Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಆಡುವ ಮಕ್ಕಳಲ್ಲಿ ಮಾನಸಿಕ ಖಿನ್ನತೆ! ನಿವಾರಿಸುವುದು ಹೇಗೆ?
ಖಿನ್ನತೆ ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಸಮಸ್ಯೆಗಳಲ್ಲಿ ಒಂದಾಗಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದರ ಪ್ರಕಾರ ಪೋಷಕರು ತಮ್ಮ ಪೋಷಕ ಪಾತ್ರವನ್ನು ಸರಿಯಾಗಿ ನಿರ್ವಹಿಸುವ ಮೂಲಕ ಮಕ್ಕಳ ಖಿನ್ನತೆಯನ್ನು ದೂರ ಮಾಡಬಹುದು ಎಂದು ತಿಳಿದುಬಂದಿದೆ. ಅದರಲ್ಲೂ ತಾಯಿಯಿಂದ ಖಿನ್ನತೆಯನ್ನು ಪಡೆಯುವ ಮಗುವಿಗೆ ಈ ಮಾತು ನೂರಕ್ಕೆ ನೂರು ಅನ್ವಯಿಸುತ್ತದೆ ಎಂದು ಹೇಳಲಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ ಒತ್ತಡವು ಭ್ರೂಣದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳುತ್ತಾರೆ ಮತ್ತು ಇದು ಜನನದ ಸಮಯದಲ್ಲಿ ಕಡಿಮೆ ತೂಕ ಮತ್ತು ರೋಗ ನಿರೋಧಕ ಶಕ್ತಿಯ ಕೊರತೆ ಮತ್ತು ದುರ್ಬಲ ಮೆದುಳಿನ ಬೆಳವಣಿಗೆಗೆ ಕಾರಣವಾಗುತ್ತದೆಯಂತೆ. ಅಧ್ಯಯನಕಾರರು, ಮಕ್ಕಳ ಜನನದ ಸಂದರ್ಭದಲ್ಲಿ ಉತ್ತಮ ಕಾಳಜಿಯನ್ನು ತೋರಿದರೆ ಈ ಖಿನ್ನತೆಯ ಪ್ರಮಾಣವನ್ನು ಮಕ್ಕಳಲ್ಲಿ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.
ಖಿನ್ನತೆಯಿಂದ ಬಳಲುವ ಮಕ್ಕಳ ತಾಯಂದಿರಲ್ಲಿ ಸುಮಾರು 100 ಜನರನ್ನು ಅಧ್ಯಯನಕಾರರು ಅಧ್ಯಯನ ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ ಮತ್ತು ಅವರ DNA ಯನ್ನು ಸಹ ಸಂಗ್ರಹಿಸಿದ್ದಾರೆ. ಮಕ್ಕಳ ಒತ್ತಡವನ್ನು ನಿವಾರಿಸುವ ಉಸಿರಾಟದ ವ್ಯಾಯಮಗಳು
ನಂತರ, ಸ್ವಲ್ಪ ದಿನಗಳ ನಂತರ ಆ ಮಕ್ಕಳನ್ನು ತಾಯಂದಿರ ಜೊತೆಗೆ ಆಟವಾಡಲು ಬಿಟ್ಟಿದ್ದಾರೆ. ಮೊದಲ ಹಂತದಲ್ಲಿ ಮಕ್ಕಳ ಜೊತೆಗೆ ತಾಯಂದಿರನ್ನು ಆಟವಾಡಲು ಬಿಟ್ಟಿದ್ದಾರೆ. ಎರಡನೆ ಹಂತದಲ್ಲಿ ಮಕ್ಕಳ ಜೊತೆಗೆ ತಾಯಂದಿರು ಆಟವಾಡದೆ ಇರಲು ಸಲಹೆ ನೀಡಿದ್ದಾರೆ. ಕೊನೆಗೆ ಮೂರನೆ ಹಂತದಲ್ಲಿ ಮತ್ತೆ ಮಕ್ಕಳ ಜೊತೆಗೆ ತಾಯಂದಿರು ಆಟವಾಡಲು ಬಿಟ್ಟಿದ್ದಾರೆ.
ಹೀಗೆ ನಡೆಯುವಾಗ ಮಕ್ಕಳ ಮೇಲೆ ತಾಯಿ ತೋರಿಸುವ ಮಮಕಾರ ಮತ್ತು ಪ್ರೀತಿಯು ಮಕ್ಕಳಲ್ಲಿ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡಲು ಸಹಕರಿಸಿದೆ ಎಂದು ತಿಳಿದು ಬಂದಿದೆ. ಇದರರ್ಥ, ಮಕ್ಕಳ ಪೋಷಕರ ಪಾತ್ರವು ಅವರಲ್ಲಿ ಧನಾತ್ಮಕ ಪರಿಣಾಮವನ್ನು ತರುತ್ತದೆ ಎಂದು ತಿಳಿದುಬಂದಿದೆ. ಹಾಗಾಗಿ ಪೋಷಕರು ಕೆಲವೊಂದು ಧನಾತ್ಮಕ ಗುಣಗಳನ್ನು ಹೊಂದಬೇಕು ಎಂದು ಈ ಅಧ್ಯಯನ ಸಾಬೀತು ಮಾಡಿದೆ.
ಇಂದಿನ ಜಂಜಾಟ ಜೀವನ ಶೈಲಿಯಲ್ಲಿ, ಪೋಷಕರಿಗೆ ತಮ್ಮ ಮಕ್ಕಳ ಜೊತೆಗೆ ಕಾಲ ಕಳೆಯಲು ಹೆಚ್ಚಿನ ಅವಧಿ ಇರುವುದಿಲ್ಲ. ಈ ಅಧ್ಯಯನವು ನೀವು ನಿಮ್ಮ ಮಕ್ಕಳ ಜೊತೆಗೆ ಕಳೆಯಬೇಕಾದ ಗುಣಮಟ್ಟದ ಸಮಯದ ಕುರಿತು ತಿಳಿಸುತ್ತದೆ. ಪ್ರೀತಿ, ಮಮತೆ, ಅನುಬಂಧಗಳು ಮಕ್ಕಳ ಮೇಲೆ ಯಾವ ಪರಿಣಾಮವನ್ನು ಬೀರುತ್ತದೆ ಎಂದು ಇದು ತಿಳಿಸಿದೆ. ಅದರಲ್ಲೂ ತಾಯಿಯ ಪ್ರೀತಿಯು ಮಕ್ಕಳಲ್ಲಿರುವ ಅಸುರಕ್ಷತೆಯನ್ನು ಮತ್ತು ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ತಿಳಿದುಬಂದಿದೆ.



Click it and Unblock the Notifications


