌಷ್ಟಿಕಾಂಶ ಸತ್ವಗಳನ್ನು ನೀಡುತ್ತದೆ. ಐಸ್ ಕ್ರೀಂ ನೀಡುವ ಬದಲು ಈ ಪಾನೀಯವನ್ನು ನೀಡಿದರೆ ಮಕ್ಕಳಿಗೆ ಹೆಚ್ಚು ಪ್ರಿಯವೆನಿಸುತ್ತದೆ. ಈ ಹಣ್ಣು ಮತ್ತು ಹಾರ್ಲಿಕ್ಸ್ ಯುಕ್ತ ಪಾನೀಯವು ಸೇವಿಸಲು ತುಂಬಾ ಹಿತವಾಗಿದ್ದು, ವಿಟಮಿನ್ ಮತ್ತು ಖನಿಜ ಸತ್ವಗಳು ಹೇರಳವಾಗಿ ಅಡಗಿದೆ. ಈ ಸತ್ವಗಳು ಕಾಣದ ಹಸಿವನ್ನು ಸುಲಭವಾಗಿ ನೀಗಿಸಲು ಮತ್ತು ಮಗುವಿನ ಹೊಟ್ಟೆಯನ್ನು ತುಂಬಿಸಲು ಹೆಚ್ಚು ನೆರವಾಗುತ್ತದೆ. ನಿಮ್ಮ ಮಕ್ಕಳ ಆಹಾರ ಶೈಲಿಯಲ್ಲಿ ಈ ಹಣ್ಣಿನ ಮಿಶ್ರಿತ ಪದಾರ್ಥವನ್ನು ಸೇರಿಸಿಕೊಂಡಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗೆ ಮತ್ತು ಕಾಣದ ಹಸಿವನ್ನು ನೀಗಿಸಲು ಹೆಚ್ಚು ಉಪಯುಕ್ತಕರ ಮತ್ತು ಅದರ ರುಚಿಯೂ ಸಹ ಮಕ್ಕಳಿಗೆ ಹೆಚ್ಚು ಪ್ರಿಯವೆನಿಸುತ್ತದೆ.

ಬೇಕಾಗುವ ಸಾಮಗ್ರಿಗಳು
*ಸಹಜವಾದ ಹಾರ್ಲಿಕ್ಸ್ ಪುಡಿ : 27 ಗ್ರಾಂನಷ್ಟು
*ಮಾವಿನ ರಸ : 60 ಮಿಲಿ
*ಬಾಳೆಹಣ್ಣು : ಅರ್ಧ ಹೋಳು ಮಾಡಿದ ಬಾಳೆಹಣ್ಣು
*ಕಿತ್ತಳೆ ರಸ : 60 ಮಿಲಿ
*ಗೋಧಿ ಹೊಟ್ಟು : 10 ಗ್ರಾಂ
*ಎಳ್ಳಿನ ಬೀಜಗಳು : 5 ಗ್ರಾಂ
*ಜೇನು : ರುಚಿಗೆ ತಕ್ಕಷ್ಟು
*ಜಜ್ಜಿದ ಮಂಜುಗಡ್ಡೆ

ತಯಾರಿಸಲು ಬೇಕಾಗುವ ಸಮಯ : 5 ರಿಂದ 7 ನಿಮಿಷಗಳು
ಸೇವಿಸುವ ಸಮಯ :
ಉಪಹಾರಕ್ಕೆ/ಮಧ್ಯಾಹ್ನ/ಸಂಜೆ ಚಹಾ ವೇಳೆಯಲ್ಲಿ

ತಯಾರಿಸುವ ವಿಧಾನ :
* ಜೇನು ಮತ್ತು ಗೋಧಿಯ ಹೊಟ್ಟನ್ನು ಒಂದು ತಟ್ಟೆಯಲ್ಲಿ ಹಾಕಿಕೊಂಡು ಗ್ಲಾಸಿನ ಮೇಲಿನ ತುದಿಯನ್ನು ಅದಕ್ಕೆ ರಿಮ್ ರೂಪದಲ್ಲಿ ಒತ್ತಿ ಹಿಡಿಯಿರಿ
* ನಂತರ, ಮೇಲಿನ ಎಲ್ಲಾ ಸಾಮಗ್ರಿಗಳನ್ನು ಒಟ್ಟಾಗಿ ಬೆರೆಸಿಕೊಂಡು ಜಜ್ಜಿದ ಮಂಜುಗಡ್ಡೆಯೊಂದಿಗೆ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ
* ಈ ಮಿಶ್ರಣವು ಮೃದುವಾಗುವವರೆಗೂ ಚೆನ್ನಾಗಿ ಕಲಸಿ
* ತಂಪಾದ ಗ್ಲಾಸ್ ನಲ್ಲಿ ಸವಿಯಲು ಮಗುವಿಗೆ ನೀಡಿ

ಪ್ರತಿ ಸೇವನೆಯಲ್ಲಿ ದೊರಕುವ ಪೌಷ್ಟಿಕಾಂಶದ ಪ್ರಮಾಣ

ಶಕ್ತಿ (ಕೆ ಕಾಲೊರಿ) 268.4
ಪ್ರೊಟೀನ್ (ಗ್ರಾಂ) 6.715
ಬೊಜ್ಜು (ಗ್ರಾಂ) 3.88
ಕಾರ್ಬೊಹೈಡ್ರೇಟ್ಸ್ (ಗ್ರಾಂ) 80.51
ಸಕ್ಕರೆ (ಗ್ರಾಂ) 7.88
ಕ್ಯಾಲ್ಷಿಯಮ್ (ಮಿ.ಗ್ರಾಂ) 278

X
Desktop Bottom Promotion