Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನೂ ಕಾಡುವ ಮೂಲವ್ಯಾಧಿ ಸಮಸ್ಯೆ- ಪರಿಹಾರ ಏನು?
ಮಲಬದ್ಧತೆಯ ಕಾರಣದಿಂದಾಗಿ ಎದುರಾಗುವ ತೊಂದರೆ ಎಂದರೆ ಮೂಲವ್ಯಾಧಿ. ಇದು ಒಂದು ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೂ ಮೂಲವ್ಯಾಧಿ ಆವರಿಸುವ ಸಾಧ್ಯತೆ ಇದೆ. ಒಂದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಅಷ್ಟೊಂದು ಬಾಧಿಸದೇ ಇದ್ದರೂ ಉಲ್ಬಣಗೊಂಡರೆ ಮಾತ್ರ ತೊಂದರೆ ಖಚಿತ.
ಸಾಮಾನ್ಯವಾಗಿ ಮಕ್ಕಳ ತೊಂದರೆ ತನ್ನಿಂತಾನೇ ವಾಸಿಯಾಗುತ್ತದೆ. ಆಹಾರದಲ್ಲಿ ಸಾಕಷ್ಟು ನಾರು ಇಲ್ಲದೇ ಇರುವುದೇ ಮಲಬದ್ಧತೆಗೆ ಪ್ರಮುಖ ಕಾರಣ. ಇಂದಿನ ಮಕ್ಕಳಿಗೆ ಜಾಹೀರಾತುಗಳಲ್ಲಿ ಕಾಣುವ ಆಹಾರಗಳೇ ಆಕರ್ಷಕವಾಗಿ ಕಂಡು ಇದನ್ನೇ ತಿನ್ನಬೇಕೆಂದು ಹಠ ಹಿಡಿಯುತ್ತಾರೆ.
ಇವರ ಒತ್ತಾಯಕ್ಕೆ ಮಣಿದು ಅಥವಾ ಅರಿವೇ ಇಲ್ಲದೇ ತಾಯಂದಿರು ಮೈದಾ ಆಧಾರಿತ ಮತ್ತು ನಾರು ಇಲ್ಲದ ಆಹಾರಗಳನ್ನೇ ಮಕ್ಕಳಿಗೆ ನೀಡುತ್ತಾರೆ. ಪರಿಣಾಮವಾಗಿ ಮಲವು ವಿಪರೀತವಾಗಿ ಗಟ್ಟಿಯಾಗಿ ವಿಸರ್ಜನೆಗೆ ಹೆಚ್ಚಿನ ಒತ್ತಡ ಬೇಕಾಗುತ್ತದೆ. ಹೆಚ್ಚಿನ ಒತ್ತಡ ಗುದದ್ವಾರದ ಒಳಭಾಗದ ಮೇಲೆ ಒತ್ತಡ ಹೇರುತ್ತದೆ. ಗಟ್ಟಿ ಮರದ ಕೊರಡಿನಂತಾಗಿರುವ ಮಲ ಗುದದ್ವಾರದ ಒಳಗೋಡೆಯನ್ನೇ ಒತ್ತಿ ಒಳಗಣ ಪದರವನ್ನೇ ಹರಿದು ಹೊರತರುತ್ತದೆ.
ಸೂಕ್ಷ್ಮವಾಗಿ ಗಮನಿಸಿದರೆ ಮಲವು ರಕ್ತದಿಂದ ಆವೃತವಾಗಿರುವುದು, ಮಗುವಿನ ಗುದದ್ವಾರದಲ್ಲಿ ಚಿಕ್ಕ ಸೀಳು ಬಿಟ್ಟಿರುವುದನ್ನು ಗಮನಿಸಬಹುದು. ಒಂದು ವೇಳೆ ಇದರಲ್ಲಿ ಯಾವುದೇ ಲಕ್ಷಣಗಳನ್ನು ಗಮನಿಸಿದರೂ ತಕ್ಷಣ ಮಕ್ಕಳ ವೈದ್ಯರನ್ನು ಕಾಣುವುದು ಅಗತ್ಯ ಮತ್ತು ಅನಿವಾರ್ಯ. ಈ ಸಂದರ್ಭದಲ್ಲಿ ಪ್ರತಿ ಪಾಲಕರೂ ಪಾಲಿಸಬೇಕಾದ ಕೆಲವು ಸಲಹೆಗಳನ್ನು ನೀಡಲಾಗಿದೆ, ಮುಂದೆ ಓದಿ....

ಸಲಹೆ #1
ನಿಮ್ಮ ಮಗು ಸುಲಭವಾಗಿ ಕುಳಿತುಕೊಳ್ಳಬಹುದಾದ ಅಗಲವಾದ ಟಬ್ ಅಥವಾ ಬಕೆಟ್‌ನಲ್ಲಿ ಉಗುರುಬೆಚ್ಚನೆಯ ನೀರು ತುಂಬಿಸಿ ಮಲವಿಸರ್ಜನೆಯ ಮುನ್ನ ಮತ್ತು ನಂತರ ನೀರಿನಲ್ಲಿ ಅರ್ಧ ಮುಳುಗಿರುವಂತೆ ಕುಳಿತುಕೊಳ್ಳುವಂತೆ ಮಾಡಿ. ಇದರಿಂದ ಗುದದ್ವಾರದ ಬಳಿಯ ಉರಿ ಶಮನವಾಗುತ್ತದೆ ಹಾಗೂ ಶೀಘ್ರವಾಗಿ ಉಪಶಮನಗೊಳ್ಳಲು ಸಾಧ್ಯವಾಗುತ್ತದೆ.

ಸಲಹೆ #2
ಈ ತೊಂದರೆಗೆ ಮಲಬದ್ಧತೆಯೇ ಸ್ಪಷ್ಟವಾದ ಕಾರಣವಾಗಿದೆ. ನಿಮ್ಮ ಮಗುವಿನ ಪ್ರತಿ ಊಟವನ್ನೂ ಗಮನಿಸಿ ಕೇವಲ ನಾರು ಹೆಚ್ಚಿರುವ ಆಹಾರಗಳನ್ನೇ ನೀಡಬೇಕು. ಅಲ್ಲದೇ ಸಾಕಷ್ಟು ನೀರನ್ನು ನಿಯಮಿತ ಅವಧಿಯಲ್ಲಿ ಮಗು ಕುಡಿಯುವಂತೆ ಮಾಡಬೇಕು. ಇಡಿಯ ದಿನ ಸುಮ್ಮನೇ ಮಲಗಿರಲು ಬಿಡದೇ ಏನಾದರೊಂದು ಆಟ ಅಥವಾ ವ್ಯಾಯಾಮದಲ್ಲಿ ದೇಹವನ್ನು ದಂಡಿಸುತ್ತಿರುವಂತೆ ನೋಡಿಕೊಳ್ಳಬೇಕು.

ಸಲಹೆ #3
ಮಕ್ಕಳ ಮಲವಿಸರ್ಜನೆಯ ಬಳಿಕ ಆ ಸ್ಥಳವನ್ನು ಒಣದಾಗಿಸಿರಿಸಲು ಬೇಬಿ ವೈಪ್ಸ್ ಕಾಗದಗಳನ್ನೇ ಬಳಸಿ. ಏಕೆಂದರೆ ಈ ಸ್ಥಳ ಸೂಕ್ಷ್ಮವಾಗಿದ್ದು ಇತರ ಕಾಗದ ಹೆಚ್ಚಿನ ಘರ್ಷಣೆಯುಂಟುಮಾಡಿ ಚರ್ಮಕ್ಕೆ ಉರಿ ತರಿಸಬಹುದು.

ಸಲಹೆ #4
ಗಾಯಕ್ಕೆ ಹಚ್ಚಲು ವೈದ್ಯರು ಸೂಕ್ತವಾದ ಮುಲಾಮೊಂದನ್ನು ಸಲಹೆ ಮಾಡುತ್ತಾರೆ. ವೈದ್ಯರ ಸಲಹೆಯಂತೆ ನಿಗದಿತ ಅವಧಿಯಲ್ಲಿ ತಪ್ಪದೇ ಮುಲಾಮು ಹಚ್ಚಿ ಒಣಗುವವರೆಗೂ ಗಾಳಿಗೆ ಒಡ್ಡಬೇಕು.

ಸಲಹೆ #5
ಮಗುವಿಗೆ ಡಯಾಪರ್ ತೊಡಿಸುತ್ತಿದ್ದರೆ ಇದನ್ನು ಬದಲಿಸುವ ಅವಧಿಯನ್ನು ಕಡಿಮೆಗೊಳಿಸಬೇಕು. ಅಂದರೆ ಇತರ ಸಮಯಕ್ಕೆ ಹೋಲಿಸಿದರೆ ಈಗ ದಿನಕ್ಕೆ ಹೆಚ್ಚು ಡಯಾಪರ್‌ಗಳನ್ನು ಗಾಯ ಒಣಗಿ ಸಾಮಾನ್ಯವಾಗುವವರೆಗೆ ಬಳಸಬೇಕು.

ಸಲಹೆ #5
ಏಕೆಂದರೆ ಕೊಂಚ ಎಚ್ಚರ ತಪ್ಪಿ ಡಯಾಪರ್ ಹೆಚ್ಚಿನ ಹೊತ್ತು ಇದ್ದರೆ ಸೂಕ್ಷ್ಮಭಾಗದಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಧಾಳಿ ಮಾಡಿ ಸೋಂಕು ಉಂಟುಮಾಡುತ್ತವೆ.



Click it and Unblock the Notifications
